ಬೆಂಗಳೂರು: ರಾಜ್ಯದಲ್ಲಿ ಜುಲೈ 1 ರಿಂದ ಮತ್ತೆ ವಿದ್ಯುತ್ ದರ (Electricity Rates) ಏರಿಕೆಯಾಗಲಿದ್ದು, ಪ್ರತಿ ಯೂನಿಟ್‌ಗೆ ಐದು ಪೈಸೆಯಷ್ಟು ವಿದ್ಯುತ್ ದರವನ್ನು ಹೆಚ್ಚಿಸುವುದರ ಮೂಲಕ ರಾಜ್ಯ ಸರ್ಕಾರ ಜನರಿಗೆ ವಿದ್ಯುತ್ ದರ ಏರಿಕೆಯ ಶಾಕ್ ನೀಡಿದೆ. ಈ ಕುರಿತಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅನುಮೋದನೆ ನೀಡಿದೆ. ವಿದ್ಯುತ್ ದರವನ್ನು ಪರಿಷ್ಕರಿಸಲು ಮತ್ತು ಇಂಧನ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಮ್‌ಗಳು) ಪ್ರಸ್ತಾವನೆ ಸಲ್ಲಿಸಿದ್ದವು. ಜುಲೈ 1ರಿಂದ ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ 19-31 ಪೈಸೆ ಹೆಚ್ಚಳವಾಗಲಿದೆ. ಪ್ರತಿ ತಿಂಗಳು 100 ಯೂನಿಟ್ ಬಳಸುವ ಗ್ರಾಹಕರು ಇನ್ಮುಂದೆ 19 ರಿಂದ 31 ಪೈಸೆ ಪಾವತಿಸಬೇಕು. ಕಳೆದ ಎರಡು ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳ ಹಿನ್ನೆಲೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದ್ದು ಎಸ್ಕಾಂಗಳ ಮನವಿ ಮೇರೆಗೆ KERC ದರ ಏರಿಕೆ ಮಾಡಲಿದೆ.
200 ಯೂನಿಟ್‌ಗೆ ಸರಾಸರಿ 40 ರೂ.
ಆದೇಶದ ಪ್ರಕಾರ, ನಾಲ್ಕನೇ ತ್ರೈಮಾಸಿಕದಲ್ಲಿ ಬೆಸ್ಕಾಂ ಮಿತಿಯಲ್ಲಿರುವ ಗ್ರಾಹಕರು ಪ್ರತಿ ಯೂನಿಟ್‌ಗೆ 31 ಪೈಸೆ ಹೊಂದಾಣಿಕೆಯನ್ನು ಪಾವತಿಸಬೇಕಾಗುತ್ತದೆ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಮಿತಿಯಲ್ಲಿ 21 ಪೈಸೆ/ಯುನಿಟ್, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸಿಇಎಸ್‌ಸಿ) 19 ಪಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (Hescom) 27p ಮತ್ತು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (Gescom) 26p. 200 ಯೂನಿಟ್‌ಗಳನ್ನು ಬಳಸುವ ಸರಾಸರಿ ಗ್ರಾಹಕರು ಮಾಸಿಕ ಬಿಲ್‌ನಲ್ಲಿ ರೂ 40 ಹೆಚ್ಚು ಪಾವತಿಸಬೇಕಾಗುತ್ತದೆ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಂಗಳೂರು SEZ ನಲ್ಲಿರುವ ಗ್ರಾಹಕರಿಗೆ ಶುಲ್ಕಗಳು ಅನ್ವಯಿಸುತ್ತವೆ ಮತ್ತು ಅದೇ ಅವಧಿಗೆ ಹೆಸ್ಕಾಂಗಳಲ್ಲಿನ FAC ಹುಕೇರಿ RECS ಮತ್ತು Aequs SEZ ನ ಗ್ರಾಹಕರಿಗೆ ಸಹ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Plastic Ban: ಇಂದಿನಿಂದ ಏಕ ಬಳಕೆಯ ಪ್ಲಾಸ್ಟಿಕ್ಗೆ ನಿಷೇಧ; 1 ಲಕ್ಷ ರೂ. ದಂಡ ಕಟ್ಟಬೇಕಾದೀತು ಹುಷಾರ್!
ಹಿರಿಯ ಇಂಧನ ಇಲಾಖೆಯ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ: ಬಿಲ್‌ಗಳಲ್ಲಿನ ಪರಿಷ್ಕರಣೆಗಳು ಮತ್ತು ಹೊಂದಾಣಿಕೆಗಳು ಸಾಮಾನ್ಯ ತ್ರೈಮಾಸಿಕ ವ್ಯವಹಾರವಾಗಿದೆ. ಆದರೆ ಇದು ದುಬಾರಿ ಬೆಲೆ ಏರಿಕೆ ಮತ್ತು ರಾಜಕೀಯ ಕಾರಣಗಳಿಂದ ಟೀಕೆಗೆ ಗುರಿಯಾಗುತ್ತಿದೆ. ಕಲ್ಲಿದ್ದಲು ಖರೀದಿ ವೆಚ್ಚ ಮತ್ತು ಇತರ ವಿದ್ಯುತ್ ಖರೀದಿ ವೆಚ್ಚಗಳು ಹೆಚ್ಚಾಗಿರುವುದರಿಂದ ವಿದ್ಯುತ್ ದರ ಏರಿಕೆಯಾಗಿದೆ. ಹಾಗಾಗಿ ಅದನ್ನು ಗ್ರಾಹಕರಿಗೆ ವರ್ಗಾಯಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಹೊಂದಾಣಿಕೆ ಮಾಡಬೇಕಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದು ತಾತ್ಕಾಲಿಕವಾಗಿದ್ದು, ವಸೂಲಿ ಸಂಪೂರ್ಣ ಮುಕ್ತಾಯವಾದರೆ ಮತ್ತೆ ದರಗಳು ಯಥಾಸ್ಥಿತಿಗೆ ಬರಲಿವೆ. ಎಸ್ಕಾಂಗಳ ನಷ್ಟದ ಪ್ರಮಾಣವನ್ನು ಪರಿಗಣಿಸಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ವಸೂಲಿಗೆ ಅವಕಾಶ ಕಲ್ಪಿಸಲಾಗಿದೆ. ಕಲ್ಲಿದ್ದಲು ದರ ಸಹ ಹೆಚ್ಚಳವಾಗಿದೆ. ಹೀಗಾಗಿ, ಎಲ್ಲ ಅಂಶಗಳನ್ನು ಪರಿಗಣಿಸಿ ಈ ಆದೇಶ ನೀಡಲಾಗಿದೆ ಎಂದು ಕೆಇಆರ್‌ಸಿ ಅಧ್ಯಕ್ಷ ಪಿ. ರವಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: Eye Care Tips: ಮಳೆಗಾಲದಲ್ಲಿ ಕಣ್ಣಿನ ಆರೈಕೆ ಹೇಗೆ? ತಜ್ಞರ ಸಲಹೆ ಏನು? ಇಲ್ಲಿದೆ ಮಾಹಿತಿ
Published On - 8:18 am, Fri, 1 July 22