ನನ್ನ ಆತ್ಮಸಾಕ್ಷಿಗನುಗುಣವಾಗಿ ಜೆಡಿಎಸ್​​ ಅಭ್ಯರ್ಥಿಗೆ ಮತ ಹಾಕುತ್ತೇನೆ: ಜಿ.ಟಿ.ದೇವೇಗೌಡ

ಇಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ವಿಚಾರವಾಗಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಲು ನಿರ್ಧರಿಸಿರುವುದಾಗಿ ಚಾಮುಂಡೇಶ್ವರಿ ಕ್ಷೇತ್ರದ JDS ಶಾಸಕ ಜಿ.ಟಿ.ದೇವೇಗೌಡ ಟಿವಿ 9ಗೆ ಮಾಹಿತಿ ನೀಡಿದರು.

ನನ್ನ ಆತ್ಮಸಾಕ್ಷಿಗನುಗುಣವಾಗಿ ಜೆಡಿಎಸ್​​ ಅಭ್ಯರ್ಥಿಗೆ ಮತ ಹಾಕುತ್ತೇನೆ: ಜಿ.ಟಿ.ದೇವೇಗೌಡ
ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್​ ಶಾಸಕ ಜಿ.ಟಿ ದೇವೇಗೌಡ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jun 10, 2022 | 7:34 AM

ಮೈಸೂರು: ಇಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಲು ನಿರ್ಧರಿಸಿರುವುದಾಗಿ ಟಿವಿ 9ಗೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್​ ಶಾಸಕ ಜಿ.ಟಿ ದೇವೇಗೌಡ ಮಾಹಿತಿ ನೀಡಿದರು. ನಾನು ಜೆಡಿಎಸ್​ನಿಂದ ಅಧಿಕೃತವಾಗಿ ಆಯ್ಕೆಯಾಗಿದ್ದೇನೆ. ನನ್ನ ಆತ್ಮಸಾಕ್ಷಿಗನುಗುಣವಾಗಿ ಜೆಡಿಎಸ್​​ ಅಭ್ಯರ್ಥಿಗೆ ಮತ ಹಾಕುತ್ತೇನೆ. ಮತ ಹಾಕುವಂತೆ ಕುಪೇಂದ್ರ ರೆಡ್ಡಿ ನನಗೆ ಮನವಿ ಮಾಡಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಹ ಕೇಳಿದ್ದಾರೆ. ಬೆಂಬಲಿಗರು ಮತ್ತು ಕ್ಷೇತದ ಮುಖಂಡರ ಅಭಿಪ್ರಾಯವೂ ಅದೇ ಆಗಿದೆ. ಈ ಎಲ್ಲಾ ಕಾರಣದಿಂದ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುತ್ತೇನೆ. ಬೇರೆ ಯಾವುದೇ ವದಂತಿ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: 777 Charlie Review: ಪ್ರಾಣಿಪ್ರಿಯರನ್ನು ನಗಿಸಿ, ಅಳಿಸುವ ಧರ್ಮ-ಚಾ​ರ್ಲಿಯ ಎಮೋಷನಲ್​ ಜರ್ನಿ; ಇಲ್ಲಿದೆ ವಿಮರ್ಶೆ

ನಿನ್ನೆ ಕಾಂಗ್ರೆಸ್ ಶಾಸಕಾಂಗ ಸಭೆ ಮಾಡಿದ್ದು, ಮತದಾನ ಮಾಡುವ ವಿಧಾನದ ಬಗ್ಗೆ ನಾಯಕರು ವಿವರ ನೀಡಿದ್ದಾರೆ. ಎಲ್ಲಾ ಶಾಸಕರಿಗೂ ಬೆಳಿಗ್ಗೆ 9 ಗಂಟೆಗೆ ವಿಧಾನಸೌಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸೇರುವಂತೆ ಸೂಚನೆ ನೀಡಲಾಗಿದೆ. ಯಾವ ಶಾಸಕರು ಯಾರಿಗೆ ಮತದಾನ ಮಾಡಬೇಕು ಎಂದು ಹೇಳ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಜೈರಾಮ್ ರಮೇಶ್​ಗೆ 46 ಮತಗಳನ್ನು ಯಾವ ಶಾಸಕರು ಮತದಾನ ಮಾಡಬೇಕು ಎಂದು ತಿರ್ಮಾನಿಸಲಾಗಿದೆ. ಮನ್ಸೂರ್ ಖಾನ್​ಗೆ ಯಾರು ಮತದಾನ ಮಾಡಬೇಕು, ಮೊದಲ ಬಾರಿಗೆ ಆಯ್ಕೆಯಾಗಿರುವ ಶಾಸಕರು ಯಾರಿಗೆ ಮತದಾನ ಮಾಡಬೇಕು ಎಂದು ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಬೆಳಿಗ್ಗೆ ಹೇಳುತ್ತೇವೆ ಎಂದು ಕೈ ನಾಯಕರು ಹೇಳಿದ್ದಾರೆ.

ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ನಡೆ ಇನ್ನೂ ನಿಗೂಡವಾಗಿದ್ದು, ಈಗಾಗಲೇ ಜೆಡಿಎಸ್​ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಬಹುತೇಕ ಕಾಂಗ್ರೆಸ್​ನೊಂದಿಗೆ ಗುರುತಿಸಿಕೊಂಡಿರುವ ಶ್ರೀನಿವಾಸಗೌಡ, ರಾಜ್ಯಸಭಾ ಚುನಾಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವುದು ಬಹುತೇಕ ಅನುಮಾನ ಎನ್ನುವಂತ್ತಾಗಿದೆ. ಈವರೆಗೂ ಮಾಧ್ಯಮಗಳ ಸಂಪರ್ಕಕ್ಕೂ  ಶ್ರೀನಿವಾಸಗೌಡ ಸಿಕ್ಕಿಲ್ಲ.

ಒಂಬತ್ತು ಗಂಟೆಗೆ ವಿಧಾನಸೌಧಕ್ಕೆ ಜೆಡಿಎಸ್ ಶಾಸಕರು ತೆರಳಲಿದ್ದು, ನಿನ್ನೆಯಿಂದ ಯಶವಂತಪುರ ಬಳಿಯ ಖಾಸಗಿ ಹೋಟೆಲ್ ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ 27 ದಳಪತಿಗಳು ವಾಸ್ತವ್ಯ ಹೂಡಿದ್ದರು. ಹೋಟೆಲ್​ನಿಂದ ಎಲ್ಲಾ ಶಾಸಕರು ಒಟ್ಟಿಗೆ ಬಸ್ನಲ್ಲಿ ತರಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಶಾಸಕರಾದ ಎ.ಟಿ ರಾಮಸ್ವಾಮಿ, ಜಿ.ಟಿ ದೇವೇಗೌಡ, ಶಿವಲಿಂಗೇಗೌಡ ಮನೆಯಿಂದ ನೇರವಾಗಿ ವಿಧಾಸೌಧಕ್ಕೆ ಬಂದು ಮತದಾನ ಮಾಡಲಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿಗೆ  ಮೂವರು ಶಾಸಕರು ಮಾಹಿತಿ ನೀಡಿದ್ದಾರೆ. ರಾತ್ರಿಯೇ ಬೆಂಗಳೂರಿಗೆ ಗುಬ್ಬಿ ಶಾಸಕ ಎಸ್​.ಆರ್ ಶ್ರೀನಿವಾಸ್ ತೆರಳಿದ್ದು,​​ ಇಂದು 10:30 ಕ್ಕೆ ವಿಧಾನಸೌದಕ್ಕೆ ಆಗಮಿಸಲಿದ್ದಾರೆ. ಜೆಡಿಎಸ್​ಗೆ ಮತದಾನ ಮಾಡುವುದಾಗಿ ಟಿವಿ 9ಗೆ ಮಾಹಿತಿ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada