ಬೆಂಗಳೂರಲ್ಲಿ ಪ್ರೆಸಿಡೆನ್ಸಿ ಫೌಂಡೇಷನ್ನಿಂದ ಉದ್ಯೋಗ ಮೇಳ; ನೂರಾರು ಆಕಾಂಕ್ಷಿಗಳು ಭಾಗಿ
ಬೆಂಗಳೂರಿನಲ್ಲಿ ಪ್ರೆಸಿಡೆನ್ಸಿ ಫೌಂಡೇಷನ್ನಿಂದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಉದ್ಯೋಗ ಮೇಳದಲ್ಲಿ ಭಾಗಿಯಾದ ಸಾವಿರಾರು ಆಕಾಂಕ್ಷಿಗಳಿಗೆ ತಮ್ಮ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಉದ್ಯೋಗ ಹುಡುಕಲು ಇದು ಸಹಾಯಕವಾಯಿತು. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸಹಯೋಗದಲ್ಲಿ ಈ ಉದ್ಯೋಗ ಮೇಳೆ ಆಯೋಜಿಸಲಾಗಿತ್ತು.

ಬೆಂಗಳೂರು: ಬೆಂಗಳೂರಿನಲ್ಲಿ ಯಾವುದಾದರೂ ಕೆಲಸ ಗಿಟ್ಟಿಸಿಕೊಳ್ಳಬೇಕು, ಓದು ಮುಗೀತು ಇನ್ನೇನಾದರೂ ಕೆಲಸ ಮಾಡಬೇಕು ಅಂತ ಕನಸು ಕಟ್ಟಿಕೊಂಡವರಿಗೆ ಅಲ್ಲಿ ಬೃಹತ್ ವೇದಿಕೆ ಸೃಷ್ಟಿಯಾಗಿತ್ತು. ಕೆಲಸ ಹುಡುಕಿ ಸುಸ್ತಾದವರು, ಓದು ಮುಗಿಸಿ ಕೆಲಸ ಹುಡುಕಲು ಹೊರಟವರಿಗೆ ಪ್ರೆಸಿಡೆನ್ಸಿ ಫೌಂಡೇಷನ್ ನಡೆಸಿದ ಉದ್ಯೋಗ ಮೇಳ ಹೊಸ ಆಸೆ ಚಿಗುರಿಸುವ ಕೆಲಸ ಮಾಡಿದೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸಹಯೋಗದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದ ಮಾಹಿತಿ ಇಲ್ಲಿದೆ.
ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಟಿಸುವ ಕೆಲಸ ಮಾಡುತ್ತಿರುವ ಪ್ರೆಸಿಡೆನ್ಸಿ ಫೌಂಡೇಷನ್ ಇಂದು ಮಿಲ್ಲರ್ಸ್ ರಸ್ತೆಯ ಈದ್ಗಾ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿತ್ತು. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸಹಯೋಗದಲ್ಲಿ ನಡೆದ ಬೃಹತ್ ಉದ್ಯೋಗಮೇಳದಲ್ಲಿ ನೂರಾರು ಉದ್ಯೋಗಾಂಕ್ಷಿಗಳು ಭಾಗಿಯಾಗಿದರು.
ಸುಮಾರು 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದ ಉದ್ಯೋಗ ಮೇಳದಲ್ಲಿ ಸಚಿವ ಜಮೀರ್ ಅಹ್ಮದ್ ಹಾಗೂ ಮಾಜಿ ಸಚಿವ ಅಶ್ವಥ್ ನಾರಾಯಣ ಭಾಗಿಯಾಗಿ ಉದ್ಯೋಗಾಂಕ್ಷಿಗಳಿಗೆ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಅಶ್ವಥ್ ನಾರಾಯಣ, ಉದ್ಯೋಗಾಂಕ್ಷಿಗಳು ಯಾವ ಉದ್ಯೋಗವನ್ನೂ ಕೀಳಾಗಿ ನೋಡಬಾರದು. ಕೆಲಸವನ್ನು ಶ್ರದ್ಧೆಯಿಂದ ಮಾಡಿ ಯಶಸ್ಸು ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ದರ ಏರಿಕೆ: ಮೆಟ್ರೋ ಪ್ರಯಾಣಿಕರ ಪರ್ಯಾಯ ವ್ಯವಸ್ಥೆ, ಬೆಂಗಳೂರಿನಲ್ಲಿ ಶುರುವಾಯ್ತು ಟ್ರಾಫಿಕ್ ಸಮಸ್ಯೆ
ಇಂದು ಕಾರ್ಯಕ್ರಮವನ್ನು ಆಯೋಜಿಸಿದ್ದ ಪ್ರೆಸಿಡೆನ್ಸಿ ಫೌಂಡೇಷನ್ನ ಕೌಸರ್ ನಿಸಾರ್ ಅಹಮದ್ ಹಾಗೂ ಸಲ್ಮಾನ್ ಅಹ್ಮದ್, ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗನ್ನು ಗೌರವಪೂರ್ವಕವಾಗಿ ಸ್ವಾಗತಿಸುವ ಮೂಲಕ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು. ಚಿಲ್ಲರೆ ವ್ಯಾಪಾರದಿಂದ ಹಿಡಿದು ಉತ್ಪಾದನೆ, ಬ್ಯಾಂಕಿಂಗ್, ಕಾರ್ಪೋರೇಟ್ ವಲಯಗಳ ನೂರಾರು ಸಂಸ್ಥೆಗಳು ಭಾಗಿಯಾಗಿದ್ದ ಉದ್ಯೋಗ ಮೇಳದಲ್ಲಿ ಎಲ್ಲಾ ಜಾತಿ, ಧರ್ಮ ಹಾಗೂ ವಿವಿಧ ಸಮುದಾಯಗಳ ಉದ್ಯೋಗಾಂಕ್ಷಿಗಳು ಯಾವುದೇ ಭೇದ ಭಾವವಿಲ್ಲದೇ ಭಾಗಿಯಾಗಲು ಅವಕಾಶ ನೀಡಲಾಗಿತ್ತು. ಇನ್ನು, ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಕಂಪನಿಗಳಲ್ಲಿ ಇಂಟರ್ನ್ಶಿಪ್ ಪಡೆಯೋಕೂ ಕೂಡ ಅವಕಾಶ ನೀಡಲಾಗಿತ್ತು. ಈ ವೇಳೆ ಸಂದರ್ಶನದಲ್ಲಿ ಭಾಗವಹಿಸಿದ ಉದ್ಯೋಗಾಂಕ್ಷಿಗಳು ಕೂಡ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಉದ್ಯೋಗವಿಲ್ಲ, ಅವಕಾಶ ಸಿಗುತ್ತಿಲ್ಲ ಎಂದು ಅಲೆದು ಸುಸ್ತಾದ ಯುವಕ-ಯುವತಿಯರಿಗೆ ಈ ಬೃಹತ್ ಉದ್ಯೋಗ ಮೇಳ ಹೊಸ ಭರವಸೆ ನೀಡಿದೆ. ಸದ್ಯಕ್ಕೆ ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದ ನೂರಾರು ಕಂಪನಿಗಳು ಉದ್ಯೋಗಾಂಕ್ಷಿಗಳ ಮಾಹಿತಿ, ವಿವರ ಕಲೆಹಾಕಿದ್ದು ಉದ್ಯೋಗ ಮೇಳದಿಂದ ಆಕಾಂಕ್ಷಿಗಳಿಗೆ ಹೊಸ ಮಾರ್ಗ ಸಿಗುವ ಭರವಸೆ ಚಿಗುರೊಡೆದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ