ವಾಹನ ಸವಾರರೇ ಗಮನಿಸಿ; ಮೋದಿ ಭೇಟಿ ಹಿನ್ನೆಲೆ ಹಲವು ರಸ್ತೆಗಳು ಬಂದ್, ಬದಲಿ ವ್ಯವಸ್ಥೆ

| Updated By: ವಿವೇಕ ಬಿರಾದಾರ

Updated on: Jun 19, 2022 | 7:40 PM

ನಾಳೆ (ಜೂನ್​​ 20) ರಿಂದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಬೆಂಗಳೂರಿನ  ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ, ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಯ ರಸ್ತೆಗಳನ್ನು ಮದ್ಯಾಹ್ನ 12:30 ರಿಂದ 03:00 ಗಂಟೆಯ ವರೆಗೆ ಸಂಚಾರ ನಿಷೇಧಿಸಿಲಾಗಿದೆ.

ವಾಹನ ಸವಾರರೇ ಗಮನಿಸಿ; ಮೋದಿ ಭೇಟಿ ಹಿನ್ನೆಲೆ ಹಲವು ರಸ್ತೆಗಳು ಬಂದ್, ಬದಲಿ ವ್ಯವಸ್ಥೆ
ವಾಹನಗಳು
Follow us on

ಬೆಂಗಳೂರು: ನಾಳೆ (ಜೂನ್​​ 20) ರಿಂದ ಎರಡು ದಿನ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ನಾಳೆ ಬೆಂಗಳೂರಿನ (Bengaluru)  ಮೈಸೂರು ರಸ್ತೆ (Mysore Road) ಮತ್ತು ನೈಸ್ ಬ್ರಿಡ್ಜ್ (Nice Road) ಕಡೆಯಿಂದ ಕೆಂಗೇರಿ, ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಯ ರಸ್ತೆಗಳನ್ನು ಮದ್ಯಾಹ್ನ 12:30 ರಿಂದ 03:00 ಗಂಟೆಯ ವರೆಗೆ ಸಂಚಾರ ನಿಷೇಧಿಸಲಾಗಿದೆ. ನೈಸ್ ರಸ್ತೆ ಮುಖಾಂತರ ನೈಸ್ ಕಚೇರಿ – ಸೋಂಪುರ ಟೋಲ್ ಉತ್ತರಹಳ್ಳಿ ಮುಖ್ಯ ರಸ್ತೆ – ಸೋಂಪುರ ಟೋಲ್ ಮುಖಾಂತರ ಕೆಂಗೇರಿ ಮತ್ತು ಮೈಸೂರು ಕಡೆಗೆ ಅವಕಾಶ ಕಲ್ಪಿಸಲಾಗಿದೆ.

ವಾಹನ ಸವಾರರೇ ಗಮನಿಸಿ; ಮೋದಿ ಭೇಟಿ ಹಿನ್ನೆಲೆ ಬಹುತೇಕ ರಸ್ತೆಗಳು ಬಂದ್, ಬದಲಿ ವ್ಯವಸ್ಥೆ

ಎಲ್ಲೆಲ್ಲಿ ವಾಹನ ಸಂಚಾರಕ್ಕೆ ನಿಷೇಧ ಇದೆ

  1. ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಆಡ್ಮಿನ್ ಬ್ಲಾಕ್ ಜಂಕ್ಷನ್ ವರೆಗೆ ನಿಷೇಧ
  2. ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‌ ನಿಂದ ಯುನಿವರ್ಸಿಟಿ ಕಡೆಗೆ ಹಳೇ ರಿಂಗ್ ರಸ್ತೆ ಉಲ್ಲಾಳ ಜಂಕ್ಷನ್ ನಿಂದ ಯುನಿವರ್ಸಿಟಿ ಕಡೆಗೆ ನಿಷೇಧ
  3. ಕೆಂಗುಂಟೆ ಜಂಕ್ಷನ್ – ನಮ್ಮೂರ ತಿಂಡಿ – ನಾಗರಭಾವಿ ರಿಂಗ್ ರಸ್ತೆ ಕಡೆಗೆ ಸಂಚಾರ ನಿಷೇಧ
  4. ತುಮಕೂರು ರಸ್ತೆಯ ನಗರದ ಒಳಭಾಗಕ್ಕೆ ಬರುವ ಎಲ್ಲಾ ರೀತಿಯ ಭಾರಿ ವಾಹನಗಳಿಗೆ ನಿಷೇಧ

ಎಲ್ಲೆಲ್ಲಿ ವಾಹನ ಸಂಚಾರಕ್ಕೆ ಅವಕಾಶ

  1. ನಾಗರಭಾವಿ ಸರ್ಕಲ್-ನಮ್ಮೂರ ತಿಂಡಿ ಹೋಟೆಲ್-ಅಂಬೇಡ್ಕರ್ ಕಾಲೇಜ್ ಜಂಕ್ಷನ್‌- ಜ್ಞಾನಭಾರತಿ ಗೇಟ್ ಕಡೆಗೆ ಅವಕಾಶ
  2. ಆರ್‌.ಆರ್.ಆರ್ಚ್, ನಾಯಂಡಹಳ್ಳಿ ಜಂಕ್ಷನ್ – ನಾಗರಭಾವಿ ಕಡೆಗೆ ಅವಕಾಶ
  3. ತುಮಕೂರು ಕಡೆಯಿಂದ ಯಲಹಂಕ, ಕೋಲಾರ, ಹೈದರಬಾದ್ ಕಡೆಗೆ ಸಂಚರಿಸುವ ವಾಹನಗಳು ದಾಬಸ್‌ ಪೇಟೆಯಲ್ಲಿ ಎಡತಿರುವು ಪಡೆದು ದೊಡ್ಡಬಳ್ಳಾಪುರ ಮುಖ್ಯರಸ್ತೆ ಮುಖಾಂತರ ಅವಕಾಶ

ಇದನ್ನು ಓದಿ: ಬೆಂಗಳೂರಿನಲ್ಲಿ ಮೋದಿ ಓಡಾಡುವ ರಸ್ತೆಗಳ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

ವಾಹನಗಳ ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳು

  1. ಕೊಮ್ಮಘಟ್ಟ ಮುಖ್ಯ ರಸ್ತೆ ಶಂಕರ್‌ನಾಗ್‌ ಸರ್ಕಲ್ ನಿಂದ ರಾಬಿನ್‌ ಥಿಯೇಟರ್ ವರೆಗೆ ನಿಷೇಧ
  2. ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಆಡೀನ್‌ ಬ್ಲಾಕ್ ಜಂಕ್ಷನ್ ವರೆಗೆ ನಿಷೇಧ
  3. ಯುನಿವರ್ಸಿಟಿ ಒಳಭಾಗದ ಮುಖ್ಯರಸ್ತೆ, ಲೇಡೀಸ್ ಹಾಸ್ಟಲ್ ರಸ್ತೆ ಮತ್ತು ಗಾಂಧಿ ಮಾರ್ಗ್ ರಸ್ತೆ ಬಿ. ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‌ ನಿಂದ ಜೈರಾಮ್ ದಾಸ್ ಜಂಕ್ಷನ್‌ ವರೆಗೆ ನಿಷೇಧ

ಪರ್ಯಾಯ ಪಾರ್ಕಿಂಗ್  ವ್ಯವಸ್ಥೆ

  1. ಕಾಳಿಕಾಂಭ ರಸ್ತೆ & ಪಾರ್ಕ್ ರಸ್ತೆ
  2. ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್‌ ಸ್ಟಾಪ್ ನಿಂದ ಐಸಾಕ್ ರಸ್ತೆವರೆಗೆ
  3. 6ನೇ ಮುಖ್ಯರಸ್ತೆ (ಕಾಳಿಕಾಂಭ ರಸ್ತೆ & ಪಾರ್ಕ್‌ ರಸ್ತೆ)
  4. ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್‌ ಸ್ಟಾಪ್ ನಿಂದ ಐಸಾಕ್ ವರೆಗೆ

ಇದನ್ನು ಓದಿ: ಚೆಸ್​ ಒಲಿಂಪಿಯಾಡ್​ ಜ್ಯೋತಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಭಾರೀ ಗಾತ್ರದ ವಾಹನಗಳ ಸಂಚಾರ ನಿಷೇದವಿರುವ ಸ್ಥಳಗಳು‌
ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 06-00 ಗಂಟೆಯ ವರೆಗೆ

  1. ನಾಗರಭಾವಿ ರಿಂಗ್ ರಸ್ತೆ ಚೌಡೇಶ್ವರಿ ಬಸ್‌ ನಿಲ್ದಾಣದಿಂದ ನಾಗರಭಾವಿ ಜಂಕ್ಷನ್ ವರೆಗೆ ಎರಡೂ ಕಡೆಗಳಲ್ಲಿ
  2. ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‌ ನಿಂದ ಜೈರಾಮ್ ದಾಸ್ ಜಂಕ್ಷನ್ ವರೆಗೆ
  3. ಹಳೇ ರಿಂಗ್ ರಸ್ತೆ ಕೆಂಗುಂಟೆ ಜಂಕ್ಷನ್ ನಿಂದ ಶಿರ್ಕೆ ಜಂಕ್ಷನ್ ವರೆಗೆ
  4. ಯುನಿವರ್ಸಿಟಿ ಒಳಭಾಗದ ಎಲ್ಲಾ ರಸ್ತೆಗಳು,
  5. ಮೈಸೂರು ರಸ್ತೆ ನೈಸ್ ರೋಡ್ ಬಳಿ

 ರಸ್ತೆಗೆ ಪರ್ಯಾಯ ಮಾರ್ಗ

  1. ಮಾಗಡಿ ಮುಖ್ಯರಸ್ತೆ ಮೂಲಕ ನೈಸ್‌ ರಸ್ತೆ (ಕ್ರ.ಸಂ 1 ರಿಂದ 4) ನೈಸ್ ರಸ್ತೆಯ ಮುಖಾಂತರ ಉತ್ತರಹಳ್ಳಿ ಮುಖ್ಯ ರಸ್ತೆ ಕಡೆಗೆ, ಬೆಂಗಳೂರು ನಗರದ ಕಡೆಗೆ ಅವಕಾಶ
  2. ಹೊಸಕೋಟೆ ಟೋಲ್‌ ಗೇಟ್ ನಿಂದ ಬೂದಿಗೆರೆ ಕ್ರಾಸ್ ಮೂಲಕ ಅವಕಾಶ
  3. ನೈಸ್ ರಸ್ತೆಯ ಮೂಲಕ ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆ ಕಡೆಗೆ ಅವಕಾಶ

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.