ಇನ್ನು ಯಂತ್ರಗಳ ಮೂಲಕ ಕಸ ಗುಡಿಸಲಿದ್ದಾರೆ ಪೌರ ಕಾರ್ಮಿಕರು! ಮೆಕ್ಯಾನಿಕಲ್ ಸ್ವೀಪರ್‌ಗಳ ಖರೀದಿಗೆ ಮುಂದಾದ ಬಿಬಿಎಂಪಿ

Hand-held Mechanical Sweepers: ಕೆಲವು ಪೌರಕಾರ್ಮಿಕರು ಈ ಯಂತ್ರಗಳನ್ನು ಬಳಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಎರಡು ಪೊರಕೆಗಳನ್ನು ಬಳಸಿ ರಸ್ತೆಗಳನ್ನು ಗುಡಿಸುವ ಅಭ್ಯಾಸವನ್ನು ಹೊಂದಿರುವ ಕಾರಣ ಅವರು ಯಂತ್ರ ಬಳಕೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಯಂತ್ರಗಳ ಮೂಲಕ ಕಸ ಗುಡಿಸಲಿದ್ದಾರೆ ಪೌರ ಕಾರ್ಮಿಕರು! ಮೆಕ್ಯಾನಿಕಲ್ ಸ್ವೀಪರ್‌ಗಳ ಖರೀದಿಗೆ ಮುಂದಾದ ಬಿಬಿಎಂಪಿ
ಇನ್ನು ಯಂತ್ರಗಳ ಮೂಲಕ ಕಸ ಗುಡಿಸಲಿದ್ದಾರೆ ಪೌರ ಕಾರ್ಮಿಕರು
Follow us
ಗಣಪತಿ ಶರ್ಮ
|

Updated on: Jan 25, 2024 | 7:02 AM

ಬೆಂಗಳೂರು, ಜನವರಿ 25: ನಗರ ಸ್ವಚ್ಛತೆಯಲ್ಲಿ ನಿರತರಾಗಿರುವ ಪೌರ ಕಾರ್ಮಿಕರಿಗೆ ನೆರವಾಗುವುದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ಹ್ಯಾಂಡ್ ಹೆಲ್ಡ್ ಮೆಕ್ಯಾನಿಕಲ್ ಸ್ವೀಪರ್‌ಗಳನ್ನು (Hand-held Mechanical Sweepers) ಅಥವಾ ಕಸ ಗುಡಿಸುವ ಯಂತ್ರಗಳನ್ನು ಖರೀದಿಸಲು ನಿರ್ಧರಿಸಿದೆ. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಈ ಯಂತ್ರಗಳನ್ನು ಖರೀದಿಸಲಾಗುತ್ತದೆ.

ಹ್ಯಾಂಡ್ ಹೆಲ್ಡ್ ಮೆಕ್ಯಾನಿಕಲ್ ಸ್ವೀಪರ್‌ಗಳನ್ನು ಖರೀದಿಸಲು ಈ ಹಿಂದೆಯೂ ಎರಡು ಬಾರಿ ಯತ್ನಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಎರಡು ವಿಫಲ ಪ್ರಯತ್ನಗಳ ನಂತರ ಇದೀಗ ಬಿಬಿಎಂಪಿ ಮೂರನೇ ಬಾರಿಗೆ ಹ್ಯಾಂಡ್ ಹೆಲ್ಡ್ ಮೆಕ್ಯಾನಿಕಲ್ ಸ್ವೀಪರ್‌ಗಳ ಖರೀದಿಗೆ ಕ್ರಮ ಕೈಗೊಳ್ಳುತ್ತಿದೆ.

ಪ್ರತಿ ಯಂತ್ರಕ್ಕೆ 40 ಸಾವಿರ ರೂಪಾಯಿ ವೆಚ್ಚವಾಗಲಿದೆ ಎಂದು ಬಿಬಿಎಂಪಿ ತಿಳಿಸಿದೆ. ನಗರವನ್ನು ಧೂಳಿನಿಂದ ಮುಕ್ತಗೊಳಿಸುವುದಕ್ಕಾಗಿ 15 ನೇ ಹಣಕಾಸು ಆಯೋಗದಿಂದ ಈ ಯೋಜನೆಗೆ ಹಣ ನೀಡಲಾಗಿದೆ.

ಎಲ್ಲಾ 15,450 ಪೌರಕಾರ್ಮಿಕರು 11,000 ಕಿಲೋಮೀಟರ್ ವಾರ್ಡ್ ಅಥವಾ ವಲಯ ರಸ್ತೆಗಳನ್ನು ಸ್ವಚ್ಛಗೊಳಿಸಲು ಹ್ಯಾಂಡ್ ಹೆಲ್ಡ್ ಮೆಕ್ಯಾನಿಕಲ್ ಸ್ವೀಪರ್‌ಗಳನ್ನು ಪಡೆಯಲಿದ್ದಾರೆ. ಪ್ರಸ್ತುತ ಕೆಲವು ರಸ್ತೆಗಳನ್ನು ಮೆಕ್ಯಾನಿಕಲ್ ಸ್ವೀಪರ್‌ಗಳ ಮೂಲಕ ಗುಡಿಸಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.

ಆದರೆ, ಕೆಲವು ಪೌರಕಾರ್ಮಿಕರು ಈ ಯಂತ್ರಗಳನ್ನು ಬಳಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಎರಡು ಪೊರಕೆಗಳನ್ನು ಬಳಸಿ ರಸ್ತೆಗಳನ್ನು ಗುಡಿಸುವ ಅಭ್ಯಾಸವನ್ನು ಹೊಂದಿರುವ ಕಾರಣ ಅವರು ಯಂತ್ರ ಬಳಕೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ, ಖಾಸಗಿ ಸಹಭಾಗಿತ್ವದಲ್ಲಿ 11 ಸ್ಕೈವಾಕ್​​

ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ನಗರದಲ್ಲಿ 11 ಸ್ಕೈವಾಕ್‌ಗಳನ್ನು (ಪಾದಚಾರಿ ಮೇಲ್ಸೇತುವೆ) ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ಸ್ಕೈವಾಕ್‌ಗಳನ್ನು ನಿರ್ಮಿಸಿದ್ದಕ್ಕೆ ಪ್ರತಿಯಾಗಿ ಖಾಸಗಿ ಸಂಸ್ಥೆಗಳಿಗೆ ಜಾಹೀರಾತುಗಳನ್ನು ಪ್ರದರ್ಶಿಸುವ ಹಕ್ಕುಗಳನ್ನು ನೀಡುವ ನಿರೀಕ್ಷೆಯಿದೆ.

ಟ್ಯಾಂಕ್ ಬಂಡ್ ರಸ್ತೆ, ಚೌಡೇಶ್ವರಿ ಅಂಡರ್‌ಪಾಸ್, ಕೈಕೊಂಡ್ರಹಳ್ಳಿ ಜಂಕ್ಷನ್, ತುಮಕೂರು ರಸ್ತೆಯ ಆರ್‌ಎಂಸಿ ಯಾರ್ಡ್, ಹೊರ ವರ್ತುಲ ರಸ್ತೆಯಲ್ಲಿರುವ ಎನ್‌ಸಿಸಿ ಅಪಾರ್ಟ್‌ಮೆಂಟ್, ಒಆರ್‌ಆರ್‌ನಲ್ಲಿರುವ ಬಾಗ್ಮನೆ ಟೆಕ್ ಪಾರ್ಕ್, ಹೂಡಿ ಜಂಕ್ಷನ್, ಹಳೆ ಮದ್ರಾಸ್ ರಸ್ತೆ (ಜಿಆರ್‌ಟಿ ಜ್ಯುವೆಲ್ಲರ್ಸ್ ಹತ್ತಿರ), ಕಾರ್ಲ್‌ಟನ್ ಟವರ್ (ಹಳೆಯ ವಿಮಾನ ನಿಲ್ದಾಣ ರಸ್ತೆ), ಮೈಸೂರು ರಸ್ತೆಯಲ್ಲಿರುವ ಬಿಎಚ್‌ಇಎಲ್, ಮತ್ತು ಸರ್ಜಾಪುರ ರಸ್ತೆ (ಕೃಪಾನಿಧಿ ಕಾಲೇಜು ಹತ್ತಿರ) ಈ ಪ್ರದೇಶಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

ಇನ್ನೂ ಓದಿ: 4 ಲೋಕಸಭಾ ಕ್ಷೇತ್ರಗಳನ್ನೊಳಗೊಂಡ ಬೆಂಗಳೂರಿನ ಮತದಾರರ ಪಟ್ಟಿ ಪ್ರಕಟ

ಈ ರಸ್ತೆಗಳಲ್ಲಿ ಹೆಚ್ಚಿನವು ಹೆಚ್ಚಿನ ಟ್ರಾಫಿಕ್ ಹೊಂದಿರುವ ಪ್ರಮುಖ ಕಾರಿಡಾರ್‌ಗಳಾಗಿರುವುದರಿಂದ, ಸ್ಕೈವಾಕ್‌ಗಳು ಪಾದಚಾರಿಗಳಿಗೆ ರಸ್ತೆ ದಾಟಲು ಸುರಕ್ಷತೆಯನ್ನು ಒದಗಿಸುತ್ತದೆ ಎಂದು ಬಿಬಿಎಂಪಿ ಹೇಳಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ
ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಹೃದಯಾಘಾತದಿಂದ ಸಾವು!
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಹೃದಯಾಘಾತದಿಂದ ಸಾವು!
ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ
ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ
ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ
ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ