ಬಿಜೆಪಿ ನಾಯಕರನ್ನು ಸೀಳು ನಾಯಿಗೆ ಹೋಲಿಸಿದ ಸಿದ್ದರಾಮಯ್ಯ: ಗೌಪ್ಯ ಸಭೆಯ ವಿಡಿಯೋ ಬಹಿರಂಗ

ಮುಧೋಳ್ ನಾಯಿಗಳು ಅಂದ ಸಿದ್ದು ಆಪ್ತರು, ಇಲ್ಲ ಸೀಳು ನಾಯಿಗಳ ರೀತಿ ಅಂತಾ ಸಿದ್ದರಾಮಯ್ಯ ಹೇಳುತ್ತಾರೆ. ಸ್ವಪಕ್ಷದ ನಾಯಕರ ವಿರುದ್ದವೂ ಅಸಮಾಧಾನ ವ್ಯಕ್ತಪಡಿಸಿದ್ದು, ಅವರು ಮಾತನಾಡಿದರೆ ನಮ್ಮವರು ಒಬ್ಬರು ಮಾತನಾಡುವುದಿಲ್ಲ.

ಬಿಜೆಪಿ ನಾಯಕರನ್ನು ಸೀಳು ನಾಯಿಗೆ ಹೋಲಿಸಿದ ಸಿದ್ದರಾಮಯ್ಯ: ಗೌಪ್ಯ ಸಭೆಯ ವಿಡಿಯೋ ಬಹಿರಂಗ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jun 09, 2022 | 12:10 PM

ಮೈಸೂರು: ಬಿಜೆಪಿ ನಾಯಕರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸೀಳು ನಾಯಿಗೆ ಹೋಲಿಸಿರುವ ಗೌಪ್ಯ ಸಭೆಯ ವಿಡಿಯೋ ಬಹಿರಂಗವಾಗಿದೆ. ನಗರದ ಟಿಕೆ ಬಡಾವಣೆ ನಿವಾಸದ ಗೌಪ್ಯ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ನಾನು ಒಬ್ಬ ಮಾತನಾಡಿದರೆ 25 ಜನ ನಾಯಿಗಳಂತೆ ಬೀಳುತ್ತಾರೆ. ಮುಧೋಳ್ ನಾಯಿಗಳು ಅಂದ ಸಿದ್ದು ಆಪ್ತರು, ಇಲ್ಲ ಸೀಳು ನಾಯಿಗಳ ರೀತಿ ಅಂತಾ ಸಿದ್ದರಾಮಯ್ಯ ಹೇಳುತ್ತಾರೆ. ಸ್ವಪಕ್ಷದ ನಾಯಕರ ವಿರುದ್ದವೂ ಅಸಮಾಧಾನ ವ್ಯಕ್ತಪಡಿಸಿದ್ದು, ಅವರು ಮಾತನಾಡಿದರೆ ನಮ್ಮವರು ಒಬ್ಬರು ಮಾತನಾಡುವುದಿಲ್ಲ. ಅದೇ ಬಂದಿರುವುದು ತಾಪತ್ರಯವೆಂದು, ಆಪ್ತರ ಮುಂದೆ ತಾನು ಏಕಾಂಗಿ ಅನ್ನೋದನ್ನು ಸಿದ್ದರಾಮಯ್ಯ ತೋಡಿಕೊಂಡಿದ್ದಾರೆ. ನನ್ನ ಕಾಲದ ಸಾಧನೆ ಬಗ್ಗೆ ಪುಸ್ತಕ ಮಾಡಿ ಕೊಟ್ಟಿದ್ದೇನೆ. ಅದನ್ನು ಓದಿ ಮಾತನಾಡುವುದನ್ನು ಹೇಳಿ ಕೊಡಬೇಕಾ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಪ್ರಶ್ನಿಸಿದರು. ಜೆಡಿಎಸ್ ವಿರುದ್ದವೂ ಸಿದ್ದು ವಾಗ್ದಾಳಿ ಮಾಡಿದರು. ಅವರೇನು ಬಿಜೆಪಿನಾ ಸೋಲಿಸಿದ್ದಾರಾ. ದೇಶದಲ್ಲಿ ಬಿಜೆಪಿಯನ್ನು ಸೋಲಿಸಿದ್ದಾರಾ. ತನ್ನ ಅಧಿಕಾರದಲ್ಲಿ ಮಾಡಿದ ಕೆಲಸಗಳ ಬಗ್ಗೆ ಗೌಪ್ಯಸಭೆಯಲ್ಲಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಸಿದ್ದರಾಮಯ್ಯ ತಲೆಕೆಟ್ಟು ಆ ತರಹ ಮಾತಾಡ್ತಾರೆ: ಸೋಮಶೇಖರ್ ರೆಡ್ಡಿ

ನಾಯಿ ವಿಶ್ವಾಸದ ಸಂಕೇತ. ದೇವರ ಸ್ವರೂಪ ಎಂದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿಕೆ ನೀಡಿದರು. ಸಿದ್ದರಾಮಯ್ಯ ಸೀಳು ನಾಯಿ ಅಂತಾ ಹೇಳಿರೋದು ಅವರಿಗೆ ಶೋಭೆ ತರೋದಿಲ್ಲ. ಮುಂದೆ ಸಿದ್ದರಾಮಯ್ಯ ಈ ತರಹ ಮಾತಾಡಬಾರದು. ಮಾಜಿ ಮುಖ್ಯಮಂತ್ರಿಯಾಗಿ ಈ ತರಹ ಮಾತಾಡ್ತಿರೋದು ಸರಿ ಅಲ್ಲ. ಸಿದ್ದರಾಮಯ್ಯ ತಲೆಕೆಟ್ಟು ಆ ತರಹ ಮಾತಾಡ್ತಾರೆ ಅನಸತ್ತೆ. RSS ಬಗ್ಗೆ ಸಿದ್ದರಾಮಯ್ಯ ಮಾತಾಡೋದು ತಪ್ಪು. ಅವರಿಗೆ ಒಳ್ಳೆ ಬುದ್ದಿ ಕೊಡಲಿ. ಸಿದ್ದರಾಮಯ್ಯ ಏಕಾಂಗಿಯಾಗಿ ಹತಾಶೆಯಾಗಿ ಮಾತನಾಡುತ್ತಾರೆ. ಅವರಿಗೆ ಕ್ಷೇತ್ರ ಇಲ್ಲ. ಅಂದ್ರೆ ಕಾಂಗ್ರೆಸ್ ಪಕ್ಷದ ಗತಿ ಏನೂ ಎಂದು ಸೋಮಶೇಖರ್ ರೆಡ್ಡಿ ಹೇಳಿದರು.

ಇದನ್ನೂ ಓದಿ: Friendship: ಸ್ನೇಹವು ಮನಸ್ಸಿನ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು?

ಪಠ್ಯ ಪರಿಷ್ಕರಣೆ ವಿರೋಧಿಸಿ ಇಂದು ಕಾಂಗ್ರೆಸ್ ಧರಣಿ

ಪಠ್ಯಪುಸ್ತಕ ಪರಿಷ್ಕರಸೆ ಗೊಂದಲ ವಿಚಾರವಾಗಿ ಇಂದು ಬೆಳಗ್ಗೆ ೧೦ ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಹೋರಾಟದ ಸ್ವರೂಪ ನೀಡಲು ಕಾಂಗ್ರೆಸ್ ಮುಂದ್ದಾಗಿದ್ದು,  ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಸೇರಿ ಪ್ರಮುಖ ನಾಯಕರು, ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಪಠ್ಯಪುಸ್ತಕ ಪರಿಣ್ಕರಣೆಯಿಂದ ನಾಡಿನ ಗಣ್ಯರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದು, ಪರಿಷ್ಕೃತ ಪಠ್ಯಪುಸ್ತಕ ವಾಪಸ್ ಪಡೆಯುವಂತೆ ಕಾಂಗ್ರೆಸ್ ಆಗ್ರಹಿಸಿದ್ದಾರೆ. ಹಿಂದೆ ಇದ್ದ ಪಠ್ಯಪುಸ್ತಕವನ್ನೇ ವಿದ್ಯಾರ್ಥಿಗಳಿಗೆ ನೀಡುವಂತೆ ಆಗ್ರಹಿಸಿದ್ದು, ಪರಿಷ್ಜೃತ ಪಠ್ಯ ಕೈ ಬಿಡುವಂತೆ ಕೈ ನಾಯಕರ ಒತ್ತಡ ಹೇರುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:06 am, Thu, 9 June 22