AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಬೇಸಿಗೆಯಲ್ಲಿ ಬಿಗ್ ಶಾಕ್; 200 ಯೂನಿಟ್‌‌ಗಿಂತ ಜಾಸ್ತಿ ಬಳಸಿದ್ರೆ ಶೇ. 20 ರಷ್ಟು ಫುಲ್ ಬಿಲ್ 

ಬೇಸಿಗೆ ಆರಂಭವಾಗಿದ್ದೆ, ಆಗಿದ್ದು ಕರೆಂಟ್ ಇಲ್ಲದೆ ಇರೋಕೆ ಆಗೋದಿಲ್ವೆನೋ ಅನ್ನೋವಷ್ಟು ಅಡಿಕ್ಟ್ ಆಗೋಗಿದ್ದಾರೆ. ನಮ್ಮ ಸಿಲಿಕಾನ್ ಸಿಟಿ ಜನರು ಬಳಸುವ ಫ್ಯಾನೂ, ಎಸಿ ಕೂಲರ್ ಎಲ್ಲದಕ್ಕೂ ಕರೆಂಟ್ ಬೇಕೆ ಬೇಕು. ಈ ಬಾರಿಯ ಜಲಕ್ಷಾಮದ ಎಫೆಕ್ಟ್ ನಿಂದಂತೋ ಒನ್ ಟೂ ಡಬಲ್ ವಿದ್ಯುತ್ ಬಿಲ್ ಬರುವಂತೆ ಆಗೋಗಿದೆ ಇದರಿಂದ ಶಕ್ತಿ ಯೋಜನೆಯ ಫಲಾನುಭವಿಗಳು ಕಂಗಲಾಗಿದ್ದಾರೆ.

ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಬೇಸಿಗೆಯಲ್ಲಿ ಬಿಗ್ ಶಾಕ್; 200 ಯೂನಿಟ್‌‌ಗಿಂತ ಜಾಸ್ತಿ ಬಳಸಿದ್ರೆ ಶೇ. 20 ರಷ್ಟು ಫುಲ್ ಬಿಲ್ 
ಸಾಂದರ್ಭಿಕ ಚಿತ್ರ
Kiran Surya
| Updated By: ಆಯೇಷಾ ಬಾನು|

Updated on: Mar 23, 2024 | 7:54 AM

Share

ಬೆಂಗಳೂರು, ಮಾರ್ಚ್​.23:  ಬರದ ಬೇಗೆಯಲ್ಲಿರುವ ಸಾಮಾನ್ಯ ಜನರಿಗೆ ಗೃಹಜ್ಯೋತಿ (Gruha Jyothi Scheme) ಯೋಜನೆಯಡಿ 200 ಯೂನಿಟ್ ಗಿಂತ ಜಾಸ್ತಿ ವಿದ್ಯುತ್ ಬಳಸಿದ ಫಲಾನುಭವಿಗಳು ಬಳಸಿದ ಅಷ್ಟು ಯೂನಿಟ್‌ಗಳಿಗೆ ದುಬಾರಿ ಬಿಲ್ ಕಟ್ಟಬೇಕಿದೆ‌. ಎಲೆಕ್ಷನ್ ಗೂ ಮುನ್ನ ಪ್ರತಿ ಮನೆಗೆ 200 ಯೂನಿಟ್‌ ಕರೆಂಟ್‌ ಫ್ರೀ ಎಂದು ಹೇಳಿದ್ದ ಕಾಂಗ್ರೆಸ್‌, ಚುನಾವಣೆ ಬಳಿಕ ಕಂಡಿಷನ್ಸ್‌ ಅಪ್ಲೈ ಎಂದು ಹೇಳಿತ್ತು. ಈಗ ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬಿಸಿಲಿರುವ ಕಾರಣ ಗ್ರಾಹಕರು, 200 ಯೂನಿಟ್‌‌ಗಿಂತ ಜಾಸ್ತಿ ವಿದ್ಯುತ್‌ ಬಳಸಿದರೆ, ಬಳಸಿದ ಅಷ್ಟು ಯೂನಿಟ್‌ಗಳಿಗೆ ದುಬಾರಿ ಶುಲ್ಕವನ್ನು ಭರಿಸಬೇಕಾಗಿದೆ.

ಈ ಬಗ್ಗೆ ಮಾತಾನಾಡಿದ ಬೆಸ್ಕಾಂ ಚೀಫ್ ಇಂಜಿನಿಯರ್ ಕಳೆದ ವರ್ಷದ 12 ತಿಂಗಳಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ 37,111 ಮಿಲಿಯನ್ ಯೂನಿಟ್ ವಿದ್ಯುತ್ ಅನ್ನ ಜನರು ಬಳಕೆ ಮಾಡಿದ್ರೆ ಇನ್ನೂ ಈ ವರ್ಷ ಒಂದು ತಿಂಗಳು ಬಾಕಿ ಇರುವಾಗಲೇ 40 ಸಾವಿರ 607 ಮಿಲಿಯನ್ ಯೂನಿಟ್ ಬಳಕೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ 3496 ಮಿಲಿಯನ್ ಯೂನಿಟ್ ಹೆಚ್ಚಳವಾಗಿ ವಿದ್ಯುತ್ ಬಳಕೆ ಯಾಗಿದೆ. ಈ ವರ್ಷ ಹತ್ತು ಸಾವಿರ ಮಿಲಿಯನ್ ಯೂನಿಟ್ ಹೆಚ್ಚು ಬಳಕೆ ಆಗುವ ಸಾಧ್ಯತೆಯಿದೆ ಎಂದರು.

ಇದನ್ನೂ ಓದಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ; ಶಂಕಿತನ ಜಾಡು ಹಿಡಿದ ಎನ್​ಐಎಗೆ ಸಿಕ್ಕಿತು ಚೆನ್ನೈ ಲಿಂಕ್

ಇನ್ನೂ ರಾಜ್ಯದಲ್ಲಿ ಅಂದಾಜು 1.20 ಕೋಟಿ ಮಂದಿ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಎಸಿ, ಫ್ಯಾನ್, ಕೂಲರ್ ಬಳಕೆಯಿಂದಾಗಿ ಹೆಚ್ಚಿನ ವಿದ್ಯುತ್ ಬಳಸುತ್ತಿರುವ ಪರಿಣಾಮ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆಯಾಗುತ್ತಿದೆ. ಹೀಗಾಗಿ ಹೆಚ್ಚುವರಿಯಾಗಿ ಬಳಸಿದ ವಿದ್ಯುತ್ ಗೆ ಬಿಲ್ ಪಾವತಿ ಮಾಡಬೇಕಿರುವ ಅನಿವಾರ್ಯತೆಗೆ ಜನರು ಸಿಲುಕಿದ್ದಾರೆ. ಈ ಬಗ್ಗೆ ಮಾತಾನಾಡಿದ ಮನೆ ಮಾಲೀಕ ಮೋಹನ್, ಬೆಂಗಳೂರಿನಲ್ಲಿ ವಿಪರೀತವಾಗಿ ನೀರಿನ ಸಮಸ್ಯೆ ಎದುರಾಗಿದೆ ಬೋರ್ವೆಲ್ ನಿಂದ ನೀರು ಸಪ್ಲೆ ಮಾಡಿಕೊಳ್ಳಲು ಮತ್ತು ಬೇಸಿಗೆ ಕಾರಣದಿಂದಾಗಿ ಎಸಿ,ಕೂಲರ್ ,ಫ್ಯಾನ್ ಗಾಗಿ ಅತಿ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತದೆ ಅದಕ್ಕೆ ನಮ್ಮ ಮನೆಗೂ ಹೆಚ್ಚಿನ ವಿದ್ಯುತ್ ಬಿಲ್ ಬರ್ತಿದೆ ಎಂದರು.

ಒಟ್ನಲ್ಲಿ ಕಾಂಗ್ರೆಸ್ ಸರ್ಕಾರ ಏನೋ ಎಲೆಕ್ಷನ್‌ ಟೈಮ್ ನಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ಎಂದು ಪ್ರಚಾರ ‌ಮಾಡಿತ್ತು. ನಂತರ ವರ್ಷದ ಸರಾಸರಿ ಮಾತ್ರ ಉಚಿತ ಎಂದಿದ್ದು ಇದೀಗ ಬೇಸಿಗೆ ಅನ್ನೋ ಕಾರಣಕ್ಕೆ ಜನರು ಅತಿಹೆಚ್ಚಾಗಿ ವಿದ್ಯುತ್ ಬಳಕೆ ಮಾಡಲು ಮುಂದಾಗಿದ್ದು ಬಳಸಿದ ವಿದ್ಯುತ್ ಬಿಲ್ ಕಟ್ಟುವ ಪರಿಸ್ಥಿತಿ ಎದುರಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ