ಬೆಂಗಳೂರು, ಜನವರಿ 17: ಜ.22ರಂದು ರಾಮಲಲ್ಲಾ (Ram Lalla) ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ವಿಚಾರವಾಗಿ ಬೆಂಗಳೂರಿನ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಡಿಜಿ&ಐಜಿಪಿ ಅಲೋಕ್ ಮೋಹನ್ ನೇತೃತ್ವದಲ್ಲಿ ನಡೆದ ಸಭೆ ಮುಕ್ತಾಯವಾಗಿದೆ. ಪ್ರತಿಷ್ಠಾಪನಾ ಕಾರ್ಯಕ್ರಮದ ವೇಳೆ ಅಹಿತಕರ ಘಟನೆ ತಡೆಗೆ ಕ್ರಮಕೈಗೊಳ್ಳಲಾಗುವುದು. ರಾಜ್ಯದೆಲ್ಲೆಡೆ ಸೂಕ್ತ ಪೊಲೀಸ್ ಬಂದೋಬಸ್ತ್ಗೆ ಮತ್ತು ರೌಡಿ ಚಟುವಟಿಕೆ ಮೇಲೆ ಹೆಚ್ಚಿನ ನಿಗಾ ಇಡಲು ಸೂಚನೆ ನೀಡಲಾಗಿದೆ.
ಸಿಎಂ ಸಿದ್ದರಾಮಯ್ಯ ಸೂಚನೆ ಬೆನ್ನಲ್ಲೇ ಅಲರ್ಟ್ ಆದ ಇಲಾಖೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಕಟ್ಟೆಚ್ಚರ ವಹಿಸಲಾಗಿದೆ. ರೌಡಿಗಳ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಎಲ್ಲಾ ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ.
ಇದನ್ನೂಓದಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವಿಚಾರ: ಅನುಮತಿ ಪಡೆದು ಕಟೌಟ್ ಹಾಕಿದ್ದರೂ FIR ದಾಖಲು
ಎಷ್ಟು ರೌಡಿಗಳು ಜೈಲಿನಲ್ಲಿದ್ದಾರೆ, ಎಷ್ಟು ರೌಡಿಗಳು ಹೊರಗಿದ್ದಾರೆ. ಯಾವ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಸದ್ಯ ಬೆಂಗಳೂರು ನಗರ ಪೊಲೀಸರು ಸಂಗ್ರಹಿಸಿದ್ದಾರೆ. 1 ವಾರದಲ್ಲಿ ನಗರದ ಎಲ್ಲಾ ರೌಡಿಶೀಟರ್ಗಳ ಪೂರ್ಣ ಮಾಹಿತಿ ಕಲೆ ಹಾಕಿ ವರದಿ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಡಿಜಿ&ಐಜಿಪಿ ಅಲೋಕ್ ಮೋಹನ್ ಸೂಚನೆ ನೀಡಿದ್ದಾರೆ.
ರಾಮ ಮಂದಿರ ಉದ್ಘಾಟನೆ ಬಳಿಕ ಕಾಂಗ್ರೆಸ್ ನಾಯಕರು ಅಯ್ಯೋಧ್ಯೆಗೆ ಹೋಗುತ್ತೇವೆ ಎನ್ನುವ ವಿಚಾರವಾಗಿ ಯಾದಗಿರಿಯಲ್ಲಿ ಎಂಎಲ್ಸಿ ಛಲವಾಧಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದು, ಅಯ್ಯೋಧ್ಯೆಗೆ ಆಮೇಲೆ ಹೋದರೆ ಬೇರೆ, ಇವತ್ತ ಹೋದರೆ ಬೇರೆ ಅಲ್ಲ. ರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ವಿಶೇಷ ಸಂದರ್ಭ.
ಇದನ್ನೂ ಓದಿ: ರಾಜ್ಯ ಪದಾಧಿಕಾರಿಗಳ ನೇಮಕದಲ್ಲಿ ನಿರ್ಲಕ್ಷ್ಯ: ಬಿಜೆಪಿ ವಿರುದ್ಧ ಸಿಡಿದೆದ್ದ ಮಾದಿಗ ಸಮುದಾಯ
ಇಂತಹ ವಿಶೇಷ ಸಂದರ್ಭಕ್ಕೆ ಹೋಗಲ್ಲ ಅಂದರೆ ಅವರು ರಾಮನ ವಿರೋಧಿಗಳು. ರಾಮ ಮಂದಿರ ಉದ್ಘಾಟನೆಗೆ ನಾವು ಹೋಗಲ್ಲ ಅಂತ ಯಾವಾಗ ಕಾಂಗ್ರೆಸ್ ತಿರ್ಮಾನ ತೆಗೆದುಕೊಂಡಿದೆ. ಊಳಿದವರಿಗೆ ಆಹ್ವಾನ ಕೊಡುವುದರಲ್ಲಿ ಅರ್ಥ ಇಲ್ಲ. ಕಾಂಗ್ರೆಸ್ನವರ ಮಾತನ್ನ ಅವರದ್ದೆ ಪಕ್ಷದವರು ತಿರಸ್ಕಾರ ಮಾಡುತ್ತಿದ್ದಾರೆ.
ಸುಮಾರು 40 ರಿಂದ 80 ಅಡಿ ಬ್ಯಾನರ್ಗಳನ್ನ ನಮ್ಮ ಲೇಔಟ್ ಕೃಷ್ಣಪ್ಪ ಹಾಗೂ ಪ್ರೀಯ ಕೃಷ್ಣ ಇವರೆಲ್ಲ ಬೆಂಗಳೂರಲ್ಲಿ ಬ್ಯಾನರ್ ಹಾಕುತ್ತಿದ್ದಾರೆ. ರಾಮ ನಮ್ಮ ಅಸ್ಮಿತೆ ಯಾರ ಏನು ಹೇಳಿದರು ನಾವು ಕೇಳೋದಿಲ್ಲ ಅಂತ ಹಾಕ್ತಿದ್ದಾರೆ. ನಾವು ರಾಮನ ಪರ ಅಂತಿದ್ದಾರೆ. ಇದು ಕಾಂಗ್ರೆಸ್ ಪರ ಆಗಲಿಲ್ಲ. ಕಾಂಗ್ರೆಸ್ನ ವಿರೋಧಿ ನೀತಿಯನ್ನ ಕಾಂಗ್ರೆಸ್ನವರೇ ಖಂಡಿಸುತ್ತಿದ್ದಾರೆ. ಯಾರು ವಿರೋಧ ಮಾಡುತ್ತಾರೆ ಅವರ ಮನೆಯವರು ಅದನ್ನ ಮೆಚ್ಚುವುದಿಲ್ಲ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:33 pm, Wed, 17 January 24