ರಾಜ್ಯದಲ್ಲಿ ಬಿಜೆಪಿ ಅಲೆ ಇದೆ ಎನ್ನುವುದು ಮತ್ತೆ ಖಚಿತವಾಗಿದೆ; ಕಾಂಗ್ರೆಸ್​ ಒಳಜಗಳ ಬಯಲಾಗಿದೆ: ನಳಿನ್ ಕುಮಾರ್ ಕಟೀಲ್

TV9 Digital Desk

| Edited By: Skanda

Updated on:Sep 06, 2021 | 3:13 PM

Karnataka Civil Body Polls Result: ಹುಬ್ಬಳ್ಳಿ- ಧಾರವಾಡದಲ್ಲಿ ಮೂರನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ. ಕಲಬುರಗಿಯಲ್ಲೂ ಉತ್ತಮ ಫಲಿತಾಂಶ ಬಂದಿದೆ. ಪ್ರಧಾನಿ ಮೋದಿಯವರ ಜನಪ್ರಿಯ ಕಾರ್ಯಕ್ರಮ, ಬೊಮ್ಮಾಯಿ ಅವರ ಆಡಳಿತವನ್ನು ಜನ ಮೆಚ್ಚಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಲೆ ಇದೆ ಎನ್ನುವುದು ಮತ್ತೆ ಖಚಿತವಾಗಿದೆ; ಕಾಂಗ್ರೆಸ್​ ಒಳಜಗಳ ಬಯಲಾಗಿದೆ: ನಳಿನ್ ಕುಮಾರ್ ಕಟೀಲ್
ನಳಿನ್​ ಕುಮಾರ್ ಕಟೀಲ್ (ಸಂಗ್ರಹ ಚಿತ್ರ)

ಬೆಂಗಳೂರು: ಮಹಾನಗರ ಪಾಲಿಕೆಗಳ ಫಲಿತಾಂಶಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಬಿಜೆಪಿ ಪಡೆದುಕೊಂಡಿದೆ. ಎಲ್ಲ ಮತದಾರರಿಗೂ ಬಿಜೆಪಿ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಯಡಿಯೂರಪ್ಪ ಮಾರ್ಗದರ್ಶನ, ಬೊಮ್ಮಯಿ ನಾಯಕತ್ವದಲ್ಲಿ ನಾವು ಚುನಾವಣೆ ಎದುರಿಸಿದ್ದೇವೆ. ಬೆಳಗಾವಿಯಲ್ಲಿ ಬಿಜೆಪಿ ಅಭೂತಪೂರ್ವ ಜಯಭೇರಿ ಬಾರಿಸಿದೆ. ಬೆಳಗಾವಿಯಲ್ಲಿ ಚಿಹ್ನೆ ಅಡಿ ಮೊದಲ ಬಾರಿ ಚುನಾವಣೆ ಎದುರಿಸಿದ್ದೆವು. ಬಿಜೆಪಿಯ ಆಡಳಿತ ಮೆಚ್ಚಿ ಬೆಳಗಾವಿಯಲ್ಲಿ ಜನರು ಗೆಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿ- ಧಾರವಾಡದಲ್ಲಿ ಮೂರನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ. ಕಲಬುರಗಿಯಲ್ಲೂ ಉತ್ತಮ ಫಲಿತಾಂಶ ಬಂದಿದೆ. ಪ್ರಧಾನಿ ಮೋದಿಯವರ ಜನಪ್ರಿಯ ಕಾರ್ಯಕ್ರಮ, ಬೊಮ್ಮಾಯಿ ಅವರ ಆಡಳಿತವನ್ನು ಜನ ಮೆಚ್ಚಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಲೆ ಇದೆ ಅನ್ನೋದು ಮತ್ತೆ ಖಚಿತವಾಗಿದೆ. ಕಾಂಗ್ರೆಸ್ ಟೀಕೆ ಮಾಡುತ್ತಿದ್ದರು. ಆದರೆ, ಜನರು ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿದ್ದರಾಮಯ್ಯ ಚುನಾವಣೆ ಕಣಕ್ಕೆ ಬರಲಿಲ್ಲ, ಡಿ ಕೆ ಶಿವಕುಮಾರ್ ವಿಫಲ ಅಧ್ಯಕ್ಷರು ಅಂತ ತೋರಿಸಲು ಬರಲಿಲ್ಲ. ಅವರು ಸಿಎಂ ಸ್ಥಾನಕ್ಕಾಗಿ ಕಿತ್ತಾಟ ನಡೆಸುತ್ತಿದ್ದಾರೆ. ಹೀಗಾಗಿ ಡಿ ಕೆ ಶಿವಕುಮಾರ್ ವಿಫಲ ರಾಜ್ಯಾಧ್ಯಕ್ಷ ಎಂದು ತೋರಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಒಳ ಜಗಳ ಬಯಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ವ್ಯಂಗ್ಯ ಮಾಡಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್​ವಾರು ಗೆಲುವಿನ ಪಟ್ಟಿ ಹೀಗಿದೆ:

ಬಿಜೆಪಿ: ವಾರ್ಡ್​ ನಂಬರ್ – 45,26,6,15,16,22,23,24,53,54,57,58,36,17,31,32,33,55,35,29,30,42,43,44,37,40,41,49,50,21,28,39,4,46,34,51 ಬಿಜೆಪಿ ಒಟ್ಟು ಗೆಲುವು: 36

ಪಕ್ಷೇತರ: ವಾರ್ಡ್​ ನಂಬರ್ – 25,10, 1,47,14,38,48,12,27,7,9,10 ಪಕ್ಷೇತರಲ್ಲಿ ಎರಡು ಎಂಇಎಸ್ ಸೇರಿ ಒಟ್ಟು 12 ಗೆಲುವು

ಕಾಂಗ್ರೆಸ್: ವಾರ್ಡ್​ ನಂಬರ್ – 2, 5, 8,52,11,13,20,56,3 ಕಾಂಗ್ರೆಸ್ ಒಟ್ಟು ಗೆಲುವು: 09

AIMIM – 1 ಸ್ಥಾನ ಗೆಲುವು

ಕಲಬುರಗಿ ಗೆಲುವಿನ ಅಂಕಿ ಅಂಶ ಹೀಗಿದೆ:

ಕಾಂಗ್ರೆಸ್- 26 ಗೆಲುವು ಬಿಜೆಪಿ- 23 ಗೆಲುವು ಜೆಡಿಎಸ್- 3 ಗೆಲುವು ಪಕ್ಷೇತರ- 1 ಗೆಲುವು

(Nalin Kumar Kateel press meet on Hubballi Dharwad Belagavi Kalaburagi Civic body polls)

ಇದನ್ನೂ ಓದಿ: ಬಿಜೆಪಿಯವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ; ಆದರೂ ಮಹಾನಗರ ಪಾಲಿಕೆ ಫಲಿತಾಂಶ ಸಮಾಧಾನ ತಂದಿದೆ: ಡಿ.ಕೆ.ಶಿವಕುಮಾರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada