Power cuts in Bengaluru: ಬೆಂಗಳೂರಿನಲ್ಲಿ ನಾಳೆಯಿಂದ ವಿದ್ಯುತ್ ಕಡಿತ; ಇಲ್ಲಿದೆ ಏರಿಯಾಗಳ ಪಟ್ಟಿ

| Updated By: ಆಯೇಷಾ ಬಾನು

Updated on: Jan 12, 2023 | 12:01 PM

ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಟಿಪಿಸಿಎಲ್) ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿರುವುದರಿಂದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆಯಿದೆ.

Power cuts in Bengaluru: ಬೆಂಗಳೂರಿನಲ್ಲಿ ನಾಳೆಯಿಂದ ವಿದ್ಯುತ್ ಕಡಿತ; ಇಲ್ಲಿದೆ ಏರಿಯಾಗಳ ಪಟ್ಟಿ
ಪವರ್ ಕಟ್
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮಂದಿಗೆ ನಾಳೆ ಪವರ್ ಕಟ್ ಸಮಸ್ಯೆ ಎದುರಾಗಲಿದೆ. ನಗರದಲ್ಲಿ ಈ ವಾರ ಬುಧವಾರದಿಂದ ಶುಕ್ರವಾರದವರೆಗೆ ಕೆಲವು ಕಡೆ ವಿದ್ಯುತ್ ಕಡಿತವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ವೆಬ್‌ಸೈಟ್‌ಯಲ್ಲಿ ಪ್ರಕಟಿಸಲಾಗಿದೆ. ಇದರಿಂದ ವರ್ಕ್ ಫ್ರಮ್ ಹೋಂ ಮಾಡುತ್ತಿರುವವರು ಮತ್ತು ಗೃಹಣಿಯರಿಗೆ ಹೆಚ್ಚಿನ ಸಮಸ್ಯೆಯಾಗಲಿದೆ.

ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಟಿಪಿಸಿಎಲ್) ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿರುವುದರಿಂದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆಯಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಸಿಬ್ಬಂದಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ತಂತಿ ಪರಿಶೀಲನೆ, ಸ್ಟ್ರಿಂಗ್ ಮಾಡುವುದು, ಕೂಲಂಕುಷ ಪರೀಕ್ಷೆ, ತುರ್ತು ಕ್ಲಿಯರಿಂಗ್, ತ್ರೈಮಾಸಿಕ ಮತ್ತು ಲೈನ್ ನಿರ್ವಹಣೆ ಸೇರಿದಂತೆ ಕೆಲ ಪರಿಶೀಲನೆ ಕಾರ್ಯ ಕೈಗೊಳ್ಳಲಿದ್ದಾರೆ. ಹೀಗಾಗಿ ಸುಮಾರು ಆರು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ. ಆದರೆ, ಕೆಲವು ಕಾಮಗಾರಿಗಳು ಸಂಜೆ 5ರವರೆಗೆ ನಡೆಯಬಹುದು.

ಇದನ್ನೂ ಓದಿ: ಡಿಕೆ ಶಿವಕುಮಾರರ ಉಚಿತ ವಿದ್ಯುತ್​​ ಯೋಜನೆ ರಾಜ್ಯದ ಅರ್ಥ ವ್ಯವಸ್ಥೆಯ ಹಳಿ ತಪ್ಪಿಸುತ್ತಾ? ಜನರಿಗೆ ಬೆಳಕು, ಸರ್ಕಾರದ ಬೊಕ್ಕಸಕ್ಕೆ ಭಾರ

ಜನವರಿ 12ರ ಗುರುವಾರ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

ಗುರುವಾರ ಆವರಗೆರೆ, ಮಲ್ಲೇಕಟ್ಟೆ, ಕಾಡಜ್ಜಿ, ಆನಗೋಡು, ಅತ್ತಿಗೆರೆ, ಮಾಯಕೊಂಡ, ದಾವಣಗೆರೆ, ಯರಗುಂಟಾ, ಹರಿಹರ ಟೌನ್, ಹರಿಹರ-ಹೊಸಪೇಟೆ, ಪಾಲಿಫೈಬರ್ಸ್ ಮತ್ತು ಗುತ್ತೂರು, ಬೈರೋಹಳ್ಳಿ, ರಾಮೋಹಳ್ಳಿ, ಕೆಂಗೇರಿ ಟೌನ್, ಬಿಡದಿ ಗ್ರಾಮಾಂತರ, ದೇವಿಕಿರಣ, ಡೆಕ್ಕನ್ ಹೆರಾಲ್ಡ್, ಕೆ.ಎ.ಐ.ಡಿ 1ನೇ ಹಂತ, ಕೆ.ಎ.ಐ.ಡಿ 2ನೇ ಹಂತ, ಗೇರುಪ್ಲಯ ಕೈಗಾರಿಕಾ ಪ್ರದೇಶ, ಇಸ್ರೋ, ಹೆಣ್ಣೂರು ಬಂಡೆ, ಸಾಮುದ್ರಿಕಾ ಎನ್‌ಕ್ಲೇವ್, ಗ್ರೇಸ್ ಗಾರ್ಡನ್, ಕ್ರೈಸ್ಟ್ ಜಯಂತಿ ಕಾಲೇಜು, ಬಿಲಿಶಿವಾಲೆ, ಆಶಾ ಟೌನ್‌ಶಿಪ್, ಐಶ್ವರ್ಯ ಎಲ್/ಓ, ಮಾರುತಿ ಟೌನ್‌ಶಿಪ್, ನಗರಗಿರಿ ಟೌನ್‌ಶಿಪ್, ಕೆ ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತ್ನೂರ್, ಪಟೇಲ್ ರಾಮಯ್ಯ ಎಲ್/ಓ , ಅಂಜನಪ್ಪ L/o, CSI ಗೇಟ್, ಬೈರತಿ ಕ್ರಾಸ್, ಬೈರತಿ ಗ್ರಾಮ, ಎವರ್ಗ್ರೀನ್ L/O, ಕನಕಶ್ರೀ L/O, ಗೆದ್ದಲಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಪಾರ್ಟ್​ಮೆಂಟ್, ಹಿರೇಮಠ L/O, ಟ್ರಿನಿಟಿ ಫಾರ್ಚೂನ್, BHK ಇಂಡಸ್ಟ್ರೀಸ್, ಜಾನಕಿರಾಮ್ L/O, ವಡ್ಡರಪಾಳ್ಯ , ಅನುಗ್ರಹ L/O, ಕಾವೇರಿ L/O, ಆತ್ಮ ವಿದ್ಯಾ ನಗರ, ಬೈರತಿ ಗ್ರಾಮ, KRC, ದೊಡ್ಡಗುಬ್ಬಿ ಕ್ರಾಸ್, ಕುವೆಂಪು L/O, ಸಂಗಮ್ ಎನ್ಕ್ಲೇವ್, ಬೈರತಿ ಬಂಡೆ, ನಕ್ಷತ್ರ L/O, ತಿಮ್ಮೇಗೌಡ L/O, ರಿಚ್ಸ್ ಗಾರ್ಡನ್, ಆಂಧ್ರ ಕಾಲೋನಿ , ಮಂಜುನಾಥ ನಗರ, ಹೊರ್ಮಾವು BBMP GOS, ಅಗರ ಗ್ರಾಮ, ಅಗರ ಪಂಚಾಯಿತಿ, AKR ಶಾಲೆ, ನ್ಯೂ ಮಿಲೇನಿಯಂ ಸ್ಕೋ ಓಲ್, ಪಟಾಲಮ್ಮ ದೇವಸ್ಥಾನ ರಸ್ತೆ, ರಾಜು ಎಲ್/ಓ, ಪ್ರಕಾಶ್ ಗಾರ್ಡನ್, ಲಕ್ಕಮ್ಮ ಎಲ್/ಓ, ಕ್ರಿಸ್ಟಿಯನ್ ಕಾಲೇಜು ರಸ್ತೆ ಮತ್ತು ಉರಗಹಳ್ಳಿ ಉಪ ಠಾಣೆ.

ಜನವರಿ 13 ಶುಕ್ರವಾರ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

ಮೈಲಸಂದ್ರ, ಐಡಿಯಲ್ ಹೋಮ್ಸ್, ಉತ್ತರಹಳ್ಳಿ, ಸಚ್ಚಿದಾನಂದ ನಗರ, ವಡ್ಡರಪಾಳ್ಯ, ಗಾಣಕಲ್ಲು, ಬಿಇಎಂಎಲ್ ಲೇಔಟ್, ರಾಜರಾಜೇಶ್ವರಿ ದೇವಸ್ಥಾನ, ಪಟ್ಟಣಗೆರೆ, ಗ್ಲೋಬಲ್ ವಿಲೇಜ್, ಬಿಜಿಎಸ್ ಆಸ್ಪತ್ರೆ, ಕೆಂಗೇರಿ ಭಾಗಗಳು, ಚನ್ನಸಂದ್ರ, ಪೂರ್ಣ ಪ್ರಜ್ಞಾ ಲೇಔಟ್, ಬಿಎಚ್‌ಸಿಎಸ್ ಲೇಔಟ್ ಮತ್ತು ಉಪನಗರ ಸೇಂಟ್ ಉರಗಹಳ್ಳಿಗಳನ್ನು ನಾಳೆ ಪವರ್ ಕಟ್ ಆಗಲಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ