ಸರ್ಕಾರಕ್ಕೆ ಹೊಸ ಬೇಡಿಕೆ ಸಲ್ಲಿಸಲು ಮುಂದಾದ ಅರ್ಚಕರು; ದೇಗುಲ ಖರ್ಚಿಗೆ ನಿಗದಿ ಮಾಡಿರುವ ಹಣ ಏರಿಕೆಗೆ ಒತ್ತಾಯ
ರಾಜ್ಯದ ಎ ಗ್ರೇಡ್ ದೇವಸ್ಥಾನಗಳು ದೇವಸ್ಥಾನದಲ್ಲಿ ಹಣವನ್ನ ಖರ್ಷು ಮಾಡಲು, ಮುಜುರಾಯಿ ಇಲಾಖೆ ಹಣವನ್ನ ನಿಗದಿ ಮಾಡಿದೆ. ಆದ್ರೆ ಇದೀಗಾ ನಿಗದಿ ಮಾಡಿರುವ ಹಣ ಸಾಕಗುತ್ತಿಲ್ಲ ಎನ್ನುವ ಕಾರಣಕ್ಕೆ ಸರ್ಕಾರಕ್ಕೆ ಹೊಸದೊಂದು ಮನವಿಯನ್ನ ಸಲ್ಲಿಸೋದಕ್ಕೆ ಅರ್ಚಕರ ಸಂಘ ಮುಂದಾಗಿದೆ.

ಬೆಂಗಳೂರು, ಜ.26: ಮುಜರಾಯಿ ಇಲಾಖೆಯಡಿ ಬರುವ ದೇವಾಲಯದ ಆದಾಯಕ್ಕಿಂತ ಹೆಚ್ಚು ಸಂಬಳ ನೀಡಲಾಗಿದೆ ಎಂಬ ಆರೋಪದಡಿ ಹಿರಿಯ ಅರ್ಚಕ, ಸಾಹಿತಿ ಹಿರೇಮಗಳೂರು ಕಣ್ಣಣ್ (Hiremagalur Kannan) ಅವರಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿತ್ತು. ಈ ವಿಚಾರ ಚರ್ಚೆಯಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯನವರು (Siddaramaiah) ನೋಟಿಸ್ ವಾಪಸ್ ಪಡೆಯುವಂತೆ ತಿಳಿಸಿದ್ದರು. ಸದ್ಯ ಈಗ ಸರ್ಕಾರಕ್ಕೆ ಹೊಸ ಬೇಡಿಕೆ ಸಲ್ಲಿಸಲು ಅರ್ಚಕರು ಮುಂದಾಗಿದ್ದಾರೆ. ಮುಜುರಾಯಿ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳ ಖಾತೆಯಲ್ಲಿರುವ ಹಣವನ್ನ ಬಳಕೆಗೆ ನಿಗದಿ ಮಾಡಲಾಗಿದೆ. ಆದರೆ ಈಗ ನಿಗದಿ ಮಾಡಿರುವ ಹಣವನ್ನ ಹೆಚ್ಚಳ ಮಾಡ್ಬೇಕು ಅಂತ ಅಖಿಲ ಕರ್ನಾಟಕ ಅರ್ಚಕರ ಸಂಘ ಸರ್ಕಾರಕ್ಕೆ ಹೊಸದೊಂದು ಮನವಿಯನ್ನ ಸಲ್ಲಿಸೋದಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ಸದ್ಯ 205 ಎ ಗ್ರೇಡ್ ದೇವಸ್ಥಾನಗಳು, 193 ಬಿ ಗ್ರೇಡ್ ದೇಚಸ್ಥಾನಗಳು, 36 ಸಾವಿರ ಸಿ ಗ್ರೇಡ್ ದೇವಸ್ಥಾನಗಳಿವೆ. ಈ ದೇವಸ್ಥಾನಗಳ ಪೈಕಿ ಎ ಮತ್ತು ಬಿ ಗ್ರೇಡ್ ದೇವಸ್ಥಾನದ ಖಾತೆಯಲ್ಲಿರುವ ಹಣವನ್ನ ಅಭಿವೃದ್ಧಿಕಾರ್ಯಗಳಿಗೆ ಬಳಸಲು ಅವಕಾಶವಿದೆ. ಅಂದ್ರೆ 5 ಲಕ್ಷದವರೆಗೆ ಬಳಸಬಹುದು. ಆದರೆ ಅದಕ್ಕೂ ಮೀರಿದ ಹಣವನ್ನ ಬಳಕೆ ಮಾಡ್ಬೇಕು ಅಂದ್ರೆ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಅಲ್ಲದೇ ಮುಜುರಾಯಿ ಅಧಿಕಾರಿಗಳಿಂದ ಒಪ್ಪಿಗೆ ಪಡೆಯಬೇಕಾಗುತ್ತದೆ. ಮುಜುರಾಯಿ ಇಲಾಖೆ ಒಪ್ಪಿಗೆ ನೀಡಿದ ಬಳಿಕವಷ್ಟೇ ದೇವಸ್ಥಾನದ ಹಣವನ್ನ ಹೆಚ್ಚು ಬಳಕೆ ಮಾಡಬಹುದು. ಈಗಿನ ಸಮಯದಲ್ಲಿ 5 ಲಕ್ಷ ಯಾವುದಕ್ಕೂ ಸಾಧ್ಯವಾಗುತ್ತಿಲ್ಲ. ಖರ್ಚಿನ ಹಣವನ್ನ 5 ಲಕ್ಷದಿಂದ 25 ಲಕ್ಷಕ್ಕೆ ಏರಿಕೆ ಮಾಡ್ಬೇಕು. ಸದ್ಯ ನಿಗದಿ ಮಾಡಿರುವ ಹಣ ಅರ್ಚನೆ, ಪೂಜೆ, ಪ್ರಸಾದಕ್ಕೆ ಸಾಕಾಗುತ್ತಿಲ್ಲ. ಈ ಕುರಿತಾಗಿ ಆರು ತಿಂಗಳ ಹಿಂದೆ ಸರ್ಕಾರಕ್ಕ ಮನವಿ ಸಲ್ಲಿಸಿದ್ವಿ. ಆದರೆ ಯಾವುದೇ ಆ್ಯಕ್ಷನ್ ತೆಗೆದುಕೊಳ್ಳದ ಹಿನ್ನೆಲೆ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಲು ಮುಂದಾಗಿದ್ದೀವಿ ಎಂದು ಅಖಿಲ ಕರ್ನಾಟಕ ಅರ್ಚಕರ ಸಂಘದ ಒಕ್ಕೂಟದ ಕಾರ್ಯಾಧ್ಯಕ್ಷ ಎಸ್ ದೀಕ್ಷಿತ್ ತಿಳಿಸಿದರು.
ಇದನ್ನೂ ಓದಿ: ಹಿರೇಮಗಳೂರು ಕಣ್ಣನ್ ವೇತನ ಬಾಕಿ ಕೇಳಿದ ಪ್ರಕರಣಕ್ಕೆ ಟ್ವಿಸ್ಟ್: ತಹಶೀಲ್ದಾರ್ ತಪ್ಪೆಂದ ಸಿಎಂ ಸಿದ್ದರಾಮಯ್ಯ
ಈ ಬಗ್ಗೆ ಮುಜುರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ಅವರನ್ಮ ಪ್ರಶ್ನಿಸಿದ್ದಕ್ಕೆ, ಇದು ನನ್ನ ಗಮನಕ್ಕೂ ಬಂದಿದೆ. ಅರ್ಚಕರ ಸಭೆ ಮಾಡಿ ಒಂದು ಕ್ರಮ ತೆಗೆದುಕೊಳ್ಳುತ್ತೇನೆ. 25 ಲಕ್ಷದವರೆಗೆ ಏರಿಕೆ ಮಾಡಲು ಕಷ್ಟವಾಗುತ್ತದೆ. ಅವರು ದೇವಸ್ಥಾನಕ್ಕೆ ನಿಗದಿ ಮಾಡಿದ ಹಣಕ್ಕಿಂತ ಹೆಚ್ಚಿಗೆ ಬಳಕೆ ಮಾಡಲು ಇಲಾಖೆಯಿಂದ ಒಪ್ಪಿಗೆ ಪಡೆದು ಖರ್ಚು ಮಾಡಬಹುದು. ಆದರೆ ನಿಗದಿತ ಹಣವನ್ನ ಏರಿಕೆ ಮಾಡಿ ಅಂದ್ರೆ ಯೋಚನೆ ಮಾಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಒಟ್ನಲ್ಲಿ, ಕೋವಿಡ್ ಸಂದರ್ಭದ ಬಳಿಕ ದೇವಸ್ಥಾನದ ಸ್ಥಿತಿಗತಿಗಳು ಬದಲಾಗಿವೆ. ಇವುಗಳನ್ನ ಗಮನದಲ್ಲಿ ಇರಿಸಿಕೊಂಡು ಸಚಿವರು ಕ್ರಮತೆಗೆದುಕೊಳ್ಳಬೇಕು ಅಂತ ಅರ್ಚಕರು ಕೇಳುತ್ತಿದ್ದು, ಸಚಿವರು ಏನು ನಿರ್ಧಾರ ತೆಗೆದುಕೊಳ್ತಾರಂತಾ ಕಾದು ನೋಡ್ಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ



