2024ರ ಒಲಿಂಪಿಕ್ಸ್‌ನಲ್ಲಿ ಸೋತಿದ್ದ ನನಗೆ ಸದ್ಗುರು ಭೇಟಿ ಬಳಿಕ ನಿಜವಾದ ಗೆಲುವಿನ ಅರ್ಥ ತಿಳಿಯಿತು; ಒಲಿಂಪಿಕ್ ಚಾಂಪಿಯನ್ ಲವ್ಲಿನಾ ಬೊರ್ಗೋಹೈನ್
ಬೆಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ 60ಕ್ಕೂ ಹೆಚ್ಚು ವಕ್ತಾರರು ಭಾಗಿಯಾಗಿದ್ದರು. 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿದ್ದಾರೆ. 115 ದೇಶಗಳಿಂದ 463 ವಕ್ತಾರರು ಹಾಗೂ 6 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ. 2024ರ ಒಲಿಂಪಿಕ್ಸ್‌ನಲ್ಲಿ ಸೋತ ನಂತರ ನಾನು ಸಂಪೂರ್ಣ ಕಳೆದು ಹೋಗಿದ್ದೆ. ಆದರೆ, ರವಿಶಂಕರ್ ಗುರೂಜಿ ಅವರನ್ನು ಭೇಟಿಯಾದ ನಂತರ ಮಾತ್ರ ನಿಜವಾದ ಯಶಸ್ಸು ಎಂದರೇನು ಎಂಬುದು ಅರ್ಥವಾಯಿತು ಎಂದು ಒಲಿಂಪಿಕ್ ಚಾಂಪಿಯನ್ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಲವ್ಲಿನಾ ಬೊರ್ಗೋಹೈನ್ ಹೇಳಿದ್ದಾರೆ.

ಬೆಂಗಳೂರು: ಆರ್ಟ್ ಆಫ್ ಲಿವಿಂಗ್ನಿಂದ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ಒಲಿಂಪಿಕ್ ಚಾಂಪಿಯನ್ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಲವ್ಲಿನಾ ಬೊರ್ಗೋಹೈನ್ ತಮ್ಮ ಯಶಸ್ಸು ಮತ್ತು ಆತ್ಮಾನ್ವೇಷಣೆಯ ಭಾವನಾತ್ಮಕ ಪಯಣವನ್ನು ಹಂಚಿಕೊಂಡಿದ್ದಾರೆ. “ಮೊದಲು ಯಶಸ್ಸು ಎಂದರೆ ನನ್ನ ಪೋಷಕರ ಸಂಕಟಗಳನ್ನು ದೂರ ಮಾಡುವುದು ಎಂದು ನಾನು ನಂಬಿದ್ದೆ. ನಂತರ, ಪದಕಗಳನ್ನು ಗೆಲ್ಲುವುದೇ ನಿಜವಾದ ಯಶಸ್ಸು ಎಂದು ಭಾವಿಸಿದ್ದೆ. 2024ರ ಒಲಿಂಪಿಕ್ಸ್‌ನಲ್ಲಿ ಸೋತ ನಂತರ ನಾನು ಸಂಪೂರ್ಣ ಕಳೆದು ಹೋಗಿದ್ದೆ. ಆದರೆ, ರವಿಶಂಕರ್ ಗುರೂಜಿ ಅವರನ್ನು ಭೇಟಿಯಾದ ನಂತರ ಮಾತ್ರ ನಿಜವಾದ ಯಶಸ್ಸು ಎಂದರೇನು ಎಂಬುದು ಅರ್ಥವಾಯಿತು. ಕ್ರೀಡೆಯಲ್ಲಿ ಬೆಳೆಯಲು ಬಯಸುವ ಮಕ್ಕಳಿಗೆ ನಾನು ಸ್ಪೂರ್ತಿಯಾಗಬಲ್ಲೆ ಎಂಬುದನ್ನು ಮನಗಂಡಾಗ ನಾನು ದೊಡ್ಡ ಸಂತೋಷ ಕಂಡುಕೊಂಡೆ” ಎಂದಿದ್ದಾರೆ.
ಈ ಬಾಕ್ಸಿಂಗ್ ತಾರೆಯು ಗ್ರಾಮೀಣ ಮತ್ತು ನಗರಗಳ ಅಂತರವನ್ನು ಕಡಿಮೆ ಮಾಡುತ್ತಿರುವ IWC ಸಮಾವೇಶದ ಮಹತ್ವವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದಾರೆ. “ಅತ್ಯಂತ ಹಿಂದುಳಿದ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಮಕ್ಕಳಿಗೆ ಈ ಸಮಾವೇಶವು ಹೊಸ ಆಶಾಕಿರಣವನ್ನು ತರುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ರವಿಶಂಕರ್ ಗುರೂಜಿಯೊಂದಿಗೆ ಸತ್ಸಂಗ, ಧ್ಯಾನ: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ
ಮಹಿಳಾ ಸಮಾವೇಶದ 2ನೇ ದಿನವು ಪ್ರಭಾವಶಾಲಿ ಸಂವಾದಗಳು ಮತ್ತು ವೈವಿಧ್ಯಮಯ ಸಾಧಕರ ಪ್ಯಾನೆಲ್‌ನೊಂದಿಗೆ ಪ್ರಾರಂಭವಾಯಿತು. ಸಿನಿಮಾ ನಿರ್ಮಾಪಕಿ ಮತ್ತು ಲೇಖಕಿ ಅಶ್ವಿನಿ ಅಯ್ಯರ್ ತಿವಾರಿ, ಎಡಲ್‌ವೈಸ್ ಮ್ಯೂಚುಯಲ್ ಫಂಡ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ರಾಧಿಕಾ ಗುಪ್ತಾ ಮತ್ತು ಹಸುಗೆಛ್ಚಿ ರುಚಿರಾ ಕಂಬೋಜ ತಮ್ಮ ಜೀವನ ಪಥದಲ್ಲಿ ಸಾಮಾಜಿಕ ಸಂಕೋಲೆಗಳನ್ನು ಮುರಿದು ಸ್ವತಂತ್ರ ಜೀವನವನ್ನು ಹೇಗೆ ರೂಪಿಸಿಕೊಂಡರು ಎಂಬುದರ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಶಿಕ್ಷಣದ ಉದ್ದೇಶ ಮತ್ತು ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಐಶ್ವರ್ಯ ಡಿ.ಕೆ.ಎಸ್ ಹೆಗಡೆ, “ಶಿಕ್ಷಣವು ಜ್ಞಾನವನ್ನು ಪ್ರಜ್ಞೆಗೆ ಪರಿವರ್ತಿಸುವ ಪ್ರಕ್ರಿಯೆ. ಶಿಕ್ಷಣ ಎಂದರೆ ಧೈರ್ಯ, ಆತ್ಮವಿಶ್ವಾಸ ಮತ್ತು ಬದ್ಧತೆ. ಇದು ಶಕ್ತಿಯುತ ಮಹಿಳೆಯರನ್ನೂ ಜವಾಬ್ದಾರಿಯುತ ಪುರುಷರನ್ನೂ ಬೆಳೆಸುವ ಕಲೆಯಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ದರ ಏರಿಕೆ: ಮೆಟ್ರೋ ಪ್ರಯಾಣಿಕರ ಪರ್ಯಾಯ ವ್ಯವಸ್ಥೆ, ಬೆಂಗಳೂರಿನಲ್ಲಿ ಶುರುವಾಯ್ತು ಟ್ರಾಫಿಕ್ ಸಮಸ್ಯೆ
ಹೇಮಾಮಾಲಿನಿ ತಮ್ಮ ವೃತ್ತಿಜೀವನ ಮತ್ತು ಕುಟುಂಬ ಜೀವನದ ಸಮತೋಲನದ ಬಗ್ಗೆ ಮಾತನಾಡುತ್ತಾ, ಶಿಸ್ತಿನ ಜೀವನ ಶೈಲಿಯ ಮಹತ್ವವನ್ನು ವಿವರಿಸಿದರು. ಇಶಾ ಡಿಯೋಲ್ ಸೋಷಿಯಲ್ ಮೀಡಿಯಾದಿಂದ ಉಂಟಾಗುವ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಉಲ್ಲೇಖಿಸಿದರು. “ನಾವು ಪ್ರಸ್ತುತ ಕ್ಷಣವನ್ನು ಅನುಭವಿಸದೆ, ಸಾಮಾಜಿಕ ಮಾಧ್ಯಮದ ಹಿಡಿತದಲ್ಲಿ ಬದುಕುತ್ತಿದ್ದೇವೆ. ಇದರ ಅತಿಯಾಗಿ ಬಳಕೆಯು ಉದಾಸೀನತೆಗೆ ಕಾರಣವಾಗುತ್ತಿದೆ ಮತ್ತು ಜನರು ತಮ್ಮನ್ನು ತಾವೇ ಅಸಹ್ಯಪಡಿಸುವಂತೆ ಮಾಡುತ್ತಿದೆ. ಆದರೆ ಇಲ್ಲಿ (ಆಶ್ರಮದಲ್ಲಿ) ಇರಲು ಬಹಳ ಚೆನ್ನಾಗಿದೆ—ಇದು ಆತ್ಮನೊಂದಿಗೆ ಸಂಪರ್ಕ ಸಾಧಿಸುವ ಮತ್ತು ಸ್ವತಃ ನಮ್ಮನ್ನು ಪ್ರೀತಿಸಲು ಅವಕಾಶ ಒದಗಿಸುವ ಸ್ಥಳ” ಎಂದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ