AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಂ ಭೋ..! ಕಬ್ಬನ್ ಪಾರ್ಕ್​ನ ವೀಕೆಂಡ್ ಸಂಸ್ಕೃತ ಕಾರ್ಯಕ್ರಮ ಮೆಚ್ಚಿಕೊಂಡ ಪ್ರಧಾನಿ ಮೋದಿ

Cubbon Park weekend sanskrit program: ಪ್ರಧಾನಿ ನರೇಂದ್ರ ಮೋದಿ ಜೂನ್ 30ರಂದು ಪ್ರಸಾರವಾದ ಅವರ 111ನೇ ಎಪಿಸೋಡ್​ನ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕಬ್ಬನ್ ಪಾರ್ಕ್​ನ ವೀಕೆಂಡ್ ಸಂಸ್ಕೃತ ಕಾರ್ಯಕ್ರಮ ಉಲ್ಲೇಖಿಸಿದರು. ಸಮಷ್ಟಿ ಗುಬ್ಬಿ ಎಂಬುವವರು ನಡೆಸುವ ಈ ವೀಕೆಂಡ್ ಕಾರ್ಯಕ್ರಮ ‘ಕಿಂ ಭೋ’ ಎಂದು ಖ್ಯಾತವಾಗಿದೆ. ಪ್ರತೀ ಭಾನುವಾರ ಬೆಳಗ್ಗೆ 6:45ಕ್ಕೆ ಕಬ್ಬನ್ ಪಾರ್ಕ್​ನಲ್ಲಿ ಆರಂಭವಾಗುವ ಈ ಕಾರ್ಯಕ್ರಮದಲ್ಲಿ 19ರಿಂದ 32 ವರ್ಷ ವಯೋಮಾನದವರು ಪಾಲ್ಗೊಳ್ಳುತ್ತಾರೆ.

ಕಿಂ ಭೋ..! ಕಬ್ಬನ್ ಪಾರ್ಕ್​ನ ವೀಕೆಂಡ್ ಸಂಸ್ಕೃತ ಕಾರ್ಯಕ್ರಮ ಮೆಚ್ಚಿಕೊಂಡ ಪ್ರಧಾನಿ ಮೋದಿ
ಕಬ್ಬನ್ ಪಾರ್ಕ್​ನಲ್ಲಿ ನಡೆಯುವ ವೀಕೆಂಡ್ ಸಂಸ್ಕೃತ ಕಾರ್ಯಕ್ರಮ ಪ್ರಸ್ತಾಪಿಸಿದ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 30, 2024 | 2:14 PM

Share

ಬೆಂಗಳೂರು, ಜೂನ್ 30: ಕರ್ನಾಟಕ ರಾಜಧಾನಿ ನಗರಿಯ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್ ವಾಕಿಂಗ್ ಪ್ರಿಯರಿಗೆ ಬಹಳ ಇಷ್ಟವಾದ ಜಾಗ. ಇಲ್ಲಿ ವಾರಾಂತ್ಯದಲ್ಲಿ, ಅಂದರೆ ಭಾನುವಾರಗಳಲ್ಲಂದು ಸಂಸ್ಕೃತ ಸಂವಾದ ಕಾರ್ಯಕ್ರಮ ನಡೆಯುತ್ತದೆ. ವೀಕೆಂಡ್ ಸಂಸ್ಕೃತ ಎಂದೇ ಜನಪ್ರಿಯವಾದ ಈ ಕಾರ್ಯಕ್ರಮದಲ್ಲಿ ಬಹಳಷ್ಟು ಬೆಂಗಳೂರಿಗರು ಭಾನುವಾರ ಕಬ್ಬನ್ ಪಾರ್ಕ್​ನಲ್ಲಿ ಸೇರಿ ಸಂಸ್ಕೃತದಲ್ಲೇ ಸಂವಾದ ನಡೆಸುತ್ತಾರೆ. ಸಂಸ್ಕೃತದಲ್ಲೇ ಮಾತುಕತೆ, ಸಂವಾದ ನಡೆಯುತ್ತದೆ. ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ 111ನೇ ಎಪಿಸೋಡ್​ನ ಮನ್ ಕೀ ಬಾತ್​ನಲ್ಲಿ ಪ್ರಸ್ತಾಪಿಸಿದ್ದಾರೆ.

ಆಲ್ ಇಂಡಿಯಾ ರೇಡಿಯೋದಲ್ಲಿ ಕಳೆದ 50 ವರ್ಷಗಳಿಂದ ಸಂಸ್ಕೃತ ವಾರ್ತೆ ಪ್ರಸಾರವಾಗುತ್ತಿದೆ. ಈ ಐವತ್ತು ವರ್ಷದ ಮೈಲಿಗಲ್ಲು ಮುಟ್ಟಿದ ಸಂದರ್ಭವನ್ನು ನರೇಂದ್ರ ಮೋದಿ ಸ್ಮರಿಸುತ್ತಾ, ಬೆಂಗಳೂರಿನ ಕಬ್ಬನ್ ಪಾರ್ಕ್​ನ ವೀಕೆಂಡ್ ಸಂಸ್ಕೃತ ಕಾರ್ಯಕ್ರಮವನ್ನೂ ಪ್ರಸ್ತಾಪಿಸಿ ಮೆಚ್ಚಿಕೊಂಡಿದ್ದಾರೆ.

ಸಮಷ್ಟಿ ಗುಬ್ಬಿ ಅವರ ಕಿಂ ಭೋ ಕಾರ್ಯಕ್ರಮ ಕಬ್ಬನ್ ಪಾರ್ಕ್​ನಲ್ಲಿ…

ಕಬ್ಬನ್ ಪಾರ್ಕ್​ನಲ್ಲಿ ವಾರಾಂತ್ಯಗಳಲ್ಲಿ ನಡೆಯುವ ಸಂಸ್ಕೃತ ಸಂವಾದ ಕಾರ್ಯಕ್ರಮಗಳ ರೂವಾರಿ 23 ವರ್ಷದ ಯುವತಿ ಸಮಷ್ಠಿ ಗುಬ್ಬಿ. ಇವರ ಆನ್ಲೈನ್ ಪ್ರೊಡಕ್ಷನ್ ಕಂಪನಿಯಾದ ‘ಸ್ಥಾಯಿ’ ಮೂಲಕ ಹಲವು ಸಂಸ್ಕೃತ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಸಂಸ್ಕೃತ ಕಲಿಯಲು ಆಸಕ್ತರಾಗಿರುವವರಿಗೆ ಆನ್ಲೈನ್ ಕ್ಲಾಸ್​ಗಳನ್ನೂ ಇವರು ನಡೆಸುತ್ತಾರೆ.

ಇದನ್ನೂ ಓದಿ: Mann Ki Baat: ಅಮ್ಮನ ಹೆಸರಲ್ಲಿ ಗಿಡ ನೆಡುವ ಅಭಿಯಾನಕ್ಕೆ ಮನ್ ಕೀ ಬಾತ್​ನಲ್ಲಿ ಕರೆ ನೀಡಿದ ಪ್ರಧಾನಿ ಮೋದಿ

ಕಬ್ಬನ್ ಪಾರ್ಕ್​ನಲ್ಲಿ ವಾರಾಂತ್ಯದಲ್ಲಿ ಅಂದರೆ ಭಾನುವಾರಗಳಂದು ಸಂಸ್ಕೃತ ಶಿಬಿರಗಳನ್ನು ನಡೆಸುತ್ತಾರೆ. ಇದು ಕಿಂ ಭೋ ಎಂದೇ ಜನಪ್ರಿಯವಾಗಿದೆ. ಕಿಂ ಭೋ ಎಂದರೆ ಸಂಸ್ಕೃತದಲ್ಲಿ ಏನ್ ಸಮಾಚಾರ ಎಂದು. ಭಾನುವಾರ ಬೆಳಗ್ಗೆ 6:45ಕ್ಕೆ ಆರಂಭವಾಗುತ್ತದೆ. ಸಂಸ್ಕೃತ ಕಲಿಕೆ, ಸಂವಾದ, ಹಾಡು, ಆಟ, ನಲಿ ಕಲಿ ಇತ್ಯಾದಿ ಎಲ್ಲವೂ ಇರುತ್ತದೆ.

ಸಂಸ್ಕೃತ ವ್ಯಾಕರಣದಲ್ಲಿ ಎಂಎ ಮಾಡಿರುವ 23 ವರ್ಷದ ಸಮಷ್ಠಿ ಗುಬ್ಬಿ ಅವರು ಸ್ಥಾಯಿ ವತಿಯಿಂದ ಸಂಸ್ಕೃತ ಆಸಕ್ತರ ವಾಟ್ಸಾಪ್ ಗ್ರೂಪ್ ರಚಿಸಿ ಅದರ ಮೂಲಕ ಕಾರ್ಯಕ್ರಮಗಳ ಮಾಹಿತಿ, ಅಪ್​ಡೇಟ್ ಹಂಚಿಕೊಳ್ಳುತ್ತಾರೆ. ಇವರ ಕಿಂ ಭೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಹಿರಿಯ ವಯಸ್ಸಿಗಿಂತ 19ರಿಂದ 32 ವರ್ಷದ ವಯೋಮಾನದವರು ಎಂಬುದು ಗಮನಾರ್ಹ. ಇಂದಿನ ಯುವ ಪೀಳಿಗೆಯವರಲ್ಲಿ ಸಂಸ್ಕೃತದ ಬಗ್ಗೆ ಆಸಕ್ತಿ ಹೆಚ್ಚಾಗಿರುವುದು ಸ್ವತಃ ಸಮಷ್ಠಿ ಅವರಿಗೇ ಅಚ್ಚರಿ ತಂದಿದೆ.

ಇನ್ನಷ್ಟು ಬೆಂಗಳೂರು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:08 pm, Sun, 30 June 24

ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ