ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ: ಅಯೂಬ್ ಖಾನ್ಗೆ ಫೆ.25ರ ವರೆಗೆ ನ್ಯಾಯಾಂಗ ಬಂಧನ
ಅಯೂಬ್ ಖಾನ್ನನ್ನು ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಆರೋಪಿ ಬಂಧಿಸಿದ್ದಾರೆ. ಅಯೂಬ್ನನ್ನು ಮೈಸೂರಿನ 2ನೇ ಜೆಎಂಎಫ್ಸಿ ಕೋರ್ಟ್ ಜಡ್ಜ್ ಶ್ರೀಶೈಲಾ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ, ಫೆಬ್ರವರಿ 25ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.
ಮೈಸೂರು: ಶ್ರವಣಬೆಳಗೊಳದ ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ನ್ಯೂ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಖಾನ್ನನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೆಬ್ರವರಿ 25ರವರೆಗೆ ಅಯೂಬ್ ಖಾನ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮೈಸೂರಿನ ಉದಯಗಿರಿ ಠಾಣೆ ಪೊಲೀಸರಿಂದ ಅಯೂಬ್ ವಶಕ್ಕೆ ಪಡೆದಿದ್ದಾರೆ. ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಅಯೂಬ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ನ್ಯೂ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷನಾಗಿರುವ ಅಯೂಬ್ ಖಾನ್ನನ್ನು ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಆರೋಪಿ ಬಂಧಿಸಿದ್ದಾರೆ. ಅಯೂಬ್ನನ್ನು ಮೈಸೂರಿನ 2ನೇ ಜೆಎಂಎಫ್ಸಿ ಕೋರ್ಟ್ ಜಡ್ಜ್ ಶ್ರೀಶೈಲಾ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ, ಫೆಬ್ರವರಿ 25ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.
ಇತರ ಅಪರಾಧ ಸುದ್ದಿಗಳು
ಯಾದಗಿರಿ: ಇಲ್ಲಿನ ಗುರುಮಠಕಲ್‌ನಿಂದ ರಾಜಸ್ಥಾನಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 8.3 ಲಕ್ಷ ರೂಪಾಯಿ ಮೌಲ್ಯದ ತಲಾ 50 ಕೆಜಿಯ 750 ಚೀಲ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ. ಗೋಗಿ ಠಾಣೆ ಪೊಲೀಸರು, ಆಹಾರ ನಿರೀಕ್ಷಕರ ಜಂಟಿ ದಾಳಿ ವೇಳೆ ಘಟನೆ ನಡೆದಿದೆ.
ಯಾದಗಿರಿ: ಇಲ್ಲಿನ ಗುರುಮಠಕಲ್ ಪಟ್ಟಣದ ಲಕ್ಷ್ಮೀ ನಗರದಲ್ಲಿ ಸಾಲಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ರೈತ ಪರಶುರಾಮ (40) ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ. 5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಕೈಕೊಟ್ಟಿದ್ದಕ್ಕೆ 6 ಲಕ್ಷ ಸಾಲ ಮಾಡಿಕೊಂಡಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು: ಚಂದ್ರಾಲೇಔಟ್ನ ವಿದ್ಯಾಸಾಗರ ಪಬ್ಲಿಕ್ ಸ್ಕೂಲ್ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ. ವಿದ್ಯಾಸಾಗರ ಪಬ್ಲಿಕ್ ಶಾಲೆ ಬಳಿ ಯಾವುದೇ ಗಲಾಟೆ ಆಗಿಲ್ಲ. ಶಾಲೆಯ ಬಳಿ 30 ರಿಂದ 40 ಜನರು ಜಮಾವಣೆಗೊಂಡಿದ್ದರು. ಪಿಐ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದಾರೆ. ವಿದ್ಯಾಸಾಗರ ಪಬ್ಲಿಕ್ ಸ್ಕೂಲ್ನಿಂದ ಮನವಿಪತ್ರ ಬಂದಿದೆ. ಯಾವುದೇ ಪ್ರಕರಣ ದಾಖಲಾಗಿಲ್ಲ, ವಿಚಾರಣೆ ಮಾಡುತ್ತೇವೆ. ಗೊಂದಲದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಲಾಗಿದೆ. ವಿದ್ಯಾಸಾಗರ ಪಬ್ಲಿಕ್ ಶಾಲೆ ಎಂದಿನಂತೆ ಕಾರ್ಯನಿರ್ವಹಿಸಿದೆ ಎಂದು ಕಮಲ್ ಪಂತ್ ಹೇಳಿದ್ದಾರೆ.
ಇದನ್ನೂ ಓದಿ: ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಆಯೂಬ್ ಖಾನ್ ವಿರುದ್ಧ ಮೈಸೂರು, ಮಂಡ್ಯದಲ್ಲಿ ದೂರು ದಾಖಲಿಸಿದ ಜೈನ ಸಮಾಜ
ಇದನ್ನೂ ಓದಿ: ಗೋಮ್ಮಟೇಶ್ವರನ ಬಗ್ಗೆ ಅವಹೇಳನಾಕಾರಿ ಹೇಳಿಕೆ: ವಿಕೃತ ಮನಸಿನ ಮಾತು ಎಂದ ಭಟ್ಟಾರಕ ಸ್ವಾಮೀಜಿ