ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಇದೆಯಂತೆ: ಕ್ಯಾ. ಗಣೇಶ್ ಕಾರ್ಣಿಕ್

| Updated By: preethi shettigar

Updated on: Nov 16, 2021 | 1:00 PM

ಪ್ರಿಯಾಂಕ್ ಖರ್ಗೆಗೂ ಪ್ರಚಾರದ ಹಪಹಪಿ ಇದೆ. ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಇದೆಯಂತೆ. ಪ್ರಿಯಾಂಕ್ ಖರ್ಗೆ ಐಟಿ ಬಿಟಿ ಸಚಿವರಾಗಿದ್ದಾಗ ಬಿಟ್ ಕಾಯಿನ್ ಹಗರಣದಿಂದ ಅವರೂ ಕಪ್ಪು ಹಣ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ ಎಂದು ಹೇಳಿದ್ದಾರೆ.

ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಇದೆಯಂತೆ: ಕ್ಯಾ. ಗಣೇಶ್ ಕಾರ್ಣಿಕ್
ಕ್ಯಾಪ್ಟನ್ ಗಣೇಶ್ ಕಾರ್ಣಿಕ್
Follow us on

ಬೆಂಗಳೂರು: ನಗರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ (Captain Ganesh Karnik) ಸುದ್ದಿ ಗೋಷ್ಠಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಿಟ್ ಕಾಯಿನ್ (Bitcoin) ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, 2016ನೇ ಇಸವಿಯಿಂದ ಬಿಟ್ ಕಾಯಿನ್ ದಂಧೆ ಇತ್ತು ಎಂದು ಕಾಂಗ್ರೆಸ್​ನ ಉಸ್ತುವಾರಿ ಸುರ್ಜೇವಾಲಾ ಪ್ರಾಮಾಣಿಕ ಹೇಳಿಕೆ ಕೊಟ್ಟಿದ್ದಾರೆ. ಆಗ ಕಾಂಗ್ರೆಸ್ ಇತ್ತು, ಯಾಕೆ ವಿಚಾರಣೆ ಮಾಡಲಿಲ್ಲ? ಪ್ರಿಯಾಂಕ್ ಖರ್ಗೆಗೂ ಪ್ರಚಾರದ ಹಪಹಪಿ ಇದೆ. ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಇದೆಯಂತೆ. ಪ್ರಿಯಾಂಕ್ ಖರ್ಗೆ ಐಟಿ ಬಿಟಿ ಸಚಿವರಾಗಿದ್ದಾಗ ಬಿಟ್ ಕಾಯಿನ್ ಹಗರಣದಿಂದ ಅವರೂ ಕಪ್ಪು ಹಣ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ ಎಂದು ಹೇಳಿದ್ದಾರೆ.

ಪ್ರಿಯಾಂಕ್ ಖರ್ಗೆ ತಮ್ಮ ಕಪ್ಪು ಹಣವನ್ನು ಬಿಟ್ ಕಾಯಿನ್​ನಲ್ಲಿ ತೊಡಗಿಸಿದ್ದಾರೆ ಎಂಬ ಆರೋಪ ಇದೆ. ಶ್ರೀಕೃಷ್ಣನನ್ನು ಪ್ರಿಯಾಂಕ್ ಖರ್ಗೆ ಭೇಟಿ ಮಾಡಿದ್ದರು. ಪ್ರಿಯಾಂಕ್ ಖರ್ಗೆ ಐಟಿ-ಬಿಟಿ ಸಚಿವರಾಗಿದ್ದಾಗ ಶ್ರೀಕಿ ಭೇಟಿ ಮಾಡಿದ್ದಾರೆ. ಶ್ರೀಕಿ ಕರೆಸಿ ಬಿಟ್ ಕಾಯಿನ್ ಬಗ್ಗೆ ಚರ್ಚೆ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಶ್ರೀಕಿ ಭೇಟಿ ಮಾಡಿಲ್ಲ ಅಂತ ಹೇಳಲಿ ನೋಡೋಣ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್​ರನ್ನು ಮೂಲೆಗುಂಪು ಮಾಡುತ್ತಿದ್ದಾರೆ: ಗಣೇಶ್ ಕಾರ್ಣಿಕ್
ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್​ರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಇದಕ್ಕಾಗಿ ಬಿಟ್ ಕಾಯಿನ್ ಹಗರಣ ಕೈಗೆತ್ತಿಕೊಂಡಿದ್ದಾರೆ. ಸಿದ್ದರಾಮಯ್ಯ ಯಾವುದೇ ರಾಜ್ಯ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ. ರೈತರ ಸಮಸ್ಯೆ, ಬರ, ಪ್ರವಾಹ ಬಗ್ಗೆ ರಾಜ್ಯ ಸಂಚಾರ ಮಾಡಲಿಲ್ಲ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

ಪೇಜಾವರ ಶ್ರೀಗಳ ವಿರುದ್ಧ ಹಂಸಲೇಖ ಟೀಕೆ ಕೆಟ್ಟ ಚಾಳಿ: ಕ್ಯಾ. ಗಣೇಶ್ ಕಾರ್ಣಿಕ್
ಇಷ್ಟೊಂದು ಕೀಳು ಮಟ್ಟಕ್ಕೆ ಹಂಸಲೇಖ ಇಳಿಯುತ್ತಾರೆ ಅಂದುಕೊಂಡಿರಲಿಲ್ಲ. ಆ ಮೂಲಕ ಹಂಸಲೇಖರಿಗೆ ಪ್ರಚಾರದ ಹಪಹಪಿ ಇದೆ ಎಂಬುವುದು ತಿಳಿದಿದೆ. ಪೇಜಾವರ ಶ್ರೀಗಳ ವಿರುದ್ಧ ಹಂಸಲೇಖ ಟೀಕೆ ಕೆಟ್ಟ ಚಾಳಿ. ಇಡೀ ಹಿಂದೂ ಸಮಾಜ ಹಂಸಲೇಖ‌ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ. ಪೇಜಾವರ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಮೂಲಕ‌ ಹಂಸಲೇಖ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ. ಪುನೀತ್ ರಾಜ್ ಕುಮಾರ್​ರಂತಹ ಸೆಲೆಬ್ರಿಟಿ ಎಲೆಮರೆ ಕಾಯಿಯಾಗಿ ಸೇವೆ ಮಾಡಿದ್ದರು. ಪುನಿತ್ ರಾಜ್ ಕುಮಾರ್ ಅವರ ದೆಸೆಯಿಂದಾದರೂ ಹಂಸಲೇಖರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಇದನ್ನೂ ಓದಿ:
ಬಿಟ್​ಕಾಯಿನ್​ ಪ್ರಕರಣ 2018ರಿಂದಲೂ ಇದೆ ಅಂತಾರೆ, ಯಾಕೆ ಕ್ರಮ ಕೈಗೊಳ್ಳಲಿಲ್ಲ ಅಂತ ಸುರ್ಜೇವಾಲ ಕೇಳಲಿ; ಸಿಎಂ ಬೊಮ್ಮಾಯಿ

Tv9 Digital Live | ಬಿಟ್​ ಕಾಯಿನ್​ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್​ ಕರೆನ್ಸಿ?

Published On - 12:40 pm, Tue, 16 November 21