ಬೆಂಗಳೂರು: ಪ್ರತಿಷ್ಠಿತ ಹೋಂಡಾ ಕಂಪನಿ (Honda company) ಹೆಸರಿನಲ್ಲಿ ದ್ವಿಚಕ್ರ ವಾಹನ ನಕಲಿ ಬಿಡಿಭಾಗಗಳ ಮಾರಾಟ ಮಾಡುತ್ತಿದ್ದ ಫ್ಯಾಕ್ಟರಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಹೋಂಡಾ ಕಂಪನಿ ಅಧಿಕಾರಿಗಳ ಮಾಹಿತಿ ಮೇರೆಗೆ ಬೆಂಗಳೂರಿನ ತಿಗಳರಪಾಳ್ಯದ ಡಾಲ್‌ಫಿನ್ ಟ್ರೇಡರ್ಸ್ ಕಂ. ಫ್ಯಾಕ್ಟರಿ ಮೇಲೆ ದಾಳಿ ಮಾಡಿದ ಪೊಲೀಸರು, 1.5 ಲಕ್ಷ ರೂ. ಮೌಲ್ಯದ ಬಿಡಿಭಾಗಗಳನ್ನು ಜಪ್ತಿ ಮಾಡಿದ್ದಾರೆ. ಕಂಪನಿಯ ಎಂಆರ್‌ಪಿ ದರದಲ್ಲೇ ನಕಲಿ ಬಿಡಿಭಾಗಗಳನ್ನು ಮಾರುತ್ತಿದ್ದರು. ಈ ಕುರಿತಾಗಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮೈಸೂರು: ನಂಜನಗೂಡು ತಾಲೂಕಿನ ಚುಂಚನಹಳ್ಳಿಯಲ್ಲಿ ಮಹದೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಒಂದೇ ರಾತ್ರಿ ಆರು ಕಡೆ ಕಳ್ಳತನ ನಡೆದಿದೆ. ಲಕ್ಷಾಂತರ ರೂ. ಮೌಲ್ಯದ ಕೇಬಲ್, ಮೋಟರ್, ಸೋಲಾರ್, ಬ್ಯಾಟರಿ, ಇನ್ನಿತರ ವಸ್ತುಗಳು ಕಳ್ಳತನ ಮಾಡಲಾಗಿದೆ. ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಳ್ಳತನವೇ ಅವರ ಪುಲ್ ಟೈಮ್ ವರ್ಕ್: ಕದ್ದ ವಸ್ತು ಮಹಾರಾಷ್ಟ್ರದಲ್ಲಿ ಮಾರಾಟ, ಖತರ್ನಾಕ ಗ್ಯಾಂಗ್ ಬಂಧನ
ಬೆಳಗಾವಿ: ರಾಯಬಾಗ ತಾಲೂಕಿನ ಯಡ್ರಾಂವ ಗ್ರಾಮದ ಬಳಿ ಬೈಕ್ ಡಿಕ್ಕಿಯಾಗಿ ರಾಷ್ಟ್ರೀಯ ಪಕ್ಷಿ ನವಿಲು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬೈಕ್‌ನಲ್ಲಿದ್ದ ದಂಪತಿ, ಮಗುವಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಇದನ್ನೂ ಓದಿ: ಪ್ರೀತಿ ನಿರಾಕರಿಸಿ ಬ್ರೇಕ್ ಅಪ್ ಎಂದಿದ್ದ ಯುವತಿಯನ್ನು ಕೊಲ್ಲಲು ದೆಹಲಿಯಿಂದ ಬಂದಿದ್ದ ಪ್ರೇಮಿ ಅರೆಸ್ಟ್
ಹಾವೇರಿ: ಜಮೀನಿನಲ್ಲಿ ಉಳುಮೆ ಮಾಡುವಾಗ ವಿದ್ಯುತ್ ಪ್ರವಹಿಸಿ ಎತ್ತುಗಳ ಜೊತೆ ರೈತ ಸಾವನ್ನಪ್ಪಿರುವಂತಹ ಘಟನೆ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದಲ್ಲಿ ನಡೆದ ನಡೆದಿದೆ. ಮಲ್ಲೂರು ಗ್ರಾಮದ ರೈತ ಸಂತೋಷ್(22) ಮೃತ ರೈತ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:33 pm, Wed, 5 July 23