ಶಿಕ್ಷಕನ ಕ್ರೌರ್ಯ ಬಾಲಕನಿಗೆ ನರಕಯಾತನೆ, ಖಾಸಗಿ ಶಾಲೆ ನಡೆ ಸಂಶಯಾಸ್ಪದ, ಗದಗ ಪೊಲೀಸರಿಂದ ಎಫ್ಐಆರ್ ಕೂಡ ಇಲ್ಲ

ವಿದ್ಯಾರ್ಥಿಗೆ ಬಡಿಗೆಯಿಂದ ಹಲ್ಲೆ ನಡೆಸಿರುವ ಶಿಕ್ಷಕ ನಟರಾಜ್‌ನನ್ನು ಖಾಸಗಿ ಶಿಕ್ಷಣ ಸಂಸ್ಥೆ ಅಮಾನತು ಮಾಡಿದೆ. ಶಿಕ್ಷಕನ ತಪ್ಪು ಇಲ್ಲಾ ಎಂದ್ರೆ ಯಾಕೆ ಅಮಾನತು ಮಾಡಿದ್ರು ಎನ್ನುವುದು ಪ್ರಶ್ನೆ. ಗದಗ ಗ್ರಾಮೀಣ‌‌ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಆದರೆ ಪೊಲೀಸರು ಇನ್ನೂ ಎಫ್ಐಆರ್ ದಾಖಲು ಮಾಡಿಲ್ಲ.

ಶಿಕ್ಷಕನ ಕ್ರೌರ್ಯ ಬಾಲಕನಿಗೆ ನರಕಯಾತನೆ, ಖಾಸಗಿ ಶಾಲೆ ನಡೆ ಸಂಶಯಾಸ್ಪದ, ಗದಗ ಪೊಲೀಸರಿಂದ ಎಫ್ಐಆರ್ ಕೂಡ ಇಲ್ಲ
ಶಿಕ್ಷಕನ ಕ್ರೌರ್ಯಕ್ಕೆ ಬಾಲಕನಿಗೆ ನರಕಯಾತನೆ, ಖಾಸಗಿ ಶಾಲೆ ನಡೆ ಸಂಶಯಾಸ್ಪದ
Follow us
| Updated By: ಸಾಧು ಶ್ರೀನಾಥ್​

Updated on: Dec 14, 2023 | 11:47 AM

ವಿದ್ಯೆ ಕಲಿಸುವ ಶಿಕ್ಷಕನ ಕ್ರೌರ್ಯಕ್ಕೆ (Teacher Attack) ವಿದ್ಯಾರ್ಥಿ ನರಕಯಾತನೆ ಅನುಭವಿಸುತ್ತಿದ್ದಾನೆ. ಸಹಪಾಠಿಯೊಂದಿಗೆ ಮಾತನಾಡುವಾಗ ಏಕಾಏಕಿ ಬಂದ ಶಿಕ್ಷಕ, ಮೃಗೀಯವಾಗಿ ವರ್ತಿಸಿದ್ದಾನೆ. ವಿದ್ಯಾರ್ಥಿಗೆ (Student) ಬಡಿಗೆಯಿಂದ ಹಲ್ಲೆ ಮಾಡಿ, ತಳ್ಳಿದ್ದಾನಂತೆ. ಆ ರಭಸಕ್ಕೆ ಬಿದ್ದ ವಿದ್ಯಾರ್ಥಿ ಕೈ ಎಲುಬು ಕಟ್ ಆಗಿದೆ. ಬಾಳಿ ಬದುಕ ಬೇಕಾದ ಮಗನ ಸ್ಥಿತಿ ಕಂಡು ಹೆತ್ತಮ್ಮ ಕಣ್ಣೀರು ಹಾಕ್ತಾಯಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ. ಅಂದಹಾಗೇ ಈ ದೃಶ್ಯಗಳ ಕಂಡಿದ್ದು, ಗದಗ ಬೆಟಗೇರಿ ನರಸಾಪುರದಲ್ಲಿ (Gadag Police).

ಶಿಕ್ಷಕನ ಕ್ರೌರ್ಯಕ್ಕೆ ಕೈ ಮುರಿತ, ವಿದ್ಯಾರ್ಥಿ ವಿಲವಿಲ..! 6 ನೇ ತರಗತಿ ವಿದ್ಯಾರ್ಥಿಯ ಕೈ ಮುರಿದ ಶಿಕ್ಷಕನ ಕುಕೃತ್ಯದ ವಿರುದ್ಧ ಆಕ್ರೋಶ…! ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕ ನಟರಾಜ್ ಎನ್ನುವಾತನಿಂದ ಕೃತ್ಯ..! ಆಪರೇಷನ್ ಮಾಡಿಸಿ ಕೈ ತೊಳೆದುಕೊಂಡ ಖಾಸಗಿ ಶಿಕ್ಷಣ ಸಂಸ್ಥೆ..! ಮತ್ತೊಂದೆಡೆ, ಆಪರೇಷನ್ ಮಾಡಿಸಿ ಡಾಕ್ಯುಮೆಂಟ್ ಸಮೇತವಾಗಿ ಹೋದ ಶಿಕ್ಷಣ ಸಂಸ್ಥೆ ಸಿಬ್ಬಂದಿಗಳು..! ವಿದ್ಯಾರ್ಥಿ ಹಾಗೂ ಪೋಷಕರ ಆರೋಪವನ್ನು ತಳ್ಳಿ ಹಾಕಿದ ಶಿಕ್ಷಣ ಸಂಸ್ಥೆ..!

ಹೆತ್ತ ಮಗನ ಸ್ಥಿತಿ ನೋಡಿ ತಾಯಿ ಕಣ್ಣೀರು ಹಾಕ್ತಾಯಿದ್ದಾಳೆ. ಪುತ್ರ ನೋವು ಕಂಡು ಶಿಕ್ಷಕನ ವಿರುದ್ಧ ತಂದೆ ಕೆಂಡವಾಗಿದ್ದಾನೆ. ಏನೂ ತಪ್ಪು ಮಾಡದೇ ಶಿಕ್ಷಕನ ಅಟ್ಟಹಾಸಕ್ಕೆ ಕೈ ಮುರಿದುಕೊಂಡು ವಿದ್ಯಾರ್ಥಿ ಗೋಳಾಡುತ್ತಿದ್ದಾನೆ. ಎಸ್… ನಗು ನಗುತಾ ಶಾಲೆಗೆ ಹೋಗಬೇಕಾದ ವಿದ್ಯಾರ್ಥಿ ಈವಾಗ ವಿಲವಿಲ ಅಂತಿದ್ದಾನೆ. ಬಲಗೈ ಕೈ ಮುರಿತುಕೊಂಡು ಬರೆಯಲು ಬಾರದ ಸಂಕಷ್ಟಕ್ಕೆ ಸಿಲುಕಿದ್ದಾರೆ‌. ಮುಂದೆ ನನ್ನ ಮಗನ ಭವಿಷ್ಯ ಹೇಗೆ ಎಂದು ಹೆತ್ತ ತಾಯಿ ಕಣ್ಣೀರು ಹಾಕುತ್ತಿದ್ದಾಳೆ.

ವಿದ್ಯಾರ್ಥಿ ಮಲ್ಲಯ್ಯ ವಿಭೂತಿಮಠ.. 6 ನೇ ತರಗತಿಯಲ್ಲಿ ಗದಗನ ಪ್ರಮುಖ ಶಿಕ್ಷಣ ಸಂಸ್ಥೆಯಾದ ಗದಗ ಪಬ್ಲಿಕ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡ್ತಾಯಿದ್ದ. ಕಳೆದ 15 ದಿನಗಳ ಹಿಂದೆ ಶಾಲೆಯ ಕ್ಲಾಸ್ ರೂಂನಲ್ಲಿ‌ ಸಹಪಾಠಿಗಳೊಂದಿಗೆ ಮಾತನಾಡುತ್ತ, ಪೋನ್ ನಂಬರ್ ಕೇಳುವಾಗ ಏಕಾಏಕಿ ಎಂಟ್ರಿ ನೀಡಿದ ಶಿಕ್ಷಕ ನಟರಾಜ್ ಕ್ಲಾಸ್ ರೂಂಗೆ ಒಳಗೆ ಬಂದ ಕೂಡಲೇ ವಿದ್ಯಾರ್ಥಿ ಮಲ್ಲಯ್ಯನಿಗೆ ಬಡಗಿಯಿಂದ ಹಲ್ಲೆ ಮಾಡಿ, ರಭಸವಾಗಿ ತಳ್ಳಿದ್ದಾನಂತೆ.

ಮಲ್ಲಯ್ಯ ಬಲಗೈ ಮುರಿದು ಹೋಗಿದೆ ಅಂತ ಹೆತ್ತವರರು ಆರೋಪಿಸಿದ್ದಾರೆ. ಘಟನೆ ಬಳಿಕ ಕೂಡಲೇ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲುಬು ಕಟ್ ಆಗಿರೋದರಿಂದ ವೈದ್ಯರ ಸಲಹೆಯಂತೆ ಆಪರೇಷನ್ ಕೂಡಾ ಮಾಡಿದ್ದಾರೆ. ಆಪರೇಷನ್ ಖರ್ಚು ವೆಚ್ಚ ನೀಡಿ ಶಿಕ್ಷಣ ಸಂಸ್ಥೆ ಕೈತೊಳೆದುಕೊಂಡಿದೆ.

ಚಿಕಿತ್ಸೆ ನೀಡಿದ ಡಾಕ್ಯುಮೆಂಟ್‌ಗಳನ್ನು ಕೂಡಾ ಶಿಕ್ಷಣ ಸಂಸ್ಥೆಯವರು ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ವಿದ್ಯಾರ್ಥಿ ಪೋಷಕರು ಕಂಗಾಲಾಗಿದ್ದಾರೆ. ಬೇರೆ ಆಸ್ಪತ್ರೆಗೆ ತೋರಿಸಬೇಕು ಎಂದ್ರೆ, ಡಾಕ್ಯುಮೆಂಟ್ ಇಲ್ಲಾ, ನನ್ನ ಮಗ ನಿದ್ದೆ ಮಾಡದೆ ನೋವಿನಿಂದ ಬಳಲುತ್ತಿದ್ದಾನೆ. 15 ದಿನಗಳು ಕಳೆದ್ರು ಜನ್ನು ಕೈ ಸರಿಯಾಗಿಲ್ಲಾ ಎಂದು ಗೋಳಾಟ ನಡೆಸಿದ್ದಾನೆ..

ಇನ್ನೂ ಇರೋ ಒಬ್ಬ ಮಗನನ್ನು ಚೆನ್ನಾಗಿ ಓದಿಸಬೇಕು ಅಂತ ಸಾಕಷ್ಟು ಹಣ ಖರ್ಚು ಮಾಡಿ ಖಾಸಗಿ ಶಾಲೆಗೆ ಸೇರಿಸಿದ್ರು, ಪೋಷಕರು. ಆದ್ರೆ ಖಾಸಗಿ ಶಾಲೆಯ ಶಿಕ್ಷಕನ ಕ್ರೌರ್ಯತೆಯಿಂದ ವಿದ್ಯಾರ್ಥಿ ಕೈಯಲ್ಲಿ ಎಲುಬು ಕಟ್ ಆಗಿದೆ. ಇದಕ್ಕೆ ಖಾಸಗಿ ಶಾಲೆ ಹಾಗೂ ಆ ಶಿಕ್ಷಕ ನೇರವಾದ ಕಾರಣ ಎಂದು ಪೋಷಕರ ಆರೋಪವಾಗಿದೆ.

ಇನ್ನು ಈ ಬಗ್ಗೆ ಗದಗ ಪಬ್ಲಿಕ್ ಸ್ಕೂಲ್ ಮುಖ್ಯೋಪಾಧ್ಯಾಯ ಗೌರಿ ಹಿರೇಮಠ ಅವರು ಮಾತನಾಡಿ, ಶಿಕ್ಷಕ ನಟರಾಜ್ ವಿದ್ಯಾರ್ಥಿಗೆ ಹೊರಗಡೆ ಹೋಗುವಂತೆ ಹೇಳಿದ್ರು, ಆಗ ವಿದ್ಯಾರ್ಥಿ ಗೋಡೆಗೆ ಡಿಕ್ಕಿ ಹೊಡೆದು, ನೆಲಕ್ಕೆ ಬಿದ್ದು ಕೈ ಮುರಿದುಕೊಂಡಿದ್ದಾನೆ. ನಾವು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ, ಆಪರೇಷನ್ ಕೂಡಾ ಮಾಡಿಸಿದ್ದೇವೆ. ಮುಂದಿನ ಚಿಕಿತ್ಸೆ ಕೊಡಿಸಲು ಅನುಕೂಲವಾಗಲಿ ಎಂದು ಆಸ್ಪತ್ರೆಯ ಡಾಕ್ಯುಮೆಂಟ್ ನಮ್ಮ ಹತ್ತಿರ ಇಟ್ಟುಕೊಂಡಿದ್ದೇವೆ. ನಮ್ಮದು ಏನೂ ತಪ್ಪಿಲ್ಲಾ, ಮಾನವೀಯತೆ ದೃಷ್ಟಿಯಿಂದ ಚಿಕಿತ್ಸೆ ವೆಚ್ಚ ಕೂಡ ಭರಿಸಿದ್ದೇವೆ. ಆದ್ರೆ, ಪೋಷಕರು ಯಾಕೆ ಈ ರೀತಿ ಆರೋಪ ಮಾಡ್ತಾಯಿದ್ದಾರೆ ಅಂತ ಗೊತ್ತಿಲ್ಲ ಅಂತಾರೆ..

ಘಟನೆ ನಡೆದ ಕೂಡಲೇ ಶಿಕ್ಷಕ ನಟರಾಜ್‌ನನ್ನು ಖಾಸಗಿ ಶಿಕ್ಷಣ ಸಂಸ್ಥೆ ಅಮಾನತು ಮಾಡಿದೆ. ಶಿಕ್ಷಕನ ತಪ್ಪು ಇಲ್ಲಾ ಎಂದ್ರೆ ಯಾಕೇ ಅಮಾನತು ಮಾಡಿದ್ರು ಎನ್ನುವ ಪ್ರಶ್ನೆ ಕಾಡ್ತಾಯಿದೆ. ಗದಗ ಗ್ರಾಮೀಣ‌‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಪೊಲೀಸರು ಇನ್ನೂ ಎಫ್ಐಆರ್ ದಾಖಲು ಮಾಡಿಲ್ಲ. ಒಟ್ಟಾರೆಯಾಗಿ, ಪೊಲೀಸರು ತನಿಖೆಯಿಂದ ಸತ್ಯ ಬಹಿರಂಗವಾಗಬೇಕಾಗಿದೆ. ಇನಾದ್ರು ಶಿಕ್ಷಣ ಇಲಾಖೆ ಗಾಢ ನಿದ್ದೆಯಿಂದ ಎದ್ದು ಖಾಸಗಿ ಶಾಲೆಗಳ ದರ್ಬಾಕ್ಕೆ ಕಡಿವಾಣ ಹಾಕಬೇಕಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್