PSI Recruitment Scam: ನೇಮಕಾತಿಯಲ್ಲಿ ದರ್ಶನ್ ಗೌಡ ಅಕ್ರಮವೆಸಗಿರುವುದು ದೃಢ, FSL ವರದಿಯಲ್ಲಿ ಸತ್ಯ ಬಹಿರಂಗ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 09, 2022 | 8:38 AM

ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಮೋಸ್ಟ್ ಕಾಂಟ್ರುವರ್ಷಿಯಲ್ ವ್ಯಕ್ತಿ ಆರೋಪಿ ದರ್ಶನ್‌ ಗೌಡನನ್ನು ಸಿಐಡಿ ಪೊಲೀಸರು ಜೂನ್ 6ರಂದು ಅರೆಸ್ಟ್‌ ಮಾಡಿದ್ದು, ಎಫ್​ಎಸ್​​ಎಲ್​ ವರದಿ ಮೂಲಕ ದರ್ಶನ್ ಗೌಡ ಅಕ್ರಮವೆಸಗಿರುವುದು ದೃಢವಾಗಿದೆ.

PSI Recruitment Scam: ನೇಮಕಾತಿಯಲ್ಲಿ ದರ್ಶನ್ ಗೌಡ ಅಕ್ರಮವೆಸಗಿರುವುದು ದೃಢ, FSL ವರದಿಯಲ್ಲಿ ಸತ್ಯ ಬಹಿರಂಗ
ದರ್ಶನ್‌ ಗೌಡ
Follow us on

ಬೆಂಗಳೂರು: 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ದರ್ಶನ್ ಗೌಡ ಅಕ್ರಮವೆಸಗಿರುವುದು ದೃಢವಾಗಿದೆ. ಎಫ್​ಎಸ್​​ಎಲ್​ ವರದಿಯಲ್ಲಿ ಅಭ್ಯರ್ಥಿ ದರ್ಶನ್ ಅಕ್ರಮದ ಸತ್ಯ ಬಹಿರಂಗವಾಗಿದ್ದು, ಪರೀಕ್ಷೆಯಲ್ಲಿ ಉತ್ತರ ಬರೆಯದೆ ದರ್ಶನ್ ಗೌಡ ಯಾಂರ್ಕ​ ಬಂದಿದ್ದ. ಪರೀಕ್ಷೆ ದಿನ ಸಂಪೂರ್ಣ ಗೊತ್ತಿದ್ದ ಕೆಲವು ಉತ್ತರ ಮಾತ್ರ ಬರೆದಿದ್ದ. ಉಳಿದ ಜಾಗದಲ್ಲಿ ಹಾಗೆ ಬಿಟ್ಟು ಉತ್ತರ ಪತ್ರಿಕೆ ಕೊಟ್ಟು ಹೋಗಿದ್ದ. ನೇಮಕಾತಿ ವಿಭಾಗದಲ್ಲೇ ಆರೋಪಿಯ ಉತ್ತರ ಪತ್ರಿಕೆ ತಿದ್ದಿದ್ದಾರೆ. ಖಾಲಿ ಉತ್ತರ ಪತ್ರಿಕೆಯನ್ನು ದರ್ಶನ್ ಗೌಡ ಕೊಟ್ಟು ಹೋಗಿದ್ದು, ಬಳಿಕ ಒಎಂಆರ್​ ಶೀಟ್ ನಂಬರ್ ತಿಳಿಸಿದ್ದ. ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುವವರ ಜೊತೆಗೆ ಡೀಲ್ ಮಾಡಿಕೊಂಡಿದ್ದು, ಡೀಲ್​ನಲ್ಲಿ ಓರ್ವ ಮಧ್ಯವರ್ತಿ ಸಹ ಭಾಗಿಯಾಗಿದ್ದ. ಸುಮಾರು 80 ಲಕ್ಷ ಹಣ ನೀಡಿ ದರ್ಶನ್ ಗೌಡ ಆಯ್ಕೆಯಾಗಿದ್ದು, ನೇಮಕಾತಿ ವಿಭಾಗದಲ್ಲಿ ಉತ್ತರ ಪತ್ರಿಕೆ ತಿದ್ದಲಾಗಿತ್ತು. ಬಳಿಕ ಕೀ ಆನ್ಸರ್ ನೋಡಿ ಮತ್ತೆ ಕಾರ್ಬನ್ ಕಾಪಿ ತಿದ್ದಿದ್ದ. ಸದ್ಯ ಎಫ್​ಎಸ್​ಎಲ್ ವರದಿಯಲ್ಲಿ ಅಕ್ರಮವೆಸಗಿರುವುದು ಬಯಲಾಗಿದ್ದು,
ಪ್ರಕರಣ ದಾಖಲಿಸಿಕೊಂಡು ದರ್ಶನ್ ಗೌಡನನ್ನ ಸಿಐಡಿ ಬಂಧಿಸಿದೆ.

ಇದನ್ನೂ ಓದಿ: ಬಿಜೆಪಿ ನಾಯಕರನ್ನು ಸೀಳು ನಾಯಿಗೆ ಹೋಲಿಸಿದ ಸಿದ್ದರಾಮಯ್ಯ: ಗೌಪ್ಯ ಸಭೆಯ ವಿಡಿಯೋ ಬಹಿರಂಗ

ಮೋಸ್ಟ್ ಕಾಂಟ್ರುವರ್ಷಿಯಲ್ ವ್ಯಕ್ತಿ ಆರೋಪಿ ದರ್ಶನ್‌ ಗೌಡ ಬಂಧನ

ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಮೋಸ್ಟ್ ಕಾಂಟ್ರುವರ್ಷಿಯಲ್ ವ್ಯಕ್ತಿ ಆರೋಪಿ ದರ್ಶನ್‌ ಗೌಡನನ್ನು ಸಿಐಡಿ ಪೊಲೀಸರು ಜೂನ್ 6ರಂದು ಅರೆಸ್ಟ್‌ ಮಾಡಿದ್ದರು. ದರ್ಶನ್‌ ಗೌಡ ರಾಮನಗರ ಜಿಲ್ಲೆಯ ಮಾಗಡಿ ಮೂಲದವರು. ಪೊಲೀಸರ ವಿಚಾರಣೆ ವೇಳೆ ದರ್ಶನ್‌ ಗೌಡ ಸಚಿವ ಅಶ್ವತ್ಥ್ ಹೆಸರು ಹೇಳಿದ್ದ. ಸಚಿವರ ಹೆಸರು ಹೇಳಿದ ಬಳಿಕ ಸಿಐಡಿಯವರು ಬಿಟ್ಟುಕಳಿಸಿದ್ದಕ್ಕೆ ಕಾಂಗ್ರೆಸ್​ನವರು ಸಚಿವ ಅಶ್ವತ್ಥ್, ಸಹೋದರ ಸತೀಶ್ ವಿರುದ್ಧ ಆರೋಪಿಸಿದ್ದರು. ದರ್ಶನ್‌ಗೌಡನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದು, ಅಧಿಕೃತವಾಗಿ ಬಂಧಿಸಿದ್ದರು. ಯಲಹಂಕ ನ್ಯೂಟೌನ್ ಕೇಸ್‌ ಸಂಬಂಧ ದರ್ಶನ್‌ ಗೌಡ ಅರೆಸ್ಟ್‌ ಆಗಿದ್ದು, ಹೊಸದಾಗಿ 3 ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.

ವಿಚಾರಣೆ ವೇಳೆ ತಿಳಿದುಬಂದ ಪ್ರಭಾವಿ ಮಂತ್ರಿಯೊಬ್ಬರ ಹೆಸರು

ಅಭ್ಯರ್ಥಿಯ ವಿಚಾರಣೆಯಲ್ಲಿ ಸ್ಫೋಟಕ ಸತ್ಯ ಬಹಿರಂಗವಾಗಿದ್ದು, ಪ್ರಭಾವಿ ಮಂತ್ರಿಯೊಬ್ಬರ ಹೆಸರು ಬಂದಿದೆ. ಬಿಜೆಪಿ ಮಂತ್ರಿಯೊಬ್ಬರ ತಮ್ಮನಿಗೆ 80 ಲಕ್ಷ ನೀಡಿದ್ದ ಬಗ್ಗೆ ಸಿಐಡಿಗೆ ದರ್ಶನ್‌ಗೌಡ ಮಾಹಿತಿ ನೀಡಿದ್ದ. ಮಾಹಿತಿ ಆಧರಿಸಿ ಮಂತ್ರಿ ತಮ್ಮನನ್ನು CID ವಿಚಾರಣೆಗೆ ಕರೆದಿದೆ. ತಕ್ಷಣ ಸಿಐಡಿ ಅಧಿಕಾರಿಗೆ ಕರೆ ಮಾಡಿದ್ದ ಬಿಜೆಪಿ ಪ್ರಭಾವಿ ಸಚಿವ, ಯಾವುದೇ ಕಾರಣಕ್ಕೂ ನನ್ನ ತಮ್ಮನನ್ನು ವಿಚಾರಣೆ ಮಾಡಬೇಡಿ ಎಂದು ಹೇಳಿದ್ದರು. ವಿಚಾರಣೆ ಮಾಡದೇ BJP ಪ್ರಭಾವಿ ಸಚಿವರನ್ನ ಬಿಟ್ಟು ಕಳಿಸಿ ಎಂದಿದ್ದ. ಸಚಿವರ ಫೋನ್‌ ಬಳಿಕ ರಾತ್ರೋರಾತ್ರಿ ಬಿಟ್ಟುಕಳುಹಿಸಲಾಗಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:37 am, Thu, 9 June 22