ಬೆಂಗಳೂರು: ಪೋಷಕರನ್ನ ಸೆಳೆಯೋಕೆ ಖಾಸಗಿ ಶಾಲೆಗಳಿಂದ ಆಫರ್ ಅಸ್ತ್ರ! 6 ತಿಂಗಳ ಮೊದಲೆ ಮಕ್ಕಳ ದಾಖಲಾತಿಗೆ ಸರ್ಕ​ಸ್​

ಆಫರ್ 30%, 50% ಆಫರ್. ಇದು ದಸರಾ ದೀಪಾವಳಿ ಆಫರ್ ಎಂದು ಗೊಂದಲ ಆಗಬೇಡಿ. ಇದು ಖಾಸಗಿ ಶಾಲೆಗಳಿಂದ ಶುರುವಾಗಿರುವ ಭರ್ಜರಿ ಆಫರ್. ಈಗಾಗಲೇ ರಿಜಿಸ್ಟರ್ ಮಾಡಿ ಆಫರ್ ಪಡೆಯರೀ ಎನ್ನುತ್ತಿರುವ ಶಾಲೆಗಳು. ಹೌದು, ಇದು ಮಕ್ಕಳ ದಾಖಲಾತಿಗೆ 6 ತಿಂಗಳ ಮುಂಚಿತವಾಗಿಯೇ ಶುರುವಾಗಿರುವ ಆಫರ್. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಬೆಂಗಳೂರು: ಪೋಷಕರನ್ನ ಸೆಳೆಯೋಕೆ ಖಾಸಗಿ ಶಾಲೆಗಳಿಂದ ಆಫರ್ ಅಸ್ತ್ರ! 6 ತಿಂಗಳ ಮೊದಲೆ ಮಕ್ಕಳ ದಾಖಲಾತಿಗೆ ಸರ್ಕ​ಸ್​
ಖಾಸಗಿ ಶಾಲೆ
Follow us
Vinay Kashappanavar
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 04, 2024 | 10:14 PM

ಬೆಂಗಳೂರು, ಅ.04: ಪ್ರತಿವರ್ಷ ಮಕ್ಕಳ ಶೈಕ್ಷಣಿಕ ದಾಖಲಾತಿ ಮಾರ್ಚ್​ನಲ್ಲಿ ಶುರುವಾಗುತ್ತದೆ. ಇನ್ನು ಕೆಲವು ಖಾಸಗಿ ಶಾಲೆಗಳು ಜನವರಿಯಲ್ಲಿಯೇ ಮಾಡುತ್ತವೆ. ಆದ್ರೆ, ಈಗ 6 ತಿಂಗಳ ಮೊದಲೆ ಮಕ್ಕಳ ದಾಖಲಾತಿಗೆ ಖಾಸಗಿ ಶಾಲೆಗಳು ಮುಂದಾಗಿವೆ. ಹೌದು, 2025ನೇ ಶೈಕ್ಷಣಿಕ ಪ್ರವೇಶಕ್ಕೆ ಇವಾಗಿನಿಂದಲೇ ಬೆಂಗಳೂರಿನ(Bengaluru) ಕೆಲವು ಪ್ರತಿಷ್ಟಿತ ಶಾಲೆಗಳು, ಪ್ರವೇಶ ಶುಲ್ಕ, ಸ್ಕಾಲರ್ ಶಿಪ್, ಸೇರಿ ವಿವಿಧ ಬಗೆಯ ಆಫರ್ ಕೊಟ್ಟು ಪೋಷಕರನ್ನ ಸೆಳೆಯುತ್ತಿವೆ. ಈಗಾಗಲೇ ದಾಖಲಾತಿ ಮಾಡಿ 30%, 50% ಶುಲ್ಕ ವಿನಾಯತಿ ಕೊಡುತ್ತೆವೆ ಎಂದು ಆಫರ್ ಶುರು ಮಾಡಿಕೊಂಡಿವೆ.

ಶಿಕ್ಷಣ ಇಲಾಖೆಯ ನಿಗದಿತ ದಿನಾಂಕಕ್ಕೆ ಮುಂಚಿತವಾಗಿಯೇ ಪ್ರವೇಶ ಪ್ರಕ್ರಿಯೆ ಆರಂಭ ಮಾಡಿಕೊಂಡಿರುವ ಕೆಲವು ಖಾಸಗಿ ಶಾಲೆಗಳು. ಈಗಲೇ ರಿಜಿಸ್ಟರ್ ಮಾಡಿಕೊಂಡು ವಿವಿಧ ಸೌಲಭ್ಯಗಳನ್ನ ಪಡೆಯಿರಿ ಎಂದು ಪೋಷಕರಿಗೆ ಆಮಿಷ ಒಡ್ಡುತ್ತಿವೆ. ಈಗಲೇ ನೋಂದಣಿ ಮಾಡಿಸಿದರೆ 10 ಸಾವಿರದಿಂದ  25000 ಸಾವಿರ ರಿಯಾಯಿತಿ ಎಂದು ಆಫರ್ ನೀಡಿ ಪೋಷಕರನ್ನ ಸೆಳೆಯೋಕೆ ಆಫರ್ ಅಸ್ತ್ರ ಬಳಸುತ್ತಿವೆ.

ಇದನ್ನೂ ಓದಿ:ಬೀದರ್: ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ಹಲ್ಲೆ ಆರೋಪ, ಖಾಸಗಿ ಶಾಲೆ ಶಿಕ್ಷಕ ಅರೆಸ್ಟ್

ಖಾಸಗಿ ಶಾಲೆಗಳಿಂದ ಆಫರ್?

  • ಈಗಲೇ ನೋಂದಣಿ ಮಾಡಿದವರಿಗೆ ಶುಲ್ಕದಲ್ಲಿ ರಿಯಾಯಿತಿ
  • 10000-25000 ಸಾವಿರದವರೆಗೂ ರಿಯಾಯತಿ
  • 50% ಪರ್ಸೆಂಟ್ ಫೀಸ್ ಆಫರ್
  • ಸ್ಕಾಲರ್ ಶಿಪ್ ಜಾಸ್ತಿ ಕೊಡಿಸ್ತೇವೆ
  • ಬೇರೆ ಸ್ಕೂಲ್ನಲ್ಲಿ ಓದುತಿದ್ದರೇ ಉಚಿತ ಅಡ್ಮಿಷನ್ ಕೊಡ್ತೇವೆ.
  • ನಿರ್ವಹಣೆ ಶುಲ್ಕ ಉಚಿತ ಮಾಡ್ತೇವೆ.
  • ಒಂದು ವರ್ಷದ ಫೀಸ್ ಫ್ರೀ ಮಾಡ್ತೇವೆ

ಅರ್ಲಿ ಬರ್ಡ್ ಆಫರ್ ಕೊಡಲು ಕಾರಣ ಏನು?

  • ಪ್ರತಿ ವರ್ಷವೂ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ.
  • ಹೊಸ ಶಾಲೆಗಳ ಅನುಮತಿಯಿಂದ ಪೈಪೋಟಿ ಹೆಚ್ಚು.
  • ಕೆಲವು ಶಾಲೆಗಳಿಗೆ ಬೇಡಿಕೆ ಕಮ್ಮಿಯಾಗಿದೆ… ಹಾಗಾಗಿ ಬೇಡಿಕೆ ಉಳಿಸಿಕೊಳ್ಳುವ ಯತ್ನ.
  • ಹೆಚ್ಚು ಹೆಚ್ಚು ಶಾಲೆಗಳು ತೆರೆಯುವುದರಿಂದ ಮಕ್ಕಳು ಹಂಚಿಕೆ ಆಗ್ತಿದ್ದಾರೆ.
  • ಇದರಿಂದ ಕೆಲವು ಶಾಲೆಗಳಲ್ಲಿ ಮಕ್ಕಳ ಅಡ್ಮಿಷನ್ ಕುಸಿದಿದೆ.‘
  • ದಾಖಲಾತಿ ಹೆಚ್ಚಿಸಿಕೊಳ್ಳಲು ಆಫರ್.
  • ಶಾಲೆಗಳ ಮೇಲೆ ದೊಡ್ಡ ಬಂಡವಾಳ ಹಾಕಿರ್ತಾರೆ.
  • ಆದಾಯ ಮತ್ತು ನಿರ್ವಹಣೆ ಸವಾಲಾಗಿರುತ್ತದೆ.‘
  • ಆಫರ್ ಕೊಟ್ಟು ಪೋಷಕರನ್ನ ಸೆಳೆಯುವ ಯತ್ನ.
  • ರಿಜಿಸ್ಟರ್ ಮಾಡ್ಕೊಂಡ್ರೆ ದಾಖಲಾತಿ ಕನ್ಫರ್ಮ್ ಆಗುತ್ತೆ ಎನ್ನುವ ಭರವಸೆ.

ಒಟ್ಟಿನಲ್ಲಿ ಖಾಸಗಿ ಶಾಲೆಗಳು ಪೋಷಕರ ಸುಲಿಗೆಗೆ ಹೊಸ ಅಸ್ತ್ರ ಪ್ರಯೋಗಿಸುತ್ತಿದೆ. ಶೈಕ್ಷಣಿಕ ವರ್ಷದ ದಾಖಲಾತಿ ಪ್ರಾರಂಭಕ್ಕೂ ಮುಂಚೆ ಶುಲ್ಕ ಸ್ವೀಕರಿಸುವಂತಿಲ್ಲ, ದಾಖಲಾತಿ ಮಾಡುವಂತಿಲ್ಲ. ಒಂದು ವೇಳೆ ಪ್ರವೇಶ ಶುಲ್ಕ ಸಂಗ್ರಹಿಸಿದರೆ ಅದು ಅಕ್ರಮ. ಇಷ್ಟಾದರೂ ಶಿಕ್ಷಣ ಇಲಾಖೆ ಮಾತ್ರ ಕಣ್ಣುಮುಚ್ಚಿ ಕುಳಿತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್