ರೌಡಿಶೀಟರ್​ಗಳಿಗೆ ಗನ್​ ಲೈಸೆನ್ಸ್ ನೀಡಿದ ಪೊಲೀಸರು; ವಿಷಯ ತಿಳಿದು ಅಧಿಕಾರಿಗಳಿಗೆ ಪೊಲೀಸ್ ಆಯುಕ್ತ ಬಿ.ದಯಾನಂದ್ ಕ್ಲಾಸ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 23, 2024 | 11:38 AM

ಲೋಕಸಭಾ ಚುನಾವಣೆ(Lok sabha election) ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗನ್​ಗಳನ್ನು ಹಿಂದಿರುಗಿಸಲು ಸೂಚನೆ ನೀಡಿದೆ. ಇದೇ ವೇಳೆ ರೌಡಿಶೀಟರ್‌ (Rowdy sheeter)ಗಳ ಬಳಿಯೂ ಗನ್ ಇರುವುದು ಬೆಳಕಿಗೆ ಬಂದಿದೆ.

ರೌಡಿಶೀಟರ್​ಗಳಿಗೆ ಗನ್​ ಲೈಸೆನ್ಸ್ ನೀಡಿದ ಪೊಲೀಸರು; ವಿಷಯ ತಿಳಿದು ಅಧಿಕಾರಿಗಳಿಗೆ ಪೊಲೀಸ್ ಆಯುಕ್ತ ಬಿ.ದಯಾನಂದ್ ಕ್ಲಾಸ್
ರೌಡಿಶೀಟರ್​ಗಳಿಗೆ ಗನ್​ ಲೈಸೆನ್ಸ್ ನೀಡಿದ ಪೊಲೀಸರು; ವಿಷಯ ತಿಳಿದು ಅಧಿಕಾರಿಗಳಿಗೆ ಪೊಲೀಸ್ ಆಯುಕ್ತ ಬಿ.ದಯಾನಂದ್ ಕ್ಲಾಸ್
Follow us on

ಬೆಂಗಳೂರು, ಮಾ.23: ಲೋಕಸಭಾ ಚುನಾವಣೆ(Lok sabha election) ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗನ್​ಗಳನ್ನು ಹಿಂದಿರುಗಿಸಲು ಸೂಚನೆ ನೀಡಿದೆ. ಇದೇ ವೇಳೆ ರೌಡಿಶೀಟರ್‌ (Rowdy sheeter)ಗಳ ಬಳಿಯೂ ಗನ್ ಇರುವುದು ಬೆಳಕಿಗೆ ಬಂದಿದೆ. ಅಶೋಕ್ ಅಡಿಗ ಸೇರಿದಂತೆ ಒಟ್ಟು 6 ರೌಡಿಶೀಟರ್‌ಗಳ ಬಳಿ‌ ಗನ್​ಗಳಿವೆ. ಈ ವಿಚಾರ ತಿಳಿಯುತ್ತಿದ್ದಂತೆ ಕೋಪಗೊಂಡ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್​, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇನ್ನು ನಿನ್ನೆಯಷ್ಟೇ (ಮಾ.22) ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ  ವಿಭಾಗದ ಮೂರು ಉಪವಿಭಾಗಗಳ ವ್ಯಾಪ್ತಿಯ ಪೊಲೀಸ್ ಠಾಣೆಗಳ ಅಧಿಕಾರಿಗಳು ರೌಡಿಶೀಟರ್‌ಗಳ ಮನೆಗಳ ಗುರುವಾರ ಮುಂಜಾನೆ ದಿಢೀರ್​ ದಾಳಿ ಮಾಡಿದ್ದರು. ಬರೊಬ್ಬರಿ 234 ಮನೆಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಈ ವೇಳೆ 177 ರೌಡಿಗಳು ಮನೆಯಲ್ಲಿರಲಿಲ್ಲ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಎಂಟು ರೌಡಿಗಳ ಮನೆಗಳಲ್ಲೂ ತಪಾಸಣೆ ನಡೆಸಲಾಗಿದೆ. ಜಯನಗರ, ಬನಶಂಕರಿ, ಚೆನ್ನಮ್ಮನ ಅಚ್ಚುಕಟ್ಟು, ಕುಮಾರಸ್ವಾಮಿ ಲೇಔಟ್ ಸೇರಿದಂತೆ ದಕ್ಷಿಣ ವಲಯದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳ ರೌಡಿಶೀಟರ್ ಮ‌ನೆಗಳನ್ನು ಪೊಲೀಸರು ಜಾಲಾಡಿದ್ದಾರೆ.

ಇದನ್ನೂ ಓದಿ:ಸಹೋದರನ ಹತ್ಯೆಯ ಸೇಡು, ಹಾಡುಹಗಲೇ ರೌಡಿಶೀಟರ್​ ಬರ್ಬರ ಹತ್ಯೆ; ಆರು ಜನ ಆರೋಪಿಗಳ ಬಂಧನ

ಜಿಲ್ಲೆಯಲ್ಲಿ ಇಂದು ಬೆಳಿಗ್ಗೆಯಿಂದ ಇದುವರೆಗೆ 7 ಲಕ್ಷ ರೂಪಾಯಿ ಜಪ್ತಿ

ಬಾಗಲಕೋಟೆ: ಲೋಕಸಭೆ ಚುನಾವಣೆಯ ನೀತಿ ಸಂಹಿತೆ‌ ಜಾರಿಯಾಗಿದ್ದು, ಶನಿವಾರ(ಮಾ.23) ಬೆಳ್ಳಂಬೆಳಗ್ಗೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ನಗದನ್ನು ವಶಕ್ಕೆ ಪಡೆಯಲಾಗಿದೆ. ವಿವಿಧ ಚೆಕ್ ಪೋಸ್ಟಗಳಲ್ಲಿ ಒಟ್ಟು 7 ಲಕ್ಷ ಹಣ ಜಪ್ತಿ ಪಡೆಯಲಾಗಿದೆ. ಅದರಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರ ಚೆಕ್ ಪೋಸ್ಟ್​ನಲ್ಲಿಯೇ 6 ಲಕ್ಷ ರೂ. ಸಿಕ್ಕಿದರೆ, ಹುಲ್ಯಾಳ ಚೆಕ್ ಪೋಸ್ಟನಲ್ಲಿ 1 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ