ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಮನೆಗಳವು ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ಆರ್.ಆರ್. ನಗರದಲ್ಲಿ ನಡೆದಿದೆ. ಮಂಜುನಾಥ್, ಹೇಮಂತ್ ಬಂಧಿತ ಆರೋಪಿಗಳು. ರಾಜರಾಜೇಶ್ವರಿನಗರ ಠಾಣೆ ಪೊಲೀಸರು (Karnataka police) ಸದ್ಯ ಬಂಧಿತರಿಂದ 9 ಲಕ್ಷ ರೂಪಾಯಿ ಮೌಲ್ಯದ 48 ಗ್ರಾಂ ಚಿನ್ನಾಭರಣ, 6 ಬೈಕ್, 1 ಕಾರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಬೀಗ ಹಾಕಿರುವ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಮನೆಗಳವು (Home theft) ಮಾಡಿ ಬಂದ ಹಣದಲ್ಲಿ ಆರೋಪಿಗಳು ಬೈಕ್, ಕಾರು ಖರೀದಿಸಿದ್ದರು ಎನ್ನುವ ಸತ್ಯ ಬಯಲಾಗಿದೆ.
ಮಾಡೆಲಿಂಗ್ ನೆಪದಲ್ಲಿ ಯುವತಿಯರಿಗೆ ಬ್ಲ್ಯಾಕ್ ಮೇಲ್ ಪ್ರಕರಣ
ಮಾಡೆಲಿಂಗ್ ನೆಪದಲ್ಲಿ ಯುವತಿಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವ ವಿಭಾಗ ಪ್ರಭಾರ ಡಿಸಿಪಿ ಶರಣಪ್ಪ ಹೇಳಿಕೆ ನೀಡಿದ್ದಾರೆ. ವಿಕೃತ ಸುಖಕ್ಕಾಗಿ ಯುವತಿಯರ ಖಾಸಗಿ ಫೋಟೊವನ್ನು ಆರೋಪಿ ತರಿಸಿಕೊಳ್ಳುತ್ತಿದ್ದ. ಹಲಸೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ವರದಿಯಾಗಿತ್ತು. ಸದ್ಯ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ನಕಲಿ ಖಾತೆ ತೆರೆದು ಯುವತಿಯರನ್ನು ವಂಚಿಸಿದ್ದಾನೆ. ಹಲವರಿಗೆ ಬೇರೆ ಬೇರೆ ರೀತಿಯಾಗಿ ಪರಿಚಯಿಸಿಕೊಂಡಿದ್ದ. ಕೆಲವರಿಗೆ ಮಾಡೆಲ್ ಮಾಡುವಾಸೆ ತೋರಿಸಿದ್ದ. ಮತ್ತೆ ಕೆಲವರಿಗೆ ಲೆಸ್ಬಿಯನ್ ಎಂದು ಪರಿಚಯಿಸಿಕೊಂಡಿದ್ದ. ಮಾಡೆಲ್ ಮಾಡುವಾಸೆ ತೋರಿಸಿ ನಗ್ನ ಫೋಟೊ ತರಿಸಿಳ್ಳುತ್ತಿದ್ದ. ನಾನು ಲೆಸ್ಬಿಯನ್ ಅಂತಲೂ ಫೋಟೊ ತರಿಸಿಕೊಳ್ಳುತ್ತಿದ್ದ. ಕೆಲವರು ಫೋಟೊ ಕಳಿಸುವವರಿಗೆ ಹಣ ಕೂಡ ನೀಡುತ್ತಿದ್ದ. ಬ್ಲಾಕ್ ಮಾಡಿದರೆ ಮತ್ತೆ ಬೇರೆ ಖಾತೆ ತೆರೆದು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಪೂರ್ವ ವಿಭಾಗ ಪ್ರಭಾರ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಬ್ಲಾಕ್ ಮೇಲ್ ಮಾಡಿ ಹೆಚ್ಚಿನ ಫೋಟೊಗೆ ಬೇಡಿಕೆ ಇಡುತ್ತಿದ್ದ. ಆರೋಪಿಯಿಂದ ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಕಳೆದ ಎರಡು ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ. ನಾಲ್ಕೈದು ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದ ಎನ್ನುವುದು ಗೊತ್ತಾಗಿದೆ. 1000 ಕ್ಕೂ ಹೆಚ್ಚು ಖಾಸಗಿ ಫೋಟೋಗಳು ಮೊಬೈಲ್ನಲ್ಲಿ ಇತ್ತು. 300 ರಿಂದ 400 ವಿಡಿಯೋ ಇರುವುದು ಗೊತ್ತಾಗಿದೆ ಎಂದು ಪೂರ್ವ ವಿಭಾಗ ಪ್ರಭಾರ ಡಿಸಿಪಿ ಶರಣಪ್ಪ ಹೇಳಿದ್ದಾರೆ.
ಇದನ್ನೂ ಓದಿ:
Crime News: ಮಗುವನ್ನು ಕೊಂದು ದಂಪತಿ ಆತ್ಮಹತ್ಯೆ, ಕಳ್ಳತನ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಇಬ್ಬರು ಮಹಿಳೆಯರು
Shocking News: ಕಳ್ಳತನ ಮಾಡಿದ ಮಗಳನ್ನು ಹೊಡೆದು, ಸುಟ್ಟು ಹಾಕಿ ಕೊಂದ ತಾಯಿ!
Published On - 1:27 pm, Wed, 12 January 22