ಮೃತಪಟ್ಟ ಮಗನ ಆಸ್ತಿಯಲ್ಲೂ ವಿಧವೆ ತಾಯಿಗೆ ಸಮಾನ ಪಾಲು; ಹೈಕೋರ್ಟ್​ ಮಹತ್ವದ ಆದೇಶ

ಬೀದರ್​ನ ಹನುಮಂತ ರೆಡ್ಡಿ ಹಾಗೂ ಈರಮ್ಮ ಎಂಬ ದಂಪತಿ ಹಾಗೂ ಮಕ್ಕಳ ನಡುವಿನ ಆಸ್ತಿ ಹಂಚಿಕೆ ಪ್ರಕರಣವೊಂದರಲ್ಲಿ ಹೈಕೋರ್ಟ್​ ನೀಡಿರುವ ತೀರ್ಪು ಇದಾಗಿದೆ.

ಮೃತಪಟ್ಟ ಮಗನ ಆಸ್ತಿಯಲ್ಲೂ ವಿಧವೆ ತಾಯಿಗೆ ಸಮಾನ ಪಾಲು; ಹೈಕೋರ್ಟ್​ ಮಹತ್ವದ ಆದೇಶ
ಕರ್ನಾಟಕ ಉಚ್ಚ ನ್ಯಾಯಾಲಯ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 27, 2022 | 12:51 PM

ಬೆಂಗಳೂರು: ಗಂಡನ ನಿಧನದ ನಂತರ ಮಹಿಳೆ ತನ್ನ ಗಂಡನ ಆಸ್ತಿಯನ್ನು ಪಾಲು ಮಾಡಿದ ನಂತರ ಒಂದುವೇಳೆ ತನ್ನ ಗಂಡುಮಕ್ಕಳಲ್ಲಿ ಯಾರಾದರೂ ಸಾವನ್ನಪ್ಪಿದರೆ ಆ ಮಗನ ಆಸ್ತಿಯಲ್ಲಿ ಆ ತಾಯಿ ಕೂಡ ಸಮಾನ ಪಾಲು ಪಡೆಯಲು ಅರ್ಹರಾಗಿರುತ್ತಾರೆ ಎಂಬ ಮಹತ್ವದ ಆದೇಶವನ್ನು ಕರ್ನಾಟಕ ಹೈಕೋರ್ಟ್​ (Karnataka High Court) ನೀಡಿದೆ. ಮಹಿಳೆಗೆ ತನ್ನ ಮೃತ ಗಂಡನ ಆಸ್ತಿಯಲ್ಲಿ ಮಾತ್ರವಲ್ಲ, ಮೃತ ಮಗನ ಆಸ್ತಿಯಲ್ಲೂ ಸಮಾನ ಪಾಲು ಪಡೆಯಲು ಅಧಿಕಾರವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಸೆಕ್ಷನ್ 8ರ ಅನುಸಾರ, ಪಿತ್ರಾರ್ಜಿತವಾಗಿ ಮೃತ ಮಗನಿಗೆ ಬಂದಿರುವ ಆಸ್ತಿ ಆತನ ಪತ್ನಿ ಹಾಗೂ ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಗಬೇಕು. ಅದರ ಜೊತೆಗೆ, ಆತನ ವಿಧವೆ ತಾಯಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ಈ ನಿಯಮ ವಿಧವೆ ತಾಯಂದಿರಿಗೆ ಮಾತ್ರ ಅನ್ವಯವಾಗುತ್ತದೆಯೇ ವಿನಃ ಗಂಡನಿರುವ ಮಹಿಳೆ ತನ್ನ ಮೃತ ಮಗನ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹಳಾಗಿರುವುದಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: ಆಸ್ತಿ ಮತ್ತು ಬಂಗಾರ ವಿಚಾರಕ್ಕೆ ಸ್ವಂತ ತಮ್ಮನಿಗೆ ಚಾಕು ಇರಿದು ಪರಾರಿಯಾದ ಅಣ್ಣ: ತಂದೆಯಿಂದ ಮಗನ ವಿರುದ್ಧ ದೂರು

ಬೀದರ್​ನ ಹನುಮಂತ ರೆಡ್ಡಿ ಹಾಗೂ ಈರಮ್ಮ ಎಂಬ ದಂಪತಿ ಹಾಗೂ ಮಕ್ಕಳ ನಡುವಿನ ಆಸ್ತಿ ಹಂಚಿಕೆ ಪ್ರಕರಣವೊಂದರಲ್ಲಿ ಹೈಕೋರ್ಟ್​ ನೀಡಿರುವ ತೀರ್ಪು ಇದಾಗಿದೆ. ಹನುಮಂತ ರೆಡ್ಡಿ ಹಾಗೂ ಈರಮ್ಮ ದಂಪತಿಗೆ ಪೊರಸ ರೆಡ್ಡಿ, ಭೀಮ ರೆಡ್ಡಿ, ರೇವಮ್ಮ ಹಾಗೂ ಬಸವ ರೆಡ್ಡಿ ಎಂಬ 4 ಮಕ್ಕಳಿದ್ದು, ಇವರಲ್ಲಿ ಭೀಮ ರೆಡ್ಡಿ ಎಂಬಾತ ಮೃತಪಟ್ಟಿದ್ದಾರೆ. ಈರಮ್ಮನ ಪತಿ ಹನುಮಂತ ರೆಡ್ಡಿಯೂ ಮೃತಪಟ್ಟಿದ್ದಾರೆ. ಆಸ್ತಿ ಹಂಚಿಕೆ ವಿಚಾರದಲ್ಲಿ ತಾಯಿ, ಮಕ್ಕಳ ನಡುವೆ ಗೊಂದಲ ಏರ್ಪಟ್ಟ ಹಿನ್ನೆಲೆಯಲ್ಲಿ ಈ ವಿಚಾರ ಬೀದರ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಅಲ್ಲಿ ಬಂದ ತೀರ್ಪು ಸಮಾಧಾನ ತರದ ಹಿನ್ನೆಲೆಯಲ್ಲಿ ಈರಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್​ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಹನುಮಂತ ರೆಡ್ಡಿಯವರಿಗೆ ಬಂದಿರುವ 1/5ರಷ್ಟು ಆಸ್ತಿಯನ್ನು ಆತನ ಪತ್ನಿ ಈರಮ್ಮ ಹಾಗೂ ಮಕ್ಕಳಿಗೆ ಸಮಾನವಾಗಿ ಪಾಲು ಮಾಡಬೇಕು. ಆಗ, ಪ್ರತಿಯೊಬ್ಬರಿಗೂ 1/ 25ರಷ್ಟು ಆಸ್ತಿ ಸಿಗುತ್ತದೆ. ಅಲ್ಲಿಗೆ, ಪ್ರತಿಯೊಬ್ಬ ಮಕ್ಕಳಿಗೆ ಅವರ ಪಾಲಿಗೆ ಬಂದ 1/ 5 ಹಾಗೂ ಅಪ್ಪನ ಪಾಲಿನ ಆಸ್ತಿಯಿಂದ ಬಂದ 1/ 25ರಷ್ಟು ಆಸ್ತಿ ಸೇರಿ ಒಟ್ಟು 6/ 25ರಷ್ಟು ಆಸ್ತಿಗೆ ಹಕ್ಕುದಾರರಾಗುತ್ತಾರೆ ಎಂದು ಹೇಳಿದೆ.

ಇದನ್ನೂ ಓದಿ: ಕೇರಳದ 9 ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು ಅಂತಿಮ ಆದೇಶದವರೆಗೆ ಮುಂದುವರಿಯಬಹುದು: ಕೇರಳ ಹೈಕೋರ್ಟ್

ಮೂರನೇ ಹಂತದ ಆಸ್ತಿ ಹಂಚಿಕೆಯಡಿ, ಈರಮ್ಮನ ಮೃತ ಮಗ ಭೀಮರೆಡ್ಡಿಗೆ ಬಂದಿರುವ 6/ 25ರಷ್ಟು ಆಸ್ತಿಯಲ್ಲಿ ಭೀಮ ರೆಡ್ಡಿಯ ಪತ್ನಿ, ಪುತ್ರಿಗೆ ಹಾಗೂ ವಿಧವೆ ಈರಮ್ಮನವರಿಗೆ ಸಮಾನವಾಗಿ ಪಾಲು ಹಂಚಿಕೆಯಾಗಬೇಕು. ಆಗ, ಈರಮ್ಮನವರಿಗೆ, ತನ್ನ ಪತಿಯ ಪಾಲಿಗೆ ಬಂದಿದ್ದ ಆಸ್ತಿಯಿಂದ ಬಂದಿರುವ ಭಾಗಶಃ ಆಸ್ತಿ ಹಾಗೂ ಪುತ್ರ ಭೀಮರೆಡ್ಡಿಯವರ ಪಾಲಿಗೆ ಬಂದಿದ್ದ ಆಸ್ತಿಯಲ್ಲಿನ ಭಾಗ ಸೇರಿ ಒಟ್ಟು 6/ 75ರಷ್ಟು ಆಸ್ತಿ ಸಿಗುತ್ತದೆ. ಇದೇ ಮಾದರಿಯಲ್ಲೇ ವಿಧವೆ ಈರಮ್ಮನವರಿಗೆ ಆಸ್ತಿ ಹಂಚಿಕೆ ಮಾಡಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:50 pm, Thu, 27 October 22

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು