ಸಿಡಿ ಬಹಿರಂಗ ಪ್ರಕರಣ: ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ; ಪ್ರಕರಣದ ಮರುತನಿಖೆ ಕೋರಿ ಅರ್ಜಿ ಸಲ್ಲಿಕೆ

| Updated By: ganapathi bhat

Updated on: Feb 14, 2022 | 6:48 PM

ಸಿಡಿಯ ವಿಡಿಯೋದಲ್ಲಿರುವವರ ಹೇಳಿಕೆಯನ್ನ ದಾಖಲಿಸಿಲ್ಲ. ಸಮರ್ಪಕ ವಿಚಾರಣೆ ನಡೆಸಿ ಸರಿಯಾಗಿ ಹೇಳಿಕೆ ದಾಖಲಿಸಿಲ್ಲ. ಈ ಎಲ್ಲ ಅಂಶಗಳನ್ನ ಉಲ್ಲೇಖಿಸಿ ಕೋರ್ಟ್​​ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸಂತ್ರಸ್ತೆ ಪರ ವಕೀಲರಿಂದ ಕೋರ್ಟ್​​ಗೆ ಪ್ರೊಟೆಸ್ಟ್ ಅರ್ಜಿ ಸಲ್ಲಿಸಲಾಗಿದೆ.

ಸಿಡಿ ಬಹಿರಂಗ ಪ್ರಕರಣ: ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ; ಪ್ರಕರಣದ ಮರುತನಿಖೆ ಕೋರಿ ಅರ್ಜಿ ಸಲ್ಲಿಕೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಪ್ರೊಟೆಸ್ಟ್​ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸಂತ್ರಸ್ತೆ ಪರ ವಕೀಲರಿಂದ ಕೋರ್ಟ್​​ಗೆ ಪ್ರೊಟೆಸ್ಟ್ ಅರ್ಜಿ ಸಲ್ಲಿಕೆಯಾಗಿದೆ. ಪ್ರಕರಣದ ಮರು ತನಿಖೆ ಕೋರಿ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ವಕೀಲರು ಸಲ್ಲಿಸಿರುವ ಅರ್ಜಿಯಲ್ಲಿ 10 ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.

ರಮೇಶ್ ಜಾರಕಿಹೊಳಿಯನ್ನು ಸರಿಯಾಗಿ ವಿಚಾರಣೆ ನಡೆಸಿಲ್ಲ. ಪ್ರಕರಣದ ಕುರಿತು ಎಸ್ಐಟಿ ಸಮರ್ಪಕವಾಗಿ ತನಿಖೆ ನಡೆಸಿಲ್ಲ. ಆರೋಪಿ ರಮೇಶ್​ ಬಂಧಿಸಲು ಅವಕಾಶವಿದ್ದರೂ ಬಂಧಿಸಿಲ್ಲ. ಸಂತ್ರಸ್ತೆ ಹೇಳಿಕೆಯನ್ನು ಸಮರ್ಪಕವಾಗಿ ದಾಖಲಿಸಿಕೊಂಡಿಲ್ಲ. ಪ್ರಕರಣದ ಮಹಜರು ಪ್ರಕ್ರಿಯೆಯನ್ನು ಸರಿಯಾಗಿ ಮಾಡಿಲ್ಲ. ಟೆಕ್ನಿಕಲ್ ಎವಿಡೆನ್ಸ್ ಕಲೆಹಾಕುವಲ್ಲಿ, ಸಂಗ್ರಹಿಸುವಲ್ಲಿ ಲೋಪ ಆಗಿದೆ. ಸಿಡಿಯ ವಿಡಿಯೋದಲ್ಲಿರುವವರ ಹೇಳಿಕೆಯನ್ನ ದಾಖಲಿಸಿಲ್ಲ. ಸಮರ್ಪಕ ವಿಚಾರಣೆ ನಡೆಸಿ ಸರಿಯಾಗಿ ಹೇಳಿಕೆ ದಾಖಲಿಸಿಲ್ಲ. ಸೌಮೇಂದು ಮುಖರ್ಜಿಯವರ ನಿಲುವು ಸಹ ಭಿನ್ನವಾಗಿತ್ತು. ಈ ಎಲ್ಲ ಅಂಶಗಳನ್ನ ಉಲ್ಲೇಖಿಸಿ ಕೋರ್ಟ್​​ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸಂತ್ರಸ್ತೆ ಪರ ವಕೀಲರಿಂದ ಕೋರ್ಟ್​​ಗೆ ಪ್ರೊಟೆಸ್ಟ್ ಅರ್ಜಿ ಸಲ್ಲಿಸಲಾಗಿದೆ.

ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಅಯೂಬ್ ಖಾನ್‌ಗೆ ಪ್ರಕರಣ ಕಗ್ಗಂಟು

ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದ ಅಯೂಬ್ ಖಾನ್‌ಗೆ ಪ್ರಕರಣ ಕಗ್ಗಂಟಾಗಿದೆ. ಹಿರಿಯ ವಕೀಲ ಆರ್. ಗಿರಿಜೇಶ್ ಜಾಮೀನಿಗೆ ತಕರಾರು ಸಲ್ಲಿಸಿದ್ದಾರೆ. ಪಿಪಿ ಜೊತೆ ವಾದ ಮಂಡನೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ವಾದ ಮಂಡನೆಗೆ ಲಿಖಿತ ಪತ್ರ ನೀಡಲು ಅವಕಾಶ ಕೋರಲಾಗಿದೆ. ತಕರಾರು ಸಲ್ಲಿಸಲು ಆರೋಪಿ ಪರ ವಕೀಲರಿಗೆ ಕಾಲಾವಕಾಶ ನೀಡಲಾಗಿದೆ. ಮೈಸೂರು ಜಿಲ್ಲಾ ಕೋರ್ಟ್‌ ವಿಚಾರಣೆ ನಾಳೆಗೆ ಮುಂದೂಡಿದೆ.

ಇದನ್ನೂ ಓದಿ: ಸಿಡಿ ಪ್ರಕರಣ ಕೈಜಾರುವ ಆತಂಕ -ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಾಧಿತ ಯುವತಿ, ಶಾಸಕ ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ

ಇದನ್ನೂ ಓದಿ: ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ: ಅಯೂಬ್ ಖಾನ್​ಗೆ ಫೆ.25ರ ವರೆಗೆ ನ್ಯಾಯಾಂಗ ಬಂಧನ

Published On - 6:44 pm, Mon, 14 February 22