ಇಡೀ ದೇವಸ್ಥಾನದ ಶುದ್ದಿಕರಣ; ಇಂದು ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ಭಕ್ತರಿಗಿಲ್ಲ ದರ್ಶನ

| Updated By: ಆಯೇಷಾ ಬಾನು

Updated on: Sep 24, 2024 | 7:06 AM

ತಿರುಪತಿ ಲಡ್ಡುವಿನಲ್ಲಿ‌ ಮಾಂಸದ ಕೊಬ್ಬಿನ್ನ ಬಳಕೆ‌ ಮಾಡಿಕೊಂಡಿದ್ದಾರೆ ಎನ್ನುವ ವಿವಾದದ ಬೆನ್ನಲ್ಲೆ ನಿನ್ನೆ ತಿರುಪತಿಯಲ್ಲಿ ಶುದ್ದಿಕಾರ್ಯ ನಡೆದಿತ್ತು. ಅದರಂತೆ‌ ಇಂದು ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ಶುದ್ಧ ಕಾರ್ಯ ನಡೆಯಲಿದೆ. ಇಂದು ಭಕ್ತರಿಗೆ ದೇವರ ದರ್ಶನಕ್ಕೆ ಬ್ರೇಕ್ ಹಾಕಿ ಶುದ್ಧ ಕಾರ್ಯ ನಡೆಸಲು ಸಿದ್ಧತೆ ನಡೆದಿದೆ.

ಇಡೀ ದೇವಸ್ಥಾನದ ಶುದ್ದಿಕರಣ; ಇಂದು ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ಭಕ್ತರಿಗಿಲ್ಲ ದರ್ಶನ
ಬೆಂಗಳೂರು ಟಿಟಿಡಿ ದೇವಸ್ಥಾನ
Follow us on

ಬೆಂಗಳೂರು, ಸೆ.24: ತಿರುಪತಿ ಲಡ್ಡುವಿನಲ್ಲಿ (Tirupati Laddu) ಮಾಂಸದ ಕೊಬ್ಬನ್ನ ಬಳಕೆ ಮಾಡಲಾಗಿದೆ ಎನ್ನುವ ಆರೋಪದ ಹಿನ್ನೆಲೆ ನಿನ್ನೆ ಆಂಧ್ರದ ತಿರುಪತಿ ಟಿಟಿಡಿ ದೇವಸ್ಥಾನದಲ್ಲಿ (Bengaluru TTD Temple) ಶುದ್ದೀಕರಣ‌ ಮಾಡಲಾಗಿದೆ.‌ ಅದರಂತೆ‌ ಇಂದು ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ಶುದ್ದಿಕರಣ ನಡೆಯಲಿದ್ದು, ಇಂದು ಭಕ್ತದಿಗಳಿಗೆ ದೇವರ ದರ್ಶನಕ್ಕೆ ಬ್ರೇಕ್‌ ಹಾಕಲಾಗಿದೆ.

ತಿರುಪತಿ ಲಡ್ಡುವಿನಲ್ಲಿ ಮಾಂಸದ ಕೊಬ್ಬು ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ವಿವಾದ ಹಿನ್ನೆಲೆ ಸಧ್ಯ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ದಕ್ಕೆಯಾಗಿದೆ.‌ ಇದನ್ನ ಕೊಂಚಮಟ್ಟಿಗಾದ್ರು ಸರಿಪಡಿಸುವ ಸಲುವಾಗಿ ನಿನ್ನೆ ತಿರುಪತಿಯಲ್ಲಿ ಶಾಂತಿ ಹೋಮ ಮಾಡಿ ಪಂಚಗವ್ಯ ಸಂಪೋಕ್ಷಣೆ ಮಾಡಲಾಗಿದೆ.‌ ಅದರಂತೆ ಇಂದು ಬೆಂಗಳೂರು ನಗರದ ಟಿಟಿಡಿ ದೇವಸ್ಥಾನದಲ್ಲೂ ಶುದ್ಧೀಕರಣಕ್ಕೆ ಅಣಿ ಮಾಡಿದ್ದು, ಇಂದು ಬೆಳ್ಳಗ್ಗೆಯಿಂದ ಆರಂಭವಾಗಲಿದೆ. ಇನ್ನು ಇಂದು ಶುದ್ದೀಕರಣ ಮಾಡಿ ಇದೇ ಶುಕ್ರವಾರದಿಂದ ಭಾನುವಾರದವರೆಗೂ ಪವಿತ್ರೋತ್ಸವ ಮಾಡಲಾಗುತ್ತಿದೆ. ಈ ಪವಿತ್ರತ್ರೋತ್ಸೋವಕ್ಕೆ ತಿರುಪತಿಯಿಂದಲೇ ಅರ್ಚಕರುಗಳು ಬರಲಿದ್ದು, ಟಿಟಿಡಿ ದೇವಸ್ಥಾನವನ್ನ ಸಂಪೂರ್ಣವಾಗಿ ಶುದ್ದೀಕರಸಿ, ವಿಶೇಷ ಪೂಜೆಗಳು ನೆರೆವೇರಿಸಲಾಗುತ್ತಿದೆ. ಇನ್ನು ಈ ಪವಿತ್ರೋತ್ಸವನ್ನು ಪ್ರತಿವರ್ಷ ಶ್ರಾವಣ ಶನಿವಾರದ ಸಂದರ್ಭದಲ್ಲಿ ಮಾಡಲಾಗುತ್ತಿತ್ತು. ಆದರೆ ಈಗ ಲಡ್ಡು ವಿವಾದ ಕಂಡುಬಂದ ಹಿನ್ನೆಲೆ ಶುದ್ದಿಕಾರ್ಯಕ್ಕೆ ಅಣಿ ಮಾಡಲಾಗಿದೆ.

ಇದನ್ನೂ ಓದಿ:ತಿರುಪತಿ ಲಡ್ಡು ವಿವಾದ ಬೆನ್ನಲ್ಲೇ ಕರ್ನಾಟಕದಲ್ಲಿ ಆಪರೇಷನ್ ಗೀ ಆರಂಭ!

ಮತ್ತೊಂದೆಡೆ ಮುಜುರಾಯಿ ದೇವಸ್ಥಾನಗಳ ಮೇಲೂ ಈ ಎಫೆಕ್ಟ್ ಬೀರಿದ್ದು,‌ ಮುಜುರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ದೇವಸ್ಥಾನಗಳಲ್ಲಿ ಇನ್ಮುಂದೆ ಫುಡ್ ಟೆಸ್ಟಿಂಗ್ ಕಡ್ಡಾಯ ಮಾಡಲಾಗಿದೆ. ಸಧ್ಯ ಮುಜುರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 30 ಸಾವಿರ ದೇವಸ್ಥಾನಗಳಿದ್ದು, ಪ್ರಸಾದವನ್ನ ದೇವಸ್ಥಾನಗಳಲ್ಲಿ ತಯಾರಿ ಮಾಡಲಾಗುತ್ತಿದೆ. ಈ ಪ್ರಸಾದವನ್ನ ಇಲಾಖೆಯ ಅಧಿಕಾರಿ ತಿಂಗಳಿಗೊಮ್ಮೆ ಟೆಸ್ಟಿಂಗ್ ಮಾಡಿಸುತ್ತಿದ್ರು. ಆದ್ರೀಗಾ ತಿರುಪತಿ ಲಾಡು ವಿವಾದದ ನಂತರ ಮುಜುರಾಯಿ ಇಲಾಖೆ ಅಲರ್ಟ್ ಆಗಿದ್ದು, ವಾರಕ್ಕೆ ಎರಡು ಬಾರಿ ಫುಡ್ ಟೆಸ್ಟಿಂಗ್ ಕಡ್ಡಾಯ ಮಾಡಲಾಗಿದೆ.

ಇನ್ನು, ತಿರುಪತಿ ದೇವಸ್ಥಾನ ಅಂದ್ರೆ ಹಿಂದೂಗಳ ಆರಾಧ್ಯಾ ದೈವ‌‌ ಶ್ರೀನಿವಾಸ ನೆಲೆಸಿರುವ ಸ್ಥಳ. ಇಲ್ಲಿಗೆ‌ ಒಂದು ಬಾರಿ ಹೋಗಿ ಬಂದ್ರೆ ನಮ್ಮ ಕರ್ಮಗಳು ಕಳೆಯುತ್ವೆ ಎನ್ನುವುದು ನಂಬಿಕೆ.‌ಅಲ್ಲದೆ ಎಷ್ಟೋ‌ ಭಕ್ತಾದಿಗಳು ಭಕ್ತಿ ಭಾವದಿಂದ ಆರಾಧಿಸುತ್ತಾರೆ. ಹೀಗಿರುವಾಗ ಲಡ್ಡುವಿನಲ್ಲಿ ಮಾಂಸದ ಕೊಬ್ಬನ್ನ‌ ಬಳಕೆ ಮಾಡಿರುವುದನ್ಮ ಕೇಳಿ‌ ನಮ್ಮ‌ ಮನಸ್ಸಿಗೆ ಘಾಸಿಯಾಗಿದೆ. ಇದೀಗಾ ಶುದ್ಧೀಕರಣ ಮಾಡ್ತಿದ್ದಾರೆ. ಆದ್ರೆ ಭಕ್ತಾದಿಗಳ ನಂಬಿಕೆಯೇ ಹುಸಿಯಾಗಿದೆ.

ಒಟ್ನಲ್ಲಿ, ತಿರುಪತಿ ಲಾಡ್ಡು ವಿವಾದ ಸಾಕಷ್ಟು ಬೆಳವಣಿಗೆಗೆ ಕಾರಣವಾಗುತ್ತಿದ್ದು, ಲಡ್ಡು ಬಗ್ಗೆ ಸರಿಯಾಗಿ ತನಿಖೆಯಾಗುವ ವರೆಗೂ ಭಕ್ತಾದಿಗಳು ಲಡ್ಡು ತಿನ್ನೋದೆ ಅಂತಿದ್ದು, ಮುಂದಿನ ದಿನಗಳಲ್ಲಿ ಏನೆಲ್ಲಾ ಬೆಳವಣಿಗೆಗಳು ಆಗುತ್ತೆ ಅಂತ ಕಾದುನೋಡ್ಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ