ಪಿಎಸ್‌ಐ ನೇಮಕಾತಿ ಹಗರಣ: ನ್ಯಾಯಾಂಗ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ: ಜಿ ಪರಮೇಶ್ವರ
ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣವನ್ನು ನ್ಯಾಯಾಂಗ ತನಿಖೆಗೆ ನೀಡಿದ್ದೇವೆ. ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರನ್ನು ನೇಮಕ ಮಾಡಲಾಗಿದ್ದು, ಏಕ ಸದಸ್ಯತ್ವ ಸಮಿತಿ ತನಿಖೆ ನಡೆಸಲಿದೆ. ನ್ಯಾಯಾಂಗ ತನಿಖೆ ಆಗಬೇಕು ಎಂದು ಹಿಂದೆ ನಾವೇ ಹೇಳಿದ್ದೇವು. ಸತ್ಯಾಸತ್ಯತೆಗಳನ್ನು ಹೊರಗೆ ತರಬೇಕು ಎಂದು ಕೊಟ್ಟಿದ್ದೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದರು.
ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣವನ್ನು (PSI Recruitment Scam) ನ್ಯಾಯಾಂಗ ತನಿಖೆಗೆ ನೀಡಿದ್ದೇವೆ. ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರನ್ನು ನೇಮಕ ಮಾಡಲಾಗಿದ್ದು, ಏಕ ಸದಸ್ಯತ್ವ ಸಮಿತಿ ತನಿಖೆ ನಡೆಸಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ (G Parameshwara) ಅವರು ಹೇಳಿದರು. ನ್ಯಾಯಾಂಗ ತನಿಖೆ (Judicial Commission) ಆಗಬೇಕು ಎಂದು ಹಿಂದೆ ನಾವೇ ಹೇಳಿದ್ದೇವು. ಸತ್ಯಾಸತ್ಯತೆಗಳನ್ನು ಹೊರಗೆ ತರಬೇಕು ಎಂದು ಕೊಟ್ಟಿದ್ದೇವೆ ಎಂದು ತನಿಖೆ ಬೇರೆ ಮಾಡುತ್ತೇವೆ, ನೇಮಕಾತಿಯ ಪ್ರಕ್ರಿಯೆ ಬೇರೆ ಮಾಡುತ್ತೇವೆ. ಅದಕ್ಕೂ ಇದಕ್ಕೂ ತಾಳೆ ಮಾಡಲು ಹೋಗಲ್ಲ. ಅದನ್ನು ಟೈಅಪ್ ಮಾಡಿಕೊಂಡರೆ ನೇಮಕಾತಿ ಮಾಡಲು ಆಗಲ್ಲ ಎಂದರು.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇನ್ನೊಂದು ನೇಮಕಾತಿ ಆಗಬೇಕು. 400 ಹುದ್ದೆಗಳು ಖಾಲಿ ಇವೆ. ಅವುಗಳನ್ನು ನೇಮಕ ಮಾಡಬೇಕೆಂದರೂ ಈ ಪ್ರಕರಣ ಇತ್ಯರ್ಥ ಆಗಬೇಕು. ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ವಿಚಾರವಾಗಿ ಮಾತನಾಡಿದ ಪರಮೇಶ್ವರ ಅವರ ಇಲಾಖೆ, ನಮ್ಮ ಇಲಾಖೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದೇವೆ. ಇಲಾಖೆಗಳ ಮಧ್ಯ ಸಮನ್ವಯ ಇರಬೇಕಲ್ವಾ. ಅದಕ್ಕೆ ಚರ್ಚೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಕರ್ನಾಟಕ ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ
‘ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ’ ಎಂಬ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಬಿ.ಕೆ.ಹರಿಪ್ರಸಾದ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಈ ವಿಚಾರದಲ್ಲಿ ನನಗೆ ಏನೂ ಗೊತ್ತಿಲ್ಲ. ಮುಖ್ಯಮಂತ್ರಿಗಳು ಸಮರ್ಥರಿದ್ದಾರೆ, ಅವರೇ ಉತ್ತರಿಸುತ್ತಾರೆ ಎಂದು ಜಾರಿಕೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Sat, 22 July 23