ಬೆಂಗಳೂರು, ನವೆಂಬರ್ 06: ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾರನ್ನು ಕೊಲೆ (Pratima murder case) ಮಾಡಿರುವುದಾಗಿ ಆರೋಪಿ ಕಿರಣ್ ಒಪ್ಪಿಕೊಂಡಿದ್ದಾನೆ ಎಂದು ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್‌ಕುಮಾರ್ ಶಹಾಪುರ್‌ವಾಡ್ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲಸ ಕಳೆದುಕೊಂಡ ಬಳಿಕ ಊರು ಬಿಟ್ಟಿದ್ದ ಕಿರಣ್, 1 ತಿಂಗಳ ಬಳಿಕ ಬೆಂಗಳೂರಿಗೆ ಬಂದು ಪ್ರತಿಮಾರನ್ನು ಕೊಲೆಗೈದಿದ್ದಾನೆ. ಮೊದಲು ವೇಲ್‌ನಿಂದ ಬಿಗಿದು ಬಳಿಕ ಕುತ್ತಿಗೆ ಕೊಯ್ದು ಕೊಲೆಗೈದಿದ್ದಾನೆ. ಮಲೆಮಹದೇಶ್ವರ ಬೆಟ್ಟದಲ್ಲಿ ಆರೋಪಿ ಕಿರಣ್‌ನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ತನಿಖೆ ಕೈಗೊಂಡಾಗ ಕಾರು ಚಾಲಕ ಕಿರಣ್ ಬಗ್ಗೆ ಅನುಮಾನ ಬಂದಿತ್ತು. 2 ತಿಂಗಳ ಹಿಂದೆ ಕಿರಣ್‌ನನ್ನು ಕೆಲಸದಿಂದ ಪ್ರತಿಮಾ ತೆಗೆದು ಹಾಕಿದ್ದರು. ಕೆಲಸದಿಂದ ತೆಗೆದುಹಾಕಿದ ಬಳಿಕ ಕಿರಣ್ಗೆ ಸಂಪಾದನೆ ಇಲ್ಲವೆಂದು ಪತ್ನಿಯೂ ಮನೆ ಬಿಟ್ಟು ಹೋಗಿದ್ದಳು. ಮಾಹಿತಿ ಬಂದ ತಕ್ಷಣ ಎಸಿಪಿ, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಚರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನ. 05ರಂದು ಗೋಕುಲ್ ಬಡಾವಣೆಯಲ್ಲಿ ಮನೆಯಲ್ಲಿ ಪ್ರತಿಮಾ ಕೊಲೆಯಾಗಿದೆ ಎಂದು ಸುದ್ದಿ ಬರುತ್ತೆ. ಸುದ್ದಿ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಹೋದಾಗ ಪ್ರತಿಮಾ ಅವರ ಕೊಲೆಯಾಗಿತ್ತು. ಕೂಡಲೇ ಮೂರು ತಂಡಗಳನ್ನ ರಚನೆ ಮಾಡಿ ಇನ್ವೆಸ್ಟೀಗೆಷನ್ ಮಾಡಲಾಗಿತ್ತು. ಸಂಬಂಧಿಸಿದ ವ್ಯಕ್ತಿಗಳನ್ನ ವಿಚಾರಣೆ ಮಾಡಿದ ವೇಳೆ ಕ್ಲ್ಯೂ ಸಿಕ್ಕಿತ್ತು ಎಂದಿದ್ದಾರೆ.
ಇದನ್ನೂ ಓದಿ: ಗಣಿ-ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಹತ್ಯೆ ಕೇಸ್: ಪೊಲೀಸರ ಮುಂದೆ ಸ್ಫೋಟಕ ಅಂಶ ಬಾಯ್ಬಿಟ್ಟ ಹಂತಕ ಕಿರಣ್
ಅವರ ಜೊತೆ ಕೆಲಸ ಮಾಡ್ತಿದ್ದ ವ್ಯಕ್ತಿಯೇ ಕೊಲೆ ಮಾಡಿರೋದಾಗಿ ಬೆಳಕಿಗೆ ಬಂದಿತ್ತು. ನಿನ್ನೆ ಸಂಜೆ ಆರೋಪಿಯನ್ನ ಮಲೇಮಹದೇಶ್ವರ ಬೆಟ್ಟದಲ್ಲಿ ಬಂಧಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಆರೋಪಿ ಪ್ರತಿಮಾ ಅವರ ಬಳಿ ಡ್ರೈವರ್ ಕೆಲಸ ಮಾಡ್ತಿದ್ದ. ಆಗಾಗ ಅವನನ್ನ ಬೈಯ್ತಿದ್ದರಂತೆ. ಅದರ ಜೊತೆಗೆ ಎರಡು ತಿಂಗಳ ಹಿಂದೆ ಕೆಲಸದಿಂದ ತೆಗೆದು ಹಾಕಲಾಗಿತ್ತು. ಕೆಲಸ ಕಳೆದುಕೊಂಡ ಹಿನ್ನೆಲೆ ಪತ್ನಿ ಸಹ ಆರೋಪಿಯನ್ನ ಬಿಟ್ಟು ಹೋಗಿದ್ದರು. ಹೀಗಾಗಿ ಆರೋಪಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು.
ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಕಚೇರಿ ಹಾಗೂ ಮನೆ ಬಳಿ ಮನವಿ ಮಾಡಿಕೊಳ್ತಿದ್ದ. ಮನವಿಗೆ ಸ್ಪಂದಿಸದಿದ್ದಕ್ಕೆ ಪ್ರತಿಮಾ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಸದ್ಯ ಆರೋಪಿಯನ್ನ ಕಸ್ಟಡಿಗೆ ತೆಗೆದುಕೊಂಡು ತನಿಖೆ ಮಾಡಲಾಗುತ್ತೆ. ಸದ್ಯ ಬೇರೆ ಬೇರೆ ಆಯಾಮಗಳಲ್ಲೂ ತನಿಖೆ ಮಾಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಬಳಿಕ ಗಣಿ ಮತ್ತೆ ಭೂವಿಜ್ಞಾನ ಇಲಾಖೆ ಯಲ್ಲಿ ಚಾಲಕನಾಗಿ ಕೆಲಸ ಮಾಡ್ತಿದ್ದ.
ಪ್ರತಿಮಾ ಮನೆ ಬಳಿ ರಾತ್ರಿ ಏಳು ಗಂಟೆ ಸುಮಾರಿಗೆ ಎಂಟ್ರಿಯಾಗಿದ್ದಾನೆ. ಪ್ರತಿಮಾ ಮನೆಗೆ ಎಂಟ್ರಿಯಾದ ಬಳಕ ಐದು ಹೆಜ್ಜೆ ಅಂತರದಲ್ಲಿ ಆರೋಪಿ ಎಂಟ್ರಿಯಾಗಿದ್ದಾನೆ. ಮೊದಲು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾನೆ. ಅದಕ್ಕೆ ನಿರಾಕರಿಸಿದಾಗಿ ಪ್ರತಿಮಾಳನ್ನ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ.
ಕೊಲೆ ಕೇಸ್ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಪ್ರತಿಮಾ ಕೊಲೆ ಪ್ರಕರಣದ ಓರ್ವ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆತ ಕೊಲೆಯಾದ ಮಹಿಳಾ ಅಧಿಕಾರಿಗೆ ಡ್ರೈವರ್ ಆಗಿದ್ದವನು. ಇತ್ತೀಚೆಗೆ ಅವನನ್ನು ಕೆಲಸದಿಂದ ತೆಗೆದುಹಾಕಿದ್ದರು ಅನ್ಸುತ್ತೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಸುಬ್ರಮಣ್ಯಪುರ ಪೊಲೀಸರಿಂದ ತನಿಖೆ ಚುರುಕುಗೊಳಿಸಿದ್ದು, ವಿಷೇಶ ತಂಡಗಳ ರಚನೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಹಲವು ಮಾದರಿಗಳನ್ನು ಸೀನ್ ಆಫ್ ಕ್ರೈಮ್ ತಂಡ ಸಂಗ್ರಹ ಮಾಡಿದೆ. ಮನೆಗೆ ಬಲವಂತವಾಗಿ ನುಗ್ಗಿ ಹತ್ಯೆ ಮಾಡಿ ದೋಚಿಲ್ಲಾ. ಸಾಮಾನ್ಯವಾಗಿ ಒಂಟಿ ಮಹಿಳೆ ಹತ್ಯೆ ಪ್ರಕರಣದಲ್ಲಿ ಹೀಗೆ ನಡೆದಿರತ್ತೆ. ಆದರೆ ಪ್ರತಿಮಾ ಪ್ರಕರಣದಲ್ಲಿ ಹೀಗೆ ಆಗಿಲ್ಲಾ. ಪೋರ್ಸ್ಡ್ ಎಂಟ್ರಿ ಇಲ್ಲದ ಕಾರಣ ಪರಿಚಿತರ ಮೇಲೆ ಅನುಮಾನ ಪಡಲಾಗುತ್ತಿದೆ.
ಇದನ್ನೂ ಓದಿ: ಗಣಿ-ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ: ಕೇಸ್ನಲ್ಲಿ ತಮ್ಮ ಹೆಸರು ಕೇಳಿಬಂದಿದ್ದಕ್ಕೆ ಮುನಿರತ್ನ ಹೇಳಿದ್ದಿಷ್ಟು
ಗೊತ್ತಿರುವವರೇ ತಮ್ಮ ದ್ವೇಷದಕ್ಕೆ ಕೃತ್ಯೆ ಎಸಗಿರುವ ಸಾಧ್ಯತೆ ಇದೆ. ಹಲವಾರು ಆಯಾಮಗಳಲ್ಲಿ ಪ್ರಕರಣದ ತನಿಖೆ ಮಾಡಲಾಗುತ್ತಿದೆ. ವೈಯಕ್ತಿಕ ಜೀವನ, ವೃತ್ತಿ ಜೀವನ, ಹಣಕಾಸು (ಆರ್ಥಿಕ) ಜೀವನ ಈ ಮೂರು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕವಾಗಿ ಪರಿಚತರಿಂದಲೇ ಕೃತ್ಯ ಇರುವ ಶಂಕೆ ವ್ಯಕ್ತವಾಗಿದೆ. ನಿತ್ಯ ಪ್ರತಿಮಾ ಸಂಪರ್ಕದಲ್ಲಿ ಇರ್ತಿದ್ದವರಿಂದ ಕೃತ್ಯ ಎಸಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:17 pm, Mon, 6 November 23