ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಸಾದುದ್ದೀನ್ ಓವೈಸಿ ಅಭ್ಯರ್ಥಿಗೆ ಗೆಲುವು; ಉಳಿದ ಪಾಲಿಕೆಗಳ ತಾಜಾ ಫಲಿತಾಂಶ ಇಲ್ಲಿದೆ

Karnataka Civil Body Polls Result: ವಿವಿಧ ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು ಸದ್ಯದ ಚಿತ್ರಣ ಹೀಗಿದೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಸಾದುದ್ದೀನ್ ಓವೈಸಿ ಅಭ್ಯರ್ಥಿಗೆ ಗೆಲುವು; ಉಳಿದ ಪಾಲಿಕೆಗಳ ತಾಜಾ ಫಲಿತಾಂಶ ಇಲ್ಲಿದೆ
ಸಾಂಕೇತಿಕ ಚಿತ್ರ

ರಾಜ್ಯದ 2ನೇ ಅತ್ಯಂತ ದೊಡ್ಡ ಮಹಾನಗರ ಪಾಲಿಕೆ ಅನ್ನೋ ಹೆಸರಿಗೆ ಪಾತ್ರವಾಗಿರೋ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರ ಈ ಬಾರಿ ಯಾರ ತೆಕ್ಕೆಗೆ ಬರಲಿದೆ ಎನ್ನುವುದು ಇಂದು (ಸೆಪ್ಟೆಂಬರ್ 6) ಸ್ಪಷ್ಟವಾಗಲಿದೆ. ಸೆಪ್ಟೆಂಬರ್ 3 ರಂದು ಪಾಲಿಕೆಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು (ಸೋಮವಾರ) ನಡೆದಿದೆ.

ಪಾಲಿಕೆ ಪಟ್ಟಕ್ಕೇರಲು ಘಟಾನುಘಟಿಗಳು ಹಣಾಹಣಿ ನಡೆಸಿದ್ದು, ಈ ಜಿದ್ದಾಜಿದ್ದಿನಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಇದೆ. ಒಟ್ಟು 82 ವಾರ್ಡ್​ಗಳಿಗೆ ನಡೆದ ಜಿದ್ದಾಜಿದ್ದಿನ ಸೆಣೆಸಾಟದ ಫಲಿತಾಂಶ ಇನ್ನು ಕೆಲವೇ ಹೊತ್ತಲ್ಲಿ ಹೊರಬೀಳಲಿದೆ. ಕಳೆದ ಎರಡು ಅವಧಿಗೂ ಪಾಲಿಕೆ ಪಟ್ಟ ಅಲಂಕರಿಸಿರೋ ಬಿಜೆಪಿ ಈ ಬಾರಿಯೂ ಮರಳಿ ಪಟ್ಟಕ್ಕೇರುವ ವಿಶ್ವಾಸದಲ್ಲಿದೆ. ಆದರೆ ಬಿಜೆಪಿ ಗೆಲುವಿನ ಓಟಕ್ಕೆ ತಡೆ ಹಾಕಲು ಕಾಂಗ್ರೆಸ್ ಈ ಬಾರಿ ರಣತಂತ್ರ ರೂಪಿಸಿದ್ದು, ಫಲಿತಾಂಶ ತಲೆಕೆಳಗಾದರೂ ಅಚ್ಚರಿ ಇಲ್ಲ.

ಹುಬ್ಬಳ್ಳಿ ಧಾರವಾಡ ಪಾಲಿಕೆ ಕೈವಶ ಮಾಡಿಕೊಳ್ಬೇಕಾದ್ರೆ ನಂಬರ್ ಗೇಮ್ ಹೀಗಿದೆ:
ಒಟ್ಟು ವಾರ್ಡ್​ಗಳು : 82
ಮ್ಯಾಜಿಕ್ ನಂಬರ್ : 42
ಜನಪ್ರತಿನಿಧಿಗಳು : 09

ಶಾಸಕರು : 04
ಎಂಎಲ್​ಸಿ : 04
ಸಂಸದ : 01

ಬಿಜೆಪಿ : 3 ಶಾಸಕರು, 2 ಎಂಎಲ್​ಸಿ, 1 ಸಂಸದ
ಕಾಂಗ್ರೆಸ್ : 2
ಜೆಡಿಎಸ್ : 1

ಈ ಬಾರಿ 82 ಸ್ಥಾನಗಳಿದ್ದು, ಇದರಲ್ಲಿ 42 ಸ್ಥಾನಗಳನ್ನು ಗೆದ್ದ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಇನ್ನು ಮೇಯರ್ ಆಯ್ಕೆ ವೇಳೆ ಅವಳಿ ನಗರದ 9 ಜನಪ್ರತಿನಿಧಿಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ನಾಲ್ವರು ಶಾಸಕರು, ನಾಲ್ವರು ಎಂಎಲ್​ಸಿ ಹಾಗೂ ಓರ್ವ ಸಂಸದರು ಕೂಡ ಮೇಯರ್ ಆಯ್ಕೆ ವೇಳೆ ತಮ್ಮ ಮತವನ್ನು ಚಲಾಯಿಸಲು ಅವಕಾಶವಿದೆ. ಈ 9 ಜನಪ್ರತಿನಿಧಿಗಳ ಪೈಕಿ ಬಿಜೆಪಿಯದ್ದೇ ಸಿಂಹಪಾಲು ಇದೆ. ನಾಲ್ವರು ಶಾಸಕರ ಪೈಕಿ ಮೂವರು ಬಿಜೆಪಿಗರು ಜತೆಗೆ, ಇಬ್ಬರು ಎಂಎಲ್​ಸಿ ಹಾಗೂ ಓರ್ವ ಸಂಸದ ಸೇರಿ ಆರು ಜನಪ್ರತಿನಿಧಿಗಳು ಬಿಜೆಪಿ ಪಾಲಿಗೆ ವರವಾಗಿದ್ದರೆ, ಕಾಂಗ್ರೆಸ್ ಇಬ್ಬರು ಹಾಗೂ ಜೆಡಿಎಸ್​ಗೆ ಓರ್ವ ಜನಪ್ರತಿನಿಧಿ ಸಹಾಯಕ್ಕೆ ಬರಬಹುದು.

ಇದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನಂಬರ್ ಗೇಮ್ ಆದ್ರೆ ಇತ್ತ ಕಲಬುರಗಿ ಪಾಲಿಕೆ ರಿಸಲ್ಟ್ ಕೂಡಾ ಕೆಲವೇ ಹೊತ್ತಲ್ಲಿ ಹೊರ ಬೀಳಲಿದೆ. ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರ ಗಿಟ್ಟಿಸಿಕೊಳ್ಳಲು ಈ ಬಾರಿ ಹಿಂದೆಂದೂ ಕಾಣದಂಥಾ ಜಿದ್ದಾಜಿದ್ದು ಇತ್ತು. ಮೊನ್ನೆ ಸೆಪ್ಟೆಂಬರ್ 3ರಂದು ಅಭ್ಯರ್ಥಿಗಳ ಹಣೆಬರಹ ಇವಿಎಂ ಮಷೀನ್ನಲ್ಲಿ ಭದ್ರವಾಗಿದ್ದು ಇನ್ನು ಕೆಲವೇ ಹೊತ್ತಲ್ಲಿ ಭವಿಷ್ಯ ನಿರ್ಧಾರವಾಗಲಿದೆ. ಮತ ಎಣಿಕೆಗಾಗಿ ಕಲಬುರಗಿ ನಗರದ ಎನ್.ವಿ. ಶಾಲೆಯಲ್ಲಿ ಸ್ಟ್ರಾಂಗ್ ರೂಮ್ ಇದ್ದು, ಅಲ್ಲಿಯೇ ಮತ ಎಣಿಕೆ ನಡೆಯುತ್ತಿದೆ. ಮತ ಎಣಿಕೆಗಾಗಿ 11 ಕೋಣೆಗಳನ್ನು ಸಜ್ಜುಗೊಳಿಸಲಾಗಿದ್ದು, ಒಂದೊಂದು ರೂಮ್​ನಲ್ಲಿ ಐದು ವಾರ್ಡ್​ಗಳ ಮತ ಎಣಿಕೆ ನಡೆಸಲಾಗುತ್ತಿದೆ.

ಇತ್ತ ಬೆಳಗಾವಿಯಲ್ಲೂ ಚುನಾವಣೆ ಫಲಿತಾಂಶಕ್ಕೆ ಕುತೂಹಲ ಹೆಚ್ಚಾಗಿದ್ದು, ಕನ್ನಡಿಗರು, ಮರಾಠಿಗರು ಅನ್ನೋ ಭಾಷಾ ರಾಜಕಾರಣದಿಂದ ಸದ್ದು ಮಾಡಿರೋ ಬೆಳಗಾವಿಯಲ್ಲಿ ಪಾಲಿಕೆಯ ಗದ್ದುಗೆ ಯಾರು ಏರ್ತಾರೆ ಅನ್ನೋದು ಕೆಲ ಹೊತ್ತಲ್ಲೇ ಗೊತ್ತಾಗಲಿದೆ. ಪ್ರತೀ ಬಾರಿ ಮರಾಠಿಗರು, ಕನ್ನಡಿಗರು ಅಂತಾ ಕಣಕ್ಕಿಳಿಯುತ್ತಿದ್ದ ಅಭ್ಯರ್ಥಿಗಳು ಬರೋಬ್ಬರಿ 25 ವರ್ಷಗಳ ಬಳಿಕ ಪಕ್ಷದ ಚಿಹ್ನೆ ಅಡಿಯಲ್ಲೇ ಅಖಾಡಕ್ಕೆ ಇಳಿದಿದ್ದಾರೆ. ಪಾಲಿಕೆಯ 58 ವಾರ್ಡ್‌ಗಳಿಗೆ ಬಿಜೆಪಿಯಿಂದ 55 ಅಭ್ಯರ್ಥಿಗಳು ಸ್ಪರ್ಧಿಸಿದ್ರೆ, ಕಾಂಗ್ರೆಸ್‌ನಿಂದ 45, ಜೆಡಿಎಸ್‌ನಿಂದ 11 ಹಾಗೂ ಎಂಇಎಸ್‌ನಿಂದ 21 ಮಂದಿ ಸ್ಪರ್ಧಿಸಿದ್ದಾರೆ . ಆಪ್‌, ಪಕ್ಷೇತರರು ಸೇರಿದಂತೆ ಒಟ್ಟು 217 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 58 ವಾರ್ಡ್‌ಗಳಿಗೆ ಸೆಪ್ಟಂಬರ್ 3 ರಂದ ಚುನಾವಣೆ ನಡೆದಿದ್ದು ಇವತ್ತು ಫಲಿತಾಶ ಹೊರ ಬೀಳಲಿದೆ.

ಬೆಳಗಾವಿಯ ಬಿ.ಕೆ.ಮಾಡೆಲ್ ಶಾಲೆಯಲ್ಲಿ ಬೆಳಗ್ಗೆ 8ಗಂಟೆಯಿಂದಲೇ ಮತ‌ ಎಣಿಕೆ ಆರಂಭವಾಗಿದ್ದು, ಒಟ್ಟು 12 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ ಎರಡು ಇವಿಎಂ ಟೇಬಲ್ ಹಾಗೂ ಒಂದು ಅಂಚೆ ಮತಗಳ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಗೆ ಓರ್ವ ಚುನಾವಣಾಧಿಕಾರಿ, ಮೂವರು ಎಣಿಕೆ ಮೇಲ್ವಿಚಾರಕರು, ಆರು ಜನ ಎಣಿಕೆ ಸಹಾಯಕರು, ಮೂವರು ಸಹಾಯಕ ಸಿಬ್ಬಂದಿ ಸೇರಿದಂತೆ ಒಂದು ಕೊಠಡಿಗೆ 19 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಗಮನಾರ್ಹ ವಿಚಾರವೆಂದರೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆದಿತ್ತು. ಆದ್ರೂ ಪಾಲಿಕೆಯಲ್ಲಿ ಯಾವ ಪಕ್ಷವೂ ಸ್ಪಷ್ಟ ಬಹುಮತ ಪಡೆಯೋದಿಲ್ಲ ಅಂತಾ ಗುಪ್ತಚರ ಮಾಹಿತಿ ಹೇಳ್ತಿದೆ. ಒಂದು ವೇಳೆ ಅತಂತ್ರವಾದ್ರೆ ಪಕ್ಷೇತರ ಅಭ್ಯರ್ಥಿಗಳೇ ಇಲ್ಲಿ ಕಿಂಗ್‌ ಮೇಕರ್‌ ಆಗಲಿದ್ದಾರೆ . ಈ ನಡುವೆ ನಾಲ್ಕೈದು ವಾರ್ಡ್‌ಗಳಲ್ಲಿ ಜಿದ್ದಾಜಿದ್ದಿನಿಂದ ಚುನಾವಣೆ ನಡೆದಿರೋದ್ರಿಂದ ಪೊಲೀಸರು ಹೆಚ್ಚಿನ ಭದ್ರತೆ ನೀಡಿದ್ದಾರೆ. ಮತ ಎಣಿಕೆ ಕೇಂದ್ರದ ಸುತ್ತಾ ಬರೋಬ್ಬರಿ ಐನೂರು ಪೊಲೀಸರನ್ನ ನಿಯೋಜಿಸಲಾಗಿದ್ದು ನಗರದಾದ್ಯಂತ 1200 ಪೊಲೀಸರು ಬಿಗಿಬಂದೋಬಸ್ತ್‌ ಕೈಗೊಳ್ಳಲಿದ್ದಾರೆ.

ಒಟ್ನಲ್ಲಿ ಬರೋಬ್ಬರಿ 25 ವರ್ಷಗಳ ಬಳಿಕ ಎಲ್ಲಾ ಪಕ್ಷಗಳು ಪಕ್ಷದ ಚಿಹ್ನೆ ಆಧಾರದಲ್ಲೇ ಅಖಾಡಕ್ಕೆ ಇಳಿದಿದ್ದು, ಪಾಲಿಕೆಯಯ ಅಧಿಕಾರ ಯಾರಿಗೆ ಸಿಗಲಿದೆ. ಯಾರ ಬಾಯಿಗೆ ಬೆಳಗಾವಿ ಕುಂದಾ ಬೀಳುತ್ತೆ ಅನ್ನೋದು ಕೆಲಹೊತ್ತಲ್ಲೇ ನಿರ್ಧಾರವಾಗಲಿದೆ.

ಬೆಳಗಾವಿಯಲ್ಲಿ ಸದ್ಯದ ಚಿತ್ರಣ ಹೀಗಿದೆ:
(ಗೆಲುವು)
ವಾರ್ಡ್ ನಂಬರ್ 11: ಕಾಂಗ್ರೆಸ್
ವಾರ್ಡ್ ನಂಬರ್ 14: ಎಮ್​ಇಎಸ್​
ವಾರ್ಡ್ ನಂಬರ್ 3: ಕಾಂಗ್ರೆಸ್
ವಾರ್ಡ್ ನಂಬರ್ 15: ಬಿಜೆಪಿ
ವಾರ್ಡ್ ನಂಬರ್ 3: ಕಾಂಗ್ರೆಸ್
ವಾರ್ಡ್ ನಂಬರ್ 18: ಎಐಎಂಐಎಂ
ವಾರ್ಡ್ ನಂಬರ್ 52: ಕಾಂಗ್ರೆಸ್
ವಾರ್ಡ್ ನಂಬರ್ 21: ಬಿಜೆಪಿ

ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಕಮಾಲ್ ಮಾಡಿದ್ದು, 11 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಪ್ರಕಟವಾಗಿದೆ. ಅಂತೆಯೇ, ಕಾಂಗ್ರೆಸ್ 4, ಜೆಡಿಎಸ್​ 3 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದು, ಎರಡು ವಾರ್ಡ್‌ಗಳಲ್ಲಿ ಪಕ್ಷೇತರರು ಜಯಗಳಿಸಿದ್ದಾರೆ. ದೊಡ್ಡಬಳ್ಳಾಪುರ ನಗರಸಭೆಯಲ್ಲಿ 31 ವಾರ್ಡ್‌ಗಳಿದ್ದು, 31 ವಾರ್ಡ್‌ ಪೈಕಿ 20 ವಾರ್ಡ್​ಗಳ ಫಲಿತಾಂಶ ಪ್ರಕಟವಾಗಿದೆ

ಶಿವಮೊಗ್ಗ: ಮಾಜಿ ಸಿಎಂ ಬಿಎಸ್​ವೈ ತವರು ಜಿಲ್ಲೆಯಲ್ಲಿ ಬಿಜೆಪಿಗೆ ನಿರಾಸೆಯಾಗಿದೆ. ಭದ್ರಾವತಿ ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದ್ದು, ವಾರ್ಡ್ ಚುನಾವಣೆಯಲ್ಲಿ ಕೇವಲ 70 ಮತಗಳು ಬಿದ್ದಿವೆ. ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಭರ್ಜರಿ ಗೆಲುವು ಲಭಿಸಿದೆ.

ಭದ್ರಾವತಿಯ ವಾರ್ಡ್ ನಂಬರ್ 29 ರಲ್ಲಿ ಸೆ.3 ರಂದು ನಡೆದ ಚುನಾವಣೆಗೆ ಇಂದು ಮತ ಎಣಿಕೆ ನಡೆದಿದ್ದು, ಜೆಡಿಎಸ್ ಅಭ್ಯರ್ಥಿ ನಾಗರತ್ನ ಅನಿಲ್ ಭರ್ಜರಿ ಗೆಲವು ಸಾಧಿಸಿದ್ದಾರೆ. 3423 ಮತಗಳಲ್ಲಿ 2200 ಮತಗಳು ಚಲಾವಣೆಗೊಂಡಿದ್ದವು. 2200 ಮತಗಳಲ್ಲಿ ಜೆಡಿಎಸ್ ಅಭ್ಯರ್ಥಿ ನಾಗರತ್ನ ಅನಿಲ್ ಕುಮಾರ್ 1282 ಮತಗಳನ್ನ ಪಡೆದು ಭರ್ಜರಿ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್​​ನ ಲೋಯಿತಾ ನಂಜಪ್ಪನವರಿಗೆ 832, ಬಿಜೆಪಿ ಅಭ್ಯರ್ಥಿ ರಮಾ ವೆಂಕಟೇಶ್ ಗೆ 70 ಮತಗಳು ದೊರೆತಿದ್ದು 16 ಮತಗಳು ನೋಟಾಕ್ಕೆ ಬಿದ್ದಿವೆ. ತಮ್ಮ ಅಭ್ಯರ್ಥಿ ಗೆಲವು ಸಾಧಿಸುತ್ತಿದ್ದ ಬೆನ್ನಲ್ಲೇ ಜೆಡಿಎಸ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ

ಜೆಡಿಎಸ್ ಅಭ್ಯರ್ಥಿ ಗೆಲುವಿನಿಂದಾಗಿ ಭದ್ರಾವತಿ ನಗರಸಭೆಯಲ್ಲಿ ಜೆಡಿಎಸ್ ಹುಮ್ಮಸ್ಸು ಹೆಚ್ಚಾಗಿದೆ. 35 ವಾರ್ಡುಗಳ ಪೈಕಿ ಕಾಂಗ್ರೆಸ್ 18, ಜೆಡಿಎಸ್ 12, ಬಿಜೆಪಿ 4, ಪಕ್ಷೇತರರಾಗಿ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ:
ಪಾಲಿಕೆ ಚುನಾವಣೆ: ಮತದಾರರಿಗೆ ಪ್ರಧಾನಿ ಮೋದಿ ಭಾವಚಿತ್ರದ ಚೀಟಿ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪ, ಕಿಡಿಕಿಡಿ 

ಪೌರ ಕಾರ್ಮಿಕರಿಗೆ ಸದ್ಯದಲ್ಲೇ ಕೈಮಗ್ಗದ ಸಮವಸ್ತ್ರ; ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಹೊಸ ಪ್ರಯೋಗ

Click on your DTH Provider to Add TV9 Kannada