ಎಸ್​ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್​ಮೇಲ್ ಪ್ರಕರಣ: ಆರೋಪಿ ರಾಹುಲ್ ಭಟ್​ಗೆ ಕೊರೊನಾ ಪಾಸಿಟಿವ್

ವಿದೇಶದಿಂದ ಬೆಂಗಳೂರಿಗೆ ಬಂದಿದ್ದ 10 ಜನರಿಗೆ ಕೊರೊನಾ ದೃಢವಾಗಿದೆ. ಕೆಐಎಬಿಗೆ ಬಂದ ವೇಳೆ RTPCR ಟೆಸ್ಟ್ ಮಾಡಿದಾಗ ಸೋಂಕು‌ ಪತ್ತೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 71 ವಿದ್ಯಾರ್ಥಿಗಳಿಗೆ ಕೊರೊನಾ ದೃಢವಾಗಿದೆ.

ಎಸ್​ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್​ಮೇಲ್ ಪ್ರಕರಣ: ಆರೋಪಿ ರಾಹುಲ್ ಭಟ್​ಗೆ ಕೊರೊನಾ ಪಾಸಿಟಿವ್
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಚಿವ ಎಸ್.ಟಿ. ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್​ಮೇಲ್ ಪ್ರಕರಣದ ಆರೋಪಿ ರಾಹುಲ್ ಭಟ್​ಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ನಿನ್ನೆ ಮೆಡಿಕಲ್ ಟೆಸ್ಟ್ ವೇಳೆ ಕೊವಿಡ್ ಟೆಸ್ಟ್ ಮಾಡಿಸಿದ್ದರು. ಇಂದಿಗೆ ರಾಹುಲ್ ಭಟ್ ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾಗಿದ್ದು, ನ್ಯಾಯಾಧೀಶರೆದುರು ಹಾಜರಿಗೂ ಮುನ್ನವೇ ಕೊವಿಡ್ ಪಾಸಿಟಿವ್ ಇರುವುದು ದೃಢವಾಗಿದೆ.

ಕೋಲಾರ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಮಾಲೂರು ಕೋರ್ಟ್​ನ 11 ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಕೋಲಾರ ಸರ್ವೇಕ್ಷಣಾ ಇಲಾಖೆಯ 6 ಸಿಬ್ಬಂದಿಗೆ ಕೊರೊನಾ ಕಂಡುಬಂದಿದೆ. ಕೋಲಾರದ ಮಹಿಳಾ ಸಮಾಜ ಶಾಲೆಯ 21 ಸಿಬ್ಬಂದಿಗೆ ಕೊರೊನಾ ಪತ್ತೆಯಾಗಿದೆ. ಇತ್ತ ಕೊವಿಡ್ ಬಂದ ತಕ್ಷಣ ಎಲ್ಲ ಶಾಲೆ ಬಂದ್ ಸರಿಯಲ್ಲ. ಇದರಿಂದ ಇತರೆ ಎಲ್ಲ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆ ಆಗುತ್ತದೆ. ಲಾಕ್​ಡೌನ್ ಜಾರಿ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಮಾಡಲಾಗುವುದು ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ವಿದೇಶದಿಂದ ಬೆಂಗಳೂರಿಗೆ ಬಂದಿದ್ದ 10 ಜನರಿಗೆ ಕೊರೊನಾ ದೃಢವಾಗಿದೆ. ಕೆಐಎಬಿಗೆ ಬಂದ ವೇಳೆ RTPCR ಟೆಸ್ಟ್ ಮಾಡಿದಾಗ ಸೋಂಕು‌ ಪತ್ತೆಯಾಗಿದೆ. ಯುಎಸ್​ಎ ಮೂಲದ 4, ಸೇಂಟ್ ಫ್ರಾನ್ಸಿಸ್ಕೊ ಮೂಲದ ಒಬ್ಬರು, ಟರ್ಕಿ, ಪೋರ್ಚುಗಲ್, ದಾಲರ್, ಐರ್ಲೆಂಡ್ ಮತ್ತು ಲಂಡನ್ ಮೂಲದ ಒಬ್ಬರು ಸೇರಿದಂತೆ 10 ಜನರಿಗೆ ಕೊವಿಡ್19 ದೃಢವಾಗಿದೆ.

ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟ

ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇಂದು ಮತ್ತೆ 46 ವಿದ್ಯಾರ್ಥಿನಿಯರಿಗೆ ಸೋಂಕು ದೃಢವಾಗಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಹೊರ ವಲಯದಲ್ಲಿರುವ ವಸತಿ ಶಾಲೆಯಲ್ಲಿ ಕೊವಿಡ್ ದೃಢವಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಶಾಲೆಯಲ್ಲಿ ಸಿಬ್ಬಂದಿ ಸೇರಿ 148 ವಿದ್ಯಾರ್ಥಿಗಳಿಗೆ ಸೋಂಕು ಕಂಡುಬಂದಿದೆ. ವಸತಿ ನಿಲಯದ ಮಕ್ಕಳಿಗೆ ಐದು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ತಪಾಸಣೆ ಮಾಡಿದಾಗ 80 ವಿದ್ಯಾರ್ಥಿಗಳು ಹಾಗೂ 10 ಜನ ಸಿಬ್ಬಂದಿಗೆ ಸೋಂಕಿರುವುದು ಧೃಡ ಪಟ್ಟಿತ್ತು. ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಆರೋಗ್ಯ ಇಲಾಖೆ‌ ತಪಾಸಣೆ ನಡೆಸಿತ್ತು.

110 ಜನ ವಿದ್ಯಾರ್ಥಿಗಳಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗಿತ್ತು. ಈ ವೇಳೆ ಮತ್ತೆ 46 ವಿದ್ಯಾರ್ಥಿಗಳಿಗೆ ಸೋಂಕು ಧೃಡವಾಗಿದೆ. 148 ಜನರಿಗೆ ಶಾಲೆಯಲ್ಲಿ ಐಸೋಲೇಷನ್ ಮಾಡಲಾಗಿದೆ. ವಸತಿ ನಿಲಯದಲ್ಲಿ 600ಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದರು‌‌. ಈಗಾಗಲೇ ಅರ್ಧದಷ್ಟು ವಿದ್ಯಾರ್ಥಿಗಳನ್ನ ಮನೆಗಳಿಗೆ ಕಳುಹಿಸಲಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ 71 ವಿದ್ಯಾರ್ಥಿಗಳಿಗೆ ಕೊರೊನಾ ದೃಢ

ದಾವಣಗೆರೆ ಜಿಲ್ಲೆಯಲ್ಲಿ 71 ವಿದ್ಯಾರ್ಥಿಗಳಿಗೆ ಕೊರೊನಾ ದೃಢವಾಗಿದೆ. ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ. ಚನ್ನಗಿರಿ ತಾಲೂಕಿನ ಮಾವಿನಹೊಳೆ ಬಳಿಯಿರುವ ವಸತಿ ಇಂದಿರಾಗಾಂಧಿ ವಸತಿ ಶಾಲೆಯ 55 ವಿದ್ಯಾರ್ಥಿಗಳಿಗೆ, ನಿಟ್ಟುವಳ್ಳಿ ಮಾರುತಿ ಶಾಲೆಯಲ್ಲಿ ಐವರು ಮಕ್ಕಳಿಗೆ, ಅವರಗೊಳ್ಳ, ವಡ್ಡಿನಹಳ್ಳಿಯಲ್ಲಿ ಇಬ್ಬರು ಮಕ್ಕಳಿಗೆ, ಜಗಳೂರಿನ ಎನ್​ಎಂಕೆ ಶಾಲೆಯಲ್ಲಿ 6 ಮಕ್ಕಳಿಗೆ, ಗವಿಸಿದ್ದೇಶ್ವರ ಶಾಲೆ ಮೂವರು ಮಕ್ಕಳಿಗೆ ಕೊರೊನಾ ಸೋಂಕು ದೃಢವಾಗಿದೆ. ಯಾವುದೇ ಕಾರಣಕ್ಕೂ ಶಾಲೆಗಳನ್ನು ಬಂದ್ ಮಾಡಲ್ಲ. ಸೋಂಕು ಕಾಣಿಸಿಕೊಂಡ ಶಾಲೆಯನ್ನು 7 ದಿನ ಬಂದ್ ಮಾಡ್ತೇವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ತೀರಾ ಅಗತ್ಯ ಬಿದ್ದರೆ ಮಾತ್ರ ಶಾಲೆ ಬಂದ್ ಮಾಡಿ: ಎಲ್ಲ ಜಿಲ್ಲಾಧಿಕಾರಿಗಳಿಗೆ ಶಿಕ್ಷಣ ಸಚಿವ ನಾಗೇಶ್ ಸಲಹೆ

ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಗೌರಿಬಿದನೂರು ಶಾಸಕ ಎನ್ ಎಚ್ ಶಿವಶಂಕರರೆಡ್ಡಿಗೆ ಕೊರೊನಾ ಪಾಸಿಟಿವ್

Click on your DTH Provider to Add TV9 Kannada