AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಡಿಗೆ ವಿಚಾರವಾಗಿ ಆಸ್ಟ್ರೇಲಿಯಾ ಪ್ರಜೆ ಮೇಲೆ ಮನಸೋ ಇಚ್ಛೆ ದಾಳಿ: ತನಿಖೆಗೆ ಹಾಜರಾಗುವಂತೆ ಹೋಟೆಲ್ ಸಿಬ್ಬಂದಿಗಳಿಗೆ ನೋಟಿಸ್

ಕ್ಯಾಶ್ ರೂಪದಲ್ಲಿ ಭಾರತೀಯ ಕರೆನ್ಸ್ ಇಲ್ಲದ ಕಾರಣ ಆನ್ ಲೈನ್ ಪೇಮೆಂಟ್ ಮಾಡೊದಾಗಿ ಹೇಳಿದ್ದ. ಆದರೆ ಕ್ಯಾಶ್ ನೀಡುವಂತೆ ಪಟ್ಟು ಹಿಡಿದಾಗ ಮಾತಿನ ಜಗಳ ನಡೆದಿದೆ. ಈ ಬಳಿಕ ಹಲ್ಲೆ ನಡೆದಿದೆ.

ಬಾಡಿಗೆ ವಿಚಾರವಾಗಿ ಆಸ್ಟ್ರೇಲಿಯಾ ಪ್ರಜೆ ಮೇಲೆ ಮನಸೋ ಇಚ್ಛೆ ದಾಳಿ: ತನಿಖೆಗೆ ಹಾಜರಾಗುವಂತೆ ಹೋಟೆಲ್ ಸಿಬ್ಬಂದಿಗಳಿಗೆ ನೋಟಿಸ್
ಆಸ್ಟ್ರೇಲಿಯಾ ಪ್ರಜೆ ಮೇಲೆ ಹಲ್ಲೆ ಮಾಡಿದ ಹೋಟೆಲ್ ಸಿಬ್ಬಂದಿಗಳು
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 01, 2022 | 11:12 AM

Share

ಬೆಂಗಳೂರು: ಆಸ್ಟ್ರೇಲಿಯಾ ಪ್ರಜೆ ಮೇಲೆ ಹಲ್ಲೆ ಮಾಡಿ ಮೊಬೈಲ್ ರಾಬರಿ (Robbery) ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ನಾಲ್ವರಿಂದ ವಿದೇಶಿಗನ ಮೇಲೆ ಹಲ್ಲೆ ಮಾಡಿದ್ದು, ಬ್ಯಾಗ್ ಸಮೇತ ಚೆಕ್ ಔಟ್ ಮಾಡಲು ಬಂದಾಗ ಕ್ಯಾಶಿಯರ್, ಹುಡುಗರ ಜೊತೆ ಜಗಳವಾಗಿದೆ. ಜಗಳದ ಬಳಿಕ ಡೋರ್​ನ ಗಾಜನ್ನು ವಿದೇಶಿ ಪ್ರಜೆ ಒದಿದ್ದು, ಆ ಬಳಿಕ ಮತ್ತೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಬಂದ ಓರ್ವನಿಂದ ಕಮಾಳಕ್ಕೆ ಹೊಡೆದಿದ್ದು, ನಂತರ ಒಬ್ಬರ ನಂತರ ಮತ್ತೊಬ್ಬರಂತೆ ಹಲ್ಲೆ ಮಾಡಿದ್ದಾರೆ. ಬಾಡಿಗೆ ವಿಚಾರವಾಗಿ ಆಸ್ಟ್ರೇಲಿಯಾ ಪ್ರಜೆ ಮೇಲೆ ಮನಸೋ ಇಚ್ಛೆ ಸಿಬ್ಬಂದಿಗಳು ದಾಳಿ ಮಾಡಿದ್ದು, ತಡೆಯಲು ಹೊದ್ರು ಬಿಡದೇ ಸ್ಟಿಕ್​ನಿಂದಲೂ ಹಲ್ಲೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಎರಡು ಕಂಪನಿಯ ಸಿಇಓ ಜೀವನದ ಕರಾಳ ರಾತ್ರಿಯಾಗಿದ್ದು, ಹಲ್ಲೆ ಮಾಡಿದ ದೃಶ್ಯಗಳು Tv9ಗೆ ಲಭ್ಯವಾಗಿದೆ.

ಇದನ್ನೂ ಓದಿ: India Rain Updates: ಮುಂಬೈ, ಉತ್ತರಾಖಂಡ್ ಹಾಗೂ ದೆಹಲಿಯಲ್ಲಿ ಭಾರಿ ಮಳೆಯ ಮುನ್ಸೂಚನೆ

ಶಿವಾಜಿನಗರದ ತನ್ನ ವರ್ಕ್ ಸ್ಪೇಸ್​ನಿಂದ ತಡರಾತ್ರಿ ವಿದೇಶಿ ಪ್ರಜೆ ವಾಪಾಸ್ ಆಗಿದ್ದಾನೆ. ಹಲ್ಲೆ ಕಂಡು ಸಹಾಯ ಮಾಡುವ ನೆಪದಲ್ಲಿ ಮೂವರು ಯುವಕರು ಬಂದಿದ್ದು, ಗಾಯಗೊಂಡು ನೊಂದಿದ್ದ ವಿದೇಶಿಗನಿಗೆ ವಂಚನೆ ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡೊ ನೆಪದಲ್ಲಿ ಕರೆದೊಯ್ದು ರಾಬರಿ ಮಾಡಿದ್ದಾರೆ. ರಾಬರಿ ಸಂಬಂಧ ಕೃತ್ಯ ಎಸಗಿದ್ದ ಮೂವರು ಆರೋಪಿಗಳನ್ನ  ಗೊವಿಂದಪುರ ಪೊಲೀಸರು ಬಂಧಿಸಿದ್ದಾರೆ.

ಹೋಟೆಲ್ ಸಿಬ್ಬಂದಿಗಳಿಗೆ ನೋಟಿಸ್

ಹೋಟೆಲ್​ನಲ್ಲಿ ವಿದೇಶಿಗನ ಮೇಲೆ ಹಲ್ಲೆ ವಿಚಾರವಾಗಿ ಹೋಟೆಲ್ ಸಿಬ್ಬಂದಿಗಳಿಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ತಡರಾತ್ರಿ 2:49ರ ವೇಳೆ ನಡೆದ ಹಲ್ಲೆಯ ದೃಶ್ಯ ಲಭ್ಯವಾಗಿದ್ದು, ಆದರೆ ಹಲ್ಲೆ ವೇಳೆ ನಡೆದ ಸಂಭಾಷಣೆಯ ಆಡಿಯೋ ಇಲ್ಲ. ಹಣ ನೀಡುವಂತೆ ಕ್ಯಾಶಿಯರ್ ಒತ್ತಾಯ ಮಾಡಿದ್ದು, ಆದರೆ ಆನ್ ಲೈನ್ ಪೇಪೆಂಟ್ ಮಾಡೊದಾಗಿ ವಿದೇಶಿ ಪ್ರಜೆ ಕೇಳಿಕೊಂಡಿದ್ದ. ಕ್ಯಾಶ್ ರೂಪದಲ್ಲಿ ಭಾರತೀಯ ಕರೆನ್ಸ್ ಇಲ್ಲದ ಕಾರಣ ಆನ್ ಲೈನ್ ಪೇಮೆಂಟ್ ಮಾಡೊದಾಗಿ ಹೇಳಿದ್ದ. ಆದರೆ ಕ್ಯಾಶ್ ನೀಡುವಂತೆ ಪಟ್ಟು ಹಿಡಿದಾಗ ಮಾತಿನ ಜಗಳ ನಡೆದಿದೆ. ಈ ಬಳಿಕ ಹಲ್ಲೆ ನಡೆದಿದೆ. ಹೊಟೆಲ್ ಸಿಬ್ಬಂದಿಗಳಿಂದ ಹಲ್ಲೆ ಪ್ರಕರಣ ಕುರಿತು ಗೊವಿಂದಪುರ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: Gold Import Duty: ಚಿನ್ನಕ್ಕೆ ಆಮದು ಸುಂಕ ಹೆಚ್ಚಳದ ಬರೆ ಎಳೆದ ಸರ್ಕಾರ; ಹಳದಿ ಲೋಹ ಇನ್ನಷ್ಟು ದುಬಾರಿ