AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಕೆಆರ್ ಮಾರುಕಟ್ಟೆಯಲ್ಲಿ ಮಾಯವಾದ ಸ್ವಚ್ಚತೆ; ಕಸ ಬಿದ್ದ ಜಾಗದಲ್ಲೆ ದಿನ ಬಳಕೆ ತರಕಾರಿ, ಸೊಪ್ಪು ಮಾರಾಟ

ರಾಜಧಾನಿ ಬೆಂಗಳೂರಿನ ಹೃದಯಭಾಗವಾದ ಕೆಆರ್ ಮಾರುಕಟ್ಟೆ ಸ್ಥಳಗಳಲ್ಲಿ ಸ್ವಚ್ಚತೆ ಮಾಯವಾಗಿದ್ದು, ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನ ಬಿಬಿಎಂಪಿ‌ ದಿನಕ್ಕೆ ಒಂದು ಬಾರಿ‌ ಮಾತ್ರ ಸ್ವಚ್ಚಗೊಳಿಸುತ್ತಿದೆ. ಅಸ್ವಚ್ಚ ಇರುವ ಜಾಗದಲ್ಲೆ ದಿನ ಬಳಕೆ ತರಕಾರಿ ಮಾರಾಟ, ಇದರಿಂದ ರೋಗ ಹರಡುವ ಭಯದಲ್ಲಿ ಸಾರ್ವಜನಿಕರಿದ್ದರೆ, ಮತ್ತೊಂದೆಡೆಗೆ ಗಾಂಧೀಜಿ ‌ಜಯಂತಿಗೆ ಮಾತ್ರ ಸೀಮಿತವಾಯ್ತಾ ಸ್ವಚ್ಚತೆ ಎನ್ನುವಂತಾಗಿದೆ.

ಬೆಂಗಳೂರು: ಕೆಆರ್ ಮಾರುಕಟ್ಟೆಯಲ್ಲಿ ಮಾಯವಾದ ಸ್ವಚ್ಚತೆ; ಕಸ ಬಿದ್ದ ಜಾಗದಲ್ಲೆ ದಿನ ಬಳಕೆ ತರಕಾರಿ, ಸೊಪ್ಪು ಮಾರಾಟ
ಕೆಆರ್ ಮಾರುಕಟ್ಟೆಯಲ್ಲಿ ಮಾಯವಾದ ಸ್ವಚ್ಚತೆ
Vinay Kashappanavar
| Updated By: ಕಿರಣ್ ಹನುಮಂತ್​ ಮಾದಾರ್|

Updated on: Oct 04, 2024 | 10:38 PM

Share

ಬೆಂಗಳೂರು, ಅ.04: ಸಿಲಿಕಾನ್ ಸಿಟಿ ಬೆಂಗಳೂರಿನ ಹೃದಯ ಭಾಗವಾದ ಕೆಆರ್​ ಮಾರ್ಕೆಟ್‌(KR Market)ಗೆ ತರಕಾರಿ, ಸೊಪ್ಪು ಖರೀದಿಗೆ ಪ್ರತಿನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ. ಅತ್ತ ಸಿಟಿಯ ಅಕ್ಕ-ಪಕ್ಕದ ರೈತರು ವಾಹನಗಳಲ್ಲಿ ಬಂದು ಸೊಪ್ಪು ಮಾರಾಟ ಮಾಡುತ್ತಾರೆ. ಮಾರಾಟ ಆಗದೆ ಇದ್ದಲ್ಲಿ ಅದನ್ನೆಲ್ಲ ಅಲ್ಲೆ ಬಿಸಾಕಿ ಹೋಗುತ್ತಾರೆ. ಇದರಿಂದಾಗಿ ಕೊಳೆತು ಕಸವಾಗುತ್ತೆ. ಆದರೆ, ಈ ಕಸ ಎತ್ತದೆ ಪಾಲಿಕೆ‌ ನಿರ್ಲಕ್ಷದಿಂದಾಗಿ ಎಲ್ಲಿ ನೋಡಿದರೂ ಕಸ ಸಿಗುತ್ತದೆ. ಪರಿಣಾಮ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ದುಸ್ಥಿತಿ ಎದುರಾಗಿದೆ.  ಜೊತೆಗೆ ಕಸ ಬಿದ್ದ ಜಾಗದಲ್ಲೆ ದಿನ ಬಳಕೆ ತರಕಾರಿ ಸೊಪ್ಪು ಮಾರಾಟ ಮಾಡುತ್ತಾರೆ. ಇದರಿಂದ ರೋಗ ಹರಡುವ ಭಯ ಸೃಷ್ಟಿಯಾಗಿದ್ದು, ಸಾರ್ವಜನಿಕರು ಪಾಲಿಕೆ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇನ್ನು ನಿನ್ನೆ ಮಾರ್ಕೆಟ್‌ನಲ್ಲಿ ಕಮೀಷನರ್ ರೌಂಡ್ಸ್ ಹೊಡೆದು ಸ್ವಚ್ಚತೆ ಪಾಠ ಹೇಳಿದ್ದಾರೆ. ಇವತ್ತು ನೋಡಿದರೆ ಮಾರ್ಕೇಟ್ ನಲ್ಲಿ ಯಥಾ ಸ್ಥಿತಿ ಇದೆ. ಗಾಂಧಿ ಜಯಂತಿಗೆ ಮಾತ್ರ ಸ್ವಚ್ಚತೆ ಪಾಠ ಸೀಮಿತವಾಯ್ತಾ ಎನ್ನುವಂತಾಗಿದ್ದು, ಕಸ ಎತ್ತುವ ಪಾಲಿಕೆ ಸಿಬ್ಬಂದಿಗೆ ಕಸ ಎತ್ತಲು ಹ್ಯಾಂಡ್ ಗ್ಲೌಸ್, ಮಾಸ್ಕ್ ಕೊಡಬೇಕು. ಆದರೆ, ಪಾಲಿಕೆ ಕೊಡದ ಕಾರಣ ಅವರು ಕೆಲಸ ಮಾಡುವುದನ್ನ ನೋಡಿದರೆ ನಮಗೂ ಬೇಸರವಾಗುತ್ತೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರಿಗರೇ ಎಚ್ಚರ! ಕೊತ್ತಂಬರಿ, ಕರಿಬೇವಿನ ಸೊಪ್ಪು ತಿನ್ನುವ ಮುನ್ನ ಹುಷಾರ್​!

ಒಟ್ಟಿನಲ್ಲಿ ಪಾಲಿಕೆ ನಿರ್ಲಕ್ಷ್ಯದಿಂದಾಗಿ ಕೆ ಆರ್ ಮಾರ್ಕೆಟ್ ರೋಗ ರೋಜಿನಗಳನ್ನ ಹರಡುವ ಸ್ಥಾನದಂತಾಗಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮಾರ್ಕೆಟ್‌ನ್ನ ಸ್ವಚ್ಚಗೊಳಿಸುವ ಮೂಲಕ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಅನಕೂಲ ಮಾಡಿ ಕೊಡುತ್ತಾರೋ, ಇಲ್ಲವೋ ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ