ಬಿಜೆಪಿಯವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ; ಆದರೂ ಮಹಾನಗರ ಪಾಲಿಕೆ ಫಲಿತಾಂಶ ಸಮಾಧಾನ ತಂದಿದೆ: ಡಿ.ಕೆ.ಶಿವಕುಮಾರ್

TV9 Digital Desk

| Edited By: Skanda

Updated on:Sep 06, 2021 | 3:13 PM

Karnataka Civil Body Polls Result: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಗ್ಗೆ ಮಾತನಾಡಿದ ಅವರು ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಕಾಂಗ್ರೆಸ್‌ಗೆ 15 ವರ್ಷದಿಂದ ಅಧಿಕಾರ ಇಲ್ಲ. ಆದರೆ ಈ ಬಾರಿ ಕಾಂಗ್ರೆಸ್‌ಗೆ ಒಳ್ಳೆಯ ಫಲಿತಾಂಶ ಬಂದಿದೆ. ಈ ಬಾರಿ ಸಂಖ್ಯೆ ಉತ್ತಮವಾಗಿದೆ. ಜನ ನೀಡಿರುವ ಫಲಿತಾಂಶವನ್ನ ಸ್ವೀಕರಿಸುತ್ತೇವೆ.

ಬಿಜೆಪಿಯವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ; ಆದರೂ ಮಹಾನಗರ ಪಾಲಿಕೆ ಫಲಿತಾಂಶ ಸಮಾಧಾನ ತಂದಿದೆ: ಡಿ.ಕೆ.ಶಿವಕುಮಾರ್
ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)
Follow us

ಬೆಂಗಳೂರು: ಮಹಾನಗರ ಪಾಲಿಕೆಗಳ ಫಲಿತಾಂಶಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಬೆಳಗಾವಿ ಪಾಲಿಕೆಯಲ್ಲಿ ನಮಗೆ ಒಳ್ಳೆಯ ನಂಬರ್ ಬಂದಿದೆ. ಅಲ್ಲಿ ನಾವು ಅಭ್ಯರ್ಥಿಯನ್ನೇ ಸರಿಯಾಗಿ ಹಾಕಿರಲಿಲ್ಲ. ಆದರೂ ಫಲಿತಾಂಶ ಚೆನ್ನಾಗಿದೆ. ಸ್ಥಳಿಯ ಚುನಾವಣೆಯಲ್ಲಿ ಸ್ಥಳಿಯ ವಿಚಾರಗಳು ಮಹತ್ವವಾಗುತ್ತೆ. ಇಂತಹ ಚುನಾವಣೆಯಲ್ಲಿ ಅಧಿಕಾರದಲ್ಲಿ ಇರುವವರಿಗೆ ಲಾಭ ಆಗುತ್ತೆ. ಜನ ನೀಡಿರುವ ಫಲಿತಾಂಶವನ್ನ ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ.

ಅಂತೆಯೇ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಗ್ಗೆ ಮಾತನಾಡಿದ ಅವರು ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಕಾಂಗ್ರೆಸ್‌ಗೆ 15 ವರ್ಷದಿಂದ ಅಧಿಕಾರ ಇಲ್ಲ. ಆದರೆ ಈ ಬಾರಿ ಕಾಂಗ್ರೆಸ್‌ಗೆ ಒಳ್ಳೆಯ ಫಲಿತಾಂಶ ಬಂದಿದೆ. ಈ ಬಾರಿ ಸಂಖ್ಯೆ ಉತ್ತಮವಾಗಿದೆ. ಜನ ನೀಡಿರುವ ಫಲಿತಾಂಶವನ್ನ ಸ್ವೀಕರಿಸುತ್ತೇವೆ. ಅನೇಕ ಕಡೆ ನಮ್ಮ ಬಂಡಾಯ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಆದರೂ ನನಗೆ ಫಲಿತಾಂಶ ಸಮಾಧಾನ ತಂದಿದೆ. ಗಾಬರಿ ಆಗುವಂತದ್ದು ಏನು ಇಲ್ಲ ನಮಗೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಬೇಕಾದ ಕೆಲಸ ಮಾಡ್ತೀವಿ ಎಂದು ತಿಳಿಸಿದ್ದಾರೆ.

ನಾವು ಕೂಡ ಗಂಭಿರವಾಗಿಯೇ ಪ್ರಚಾರ ಮಾಡಿದ್ದೇವೆ. ನಮ್ಮ ಹಿರಿಯ ನಾಯಕರು ಹೋಗಿದ್ದರು ಎಂದಿದ್ದಾರೆ. ಪ್ರಚಾರ ಮಾಡಲು ಕೈ ನಾಯಕರು ಹಿಂದೇಟು ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಚಾರಕ್ಕೆ ನಮಗೆ ಎಲ್ಲಿ ಸಮರ್ಪಕ ಅವಕಾಶ ಇತ್ತು ಅಧಿಕಾರವನ್ನ ಅವರು ಮಿಸ್ ಯೂಸ್ ಮಾಡಿಕೊಂಡಿದ್ದಾರೆ. ಹಾಗಿದ್ದರೂ ನಾವು ಎಷ್ಟು ಬೇಕೋ ಅಷ್ಟು ಮಾಡಿದ್ದೇವೆ. ಕೆಲವೊಂದು ಕಡೆ ಬಿಜೆಪಿ ಶಾಸಕರು ಇದ್ದಾರೆ. ಆದರೂ ಕೂಡ ನಮ್ಮವರು ಗೆದ್ದಿದ್ದಾರೆ ಎಂದು ಹೇಳುತ್ತಾ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್​ವಾರು ಗೆಲುವಿನ ಪಟ್ಟಿ ಹೀಗಿದೆ:

ಬಿಜೆಪಿ: ವಾರ್ಡ್​ ನಂಬರ್ – 45,26,6,15,16,22,23,24,53,54,57,58,36,17,31,32,33,55,35,29,30,42,43,44,37,40,41,49,50,21,28,39,4,46,34,51 ಬಿಜೆಪಿ ಒಟ್ಟು ಗೆಲುವು: 36

ಪಕ್ಷೇತರ: ವಾರ್ಡ್​ ನಂಬರ್ – 25,10, 1,47,14,38,48,12,27,7,9,10 ಪಕ್ಷೇತರಲ್ಲಿ ಎರಡು ಎಂಇಎಸ್ ಸೇರಿ ಒಟ್ಟು 12 ಗೆಲುವು

ಕಾಂಗ್ರೆಸ್: ವಾರ್ಡ್​ ನಂಬರ್ – 2, 5, 8,52,11,13,20,56,3 ಕಾಂಗ್ರೆಸ್ ಒಟ್ಟು ಗೆಲುವು: 09

AIMIM – 1 ಸ್ಥಾನ ಗೆಲುವು

ಕಲಬುರಗಿ ಗೆಲುವಿನ ಅಂಕಿ ಅಂಶ ಹೀಗಿದೆ:

ಕಾಂಗ್ರೆಸ್- 26 ಗೆಲುವು ಬಿಜೆಪಿ- 23 ಗೆಲುವು ಜೆಡಿಎಸ್- 3 ಗೆಲುವು ಪಕ್ಷೇತರ- 1 ಗೆಲುವು

ಇದನ್ನೂ ಓದಿ: ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸಿಹಿ; ಕಲಬುರಗಿಯಲ್ಲಿ ಕಾಂಗ್ರೆಸ್​ಗೆ ಹೆಚ್ಚು ಖುಷಿ 

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಸಾದುದ್ದೀನ್ ಓವೈಸಿ ಅಭ್ಯರ್ಥಿಗೆ ಗೆಲುವು; ಉಳಿದ ಪಾಲಿಕೆಗಳ ತಾಜಾ ಫಲಿತಾಂಶ ಇಲ್ಲಿದೆ

ತಾಜಾ ಸುದ್ದಿ

Related Stories

Click on your DTH Provider to Add TV9 Kannada