ಬೊಮ್ಮನಹಳ್ಳಿ ಕ್ಷೇತ್ರಕ್ಕೆ ₹106 ಕೋಟಿ ಕೊಡಬೇಕಿತ್ತು ಆದ್ರೆ ಸಿಎಂ ₹206 ಕೋಟಿ ಕೊಟ್ಟಿದ್ದಾರೆ -ಆರ್ ಅಶೋಕ್

| Updated By: ಆಯೇಷಾ ಬಾನು

Updated on: Mar 01, 2022 | 2:50 PM

ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಬೆಂಗಳೂರಿಗೆ ₹6 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರಕ್ಕೆ ₹106 ಕೋಟಿ ಅನುದಾನ ಕೊಡಬೇಕಿತ್ತು. ಆದರೆ ಸಿಎಂ ಬಸವರಾಜ ಬೊಮ್ಮಾಯಿ‌ ₹206 ಕೋಟಿ ಹಣ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. -ಆರ್ ಅಶೋಕ್

ಬೊಮ್ಮನಹಳ್ಳಿ ಕ್ಷೇತ್ರಕ್ಕೆ ₹106 ಕೋಟಿ ಕೊಡಬೇಕಿತ್ತು ಆದ್ರೆ ಸಿಎಂ ₹206 ಕೋಟಿ ಕೊಟ್ಟಿದ್ದಾರೆ -ಆರ್ ಅಶೋಕ್
ಸಚಿವ ಆರ್.ಅಶೋಕ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿಯವರಿಗೆ(Basavaraj Bommai) ಅಭಿನಂದನೆ ಸಲ್ಲಿಸಿ ಮತ್ತೊಂದು ಕಡೆ  ಕಾಂಗ್ರೆಸ್ ಎರಡನೇ ಹಂತದ ಪಾದಯಾತ್ರೆ(Congress Padyatra) ಬಗ್ಗೆ ಸಚಿವ ಆರ್. ಅಶೋಕ್(R Ashok) ವ್ಯಂಗ್ಯವಾಡಿದ್ದಾರೆ. ಸಿಎಂ ಬೆಂಗಳೂರಿಗೆ ₹6 ಸಾವಿರ ಕೋಟಿ ಕೊಟ್ಟಿದ್ದಾರೆ. ಸಿಎಂ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ₹106 ಕೋಟಿ ಕೊಡ್ಬೇಕಿತ್ತು. ₹106 ಕೋಟಿ ಬದಲು ₹206 ಕೋಟಿ ಹಣ ಕೊಟ್ಟಿದ್ದಾರೆ. ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ R.ಅಶೋಕ್ ಹೇಳಿದ್ದು ಇದೇ ವೇಳೆ ಕಾಂಗ್ರೆಸ್ ಪಾದಯಾತ್ರೆ ಸಂಬಂಧ ವಾಗ್ದಾಳಿ ನಡೆಸಿದ್ದಾರೆ.

ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಬೆಂಗಳೂರಿಗೆ ₹6 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರಕ್ಕೆ ₹106 ಕೋಟಿ ಅನುದಾನ ಕೊಡಬೇಕಿತ್ತು. ಆದರೆ ಸಿಎಂ ಬಸವರಾಜ ಬೊಮ್ಮಾಯಿ‌ ₹206 ಕೋಟಿ ಹಣ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಇನ್ನಷ್ಟು ಅನುದಾನ ಸಿಎಂ ಕೊಡಬಹುದು ಎಂಬ ಭರವಸೆ ಇದೆ. ಬೆಂಗಳೂರು ಇನ್ನಷ್ಟು ಅಭಿವೃದ್ಧಿ ಆಗಬೇಕು. ಕೋವಿಡ್ನ‌ಲ್ಲಿ ಬಹಳಷ್ಟು ಜನರು ಸಾವನಪ್ಪಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಸಹಾಯ ಸಿಎಂ ಮಾಡಿದ್ದಾರೆ ಎಂದು R.ಅಶೋಕ್ ತಿಳಿಸಿದ್ರು.

ಇನ್ನು ಇದೇ ವೇಳೆ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಮಾತನಾಡಿದ R.ಅಶೋಕ್, ನಾವು ಪಾದಯಾತ್ರೆ ಮಾಡದೇ ಇರಬಹುದು. ಆದ್ರೆ ಜನರ ಪರವಾಗಿ ನಮ್ಮ ಸರ್ಕಾರವಿದೆ. ಅಧಿಕಾರ ಇದ್ದಾಗ ಕಾಂಗ್ರೆಸ್ನವರು ಏನನ್ನೂ ಮಾಡಿಲ್ಲ. ಅಧಿಕಾರ ಕೊಟ್ರೆ ಈಗ ಮಾಡ್ತೀನಿ ಅಂದ್ರೆ ಜನ ನಂಬ್ತಾರಾ? ಜನರಿಗೆ ಗೊತ್ತಾಗಿದೆ. ಅಧಿಕಾರ ಇದ್ದಾಗ ಕೆಲಸ ಮಾಡಿಲ್ಲ. ಈಗ ಕಾಂಗ್ರೆಸ್ಗೆ ಅಧಿಕಾರ ಕೊಟ್ಟರೆ ಏನ್ ಮಾಡ್ತಾರೆ? ಚುನಾವಣೆ ಬಂದಾಗ ಅಣ್ಣಾ, ಅಕ್ಕಾ, ಆಂಟಿ ವೋಟ್ ಕೊಡಿ ಅಂತಾರೆ. ಐದು ವರ್ಷ ಅಧಿಕಾರ ಕೊಟ್ಟರೆ ಯಾವುದೇ ಕೆಲಸ ಮಾಡಲ್ಲ ಎಂದು R.ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.

ನಿನ್ನೆ ಹಣದ ವಿಚಾರಕ್ಕೆ ನನಗೂ, ಸತೀಶ್ ರೆಡ್ಡಿಗೂ ಜಗಳ ನಡೆಯಿತು. ಅಭಿವೃದ್ಧಿ ವಿಚಾರಕ್ಕೆ ಹಣ ಕೊಡಿ ಎಂದು ಸತೀಶ್ ರೆಡ್ಡಿ ಕೂಗಾಡಿದ್ರು. ಆಗ ಸಿಎಂ ಮಧ್ಯ ಪ್ರವೇಶಿಸಿ ನಮ್ಮಿಬ್ಬರ ಜಗಳ ಬಿಡಿಸಿದ್ರು. ಕ್ಷೇತ್ರದ ಜನರು ಹಾಗೂ ಅಭಿವೃದ್ಧಿಗೆ ಅವರು ಜಗಳ ಆಡೋಕು ರೆಡಿ. ಅಂತಹ ಶಾಸಕರು ಪಡೆದವರು ನೀವು ಪುಣ್ಯವಂತರು ಎಂದು ಬೆಂಗಳೂರು ಕಾರ್ಯಕ್ರಮದಲ್ಲಿ ಆರ್.ಅಶೋಕ್ ಸತೀಶ್ ರೆಡ್ಡಿ ಪರವಾಗಿ ಮಾತನಾಡಿದ್ರು.

ಇದನ್ನೂ ಓದಿ: ಅಪರೂಪದ ಅವಕಾಶ ಗಿಟ್ಟಿಸಿಕೊಂಡ ರಶ್ಮಿಕಾ; ಖುಷಿ ಹಂಚಿಕೊಂಡ ಕೊಡಗಿನ ಹುಡುಗಿ

ಕಾಂಗ್ರೆಸ್ ಪಾದಯಾತ್ರೆಯಿಂದ ಬೆಂಗಳೂರಿಗರಿಗೆ ಟ್ರಾಫಿಕ್​ ಸಂಕಷ್ಟ; ಅದು ಬಿಟ್ಟು ಬೇರೆ ಉಪಯೋಗವಿಲ್ಲ: ಬಸವರಾಜ ಬೊಮ್ಮಾಯಿ