Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಸಂಸದ ಎಲ್​ಆರ್ ಶಿವರಾಮೇಗೌಡ ಕಾಂಗ್ರೆಸ್​ ಸೇರ್ಪಡೆ

ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಕಾಂಗ್ರೆಸ್ ಸೇರಿದ್ದಾರೆ. ಹಾಗೇ ಬ್ರಿಜೇಶ್​ ಕಾಳಪ್ಪ ಕೂಡ ಮರಳಿ ಮಾತೃ ಪಕ್ಷಕ್ಕೆ ವಾಪಸ್​ ಆಗಿದ್ದಾರೆ. ಎಲ್.ಆರ್. ಶಿವರಾಮೇಗೌಡ ಅವರ ಪುತ್ರ ಮಂಜೇಗೌಡ ಮತ್ತು ಇತರರು ಕೂಡ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

ಮಾಜಿ ಸಂಸದ ಎಲ್​ಆರ್ ಶಿವರಾಮೇಗೌಡ ಕಾಂಗ್ರೆಸ್​ ಸೇರ್ಪಡೆ
ಎಲ್​​ಆರ್ ಶಿವರಾಮೇಗೌಡ ಕಾಂಗ್ರೆಸ್​ ಸೇರ್ಪಡೆ
Follow us
Anil Kalkere
| Updated By: ವಿವೇಕ ಬಿರಾದಾರ

Updated on:Feb 16, 2025 | 1:26 PM

ಬೆಂಗಳೂರು, ಫೆಬ್ರವರಿ 16: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar)​ ನೇತೃತ್ವದಲ್ಲಿ ಮಾಜಿ ಸಂಸದ, ಮಾಜಿ ಶಾಸಕ ಎಲ್​.ಆರ್​.ಶಿವರಾಮೇಗೌಡ (L. R. Shivarame Gowda) ಕಾಂಗ್ರೆಸ್​ (Congress) ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಮಾಜಿ ಸಂಸದ ಶಿವರಾಮೇಗೌಡ ಮತ್ತು ಪುತ್ರ ಮಂಜೇಗೌಡ, ಬ್ರಿಜೇಶ್ ಕಾಳಪ್ಪ ಮತ್ತು ಎಲ್.ಎಸ್.ಚೇತನ್ ಗೌಡ ಕಾಂಗ್ರೆಸ್ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸ್ವಾಗತಿಸಿದರು. ಎಲ್.ಆರ್. ಶಿವರಾಮೇಗೌಡ ಅವರ ಬೆಂಬಲಿಗರೂ ಕೂಡ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್​ ಸೇರಿದ್ದಾರೆ.

ಎಲ್​ಆರ್​ ಶಿವರಾಮೇಗೌಡ ಅವರು ಇತ್ತೀಚಿಗೆ ಬಿಜೆಪಿ ಸೇರಿದ್ದರು. ಇದೀಗ ಮರಳಿ ಕಾಂಗ್ರೆಸ್​ ಪಕ್ಷ ಸೇರಿಕೊಂಡಿದ್ದಾರೆ. ಕಾಂಗ್ರೆಸ್​ ತೊರೆದು ಆಮ್​ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದ ಬ್ರಿಜೇಶ್​ ಕಾಳಪ್ಪ ಕೂಡ ಮರಳಿ ಮಾತೃ ಪಕ್ಷಕ್ಕೆ ವಾಪಸ್​ ಆಗಿದ್ದಾರೆ.

ಎಲ್​ ಆರ್ ಶಿವರಾಮೇಗೌಡ ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ವೇದಿಕೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಚನ್ನಪಟ್ಟಣ ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸಿಪಿ ಯೋಗೇಶ್ವರ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಇದು ಎಲ್​ ಆರ್​ ಶಿವರಾಮೇಗೌಡ ಕಾಂಗ್ರೆಸ್​ ಸೇರ್ಪಡೆ ಬಹುತೇಕ ಖಚಿತ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದ್ದವು.

ಇದನ್ನೂ ಓದಿ: ಬೆಂಗಳೂರಿಗೆ ಇನ್ನೂ 6 ಟಿಎಂಸಿ ಕಾವೇರಿ ನೀರು ತರ್ತೇವೆ: ಡಿಸಿಎಂ ಡಿಕೆ ಶಿವಕುಮಾರ್​

ಮಾಜಿ ಸಂಸದ ಜಿ. ಮಾದೇಗೌಡ ಅವರ ಬಗ್ಗೆ ಲಘುವಾಗಿ ಮಾತನಾಡಿ ಜೆಡಿಎಸ್​ನಿಂದ ಉಚ್ಚಾಟನೆಗೊಂಡಿದ್ದ ಎಲ್​ಆರ್ ಶಿವರಾಮೇಗೌಡ ಅವರು 2023ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಬಿಜೆಪಿಗೆ ರಾಜಿನಾಮೆ ನೀಡಿ ಮತ್ತೆ ಕಾಂಗ್ರೆಸ್​ ಸೇರಿದ್ದಾರೆ. ಪಕ್ಷಾಂತರ ಶಿವರಾಮೇಗೌಡಿಗೆ ಹೊಸದೇನು ಅಲ್ಲ. 1996ರಲ್ಲಿ ಜನತಾ ದಳದಲ್ಲಿದ್ದ ಶಿವರಾಮೇಗೌಡರು 1999ರವೇಳೆಗೆ ಕಾಂಗ್ರೆಸ್​ ಪಕ್ಷ ಸೇರ್ಪಡೆಗೊಂಡಿದ್ದರು.

2009ರಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದರು. ಇದಾದ ಒಂದೇ ವರ್ಷದಲ್ಲಿ ಮತ್ತೆ ಕಾಂಗ್ರೆಸ್​ ಕೈ ಹಿಡಿದಿದ್ದರು. ನಂತರ 2018ರಲ್ಲಿ ಜೆಡಿಎಸ್​ ಸೇರಿಕೊಂಡರು. ಬಳಿಕ, 2023 ಜೆಡಿಎಸ್​ನಿಂದ ಉಚ್ಚಾಟನೆಗೊಂಡ ಬಳಿಕ ಬಿಜೆಪಿ ಸೇರಿ ಕಮಲ ಹಿಡಿದರು. ಇದೀಗ ಮತ್ತೆ ಕಾಂಗ್ರೆಸ್​ಗೆ ಸೇರಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:41 pm, Sun, 16 February 25

ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಸತೀಶ್ ಜಾರಕಿಹೊಳಿ ದೆಹಲಿಗೆ ಯಾಕೆ ಹೋಗಿದ್ದು ಅಂತ ಗೊತ್ತಿಲ್ಲ: ರಾಜಣ್ಣ
ಸತೀಶ್ ಜಾರಕಿಹೊಳಿ ದೆಹಲಿಗೆ ಯಾಕೆ ಹೋಗಿದ್ದು ಅಂತ ಗೊತ್ತಿಲ್ಲ: ರಾಜಣ್ಣ
ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು
ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು