India Rain Updates: ಮುಂಬೈ, ಉತ್ತರಾಖಂಡ್ ಹಾಗೂ ದೆಹಲಿಯಲ್ಲಿ ಭಾರಿ ಮಳೆಯ ಮುನ್ಸೂಚನೆ

ದೇಶದ ವಿವಿಧೆಡೆ ಮುಂಗಾರು ಪ್ರವೇಶವಾಗಿದ್ದು ದೆಹಲಿ ಹಾಗೂ ಮುಂಬೈನಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ರಾಯಗಡ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಮುಂಬರುವ ಎರಡು ದಿನಗಳವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ.

India Rain Updates: ಮುಂಬೈ, ಉತ್ತರಾಖಂಡ್ ಹಾಗೂ ದೆಹಲಿಯಲ್ಲಿ ಭಾರಿ ಮಳೆಯ ಮುನ್ಸೂಚನೆ
Rain
TV9kannada Web Team

| Edited By: Nayana Rajeev

Jul 01, 2022 | 10:30 AM

ದೇಶದ ವಿವಿಧೆಡೆ ಮುಂಗಾರು ಪ್ರವೇಶವಾಗಿದ್ದು ದೆಹಲಿ ಹಾಗೂ ಮುಂಬೈನಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ರಾಯಗಡ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಮುಂಬರುವ ಎರಡು ದಿನಗಳವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಹವಾಮಾನ ಇಲಾಖೆ ಪ್ರಕಾರ ಎರಡೂ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಮುಂಬೈನ ಪ್ರತ್ಯೇಕ ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ನಾಳೆಯೂ ಮುಂಬೈನಲ್ಲಿ ಮಳೆಯಾಗುವ ಎಲ್ಲಾ ಸಾಧ್ಯತೆಗಳಿವೆ.

ಕಳೆದ 12 ಗಂಟೆಗಳಲ್ಲಿ ಮುಂಬೈನಲ್ಲಿ 119.09 ಮಿ.ಮೀ ಈಸ್ಟರ್ನ್​ ಅಬ್​ಅರ್ಬನ್ಸ್​ನಲ್ಲಿ 58.40 ಮಿ.ಮೀ ಸುರಿದಿದೆ, ವೆಸ್ಟರ್ನ್​ ಸಬ್​ಅರ್ಬನ್ಸ್ನಲ್ಲಿ 78.69 ಮಿ.ಮೀ ಮಳೆ ಸುರಿದಿದೆ. ಜೂನ್ 29ರವರೆಗೆ ಮುಂಬೈ ಶೇ.11.72ರಷ್ಟು ಮಳೆ ಸುರಿದಿದೆ, ವಾರ್ಷಿಕವಾಗಿ 2472 ಮಿ.ಮೀ ಮಳೆ ದಾಖಲಾಗಿದೆ.

ನಗರದಲ್ಲಿ ಮುಂದಿನ 36 ಗಂಟೆಗಳ ಕಾಲ ಮಧ್ಯಂತರ ಮಳೆಯಾಗಲಿದ್ದು, ನಂತರ ತೀವ್ರತೆ ಕಡಿಮೆಯಾಗುವ ನಿರೀಕ್ಷೆಯಿದೆ. ಮುಂಬೈ ಮತ್ತು ಪಾಲ್ಘಢ, ಥಾಣೆ ಮತ್ತು ರಾಯಗಡ ಸೇರಿದಂತೆ ಮಹಾರಾಷ್ಟ್ರದ ಇತರ ಪ್ರಮುಖ ನಗರಗಳಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ.

ದೆಹಲಿಯಲ್ಲೂ ಮಳೆ ದೆಹಲಿಯಲ್ಲಿ ಗುರುವಾರ ಬೆಳಗ್ಗೆಯಿಂದ ಭಾರಿ ಮಳೆ ಆರಂಭವಾಗಿದೆ. , ಬುರಾರಿ, ಶಹದಾರ, ಪಟ್ಪರ್ಗಂಜ್, ಐಟಿಒ ಕ್ರಾಸಿಂಗ್, ಇಂಡಿಯಾ ಗೇಟ್, ಬಾರಾಪುಲ್ಲಾ, ರಿಂಗ್ ರೋಡ್, ದೆಹಲಿ-ನೋಯ್ಡಾ ಬಾರ್ಡರ್ ಮತ್ತು ದೆಹಲಿ-ಗುರುಗ್ರಾಮದಲ್ಲಿ ಮಳೆಯಾಗಿದೆ. ದೆಹಲಿಯ ತಾಪಮಾನ 27.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಉತ್ತರಾಖಂಡದಲ್ಲೂ ಮಳೆ: ಉತ್ತರಾಖಂಡದಲ್ಲೂ ಭಾರಿ ಮಳೆ ಸುರಿಯುತ್ತಿದ್ದು, ಭೂ ಕುಸಿತ ಉಂಟಾಗಿದೆ. ಇದರಿಂದಾಗಿ ಭದ್ರಿನಾಥ ಹಾಗೂ ಕೇದಾರನಾಥ ಯಾತ್ರೆಗೆ ಅಡಚಣೆ ಉಂಟಾಗುತ್ತಿದೆ. ವಾಹನದ ಓಡಾಟವೂ ಸ್ಥಗಿತಗೊಂಡಿದೆ. ಬುಗನಿ, ಖಿರ್ಸು, ಖೆಡಾಕಲ್, ಖಾಂಕ್ರದಿಂದ ರುದ್ರಪ್ರಯಾಗಕ್ಕೆ ಹೋಗುವ ದಾರಿಗಳೂ ಮುಚ್ಚಿವೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada