ಕಳ್ಳತನವೇ ಅವರ ಪುಲ್ ಟೈಮ್ ವರ್ಕ್: ಕದ್ದ ವಸ್ತು ಮಹಾರಾಷ್ಟ್ರದಲ್ಲಿ ಮಾರಾಟ, ಖತರ್ನಾಕ ಗ್ಯಾಂಗ್​ ಬಂಧನ

ಕಳೆದ ಎರಡು ವರ್ಷಗಳಿಂದ ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ ಗ್ಯಾಂಗ್​ ಒಂದನ್ನು ಪೊಲೀಸರು ಪತ್ತೆಮಾಡಿದ್ದು, ಕೊನೆಗೂ  ನಾಲ್ವರು ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ. ಬಂಧಿತರಿಂದ 53 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.

ಕಳ್ಳತನವೇ ಅವರ ಪುಲ್ ಟೈಮ್ ವರ್ಕ್: ಕದ್ದ ವಸ್ತು ಮಹಾರಾಷ್ಟ್ರದಲ್ಲಿ ಮಾರಾಟ, ಖತರ್ನಾಕ ಗ್ಯಾಂಗ್​ ಬಂಧನ
ಜಪ್ತಿ ಮಾಡಿಕೊಂಡ ಚಿನ್ನಾಭರಣಗಳು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 05, 2023 | 4:27 PM

ಕಲಬುರಗಿ: ಕಳೆದ ಎರಡು ವರ್ಷಗಳಿಂದ ಮನೆಗಳ್ಳತನ (Theft) ಮಾಡುತ್ತಿದ್ದ ಖತರ್ನಾಕ ಗ್ಯಾಂಗ್​ ಒಂದನ್ನು ಪೊಲೀಸರು ಪತ್ತೆಮಾಡಿದ್ದು, ಕೊನೆಗೂ  ನಾಲ್ವರು ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ. ಬಂಧಿತರಿಂದ 53 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ. ಕಲಬುರಗಿ ತಾಲೂಕಿನ ಸಾವಳಗಿ ಬಿ ಗ್ರಾಮದ ಶೀಲವಂತ, ಗಣೇಶ್ ಅಲಿಯಾಸ್ ಗಣ್ಯಾ ಪವಾರ್, ತಾಜಸುಲ್ತಾನಪುರ ಗ್ರಾಮದ ರಘು, ಮಲ್ಲಪ್ಪ ಬಂಧಿತರು.  ಕಲಬುರಗಿ ಸಬ್ ಅರ್ಬನ್ ಉಪ ವಿಭಾಗದಲ್ಲಿ ಬರುವ ವಿಶ್ವವಿದ್ಯಾಲಯ, ಸಬ್ ಅರ್ಬನ್, ಮತ್ತು ಫರಹತಾಬಾದ್ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಗ್ಯಾಂಗ್​ನ್ನು ಬಂಧಿಸಿದ್ದಾರೆ.

ನಾಲ್ವರು ಕಲಬುರಗಿ ತಾಲೂಕಿನವರೇ ಆಗಿದ್ದರು ಕೂಡಾ ಹೆಚ್ಚಾಗಿ ಮಹರಾಷ್ಟ್ರದ ಸೊಲ್ಲಾಪುರ ಮತ್ತು ಪುಣೆಯಲ್ಲಿ ಇರುತ್ತಿದ್ದರು. ಹೌದು ಈ ಖತರ್ನಾಕ ಕಿಲಾಡಿಗಳು ಕಳೆದ ಎರಡ್ಮೂರ ವರ್ಷಗಳಿಂದ ಕಲಬುರಗಿ ನಗರದಲ್ಲಿ ಮನೆಗಳ್ಳತನ ಮಾಡೋದನ್ನೆ ತಮ್ಮ ಕೆಲಸ ಮಾಡಿಕೊಂಡಿದ್ದರು. ತಮ್ಮೂರಲ್ಲಿ ಇದ್ದರೆ, ಪೊಲೀಸರಿಗೆ ಸಿಕ್ಕಿ ಬೀಳುತ್ತೇವೆ ಅಂತ ತಿಳಿದು, ಮಹರಾಷ್ಟ್ರದ ಪುಣೆ, ಸೊಲ್ಲಾಪುರದಲ್ಲಿಯೇ ಹೆಚ್ಚಾಗಿ ಇರುತ್ತಿದ್ದರು. ಆಗಾಗ ಕಲಬುರಗಿಗೆ ಬಂದು ಮನೆಗಳ್ಳತನ ಮಾಡಿಕೊಂಡು ಮತ್ತೆ ಹೋಗುತ್ತಿದ್ದರಂತೆ.

ಹಗಲಲ್ಲಿ ಸೈಲೆಂಟ್, ರಾತ್ರಿ ಪುಲ್ ಅಲರ್ಟ್

ಕಲಬುರಗಿಗೆ ಬಂದಾಗ ಕೂಡಾ ಇವರು ಇರ್ತಿದ್ದದು, ಮನೆಗಳಲ್ಲಿ ಅಲ್ಲಾ, ಬದಲಾಗಿ ಹೊಲಗದ್ದೆಗಳಲ್ಲಿ. ಹಗಲೊತ್ತಿನಲ್ಲಿ ಹೊಲಗದ್ದೆಯಲ್ಲಿ ಇರ್ತಿದ್ದ ಕಿಲಾಡಿಗಳು, ರಾತ್ರಿ ಸಮಯದಲ್ಲಿ ನಗರಕ್ಕೆ ಬಂದು, ನಗರದ ಹೊರವಲಯದಲ್ಲಿರುವ ಬೀಗ ಹಾಕಿದ ಮನೆಗಳನ್ನೇ ಟಾರ್ಗೇಟ್ ಮಾಡಿ, ಸುಲಭವಾಗಿ ಮನೆಗಳ ಬೀಗವನ್ನು ಮುರಿದು ಕಳ್ಳತನ ಮಾಡುತ್ತಿದ್ದರಂತೆ.

ಇದನ್ನೂ ಓದಿ: ಪ್ರೀತಿ ನಿರಾಕರಿಸಿ ಬ್ರೇಕ್ ಅಪ್ ಎಂದಿದ್ದ ಯುವತಿಯನ್ನು ಕೊಲ್ಲಲು ದೆಹಲಿಯಿಂದ ಬಂದಿದ್ದ ಪ್ರೇಮಿ ಅರೆಸ್ಟ್​​

ವಿಶೇಷವೆಂದರೆ ಮೈಮೇಲೆ ನೂರಾರು ಗ್ರಾಂ ಬಂಗಾರವಿದ್ದರು ಅದನ್ನು ಮುಟ್ಟುತ್ತಿರಲಿಲ್ಲವಂತೆ. ಬೀಗ ಹಾಕಿದ ಮನೆಗಳಲ್ಲಿ ಮಾತ್ರ ಕದಿಯುತ್ತಿದ್ದರಂತೆ. ಕಲಬುರಗಿಯಲ್ಲಿ ಚಿನ್ನಾಭರಣ ಕದ್ದು, ಮಹಾರಾಷ್ಟ್ರದಲ್ಲಿ ಮಾರಾಟ ಮಾಡುತ್ತಿದ್ದರಂತೆ. ವಿಚಿತ್ರವೆಂದರೆ, ಕದ್ದ ಚಿನ್ನಾಭರಣಗಳನ್ನು ಪ್ರತಿ ಗ್ರಾಂಗೆ ಹತ್ತರಿಂದ ಇಪ್ಪತ್ತು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರಂತೆ. ಕಳ್ಳತನ ಮಾಡುವದನ್ನೇ ತಮ್ಮ ಪುಲ್ ಟೈಮ್ ಕೆಲಸ ಮಾಡಿಕೊಂಡಿದ್ದ ಖತರ್ನಾಕ ಕಳ್ಳರು, ನಿನ್ನೆ ಕಲಬುರಗಿ ನಗರದಲ್ಲಿ ಕಳ್ಳತನಕ್ಕೆ ಹೊಂಚು ಹಾಕಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಸದ್ಯ ಕಲಬುರಗಿ ಪೊಲೀಸರು ಕಳೆದ ಎರಡು ವರ್ಷಗಳಿಂದ ಜನರ ನಿದ್ದೆಗೆಡಿಸಿದ್ದ ಒಂದು ಗ್ಯಾಂಗ್​ನ್ನು ಪತ್ತೆ ಮಾಡಿದ್ದಾರೆ. ಆದ್ರೆ ಇದೇ ರೀತಿ ಇನ್ನು ಕೆಲ ಗ್ಯಾಂಗ್ ಗಳು ಆಕ್ಟಿವ್ ಆಗಿದ್ದು, ಅವರನ್ನು ಪತ್ತೆ ಮಾಡಿ ಕಂಬಿ ಹಿಂದೆ ಕಳುಹಿಸುವ ಕೆಲಸವನ್ನು ಪೊಲೀಸರು ಮಾಡಬೇಕಿದೆ.

ಇದನ್ನೂ ಓದಿ: Bengaluru News: ಇಬ್ಬರ ಜಗಳದ ಮಧ್ಯೆ ಬಂದ ಮೂರನೇ ವ್ಯಕ್ತಿ ದುರಂತ ಅಂತ್ಯ

ಇನ್ನು ಕಳೆದ ಎರಡು ವರ್ಷಗಳಿಂದ ಕಲಬುರಗಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಗ್ಯಾಂಗ್ ನ್ನು ಪತ್ತೆ ಮಾಡಿದ ತಮ್ಮ ಸಿಬ್ಬಂಧಿ ಕಾರ್ಯಕ್ಕೆ ಕಲಬುಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇನ್ನು ಕೆಲ ಗ್ಯಾಂಗ್ ಗಳಿದ್ದು, ಅವರನ್ನು ಪತ್ತೆ ಮಾಡಿ, ಕಂಬಿ ಹಿಂದೆ ಕಳುಹಿಸುತ್ತೇವೆ ಅಂತ ಹೇಳಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ