Bengaluru Crime: ಸುದ್ದಿ ಪ್ರಸಾರ ತಡೆಗೆ ಹಣ ಪಡೆದಿದ್ದ ಆರೋಪ; ಖಾಸಗಿ ಸುದ್ದಿವಾಹಿನಿಯ ಸಿಬ್ಬಂದಿ ಅರೆಸ್ಟ್
ಹೆಣ್ಣೂರು ಪೊಲೀಸರಿಂದ ಆರೋಪಿ ತೀರ್ಥಪ್ರಸಾದ್ ಸೆರೆ ಹಿಡಿಯಲಾಗಿದೆ. ಖಾಸಗಿ ಸುದ್ದಿವಾಹಿನಿ ಸಿಬ್ಬಂದಿ ಆರೋಪಿ ತೀರ್ಥಪ್ರಸಾದ್ ಬಂಧಿಸಲಾಗಿದೆ. ದೂರುದಾರರಿಂದ ಠಾಣೆಗೆ ಆಡಿಯೋ, ವಿಡಿಯೋ ದಾಖಲೆ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು: ನಗರದಲ್ಲಿ ಖಾಸಗಿ ಸುದ್ದಿವಾಹಿನಿಯ ಸಿಬ್ಬಂದಿಯನ್ನು ಸುದ್ದಿ ಪ್ರಸಾರ ತಡೆಗೆ ಹಣ ಪಡೆದಿದ್ದ ಆರೋಪದಲ್ಲಿ ಬಂಧಿಸಲಾಗಿದೆ. ಹೆಣ್ಣೂರು ಠಾಣೆ ಪೊಲೀಸರಿಂದ ತೀರ್ಥಪ್ರಸಾದ್ ಎಂಬಾತನ ಬಂಧನವಾಗಿದೆ. ವ್ಯಕ್ತಿ ಕಾರಿನಲ್ಲಿ ಹಣದ ಕಂತೆಗಳ ಜತೆ ಕುಳಿತಿದ್ದ ವಿಡಿಯೋ ವೈರಲ್ ಆಗಿದೆ. ತೀರ್ಥಪ್ರಸಾದ್‌ಗೆ ಹಣ ನೀಡಿದ್ದವರಿಂದಲೇ ಠಾಣೆಗೆ ದೂರು ನೀಡಲಾಗಿದೆ ಎಂದು ಹೇಳಲಾಗಿದೆ.
ಹೆಣ್ಣೂರು ಪೊಲೀಸರಿಂದ ಆರೋಪಿ ತೀರ್ಥಪ್ರಸಾದ್ ಸೆರೆ ಹಿಡಿಯಲಾಗಿದೆ. ಖಾಸಗಿ ಸುದ್ದಿವಾಹಿನಿ ಸಿಬ್ಬಂದಿ ಆರೋಪಿ ತೀರ್ಥಪ್ರಸಾದ್ ಬಂಧಿಸಲಾಗಿದೆ. ದೂರುದಾರರಿಂದ ಠಾಣೆಗೆ ಆಡಿಯೋ, ವಿಡಿಯೋ ದಾಖಲೆ ಬಿಡುಗಡೆ ಮಾಡಲಾಗಿದೆ. ದಾಖಲೆಗಳನ್ನು ಪರಿಶೀಲಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.
ಒಳಚರಂಡಿ ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು ಒಳಚರಂಡಿ ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಸಂಭವಿಸಿದೆ. ಮಣ್ಣು ಕುಸಿದು ಕಾರ್ಮಿಕ ಧನರಾಜ್ (30) ದುರ್ಮರಣವನ್ನಪ್ಪಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ತುಮಕೂರು: ರಾಗಿತೆನೆ ಬಣವೆಗೆ ದುಷ್ಕರ್ಮಿಗಳಿಂದ ಬೆಂಕಿ ರಾಗಿತೆನೆ ಬಣವೆಗೆ ದುಷ್ಕರ್ಮಿಗಳಿಂದ ಬೆಂಕಿ ಇಟ್ಟ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಾನಿಹಟ್ಟಿ ಗ್ರಾಮದಲ್ಲಿ ನಡೆದಿದೆ. ಒಂದು ಲಕ್ಷ ಬೆಲೆಬಾಳುವ ರಾಗಿತೆನೆ ಬಣವೆ ಸಂಪೂರ್ಣ ಭಸ್ಮವಾಗಿದೆ. ನಾಗಣ್ಣ, ಬಲ್ಲಯ್ಯ, ಶಾರದಮ್ಮ ಎಂಬ ರೈತರಿಗೆ ಸೇರಿದ ಬಣವೆಗಳು ಬೆಂಕಿಗಾಹುತಿ ಆಗಿದೆ. ಸ್ಥಳಕ್ಕೆ ತುರುವೇಕೆರೆ ಶಾಸಕ ಮಸಾಲ ಜಯರಾಮ್ ಭೇಟಿ ನೀಡಿದ್ದಾರೆ. ಸಂತ್ರಸ್ತ ರೈತರಿಗೆ ಪರಿಹಾರ ಕೊಡಿಸೋ ಭರವಸೆ ನೀಡಿದ್ದಾರೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Crime News: ಪತ್ನಿಯನ್ನೇ ಕೊಂದು ಮನೆಯಲ್ಲಿ ಹೂತಿಟ್ಟ ಗಂಡ; ನಾಪತ್ತೆಯಾದ ಪತಿಗಾಗಿ ಪೊಲೀಸರ ಶೋಧಕಾರ್ಯ
ಇದನ್ನೂ ಓದಿ: ಮಿತಿಮೀರಿದ ಮಹಿಳಾ ತಹಶೀಲ್ದಾರ್ ಲಂಚಾವತಾರ, ಕೊನೆಗೂ ಎಸಿಬಿ ಬಲೆಗೆ: ಆದ್ರೆ ಅವರನ್ನ ಬಂಧಿಸದಂತೆ ಮುತ್ತಿಗೆ ಹಾಕಿದ ಜನ!