ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಆಯೂಬ್ ಖಾನ್ ವಿರುದ್ಧ ಮೈಸೂರು, ಮಂಡ್ಯದಲ್ಲಿ ದೂರು ದಾಖಲಿಸಿದ ಜೈನ ಸಮಾಜ
ಮೈಸೂರಿನ ಸ್ಥಳೀಯ ನ್ಯೂಸ್ ಚಾನೆಲ್‌ನಲ್ಲಿ ಹಿಜಾಬ್ ಪರ ಹೇಳಿಕೆ ನೀಡುವಾಗ ನ್ಯೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಆಯೂಬ್ ಖಾನ್ ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಹೀಗಾಗಿ ಹೇಳಿಕೆ ಖಂಡಿಸಿ ದಿಗಂಬರ ಜೈನ ಸಮಾಜ ದೂರು ದಾಖಲಿಸಿದೆ.
ಮಂಡ್ಯ: ರಾಜ್ಯದಲ್ಲೆದ್ದ ಹಿಜಾಬ್(Hijab) ಕೇಸರಿ ಶಾಲು(Kesari) ವಿವಾದ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸದ್ಯ ಜೈನ ಸಮುದಾಯದ ಕೆಂಗೆಣ್ಣಿಗೂ ಹಿಜಾಬ್ ವಿವಾದ ಗುರಿಯಾಗಿದೆ. ನ್ಯೂ ಇಂಡಿಯನ್ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ ಆಯೂಬ್ ಖಾನ್(Ayub Khan) ನೀಡಿದ ಅವಹೇಳನಕಾರಿ ಹೇಳಿಕೆಯಿಂದಾಗಿ ಆಯೂಬ್ ಖಾನ್ ವಿರುದ್ಧ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಮತ್ತು ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೈಸೂರಿನ ಸ್ಥಳೀಯ ನ್ಯೂಸ್ ಚಾನೆಲ್‌ನಲ್ಲಿ ಹಿಜಾಬ್ ಪರ ಹೇಳಿಕೆ ನೀಡುವಾಗ ನ್ಯೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಆಯೂಬ್ ಖಾನ್ ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಹೀಗಾಗಿ ಹೇಳಿಕೆ ಖಂಡಿಸಿ ದಿಗಂಬರ ಜೈನ ಸಮಾಜ ದೂರು ದಾಖಲಿಸಿದೆ.
ನ್ಯೂ ಇಂಡಿಯನ್ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷನಿಂದ ಅವಹೇಳನಕಾರಿ ಹೇಳಿಕೆ ಮೈಸೂರಿನ ಸ್ಥಳೀಯ ನ್ಯೂಸ್ ಚಾನೆಲ್‌ನಲ್ಲಿ ಹಿಜಾಬ್ ಪರ ಹೇಳಿಕೆ ನೀಡುವಾಗ ಆಯೂಬ್ ಖಾನ್ ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಶ್ರವಣಬೆಳಗೊಳದ ಬೆಟ್ಟದ ಮೇಲೆ ಗೊಮ್ಮಟೇಶ್ವರನನ್ನು ನಿಲ್ಲಿಸಿದ್ದೀರಿ, ನೀವು ಮೊದಲು ಗೊಮ್ಮಟೇಶ್ವರಿಗೆ ಚಡ್ಡಿಹಾಕಿ. ನಿಮಗೇನಾದರೂ ಈ ದೇಶದ ಮೇಲೆ ಅನುಕಂಪ ಇದ್ದರೆ ಮೊದಲು ಅಶ್ಲೀಲವಾಗಿ ನಿಂತಿರತಕ್ಕಂತ ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಅನಂತನಾಥಸ್ವಾಮಿ ದಿಗಂಬರ ಜೈನ ಸಮಾಜ ಆಕ್ರೋಶ ಹೊರ ಹಾಕಿದೆ.
ಈ ಹೇಳಿಕೆ ಜೈನ ಧರ್ಮದ ಅನುಯಾಯಿಯಗಳಾದ ನಮಗೆ ನೋವಾಗಿದೆ. ನಾವು ಆರಾಧಿಸುವ ಬಾಹುಬಲಿಸ್ವಾಮಿಗೆ ಅವಹೇಳನಕಾರಿಯಾಗಿ ನಿಂದಿಸಿರುವುದು ಸರಿಯಲ್ಲ. ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಮೈಸೂರು ನಿವಾಸಿ ಆಯೂಬ್ ಖಾನ್ ಮೇಲೆ ಧಾರ್ಮಿಕ ನಿಂದನೆ, ಜಾತಿನಿಂದನೆ ಅಪರಾಧದಡಿ ಕಾನೂನು ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಜೈನ ಸಮಾಜದ ಮುಖಂಡರು ಮಂಡ್ಯ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಮೈಸೂರಿನ ಸ್ಥಳೀಯ ಚಾನಲ್ನಲ್ಲಿ ಪ್ರಸಾರವಾದ ಬೈಟ್ ಆಧಾರದ ಮೇಲೆ ದೂರು ದಾಖಲಾಗಿದೆ. ಅಲ್ಲದೆ ಮೈಸೂರಿನಲ್ಲೂ ಈ ಬಗ್ಗೆ ವಿರೋಧ ವ್ಯಕ್ತವಾಗಿದ್ದು ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ.
ಇದನ್ನೂ ಓದಿ: Vivo T1 5G: T ಸರಣಿಯಲ್ಲಿ ಹೊಸ ಫೋನ್ ಪರಿಚಯಿಸಿದ ವಿವೋ: ಬಜೆಟ್ ಪ್ರಿಯರು ಫುಲ್ ಫಿದಾ