ಬೆಂಗಳೂರು: ಹಿಜಾಬ್, ಆಜಾನ್ ಆಯ್ತು ಈಗ ಪ್ರಾರ್ಥನೆ (Prayer) ವಿಚಾರಕ್ಕೆ ಸಂಬಂಧಿಸಿ ರಾಜ್ಯದಲ್ಲಿ ವಿವಾದ ಶುರುವಾಗಿದೆ. ಕಳೆದ ರಂಜಾನ್ (Ramadan) ಹಬ್ಬದ ದಿನ ರಸ್ತೆಗಳಲ್ಲಿ ಅನುಮತಿ ಪಡೆಯದೇ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಆದರೆ ಹಿಂದೂ ಹಬ್ಬ, ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ ಹಿಂದೂಗಳಿಗೊಂದು ನ್ಯಾಯ, ಅನ್ಯ ಧರ್ಮಗಳಿಗೊಂದು ನ್ಯಾಯ? ಎಂದು ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ಪ್ರಶ್ನೆ ಮಾಡಿವೆ.
ಮೇ 3ಕ್ಕೆ ರಾಜ್ಯದೆಲ್ಲೆಡೆ ರಂಜಾನ್ ಹಬ್ಬ ಆಚರಣೆ ಮಾಡಲಾಗಿತ್ತು. ಅಂದು ಬೆಂಗಳೂರಿನ ರಸ್ತೆಯಲ್ಲಿ ಪ್ರಾರ್ಥನೆ, ಕಾರ್ಯಕ್ರಮ ಆಚರಣೆಗೆ ಯಾವುದೇ ಅನುಮತಿ ಪಡೆದಿಲ್ಲ. ಅಂದು ರಸ್ತೆಗಳನ್ನು ಬಂದ್ ಮಾಡಿ ರಂಜಾನ್ ಆಚರಣೆ ಮಾಡಿದ್ದರು. ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆ ನೀಡಿ ರಸ್ತೆಯಲ್ಲಿ ಪ್ರಾರ್ಥನೆ, ಕಾರ್ಯಕ್ರಮ ನಡೆಸಿದ್ದರು. ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆ ಮಾಡಿದವರ ವಿರುದ್ಧ ಯಾವುದೇ ಯಾಕೆ ಕ್ರಮಕೈಗೊಂಡಿಲ್ಲ. ಅದೇ ಹಿಂದೂಗಳು ಹಬ್ಬ ಆಚರಣೆ ಮಾಡಲು ನಗರ ಪಾಲಿಕೆ, ಬೆಸ್ಕಾಂ, ಪೋಲಿಸ್, ಸಂಚಾರ ಹೀಗೆ ಹಲವು ಕಡೆ ಅನುಮತಿ ಪಡೆಯಬೇಕು ಇದು ಅನ್ಯಾಯ ಅಲ್ಲವೇ? ಮುಸಲ್ಮಾನರಿಗೆ ಬೇರೆ ಕಾಯಿದೆಯೇ? ಎಂದು ಆರ್ಟಿಐ ಮಾಹಿತಿ ಆಧಾರದ ಮೇಲೆ ಹಿಂದೂ ಜನಜಾಗೃತಿ ಸಮಿತಿ ಮುಖಂಡ ಮೋಹನ್ ಗೌಡ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಕಾಲೇಜ್ ಬಸ್‌ಗೆ ಹಿಂಬದಿಯಿಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ವಿದ್ಯಾರ್ಥಿಗಳು ಸೇರಿದಂತೆ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ವಕ್ಫ್ ಬೋರ್ಡ್ನಿಂದ ಮಹತ್ವದ ನಿರ್ಧಾರ:
ಸದ್ಯ ರಾಜ್ಯದಲ್ಲಿ ಈದ್ಗಾ ಮೈದಾನ ಯಾರಿಗೆ ಸೇರಿದ್ದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ಈದ್ಗಾ ಮೈದಾನದಲ್ಲಿ ಆಚರಿಸಲು ನಿರ್ಧಾರ ಮಾಡಲಾಗಿದೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಆದಿ ಟಿವಿ9ಗೆ ಮಾಹಿತಿ ನೀಡಿದ್ದಾರೆ. ವಿವಾದಿತ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲು ಹಿಂದೂ ಸಂಘಟನೆಗಳು ಮನವಿ ಮಾಡಿದ್ದವು. ಹಿಂದೂ ಸಂಘಟನೆಗಳ ಸಾಲು ಸಾಲು ಮನವಿ ಬೆನ್ನಲೆ ವಕ್ಫ್ ಬೋರ್ಡ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Thu, 9 June 22