ಬೆಂಗಳೂರು: ಬವರಿಯಾ ಆಯ್ತು ಈಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಂಗಾರಿಯ ಗ್ಯಾಂಗ್ನ ಕೃತ್ಯ ಚುರುಕಾಗಿದೆ. ಬಲೂನ್ ಮಾರುವ ನೆಪದಲ್ಲಿ ಬೆಳಿಗ್ಗೆ ಏರಿಯಾ ರೌಂಡ್ಸ್ ಹಾಕಿ ಕಳ್ಳತನ ಮಾಡುತ್ತಿದ್ದ ಬಗಾರಿಯ ಗ್ಯಾಂಗ್ನ ಮೂವರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮುಖೇಶ್, ಧರ್ಮ, ಲಕ್ಷ್ಮಣ್ ಬಂಧಿತರು.
ಬಂಗಾರಿಯ ಗ್ಯಾಂಗ್ ಬಲೂನ್ ಮಾರುವ ನೆಪದಲ್ಲಿ ಬೆಳಿಗ್ಗೆ ಏರಿಯಾ ರೌಂಡ್ಸ್ ಹಾಕುತ್ತಿದ್ದರು. ಬಳಿಕ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಮನೆಗಳಿಗೆ ನುಗ್ಗಿ 3-4 ನಿಮಿಷದಲ್ಲೇ ಕನ್ನ ಹಾಕಿ ಎಸ್ಕೇಪ್ ಆಗುತ್ತಿದ್ದರು. ಬಂಗಾರಿಯ ಗ್ಯಾಂಗ್ ಆಗಸ್ಟ್ 8ರಂದು ಅಮೃತನಗರದ ಮನೆಯೊಂದಕ್ಕೆ ಕನ್ನ ಹಾಕಿದ್ದರು. ಸದ್ಯ ಈಗ ಅಮೃತಹಳ್ಳಿ ಪೊಲೀಸರು ರಾಜಸ್ಥಾನದ ಅಜ್ಮೀರ್ಗೆ ತೆರಳಿ ಮೂವರನ್ನೂ ಹೆಡೆಮುರಿ ಕಟ್ಟಿದ್ದಾರೆ.
1 ವಾರ ಸತತ ಪರಿಶ್ರಮದ ಬಳಿಕ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದು ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಬಂಧಿತರಿಂದ ಬರೊಬ್ಬರಿ 200 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸ್ ಸಿಬ್ಬಂದಿಗೆ ಅದ್ಧೂರಿಯಾಗಿ ಬೆಂಗಳೂರಿಗೆ ಸ್ವಾಗತ ಮಾಡಲಾಗಿದೆ.
ಬ್ಯಾನ್ ಆದ ನೋಟು ಬದಲಿಸುತ್ತಿದ್ದ ಆರೋಪಿಗಳ ಬಂಧನ ಇನ್ನು ಮತ್ತೊಂದು ಕಡೆ ಬ್ಯಾನ್ ಆದ ನೋಟು ಬದಲಿಸುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್, ಅಜರ್, ಮೊಹಮ್ಮದ್ ಬಂಧಿತ ಆರೋಪಿಗಳು. ಬಂಧಿತರಿಂದ 1.92 ಲಕ್ಷ ಬ್ಯಾನ್ ಆಗಿದ್ದ ನೋಟು ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ರಸ್ತೆ ಪಕ್ಕ ಬ್ಯಾಗ್ನಲ್ಲಿ ಹಣ ಹಿಡಿದು ನಿಂತಿದ್ದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಿರಣ್ ರಾಜ್ಗೆ ಕಿಚ್ಚ ಸುದೀಪ್ ಕಡೆಯಿಂದ ಸಿಕ್ತು ಸಲಹೆ; ‘ಕನ್ನಡತಿ’ ನಟನ ಉತ್ತರ ಏನು?
ಮಡಿವಾಳ: ವೈದ್ಯ ದಂಪತಿ ಮನೆಯಲ್ಲಿ ಕೆಲಸ ಮಾಡುವವರಿಂದಲೇ ಚಿನ್ನಾಭರಣ ಕಳ್ಳತನ; ಆರೋಪಿ ಅಮ್ಮು ಬಂಧನ