AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆಯಲ್ಲಿ ಗುಂಡಿಯಿದ್ರೆ ಬಿಬಿಎಂಪಿ ಇಂಜಿನಿಯರ್ ಗೆ ದಂಡ ಹಾಕಿ: ಸಾರ್ವಜನಿಕ ಬೇಡಿಕೆ

ನಗರದಲ್ಲಿ ರಸ್ತೆ ಗುಂಡಿಗಳಿಗೆ ಸುಸ್ತಾಗಿರುವ ಬೆಂಗಳೂರು ಮಂದಿ ಅದರ ಕಷ್ಟನಷ್ಟಗಳಿಂದ ರೋಸಿಹೋಗಿದ್ದಾರೆ. ಕಳೆದ ಎರಡು ವರ್ಷದಲ್ಲಿ 14 ಮಂದಿ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ. ರಸ್ತೆ ಗುಂಡಿಗೆ ಬಲಿಯಾದವರ ಪಟ್ಟಿ ಕೆಳಗಿದೆ

ರಸ್ತೆಯಲ್ಲಿ ಗುಂಡಿಯಿದ್ರೆ ಬಿಬಿಎಂಪಿ ಇಂಜಿನಿಯರ್ ಗೆ ದಂಡ ಹಾಕಿ: ಸಾರ್ವಜನಿಕ ಬೇಡಿಕೆ
ಬಿಬಿಎಂಪಿ
TV9 Web
| Edited By: |

Updated on:Oct 27, 2022 | 1:52 PM

Share

ಬೆಂಗಳೂರು: ರಾಜಧಾನಿಯ ರಸ್ತೆಗಳ ಗುಂಡಿಮಯವಾಗಿವೆ. ಅದರ ರಿಪೇರಿ ಉಸಾಬರಿಗೆ ಬಿಬಿಎಂಪಿ (bbmp) ಎಂದಿನಂತೆ ನಿರ್ಲಕ್ಷ್ಯ ತೋರಿದೆ. ಹಾಗಾಗಿ ಉತ್ತರದಾಯಿತ್ವ ಕಾಯ್ದುಕೊಳ್ಳಲು ರಸ್ತೆಗಳಲ್ಲಿ ಗುಂಡಿ (Pot holes) ಕಂಡುಬಂದರೆ ಬಿಬಿಎಂಪಿ ಇಂಜಿನಿಯರ್ (engineer)ಗೆ ದಂಡ ಹಾಕಿ ಎಂದು ಸಾರ್ವಜನಿಕರಿಂದ (public) ಭಾರೀ ಬೇಡಿಕೆ ಬಂದಿದೆ. ವಾಹನ ಸವಾರರು ಹೆಲ್ಮೆಟ್ ಹಾಕದೇ ಹೋದ್ರೆ ಪೊಲೀಸ್ರು ಫೈನ್ ಹಾಕ್ತಾರೆ. ಕಾರು ಚಾಲಕರು ಸೀಟ್ ಬೆಲ್ಟ್ ಹಾಕ್ದೆ ಹೋದ್ರೆ ಫೈನ್ ಹಾಕ್ತಾರೆ. ಹಾಗೆಯೇ… ರಸ್ತೆಯಲ್ಲಿ ಗುಂಡಿ ಇದ್ರೆ ರಸ್ತೆಗೆ ಸಂಬಂಧಿಸಿದಂತೆ ಇಂಜಿನಿಯರ್ ಗೆ ಫೈನ್ ಹಾಕಬೇಕು. ಒಂದು ಗುಂಡಿಗೆ ಇಂತಿಷ್ಟು ಅಂತಾ ಫೈನ್ ಫಿಕ್ಸ್ ಮಾಡಿ. ವಾಹನ ಸವಾರರು ಫೈನ್ ಹೆದರಿಕೆಗೆ ರೂಲ್ಸ್ ಫಾಲೋ ಮಾಡ್ತಾರೆ. ಹಾಗೇ ಇಂಜಿನಿಯರ್ ಗಳು ರಸ್ತೆ ಗುಂಡಿ ಮುಚ್ಚುತ್ತಾರೆ ಎಂದು ಸಾರ್ವಜನಿಕರಿಂದ ಸರ್ಕಾರಕ್ಕೆ ಒತ್ತಾಯ ಕೇಳಿಬಂದಿದೆ.

ನಗರದಲ್ಲಿ ರಸ್ತೆ ಗುಂಡಿಗಳಿಗೆ ಸುಸ್ತಾಗಿರುವ ಬೆಂಗಳೂರು ಮಂದಿ ಅದರ ಕಷ್ಟನಷ್ಟಗಳಿಂದ ರೋಸಿಹೋಗಿದ್ದಾರೆ. ಕಳೆದ ಎರಡು ವರ್ಷದಲ್ಲಿ 14 ಮಂದಿ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ. ರಸ್ತೆ ಗುಂಡಿಗೆ ಬಲಿಯಾದವರ ಪಟ್ಟಿ ಹೀಗಿದೆ:

2021 ರ ಫೆಬ್ರವರಿ 2 ರಂದು ಪುಲಕೇಶಿ ನಗರದಲ್ಲಿ ತಸ್ ದೀಕ್ ಬುಷ್ರಾ(19), 2021 ವೈಟ್ ಫೀಲ್ಡ್ ನಲ್ಲಿ ಶ್ರೀದೇವಿ ಕೆ.ಪಿಳ್ಯೆ (51), 2021 ಬಾಣಸವಾಡಿಯಲ್ಲಿ ಅಜೀಂ ಅಹ್ಮದ್ (21), 2021 ಕಾಮಾಕ್ಷಿಪಾಳ್ಯದಲ್ಲಿ ಋರ್ಷಿದ್ (65), 2021 ರಲ್ಲಿ ಪೀಣ್ಯದಲ್ಲಿ ಆನಂದಪ್ಪ, 2021 ರ ಡಿ. 2 ರಂದು ಆರ್ ಟಿ ನಗರದಲ್ಲಿ ಮಂಜುನಾಥ್, 2021 ರ ಅಕ್ಟೋಬರ್ 12 ರಂದು ಯಲಹಂಕದಲ್ಲಿ ಗಾಯತ್ರಿ (37), 2022 ಜ. 30 ರಂದು ಬ್ಯಾಟರಹಳ್ಳಿ ಮುಖ್ಯ ರಸ್ತೆಯಲ್ಲಿ ಶರ್ಮಿಳಾ, ಮಾ. 12 ರಂದು ಎಂ.ಎಸ್. ಪಾಳ್ಯದ ಮುನೇಶ್ವರ ಲೇಔಟ್ ನಲ್ಲಿ ಅಶ್ವಿನ್ (27), ಅಕ್ಟೋಬರ್11 ರಂದು ಕೆ.ಆರ್. ಪುರಂದಲ್ಲಿ ಜೀವನ್ (10), ಅಕ್ಟೋಬರ್19 ರಂದು ಸುಜಾತಾ ಚಿತ್ರಮಂದಿರದ ಬಳಿ ಉಮಾದೇವಿ, ಅಕ್ಟೋಬರ್ 23 ನೆಲಮಂಗಲದಲ್ಲಿ ತಿಪ್ಪೇಸ್ವಾಮಿ ರಸ್ತೆ ಗುಂಡಿಗೆ ಆಹುತಿಯಾಗಿದ್ದಾರೆ.

ರಸ್ತೆಗುಂಡಿ: ಹೈಕೋರ್ಟ್ ಆದೇಶ ಪಾಲಿಸಲು ಬಿಬಿಎಂಪಿ ವಿಫಲವಾಗಿದೆ -ಸಿಜೆ ಪ್ರಸನ್ನ ವರಾಳೆ ಅಭಿಪ್ರಾಯ

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಅನಾಹುತ ಹಿನ್ನೆಲೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ದಾಖಲಾಗಿದ್ದು, ಕೋರ್ಟ್​ ವಿಚಾರಣೆ ಆರಂಭವಾಗಿದೆ. ರಸ್ತೆಗುಂಡಿಗಳಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಹೊಣೆಹೊತ್ತ ಬಿಬಿಎಂಪಿ ಗುಂಡಿ ಮುಚ್ಚಲು ಸಮರ್ಪಕ ತಂತ್ರಜ್ಞಾನ ಅಳವಡಿಸಿಕೊಂಡಿಲ್ಲ ಎಂದು ಹೈಕೋರ್ಟ್​ಗೆ ಅರ್ಜಿದಾರರ ಪರ ವಕೀಲರು ಹೇಳಿಕೆ ನಿಡಿದರು.

ಈ ಹಂತದಲ್ಲಿ, ರಸ್ತೆ ಗುಂಡಿ ಮುಚ್ಚುವ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಹೈಕೋರ್ಟ್​ಗೆ BBMP ವರದಿ ಸಲ್ಲಿಸಿತು. ಆದರೆ BBMP ವಕೀಲರು ವಾದಮಂಡನೆಗೆ ಕಾಲಾವಕಾಶ ಕೋರಿದರು. ಈ ಮಧ್ಯೆ, ಹೈಕೋರ್ಟ್ ಆದೇಶ ಪಾಲಿಸಲು ಬಿಬಿಎಂಪಿ ವಿಫಲವಾಗಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅಭಿಪ್ರಾಯಪಟ್ಟರು. ಇದೇ ವೇಳೆ, ಅಧಿಕಾರಿಗಳ ಪ್ರಮಾಣಪತ್ರದೊಂದಿಗೆ ವರದಿ ಸಲ್ಲಿಸಲು ಸೂಚನೆ ನೀಡಿದರು. ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 2ಕ್ಕೆ ಮುಂದೂಡಿತು.

Published On - 1:01 pm, Thu, 27 October 22

ವಿಡಿಯೋ: ಡಿಕೆಶಿ ತಿನಿಸಿದ ಸ್ವೀಟನ್ನು ಬಾಯಿಂದ ತೆಗೆದು ಎಸೆದ ಸಿದ್ದರಾಮಯ್ಯ!
ವಿಡಿಯೋ: ಡಿಕೆಶಿ ತಿನಿಸಿದ ಸ್ವೀಟನ್ನು ಬಾಯಿಂದ ತೆಗೆದು ಎಸೆದ ಸಿದ್ದರಾಮಯ್ಯ!
ಡಿ ಕ್ಲರ್ಕ್ ಆಟಕ್ಕೆ ಸಲಾಂ ಹೊಡೆದ ಕ್ರಿಕೆಟ್ ಜಗತ್ತು; ವಿಡಿಯೋ
ಡಿ ಕ್ಲರ್ಕ್ ಆಟಕ್ಕೆ ಸಲಾಂ ಹೊಡೆದ ಕ್ರಿಕೆಟ್ ಜಗತ್ತು; ವಿಡಿಯೋ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ