ಸಿಲಿಕಾನ್ ಸಿಟಿಯಲ್ಲಿ ಸಂಕ್ರಾಂತಿ ಸಡಗರ; ಖರೀದಿಗೆ ಮುಗಿಬಿದ್ದ ಜನ, ತರಕಾರಿ, ಹೂ, ಹಣ್ಣು ಬೆಲೆ ಏರಿಕೆ

| Updated By: ಆಯೇಷಾ ಬಾನು

Updated on: Jan 14, 2024 | 7:46 AM

ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಈ ಹಬ್ಬವನ್ನ ಸಡಗಡ ಸಂಭ್ರಮದಿಂದ ಆಚರಣೆ ಮಾಡಲು ಸಿಲಿಕಾನ್ ಸಿಟಿ ಮಂದಿ ತಯಾರಿ ನಡೆಸುತ್ತಿದ್ದಾರೆ.‌ ಈ ವರ್ಷವು ಅದ್ದೂರಿಯಿಂದ ಹಬ್ಬವನ್ನ ಬರಮಾಡಿಕೊಳ್ಳುತ್ತಿದ್ದು, ಹಬ್ಬಕ್ಕೆ ಬೇಕಾದ ವಸ್ತುಗಳನ್ನ ಖರೀದಿ ಮಾಡಲು ಸಿಲಿಕಾನ್ ಮಂದಿ ಮುಗಿಬಿದ್ದಿದ್ದಾರೆ. ಹಬ್ಬದ ಹಿನ್ನೆಲೆ ತರಕಾರಿ, ಹೂ, ಹಣ್ಣು ಬೆಲೆ ಏರಿಕೆಯಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಸಂಕ್ರಾಂತಿ ಸಡಗರ; ಖರೀದಿಗೆ ಮುಗಿಬಿದ್ದ ಜನ, ತರಕಾರಿ, ಹೂ, ಹಣ್ಣು ಬೆಲೆ ಏರಿಕೆ
ಕೆಆರ್ ಮಾರುಕಟ್ಟೆ
Follow us on

ಬೆಂಗಳೂರು, ಜ.14: ಪ್ರತಿವರ್ಷ ಸಂಕ್ರಾಂತಿ ಹಬ್ಬ (Makar Sankranti) ಬಂದ್ರೆ ಸಾಕು ಇಡೀ ಸಿಲಿಕಾನ್ ಸಿಟಿ ಹಬ್ಬದ ಸಂಭ್ರಮದಲ್ಲಿ ಮುಳುಗುತ್ತೆ. ಈ ಬಾರಿಯೂ ಅದ್ದೂರಿಯಿಂದ ಹಬ್ಬ ಆಚರಣೆ ಮಾಡಲು ಸಿಟಿ ಮಂದಿ ತಯಾರಿ ಶುರು ಮಾಡಿದ್ದಾರೆ.‌ ಸಂಕ್ರಾಂತಿ ಹಬ್ಬಕ್ಕೆ ಬೇಕಾದ ಹೂ, ಹಣ್ಣು, ತರಕಾರಿಗಳನ್ನ ಖರೀದಿ ಮಾಡಲು ಕೆ.ಆರ್. ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ.‌ ಹೀಗಾಗಿ ಕೆ.ಆರ್.ಮಾರುಕಟ್ಟೆಯ (KR Market) ಸುತ್ತ – ಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.

ಈ ಬಾರಿ ತರಕಾರಿ, ಹೂ, ಹಣ್ಣುಗಳ ಬೆಲೆ ಏರಿಕೆಯಾಗಿದ್ದು, ಬೆಲೆಗಳನ್ನ ಕೇಳಿಯೇ ಗ್ರಾಹಕರು ಶಾಕ್ ಆಗುತ್ತಿದ್ದಾರೆ.‌ ತರಕಾರಿಗಳ ಬೆಲೆ 10 ರಿಂದ 20 ರೂಪಾಯಿ ಜಾಸ್ತಿಯಾಗಿದ್ರೆ, ಹೂವಿನ ಬೆಲೆ ಗಗನಕ್ಕೆ ಏರಿದೆ.‌ ಈ ಮಧ್ಯೆ ಹಣ್ಣುಗಳ ಬೆಲೆಯು ಏರಿಕೆಯಾಗಿದ್ದು, ವ್ಯಾಪಾರಸ್ತರು ಲಾಭದ ನೀರಿಕ್ಷೆಯಲ್ಲಿದ್ದಾರೆ. ಹಾಗಿದ್ರೆ ಸಧ್ಯ ತರಕಾರಿಗಳ ಬೆಲೆ ಕಳೆದ ವಾರ ಎಷ್ಟಿತ್ತು. ಇಂದು ಎಷ್ಟಿದೆ ಅಂತ ನೋಡುವುದಾದರೆ.

  • ಕ್ಯಾರೆಟ್; ಇಂದಿನ ಬೆಲೆ-60 kg, ಹಿಂದಿನ ಬೆಲೆ-60 ರೂ.
  • ಬಟಾಣಿ: ಇಂದಿನ ಬೆಲೆ – 40 kg, ಹಿಂದಿನ ಬೆಲೆ – 60ರೂ.
  • ಅವರೆಕಾಯಿ: ಇಂದಿನ ಬೆಲೆ- 80 kg, ಹಿಂದಿನ ಬೆಲೆ- 70ರೂ.
  • ಬೀನ್ಸ್: ಇಂದಿನ ಬೆಲೆ – 60 kg, ಹಿಂದಿನ ಬೆಲೆ – 40ರೂ.
  • ಗೆಣಸು: ಇಂದಿನ ಬೆಲೆ – 40 kg, ಹಿಂದಿನ ಬೆಲೆ – 30ರೂ.
  • ಮೂಲಂಗಿ: ಇಂದಿನ ಬೆಲೆ – 40 kg, ಹಿಂದಿನ ಬೆಲೆ – 60ರೂ.
  • ನವಿಲುಕೋಸು: ಇಂದಿನ ಬೆಲೆ – 80 kg, ಹಿಂದಿನ ಬೆಲೆ – 70ರೂ.
  • ದಪ್ಪ ಮೆಣಸಿನ ಕಾಯಿ: ಇಂದಿನ ಬೆಲೆ -200 kg, ಹಿಂದಿನ ಬೆಲೆ – 80ರೂ.
  • ಆಲೂಗೆಡ್ಡೆ: ಇಂದಿನ ಬೆಲೆ – 30 kg, ಹಿಂದಿನ ಬೆಲೆ – 20 ರೂ
  • ಹಸಿರುಮೆಣಸಿನಕಾಯಿ: ಇಂದಿನ ಬೆಲೆ – 60 kg, ಹಿಂದಿನ ಬೆಲೆ – 80 ರೂ,
  • ಈರುಳ್ಳಿ: ಇಂದಿನ ಬೆಲೆ – 30kg, ಹಿಂದಿನ ಬೆಲೆ – 20 kg ರೂ,
  • ಬೆಳ್ಳುಳ್ಳಿ: ಇಂದಿನ ಬೆಲೆ – 280 kg, ಹಿಂದಿನ ಬೆಲೆ – 260ರೂ.
  • ಶುಂಠಿ‌: ಇಂದಿನ ಬೆಲೆ 120 kg, ಹಿಂದಿನ ಬೆಲೆ – 160ರೂ.
  • ಟೋಮಾಟೋ ಇಂದಿನ ಬೆಲೆ 25, ಹಿಂದಿನ ಬೆಲೆ 20ರೂ.
  • ತೊಂಡೆಕಾಯಿ: ಇಂದಿನ ಬೆಲೆ – 60 kg, ಹಿಂದಿನ ಬೆಲೆ – 40ರೂ.
  • ಬದನೆಕಾಯಿ: ಇಂದಿನ ಬೆಲೆ – 50 kg, ಹಿಂದಿನ ಬೆಲೆ – 30 kgರೂ.
  • ಹೀರೇಕಾಯಿ: ಇಂದಿನ ಬೆಲೆ – 40 kg, ಹಿಂದಿನ ಬೆಲೆ- 30 kg ರೂ.

ಇನ್ನು ಇದು ತರಕಾರಿ ಬೆಲೆಯ ಕಥೆಯಾದ್ರೆ, ಹೂಗಳ ಬೆಲೆಯಂತು ಕೇಳುವ ಹಾಗೇ ಇಲ್ಲ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹೂಗಳು ಮಾರ್ಕೆಟ್ ಗೆ ಬರುವುದು ಕಡಿಮೆ.‌ ಇದೀಗಾ ಜನರಿಂದ ಹೂಗಳಿಂದ ಬೇಡಿಕೆ ಇದೆ. ಹೂಗಳ ಬೆಲೆ ಏರಿಕೆಯಾಗಿದೆ ಅಂತ ಹೂವಿನ ವ್ಯಾಪಾರಸ್ತರು ಹೇಳಿದ್ದಾರೆ.

ಇದನ್ನೂ ಓದಿ: ಲಕ್ಷ್ಮಿ ದೇವಿ ಅನುಗ್ರಹಕ್ಕಾಗಿ ಸಂಕ್ರಾಂತಿ ದಿನ ಮಾಡಬೇಕಾದ ಕೆಲಸಗಳು, ದಾನಗಳು ಹೀಗಿವೆ

  • ಸಂಪಿಗೆ: ಇಂದಿನ ಬೆಲೆ – 400 kg, ಹಿಂದಿನ ಬೆಲೆ – 250ರೂ.
  • ಚೆಂಡು ಹೂ: ಇಂದಿನ ಬೆಲೆ50 kg,  ಹಿಂದಿನ ಬೆಲೆ 40ರೂ.
  • ಸೇವಂತಿಗೆ: ಇಂದಿನ ಬೆಲೆ 150 kg, ಹಿಂದಿನ ಬೆಲೆ – 100 ರೂ.
  • ಕಾಕಡ: ಇಂದಿನ ಬೆಲೆ 500 kg, ಹಿಂದಿನ ಬೆಲೆ – 300 kg
  • ಕನಕಾಂಬರ: ಇಂದಿನ ಬೆಲೆ 600 kg, ಹಿಂದಿನ ಬೆಲೆ – 300 kg
  • ಗಣಿಗಲು ಹೂ: ಇಂದಿನ ಬೆಲೆ 300 kg, ಹಿಂದಿನ ಬೆಲೆ – 150
  • ತುಳುಸಿ ಮಾರು: ಇಂದಿನ ಬೆಲೆ50, ಹಿಂದಿನ ಬೆಲೆ ಮಾರು – 20
  • ದವನ: ಇಂದಿನ ಬೆಲೆ50 ರೂ ಕಟ್, ಹಿಂದಿನ ಬೆಲೆ – 20
  • ಕಮಲ ಜೋಡಿ: ಇಂದಿನ ಬೆಲೆ 40 ರೂ
  • ಮಲ್ಲಿಗೆ: ಇಂದಿನ ಬೆಲೆ1600 kg, ಹಿಂದಿನ ಬೆಲೆ – 1000
  • ಗುಲಾಬಿ: ಇಂದಿನ ಬೆಲೆ -240 kg, ಹಿಂದಿನ ಬೆಲೆ – 120

ಇನ್ನು, ಇದು ಹೂವಿನ ಕಥೆಯಾದ್ರೆ ಹಣ್ಣುಗಳ ಬೆಲೆಯು ಏರಿಕೆಯಾಗಿದೆ. ಹಣ್ಣುಗಳು ಹಬ್ಬದ ಸಂದರ್ಭದಲ್ಲಿ ಜಾಸ್ತಿ ಸೇಲ್ ಆಗುತ್ತೆ ಎನ್ನುವ ಕಾರಣಕ್ಕೆ ವ್ಯಾಪಾರಸ್ತರು ಸಾವಿರಾರು ರುಪಾಯಿ ಬಂಡಾವಾಳ ಹೂಡಿಕೆ ಮಾಡಿದ್ದಾರೆ.‌ ಆದ್ರೆ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ಆಗ್ತಿಲ್ಲ ಅಂತ ವ್ಯಾಪರಸ್ಥರು ಹೇಳಿದ್ರು. ಹಾ

  • ಆ್ಯಪಲ್:  ಇಂದಿನ ಬೆಲೆ 120 kg, ಹಿಂದಿನ ಬೆಲೆ – 100
  • ಆರೆಂಜ್ – 50kg – 40ರೂ
  • ದ್ರಾಕ್ಷಿ – 100 kg – 80ರೂ
  • ದಾಳಿಂಬೆ – 180 – 140ರೂ
  • ಸಪೋಟ – 100 – 100ರೂ
  • ಕಿವಿ ಪ್ರೋಟ್ – 100 – 100ರೂ
  • ಅನಾಸಸ್- 50 – 40ರೂ
  • ಮುಸುಂಬಿ – 120 – 125ರೂ
  • ಕಪ್ಪ ದ್ರಾಕ್ಷಿ – 200 kg – 200ರೂ
  • ಬಾಳೆಹಣ್ಣ – 70 kg – 60ರೂ
  • ಕೋವಾ ಕಣ್ಣ – 120 kg – 60ರೂ
  • ಗ್ರೀನ್ ಆ್ಯಪಲ್ – 240 – 300ರೂ
  • ಕಬ್ಬು – ಜೋಡಿ – 100ರೂ

ಇಷ್ಟೋಂದು ಬೆಲೆ ಏರಿಕೆಯಾದ್ರೆ ತರಕಾರಿ, ಹೂ, ಹಣ್ಣುಗಳನ್ನ ಖರೀದಿ ಮಾಡುವುದಾದ್ರು ಹೇಗೆ. ಪ್ರತಿಬಾರಿ ಹಬ್ಬ ಬಂದ್ರೆ ಸಾಕು ತರಕಾರಿಗಳ ಬೆಲೆಯನ್ನ ಕೇಳುವುದಕ್ಕೆ ಆಗೋದಿಲ್ಲ. ಆದ್ರೆ ನಮಗೆ ವಿಧಿಯಿಲ್ಲ. ಹಬ್ಬ ಮಾಡಲೇ ಬೇಕು. ಹೂ ಬೆಲೆ ಜಾಸ್ತಿಯಾದ್ರು ಖರೀದಿ ಮಾಡ್ತಿದಿವಿ ಅಂತ ಗ್ರಾಹಕರು ಹೇಳಿದರು.

ಒಟ್ನಲ್ಲಿ, ಸಂಕ್ರಾಂತಿಗೆ ಇನ್ನು ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಸಧ್ಯ ಸಿಲಿಕಾನ್ ಸಿಟಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಹಬ್ಬದ ಖರೀದಿ ಭಾರಟೆ ಜೋರಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ