ರಾಮನಗರ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ; ಮೇಕೆದಾಟು ಪಾದಯಾತ್ರೆ ಮೇಲೆ ನೇರ ಕರಿನೆರಳು: ನಾವಿಬ್ಬರೇ ಹೆಜ್ಜೆ ಹಾಕ್ತೀವಿ -ಸಿದ್ಧರಾಮಯ್ಯ

ರಾಮನಗರ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ; ಮೇಕೆದಾಟು ಪಾದಯಾತ್ರೆ ಮೇಲೆ ನೇರ ಕರಿನೆರಳು: ನಾವಿಬ್ಬರೇ ಹೆಜ್ಜೆ ಹಾಕ್ತೀವಿ -ಸಿದ್ಧರಾಮಯ್ಯ
ರಾಮನಗರ (Pic: Indian Holoday)

ಕಾಂಗ್ರೆಸ್ ಪಾದಯಾತ್ರೆ ಆರಂಭಗೊಳ್ಳುವ ಸಂಗಮದಲ್ಲೂ ನಿಷೇಧಾಜ್ಷೆ ಜಾರಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಮೇಲೆ ಜಿಲ್ಲಾಡಳಿತದ ಈ ಕ್ರಮ ಪರಿಣಾಮ ಬೀರುವ ಸಾಧ್ಯತೆಯಿದೆ.

TV9kannada Web Team

| Edited By: sadhu srinath

Jan 06, 2022 | 1:40 PM

ರಾಮನಗರ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ರಾಮದೇವರಬೆಟ್ಟ, ರೇವಣಸಿದ್ದೇಶ್ವರ ಬೆಟ್ಟ, ಕಣ್ವ ಜಲಾಶಯ, ಮಂಚನಬೆಲೆ, ಸಾವನದುರ್ಗ, ಸಂಗಮ, ಮೇಕೆದಾಟು, ಚುಂಚಿ ಫಾಲ್ಸ್‌ಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಿ ರಾಮನಗರ ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ಆದೇಶ ಹೊರಡಿಸಿದ್ದಾರೆ.

ಕಾಂಗ್ರೆಸ್ ಪಾದಯಾತ್ರೆ ಆರಂಭಗೊಳ್ಳುವ ಸಂಗಮದಲ್ಲೂ ನಿಷೇಧಾಜ್ಷೆ ಜಾರಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಮೇಲೆ ಜಿಲ್ಲಾಡಳಿತದ ಈ ಕ್ರಮ ಪರಿಣಾಮ ಬೀರುವ ಸಾಧ್ಯತೆಯಿದೆ.

ಸಂಗಮಕ್ಕೆ ರಾಮನಗರ SP ಗಿರೀಶ್‌ ಭೇಟಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜ.9ರಿಂದ ‘ಕೈ’ ಪಾದಯಾತ್ರೆ ಹಿನ್ನೆಲೆ ಪಾದಯಾತ್ರೆ ಆರಂಭವಾಗುವ ಸ್ಥಳಕ್ಕೆ ರಾಮನಗರ SP ಗಿರೀಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧರಣಿ ಆರಂಭ ಸ್ಥಳ ಸಂಗಮ ಬಳಿ ಪರಿಶೀಲನೆ ನಡೆಸಿದ್ದಾರೆ.

144 ಸೆಕ್ಷನ್ ವಿಧಿಸಿದರೆ ನಾವಿಬ್ಬರಾದರೂ ನಡೆಯುತ್ತೇವೆ: ಚಿತ್ರದುರ್ಗದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆ ನಿಷೇಧಾಜ್ಞೆ ಅಂದರೆ 4 ಜನ ಸೇರಬಾರದು ಅಲ್ಲವಾ, ಆಯ್ತು ನಾವಿಬ್ಬರೇ ಜೊತೆಯಾಗಿ ಹೆಜ್ಜೆ ಹಾಕುತ್ತೇವೆ. ಅದಕ್ಕೇನೂ ಅಡ್ಡಿಯಿಲ್ಲ ಎಂಬೋ ಧಾಟಿಯಲ್ಲಿ ಚಿತ್ರದುರ್ಗದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

ಮುಂಜಾಗ್ರತಾ ಕ್ರಮವಹಿಸಿಯೇ ಮೇಕೆದಾಟು ಹೋರಾಟ ಮಾಡ್ತೀವಿ. 144 ಸೆಕ್ಷನ್ ವಿಧಿಸಿದರೆ ನಾವಿಬ್ಬರಾದರೂ ನಡೆಯುತ್ತೇವೆ ಎಂದರು ಹಾಗೂ ಮೇಕೆದಾಟು ಹೋರಾಟ ರಾಜಕೀಯ ಅಜೆಂಡಾ ಎಂದ ಕೋಡಿಹಳ್ಳಿ ಚಂದ್ರಶೇಖರ್​ಗೆ ಸಿದ್ಧರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ರೈತ ಸಂಘದವರಾ? ಏನ್ ಹೇಳಿದ್ದಾರೆ ಎಂದು ಮರುಪ್ರಶ್ನೆ ಮಾಡಿದ್ದಾರೆ. ಹಾಗೂ ಕಾಂಗ್ರೆಸ್ ಪಕ್ಷ ರಾಜಕೀಯ ಪಕ್ಷ ನಿಜ, ರಾಜಕೀಯ ಅಜೆಂಡಾ ಅಲ್ಲ ಎಂದಿದ್ದಾರೆ. ನಾನು ಸಿಎಂ ಆಗಿದ್ದಾಗ ಮೇಕೆದಾಟು ಯೋಜನೆ ಡಿಪಿಆರ್ ಸಿದ್ಧತೆ. ಆದ್ರೆ ಎರಡೂವರೆ ವರ್ಷದಿಂದ ರಾಜ್ಯ ಬಿಜೆಪಿ ಸರ್ಕಾರ ಮಲಗಿದೆ. ಮೇಕೆದಾಟು ಯೋಜನೆ ಪ್ರಾರಂಭಿಸಲು ಕಾನೂನು ತಡೆ ಇಲ್ಲ. ರಾಜಕೀಯಕ್ಕಾಗಿ ತಮಿಳುನಾಡು ಕ್ಯಾತೆ, ಬಿಜೆಪಿ ಕುಮ್ಮಕ್ಕು ನೀಡ್ತಿದೆ. ಧರಣಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕುಮ್ಮಕ್ಕು ಇದೆ. ತಮಿಳುನಾಡಲ್ಲಿ ಬಿಜೆಪಿ ಕಟ್ಟಲು ಮೇಕೆದಾಟು ಯೋಜನೆ ನಿರ್ಲಕ್ಷ್ಯ ಮಾಡಲಾಗುತ್ತಿದೆ.

ಬಿಜೆಪಿ ಅಧ್ಯಕ್ಷ ಕಟೀಲ್​ಗೆ ರಾಜಕೀಯವಾಗಿ ಬುದ್ಧಿ ಬೆಳೆದಿಲ್ಲ ಎಂದು ಕಾಂಗ್ರೆಸ್​ಗೆ ದಮ್ ಇದ್ದರೆ ಹಿಂದೂಗಳ ಮತ ಬೇಡ ಎಂದು ಹೇಳಲಿ ಎಂದ ಕಟೀಲ್​ಗೆ ತಿರುಗೇಟು ಕೊಟ್ಟಿದ್ದಾರೆ. ದೇವಸ್ಥಾನಗಳು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿವೆ. ದೇವಸ್ಥಾನಗಳನ್ನು ಆರ್.ಎಸ್.ಎಸ್ ಗೆ ಕೊಡಬೇಡಿ ಎಂದಿದ್ದೇವೆ ಅಷ್ಟೇ. ಅದರರ್ಥ ಹಿಂದೂಗಳಿಗೆ ಕೊಡಬೇಡಿ, ಹಿಂದುಗಳಿಗೆ ವಿರೋಧ ಅಂತ ಅಲ್ಲ. ಆರ್.ಎಸ್.ಎಸ್ ನವರಿಗೆ ಕೊಟ್ಟರೆ ಅವರ ಬಳಿ ಕೈಮುಗಿದು ನಿಲ್ಲಬೇಕಾಗುತ್ತದೆ ಎಂದರು.

ಇದನ್ನೂ ಓದಿ: ಪ್ರಧಾನಮಂತ್ರಿ ಭದ್ರತೆ ಲೋಪ; ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿದ ಪಂಜಾಬ್​ ಸರ್ಕಾರ

Follow us on

Related Stories

Most Read Stories

Click on your DTH Provider to Add TV9 Kannada