ಬೆಂಗಳೂರು: ರಾಜ್ಯದ್ಯಂತ ಪವಿತ್ರ ರಂಜಾನ್ (ಈದ್-ಉಲ್-ಫಿತರ್) ಹಬ್ಬವನ್ನು ಮಂಗಳವಾರ (ಮೇ 3) ರಂದು ಆಚರಿಸುವುದಾಗಿ ಟಿವಿ 9ಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಮಾಹಿತಿ ನೀಡಿದ್ದಾರೆ. ಇಂದು ಚಂದ್ರ ದರ್ಶನವಾಗದ ಹಿನ್ನೆಲೆ ರಂಜಾನ್ ಹಬ್ಬವನ್ನು ಸೋಮವಾರ ಬದಲು ಮಂಗಳವಾರ ಆಚರಣೆ ಮಾಡಲಾಗುವುದು. ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ನಗರದಲ್ಲಿ ಚಂದ್ರನ ದರ್ಶನವಾಗಿಲ್ಲ ಮತ್ತು ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಚಂದ್ರನ ದರ್ಶನವಾಗಿಲ್ಲ. ಕೇರಳ, ಕರಾವಳಿಯಲ್ಲೂ ಚಂದ್ರ ದರ್ಶನ ಆಗದ ಹಿನ್ನೆಲೆ ಭಾರತದಾದ್ಯಂತ ಮಂಗಳಾರವೇ ಪವಿತ್ರ ರಂಜಾನ್ ಹಬ್ಬ ಆಚರಣೆ ಮಾಡಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಈ ಹಿಂದೆ ಮೂನ್ ಕಮಿಟಿ ಮಂಗಳವಾರ ಬದಲು ಸೋವವಾರವೇ ರಂಜಾನ್ ಹಬ್ಬ ಆಚರಣೆ ಮಾಡಲಾಗುವವುದು ಎಂದು ನಿರ್ಧಾರ ಕೈಗೊಳ್ಳಲಾಗಿತ್ತು. ರಂಜಾನ್ ಹಬ್ಬದ ಪ್ರಯುಕ್ತ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿ ಆದೇಶ ಹೊರಡಿಸಿತ್ತು. ಆದರೆ ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಭಾರಿ ಮಳೆಯಾಗಿದ್ದು, ಚಂದ್ರನ ದರ್ಶನವಾಗಿಲ್ಲ. ಹಾಗಾಗಿ ಮಂಗಳವಾರವೇ ಅಂದ್ರೇ ಮೇ 3ರಂದು ಪವಿತ್ರ ರಂಜಾನ್ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ.
ಹಜರತ್ ಮೌಲಾನಾ ಮುಫ್ತಿ ಇಫ್ತೆಕರ್ ಅಹ್ಮದ್ ಖಾಸ್ಮಿ, ಹಜರತ್ ಮೌಲಾನಾ ಅಬ್ದುಲ್ ಖಾದಿರ್ ಶಾ ವಾಜಿದ್, ಹಜರತ್ ಖಾರಿ ಮುಹಮ್ಮದ್ ಝುಲ್ಫಿಕರ್ ರಝಾ ನೂರಿ, ಹಜರತ್ ಮೌಲಾನಾ ಎಜಾಝ್ ಅಹ್ಮದ್ ನದಾವಿ, ಹಜರತ್ ಮೌಲಾನಾ ಸೈಯದ್ ಮಂಜೂರ್ ರಝಾ ಅಬಿದಿ ಸಭೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:02 pm, Sun, 1 May 22