ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಗೌರಿಬಿದನೂರು ಶಾಸಕ ಎನ್ ಎಚ್ ಶಿವಶಂಕರರೆಡ್ಡಿಗೆ ಕೊರೊನಾ ಪಾಸಿಟಿವ್

ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಶಾಸಕ ಎನ್ ಎಚ್ ಶಿವಶಂಕರರೆಡ್ಡಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿನ್ನೆ ರಾತ್ರಿ ಶಾಸಕ ಶಿವಶಂಕರರೆಡ್ಡಿ ಪಾದಯಾತ್ರೆಯಿಂದ ಗೌರಿಬಿದನೂರಿಗೆ ವಾಪಸ್ಸಾಗಿದ್ದರು.

ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಗೌರಿಬಿದನೂರು ಶಾಸಕ ಎನ್ ಎಚ್ ಶಿವಶಂಕರರೆಡ್ಡಿಗೆ ಕೊರೊನಾ ಪಾಸಿಟಿವ್
ಶಾಸಕ ಎನ್ ಎಚ್ ಶಿವಶಂಕರರೆಡ್ಡಿ
Follow us
TV9 Web
| Updated By: sandhya thejappa

Updated on:Jan 12, 2022 | 10:47 AM

ಚಿಕ್ಕಬಳ್ಳಾಪುರ: ಮೇಕೆದಾಟು ಯೋಜನೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಕಠಿಣ ನಿಯಮಗಳು ಜಾರಿಯಲ್ಲಿದ್ದರೂ, ಕ್ಯಾರೆ ಎನ್ನದ ನಾಯಕರು ಇಂದು ನಾಲ್ಕನೇ ದಿನದ ಪಾದಯಾತ್ರೆ ನಡೆಸಲು ಸಜ್ಜಾಗಿದ್ದಾರೆ. ಈಗಾಗಲೇ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಮಾಚಿ ಸಚಿವ ಎಚ್ ಎಮ್ ರೇವಣ್ಣಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಎಚ್ ಶಿವಶಂಕರರೆಡ್ಡಿಗೂ ಕೊರೊನಾ ಸೋಂಕು ತಗುಲಿದೆ.

ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಶಾಸಕ ಎನ್ ಎಚ್ ಶಿವಶಂಕರರೆಡ್ಡಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿನ್ನೆ ರಾತ್ರಿ ಶಾಸಕ ಶಿವಶಂಕರರೆಡ್ಡಿ ಪಾದಯಾತ್ರೆಯಿಂದ ಗೌರಿಬಿದನೂರಿಗೆ ವಾಪಸ್ಸಾಗಿದ್ದರು. ಕೊರೊನಾ ಲಕ್ಷಣ ಹಿನ್ನೆಲೆ ಕೊವಿಡ್ ಟೆಸ್ಟ್​ಗೆ ಒಳಗಾಗಿದ್ದರು. ಪರೀಕ್ಷೆ ನಡೆಸಿದ ಬಳಿಕ ಕೊರೊನಾ ಇರುವುದು ದೃಢಪಟ್ಟಿದೆ. ಈ ಬಗ್ಗೆ ಫೇಸ್​ಬುಕ್​ನಲ್ಲಿ ಮಾಹಿತಿ ನೀಡಿರುವ ಅವರು, ತಮ್ಮ ಸಂಪರ್ಕಕ್ಕೆ ಬಂದವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಮಲ್ಲಾಜಮ್ಮಗೆ ಕೊರೊನಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕಿಗೆ ಕೊರೊನಾ ಸೋಂಕು ತಗುಲಿದೆ. ಮಾಜಿ ಶಾಸಕಿ, ಕಾಂಗ್ರೆಸ್ ನಾಯಕಿ ಮಲ್ಲಾಜಮ್ಮಗೆ ಕೊರೊನಾ ದೃಢಪಟ್ಟಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೊಪ್ಪಸಮುದ್ರ ಗ್ರಾಮದ ಮನೆಯಲ್ಲಿ ಮಲ್ಲಾಜಮ್ಮ ಐಸೋಲೇಷನ್ ಆಗಿದ್ದಾರೆ.

ಲಾಕ್​ಡೌನ್ ಬೇಡ; ರೈತರ ಮನವಿ                                                                                                                                                    ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ವೀಕೆಂಡ್ ಕರ್ಪ್ಯೂ ನೈಟ್ ಕರ್ಪ್ಯೂ ಜಾರಿ ಮಾಡಿದ್ರೂ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಇದರಿಂದ ಸರ್ಕಾರ ಲಾಕ್​ಡೌನ್ ಜಾರಿ ಮಾಡಿದರೆ ಲಾಭಕ್ಕಿಂತ ನಷ್ಟವೆ ಹೆಚ್ಚು. ಈಗಾಗಲೇ ಕೊರನಾದಿಂದ ಜೀವನವೆ ಹಾಳಾಗಿದೆ. ಯಾವುದೆ ಕಾರಣಕ್ಕೂ ಲಾಕ್​ಡೌನ್ ಮಾಡಬೇಡಿ ಅಂತ ಚಿಕ್ಕಬಳ್ಳಾಪುರದ ರೈತರು, ವರ್ತಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ

ಲಾಕ್​ಡೌನ್ ಮಾಡಿದ್ರೆ ಹಸಿವಿನಿಂದಲೇ ಸಾಯುತ್ತೇವೆ, ನಮ್ಮ ಕುಟುಂಬ ಬೀದಿಗೆ ಬರುತ್ತೆ; ಅಳಲು ತೋಡಿಕೊಂಡ ವ್ಯಾಪಾರಿಗಳು

ಲಾಕ್​ಡೌನ್ ಮಾಡಿದ್ರೆ ಹಸಿವಿನಿಂದಲೇ ಸಾಯುತ್ತೇವೆ, ನಮ್ಮ ಕುಟುಂಬ ಬೀದಿಗೆ ಬರುತ್ತೆ; ಅಳಲು ತೋಡಿಕೊಂಡ ವ್ಯಾಪಾರಿಗಳು

Published On - 10:24 am, Wed, 12 January 22