ಬೆಂಗಳೂರು: ಇಂದು ಪೊಲೀಸ್ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ. ಪೊಲೀಸ್ ಪ್ರಧಾನ ಕಚೇರಿ 7 ಮಹಡಿ ಕಾನ್ಫರೆನ್ಸ್ ಹಾಲ್ನಲ್ಲಿ ಸಭೆ ನಡೆದಿದ್ದು ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಙಾನೇಂದ್ರ, ಪೊಲೀಸ್ ಅಧಿಕಾರಿಗಳು, ಪೊಲೀಸ್ ಕಮಿಷನರ್, ಹಿರಿಯ ಅಧಿಕಾರಿಗಳು, ಡಿಸಿಪಿ, ಜಿಲ್ಲಾ ಎಸ್ಪಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಸದ್ಯ ಸಭೆಯ ಬಳಿಕ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿದ್ದು ಕೊವಿಡ್ ಕಾರಣದಿಂದ ಎರಡು ವರ್ಷ ಪೊಲೀಸರ ಸಭೆ ಆಗಿರಲಿಲ್ಲ. ನೂತನ ಸರ್ಕಾರ ಆಗಿದ ಬಳಿಕ ಇದೇ ಮೊದಲ ಸಭೆ ನಡೆಸುತ್ತಿದ್ದೇವೆ. ಕರ್ನಾಟಕ ಪೊಲೀಸ್ ದೇಶದಲ್ಲಿ ದಕ್ಷ ಪೊಲೀಸರು. ಪೊಲೀಸ್ ಠಾಣೆ ಹಂತದಲ್ಲಿ ಜನ ಸ್ನೇಹಿ ಪೊಲೀಸ್ ಆಗಬೇಕು. ಸಾರ್ವಜನಿಕವಾಗಿ ಜನ ಸ್ನೇಹಿ ಇರಬೇಕು. ಡಿಜಿ ಹಾಗು ಎಸ್ಪಿ ಎಲ್ಲರಿಗೂ ಡ್ಯಾಶ್ ಬೋರ್ಡ್ ಆಗಿರಬೇಕು. ಕೇಸ್ ಮಾನಿಟರ್ ಮಾಡಬೇಕು. ತನಿಖೆಯಿಂದ ಶಿಕ್ಷೆ ಪ್ರಮಾಣ ಹೆಚ್ಚಾಗಬೇಕು. ಕೋರ್ಟ್ ಈ ಬಗ್ಗೆ ಮಾನಿಟರ್ ಆಗ್ಬೇಕು. ಯಾವುದೆ ಹಂತದಲ್ಲಿ ಪೊಲೀಸರು ಎಂಜೆಂಟ್ಗಳನ್ನು ಯಾವ ಸಂಬಂಧದಲ್ಲಿ ಸಹ ಇಟ್ಟುಕೊಳ್ಳಬಾರದು ಎಂದು ಸಿಎಂ ಸುದ್ದಿಗೋಷ್ಠಿ ತಿಳಿಸಿದರು.
ಇನ್ನು ಬೆಂಗಳೂರು ಸುತ್ತಮುತ್ತ ಸಿವಿಲ್ ವಿಚಾರಕ್ಕೆ ಪೊಲೀಸರು ಕೈ ಹಾಕಬಾರದು. ಸ್ಯಾಂಡ್ ಮಾಫಿಯಾ ಜೊತೆಗೆ ಯಾವ ಕಾರಣಕ್ಕೂ ಪೊಲೀಸರು ಕೈ ಜೋಡಿಸಬಾರದು. ಮುಂದಿನ ದಿನದಲ್ಲಿ ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಗ್ಬೇಕು. ಪೊಲೀಸ್ ವ್ಯವಸ್ಥೆ ಸುಧಾರಣೆಗಾಗಿ ಕಮಾಂಡ್ ಸೆಂಟರ್ ಆಗುತ್ತೆ. ಜೈಲು, ಎಫ್ಎಸ್ಎಲ್ ಸುಧಾರಣೆ ಆಗಲಿದೆ.
ಕಾನೂನು ಸುವ್ಯವಸ್ಥೆ ಕೈ ಕೊಟ್ಟಾಗಲೇ ರೌಡಿಶೀಟರ್‌ಗಳಿಗೆ ರಿಲೀಫ್.?
ಪೊಲೀಸ್ ಇಲಾಖೆಗೆ ಮುಂದಿನ ದಿನಗಳಲ್ಲಿ ತಲೆ ನೋವಾಗುವಂತ ವಿವಾದಾತ್ಮಕ ನಿರ್ಣಯ ಕೈಗೊಳ್ಳುವುದಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದ ರೌಡಿಶೀಟರ್ ಗಳ ಪಟ್ಟಿಯಿಂದ ಹಲವರನ್ನು ಕೈ ಬಿಡುವುದಕ್ಕೆ ಗೃಹ ಇಲಾಖೆ ನಿರ್ಧರಿಸಿದೆ. ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ರಾಜ್ಯದ ರೌಡಿಶೀಟರ್ ಗಳ ಪಟ್ಟಿಯನ್ನು ಪರಾಮರ್ಶೆ ಮಾಡಲು ಸಿಎಂ ಹಾಗೂ ಗೃಹ ಸಚಿವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಣ್ಣಪುಟ್ಟ ಚಳವಳಿಗಾರರ ವಿರುದ್ಧ ರೌಡಿಶೀಟರ್ ಇವೆ. ಅನೇಕ ಮಾನದಂಡ ಇಟ್ಟು ರೌಡಿಶೀಟರ್ ಪಟ್ಟಿ ಪರಾಮರ್ಶೆ ಮಾಡುತ್ತೇವೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಸರ್ಕಾರದ ನಿರ್ಧಾರದ ಮೇಲೆ ನಾನಾ ಅನುಮಾನ?
ಸರ್ಕಾರ ಈ ರೀತಿ ಆತುರದಲ್ಲಿ ಅನಗತ್ಯ ಸಂದರ್ಭದಲ್ಲಿ ರೌಡಿ ಶೀಟರ್ ಪಟ್ಟಿಯನ್ನು ಪರಾಮರ್ಶಿಸಲು ಹೊರಟಿರುವುದರಿಂದ ಹಿಂದೆ ಹಲವು ಅನುಮಾನಗಳೂ ಮೂಡಿದೆ. ರಾಜಕೀಯ ಒತ್ತಡದಿಂದಾಗಿ ರೌಡಿಶೀಟರ್ ಪಟ್ಟಿಯನ್ನು ಪರಾಮರ್ಶಿಸಿ ತಮಗೆ ಬೇಕಾದವರನ್ನ, ತಮ್ಮ ಪಕ್ಷದವರನ್ನ, ರಾಜಕೀಯ ಮುಖಂಡರನ್ನ ರೌಡಿಶೀಟರ್ ಪಟ್ಟಿಯಿಂದ ಕೈ ಬಿಡುವ ವ್ಯವಸ್ಥಿತ ನಿರ್ಧಾರ ಇದು ಎನ್ನಲಾಗ್ತಿದೆ.
ಸರ್ಕಾರದ ಆತುರದ ನಿರ್ಧಾರಕ್ಕೆ ಹೆಚ್ಚುತ್ತಿದೆ ವಿರೋಧ
ರಾಜ್ಯದಲ್ಲಿ ರೌಡಿಶೀಟರ್‌ಗಳ ಸಂಖ್ಯೆ ಎಷ್ಟು ಅನ್ನೋ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ಅಂಕಿ ಸಂಖ್ಯೆ ಪಡೆದುಕೊಳ್ಳುವುದು ಬಾಕಿ ಇದೆ. ಅಪರಾಧ ಪ್ರಕರಣಗಳನ್ನು ಹತ್ತಿಕ್ಕುವುದಕ್ಕೆ ಒಂದು ಕಡೆ ಪೊಲೀಸರು ಹೆಣಗಾಟ ನಡೆಸಿದ್ರೆ ಹಲವು ರೌಡಿಶೀಟರ್‌ಗಳು ನೇರವಾಗಿಬಂದು ರಾಜಕೀಯ ವೇದಿಕೆಗಳಲ್ಲಿ ಪಾಲು ಪಡೆದುಕೊಳ್ತಿದ್ದಾರೆ. ರೌಡಿಶೀಟರ್ ಗಳಿಂದ ಹಫ್ತಾ ವಸೂಲಿ, ರಿಯಲ್ ಎಸ್ಟೇಟ್ ಮಾಫಿಯಾ ದಂಧೆಗಳಿಗೆ ಬ್ರೇಕ್ ಬೀಳುತ್ತಿಲ್ಲ. ಪೊಲೀಸ್ ಸ್ಟೇಷನ್ ಗಳು ಸೆಟಲ್‌ಮೆಂಟ್ ಅಡ್ಡೆಗಳಾಗ್ತಿವೆ ಎನ್ನುವ ಗಂಭೀರ ಆರೋಪವಿದೆ. ಒಂದು ಕಡೆ ಸರ್ಕಾರ ದುಷ್ಕೃತ್ಯ ಎಸಗುವವರನ್ನು ಮಟ್ಟ ಹಾಕ್ತೇವೆ ಎನ್ನೋ ಮಾತನ್ನು ಹೇಳುತ್ತಿದ್ದು, ಮತ್ತೊಂದ್ಕಡೆ ರೌಡಿಶೀಟರ್ ಪಟ್ಟಿಯಿಂದ ಹಲವರನ್ನು ಕೈಬಿಡ್ತೇವೆ ಅಂತಿದೆ. ಹೀಗಾಗಿ ಸರ್ಕಾರದ ನಡೆಗೆ ವಿರೋಧ ವ್ಯಕ್ತವಾಗುತ್ತಿದ್ದು ಆತುರ ಬೇಡ ಎನ್ನಲಾಗ್ತಿದೆ. ಇದಕ್ಕೆ ಸಮಾಜಿಯಿಷಿ ಕೊಡ್ತಿರೋ ಗೃಹ ಸಚಿವರು ರೌಡಿ ಶೀಟರ್‌ಗಳ ರಿವ್ಯೂ ಬಳಿಕ ರೌಡಿ ಶೀಟರ್ ಪಟ್ಟಿಯಿಂದ ಯಾರನ್ನು ಕೈ ಬಿಡಬೇಕು ಎಂಬುದನ್ನು ನಿರ್ಧರಿಸುತ್ತೀವಿ ಎನ್ನುತ್ತಿದ್ದಾರೆ.
ಇನ್ನು ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಹಾದಿಯಲ್ಲಿರುವ ಬಗ್ಗೆ ಮಾತನಾಡಿದ್ರು. ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಆಶೀರ್ವಾದ, ಪ್ರಧಾನಿ ಮೋದಿ ಹೆಸರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಾರ್ಯವೈಖರಿಯಿಂದ ಇಲ್ಲೆಲ್ಲಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಹಕಾರಿಯಾಗಿದೆ. ಈ ಸಂದರ್ಭದಲ್ಲಿ ನಮ್ಮ ನಾಯಕರಿಗೆ ಅಭಿನಂದನೆ ಸಲ್ಲಿಸುವೆ ಎಂದು ತಿಳಿಸಿದ್ರು.
ಇದನ್ನೂ ಓದಿ:
ಬಿಜೆಪಿಯವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ; ಆದರೂ ಮಹಾನಗರ ಪಾಲಿಕೆ ಫಲಿತಾಂಶ ಸಮಾಧಾನ ತಂದಿದೆ: ಡಿ.ಕೆ.ಶಿವಕುಮಾರ್
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ನಿಷೇಧಿಸಿ; ಪುದುಚೇರಿ ಲೆ. ಗವರ್ನರ್ಗೆ ನಾರಾಯಣಸ್ವಾಮಿ ಒತ್ತಾಯ
Published On - 1:20 pm, Mon, 6 September 21