AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿನ ಪೌಡರ್‌ ಬಾಕ್ಸ್‌ನಲ್ಲಿ ಮತ್ತೇರಿಸುವ ಡ್ರಗ್ಸ್ ಪೂರೈಕೆ: ವಿಚಾರಣೆಗೆ ಬರುವಂತೆ ಪ್ರೆಸ್ಟೀಜ್ ಗ್ರೂಪ್‌ ಮುಖ್ಯಸ್ಥೆ ಅಂಜುಂಗೆ ನೋಟಿಸ್

ಅರೆಸ್ಟ್ ಆದ ಡ್ರಗ್ಸ್ ಪೆಡ್ಲರ್ಗೆ ಕೋಟಿ ಒಡತಿ ಹಾಗೂ ಪ್ರೆಸ್ಟೀಜ್ ಗ್ರೂಪ್ ಮಾಲೀಕ ಇರ್ಫಾನ್ ಸಹೋದರಿ ಅಂಜುಂ ರಜಾಕ್‌ ಲಿಂಕ್ ಇದೆ ಎಂಬುವುದು ಬಹಿರಂಗವಾಗಿದೆ. ಅಂಜುಂ ರಜಾಕ್‌ಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಬಗ್ಗೆ ಪೊಲೀಸರ ವಿಚಾರಣೆ ವೇಳೆ ಆರೋಪಿ ಒಬೆಕ್ ಬಾಯ್ಬಿಟ್ಟಿದ್ದಾನೆ.

ಹಾಲಿನ ಪೌಡರ್‌ ಬಾಕ್ಸ್‌ನಲ್ಲಿ ಮತ್ತೇರಿಸುವ ಡ್ರಗ್ಸ್ ಪೂರೈಕೆ: ವಿಚಾರಣೆಗೆ ಬರುವಂತೆ ಪ್ರೆಸ್ಟೀಜ್ ಗ್ರೂಪ್‌ ಮುಖ್ಯಸ್ಥೆ ಅಂಜುಂಗೆ ನೋಟಿಸ್
ಹಾಲಿನ ಪೌಡರ್‌ ಬಾಕ್ಸ್‌ನಲ್ಲಿ ಮತ್ತೇರಿಸುವ ಡ್ರಗ್ಸ್ ಪೂರೈಕೆ: ವಿಚಾರಣೆಗೆ ಬರುವಂತೆ ಪ್ರೆಸ್ಟೀಜ್ ಗ್ರೂಪ್‌ ಮುಖ್ಯಸ್ಥೆ ಅಂಜುಂಗೆ ನೋಟಿಸ್
TV9 Web
| Edited By: |

Updated on:Dec 16, 2021 | 10:01 AM

Share

ಬೆಂಗಳೂರು: ಹಾಲಿನ ಪೌಡರ್‌ ಬಾಕ್ಸ್‌ನಲ್ಲಿ ಮತ್ತೇರಿಸುವ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿ ಬೆಂಗಳೂರಿನ ಗೋವಿಂದಪುರ ಪೊಲೀಸರು ಆಫ್ರಿಕನ್ ಡ್ರಗ್ ಪೆಡ್ಲರ್ ಒಬೆದ್ ಒಕೆಚುಕ್ವು ಎಂಬುವವನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದು ಸ್ಫೋಟಕ ಮಾಹಿತಿ ಬಯಲಾಗಿದೆ.

ಅರೆಸ್ಟ್ ಆದ ಡ್ರಗ್ ಪೆಡ್ಲರ್ಗೆ ಕೋಟಿ ಒಡತಿ ಹಾಗೂ ಪ್ರೆಸ್ಟೀಜ್ ಗ್ರೂಪ್ ಮಾಲೀಕ ಇರ್ಫಾನ್ ಸಹೋದರಿ ಅಂಜುಂ ರಜಾಕ್‌ ಲಿಂಕ್ ಇದೆ ಎಂಬುವುದು ಬಹಿರಂಗವಾಗಿದೆ. ಅಂಜುಂ ರಜಾಕ್‌ಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಬಗ್ಗೆ ಪೊಲೀಸರ ವಿಚಾರಣೆ ವೇಳೆ ಆರೋಪಿ ಒಬೆಕ್ ಬಾಯ್ಬಿಟ್ಟಿದ್ದಾನೆ. ಪ್ರೆಸ್ಟೀಜ್ ಗ್ರೂಪ್ ಮಾಲೀಕ ಇರ್ಫಾನ್ ಸಹೋದರಿ ಅಂಜುಂ ಪ್ರೆಸ್ಟೀಜ್ ಗ್ರೂಪ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೂಡ ಆಗಿದ್ದಾನೆ. ಸದ್ಯ ಅಂಜುಂ‌ ರಜಾಕ್‌ಗೆ ಗೋವಿಂದಪುರ ಪೊಲೀಸರು ನೋಟಿಸ್ ನೀಡಿ ಇಂದು ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.

ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ಒಬೆಕ್ ಜೊತೆಗೆ ಅಂಜುಂಗೆ ಲಿಂಕ್ ಡಿಸೆಂಬರ್ 14 ರಂದು ಆರೋಪಿ ಒಬೆಕ್ನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದರು. ಡ್ರಗ್ ಪೆಡ್ಲರ್ ಜೊತೆಗೆ ಅಂಜುಂ ನಿರಂತರ ಸಂಪರ್ಕ ಹೊಂದಿರುವ ಬಗ್ಗೆ ಆರೋಪಿ ಮಾಹಿತಿ ಬಾಯ್ಬಿಟ್ಟಿದ್ದಾನೆ. ವಾಟ್ಸ್ ಆ್ಯಪ್ನಲ್ಲಿ ಮೆಸೇಜ್ ಮಾಡಿ ಡ್ರಗ್ಸ್ ತರಿಸಿಕೊಳ್ಳಲಾಗುತ್ತಿತ್ತಂತೆ. ಫ್ರೇಜರ್ ಟೌನ್ ನ ನಂದಿದುರ್ಗ ರಸ್ತೆಯಲ್ಲಿರುವ ಅಂಜುಂ ಮನೆಗೆ ಡ್ರಗ್ಸ್ ನೀಡಿರೋದಾಗಿ ಆರೋಪಿ ತಿಳಿಸಿದ್ದಾನೆ. ಹಲವು ಬಾರಿ ಡ್ರಗ್ಸ್ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಡ್ರಗ್ಸ್ ಕನ್ಸ್ಯೂಮರ್ ಮೂಲಕ ಪೆಡ್ಲರ್ ಬಂಧಿಸಿದ ಗೋವಿಂದಪುರ ಠಾಣೆ ಪೊಲೀಸರು ಹಾಲಿನ ಪೌಡರ್ ಇರುವ ಡಬ್ಬದಲ್ಲಿ ಡ್ರಗ್ಸ್, ಎಕ್ಸ್ ಟಸಿ ಟ್ಯಾಬ್ಲೆಟ್, ಗಾಂಜಾ ಇಟ್ಟು ಸಾಗಾಟ ಮಾಡುತ್ತಿದ್ದಾಗ ಖಾಕಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಯ ಸಿಡಿಆರ್ ಪರೀಕ್ಷಿಸಿದ ವೇಳೆ ಪ್ರೆಸ್ಟಿಜ್ ಗ್ರೂಪ್ ಮಾಲೀಕ ಇರ್ಫಾನ್ ತಂಗಿ ಅಂಜುಂ ಸಂಪರ್ಕದಲ್ಲಿರೋದು ಪತ್ತೆಯಾಗಿದೆ. ಅಂಜುಂ ಮಾತ್ರವಲ್ಲದೆ ಸೆಲೆಬ್ರಿಟಿಗಳು, ಅವರ ಮಕ್ಕಳು ಪೆಡ್ಲರ್ ಸಂಪರ್ಕದಲ್ಲಿರುವ ಮಾಹಿತಿ ಸಿಕ್ಕಿದೆ.

ಇಂದು ಅಂಜುಂ‌ ರಜಾಕ್​ಗೆ ಮೂರನೇ ಬಾರಿ ನೋಟಿಸ್ ಈಗಾಗಲೇ ಎರಡು ಬಾರಿ ನೋಟಿಸ್ ನೀಡಿದರೂ ಅಂಜುಂ‌ ರಜಾಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಇಂದು ಮತ್ತೆ ಮೂರನೇ ಬಾರಿ ನೋಟಿಸ್ ಕಳಿಸಲಾಗುತ್ತಿದೆ. ಸೆಪ್ಟೆಂಬರ್ 25 ರಂದು ವಿಚಾರಣೆಗೆ ಹಾಜರಾಗಲು ಗೋವಿಂದಪುರ ಪೊಲೀಸರು ನೋಟಿಸ್ ನೀಡಿದ್ದರು. ನೋಟಿಸ್ ಸ್ವೀಕರಿಸಿದ್ರೂ ವಿಚಾರಣೆಗೆ ಹಾಜರಾಗಿರಲಿಲ್ಲ. ನಂತರ ಅಕ್ಟೋಬರ್ ನಲ್ಲಿ ಎರಡನೇ ನೋಟಿಸ್ ನೀಡಲಾಗಿತ್ತು. ಆಗಲೂ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಈಗ ಇಂದು ವಿಚಾರಣೆಗೆ ಹಾಜರಾಗಲು ಮತ್ತೊಂದು ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಮಹಿಳೆಯರ ಮದುವೆ ವಯಸ್ಸಿನ ಮಿತಿ 21ವರ್ಷಕ್ಕೆ ಏರಿಸುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಅನುಮೋದನೆ

Published On - 9:53 am, Thu, 16 December 21

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ