ಮುಸ್ಲಿಂ ಜತೆ ಬದುಕಲಾಗಲ್ಲ ಅಂತ ಅಂಬೇಡ್ಕರ್ ಹೇಳಿದ್ದರು; ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ
ಮಕ್ಕಳಿಗೆ ಅಲ್ಲ, ಯೇಸು ದೇವರು ಒಬ್ಬನೇ ಎಂದು ಬೋಧಿಸುತ್ತಾರೆ. ಇವರ ಭೋಧನೆಯಿಂದ ಮಗು ಏನು ಕಲಿಯುತ್ತದೆ? ಎಂದು ವಾಗ್ದಾಳಿ ನಡೆಸಿದ ಸಂಸದ ಎಷ್ಟೇ ವಿದ್ಯಾವಂತರಾರೂದ ತಲೆಯಲ್ಲೇ ಇರುತ್ತದೆ. ನಮ್ಮ ಮಕ್ಕಳಿಗೆ ಅವರ ರೀತಿ ಬೋಧನೆ ಮಾಡುವುದಿಲ್ಲ.
ಮೈಸೂರು: ಇಂದು (ಫೆ.13) ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಸದ ಪ್ರತಾಪ್ ಸಿಂಹ (Prathap Simha) ಕೇಂದ್ರ ಬಜೆಟ್ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯ, ಜಿಲ್ಲೆಯನ್ನು ಮೆಚ್ಚಿಸಲು ಬಜೆಟ್ ಮಂಡಿಸಿಲ್ಲ. ಬದಲಾಗಿ ಇಡೀ ದೇಶವನ್ನು ಮೆಚ್ಚಿಸಲು ಬಜೆಟ್ ಮಂಡಿಸಿದ್ದಾರೆ. ಇಡೀ ದೇಶದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟು ಕೊಂಡು ಬಜೆಟ್ ಮಂಡಿಸಲಾಗಿದೆ. ಈ ವರ್ಷ ಎಲೆಕ್ಟ್ರಿಕ್ ಟ್ರೈನ್ಗಳು ಸಂಚಾರ ಆರಂಭಿಸಲಿವೆ ಎಂದರು. ಮುಂದುವರಿದು ಮಾತನಾಡಿದ ಪ್ರತಾಪ್ ಸಿಂಹ, ನಾನು ಏಸುವನ್ನು ಒಪ್ಪುತ್ತೇನೆ, ಮಿಷನರಿಗಳ ಮತಾಂತವನ್ನಲ್ಲ. ಮುಸ್ಲಿಂ ಜತೆ ಬದುಕಲಾಗಲ್ಲ ಅಂತ ಅಂಬೇಡ್ಕರ್ (Ambedkar) ಹೇಳಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ದೂರ ದೃಷ್ಟಿಯಿಂದ ಹೇಳಿದ್ದರು. ಬಿಆರ್ ಅಂಬೇಡ್ಕರ್ಗೆ ಹಿಂದೂಗಳ ಮನಸ್ಥಿತಿ ಗೊತ್ತಿತ್ತು ಅಂತ ವಾಗ್ದಾಳಿ ನಡೆಸಿದ್ದಾರೆ.
ಮಕ್ಕಳಿಗೆ ಅಲ್ಲ, ಯೇಸು ದೇವರು ಒಬ್ಬನೇ ಎಂದು ಬೋಧಿಸುತ್ತಾರೆ. ಇವರ ಭೋಧನೆಯಿಂದ ಮಗು ಏನು ಕಲಿಯುತ್ತದೆ? ಎಂದು ವಾಗ್ದಾಳಿ ನಡೆಸಿದ ಸಂಸದ ಎಷ್ಟೇ ವಿದ್ಯಾವಂತರಾರೂದ ತಲೆಯಲ್ಲೇ ಇರುತ್ತದೆ. ನಮ್ಮ ಮಕ್ಕಳಿಗೆ ಅವರ ರೀತಿ ಬೋಧನೆ ಮಾಡುವುದಿಲ್ಲ. ನಮಗೆ ಜಾತ್ಯಾತೀತತೆಯ ಪಾಠ ಹೇಳುವ ಅವಶ್ಯಕತೆಯಿಲ್ಲ. ನಮ್ಮ ನಡುವಳಿಕೆಯಲ್ಲೇ ಜಾತ್ಯಾತೀತತೆ ಇದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ಗೊತ್ತಿತ್ತು. ನಮ್ಮ ಧರ್ಮ ಒಬ್ಬ ವ್ಯಕ್ತಿಯ ಚಿಂತನೆಯಿಂದ ಬಂದಿರುವುದಿಲ್ಲ ಅಂತ ಹೇಳಿದರು.
ಅಲ್ಲಾಹು ಅಕ್ಬರ್ ಘೋಷಣೆಗೆ 5 ಲಕ್ಷ ಬಹುಮಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ, ಗಡಿಯಾಚೆಗಿನ ಪ್ರೀತಿ ಹೊಂದಿರುವವರಿಂದ ಇದು ನಿರೀಕ್ಷಿತ. ಹಿಜಾಬ್ ಗಲಾಟೆಯ ಹಿಂದೆ ಕೆಎಫ್ಡಿ, ಪಿಎಫ್ಐ ಇದೆ. ಶಾಂತಿ ಕದಡಬೇಡಿ ಎಂದು ಮನವಿ ಮಾಡಬೇಡಿ. ಶಾಂತಿ ಕದಡುವವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಲೇಬೇಕು. ಕೇರಳದ ಮುಸ್ಲಿಂ ಸಂಘಟನೆಗಳಿಂದ ಪ್ರಭಾವಿತರಾಗಿದ್ದಾರೆ. ಇವರೆಲ್ಲಾ ಶಾಂತಿಯ ಮನವಿಗೆ ಬಗ್ಗುವುದಿಲ್ಲ. ಮೊದಲು ಕೆಎಫ್ಡಿ, ಪಿಎಫ್ಐ ಸಂಘಟನೆ ಬಂದ್ ಮಾಡಿ ಎಂದು ಹೇಳಿದರು. ಬಳಿಕ ಹಿಜಾಬ್ ಬೇಕಾ ಕಿತಾಬ್ ಬೇಕಾ ಎಂದು ಮುಸ್ಲಿಂ ಮಹಿಳೆಯರಿಗೆ ಪ್ರಶ್ನಿಸಿದರು.
ಹಿಜಾಬ್ ಹಿಜಾಬ್ ಎಂದು ಸುಮ್ಮನೆ ಹೋಗಬೇಡಿ. ನೀವು ಕೇವಲ ಮಕ್ಕಳನ್ನು ಹೇರುವ ಯಂತ್ರಗಳಾಗಬೇಡಿ. ಹಿಜಾಬ್ ಬಿಟ್ಟು ಕಿತಾಬ್ ಹಿಡಿದರೆ ಭವಿಷ್ಯ ಉಜ್ವಲವಾಗುತ್ತೆ. ಹಿಜಾಬ್ ಬಿಟ್ಟ ತಕ್ಷಣವೇ ಕೇಸರಿ ಶಾಲಿನ ಪ್ರಸ್ತಾವನೆ ಇರಲ್ಲ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ.
ಟಿಪ್ಪು ರೈಲು ಹೆಸರು ಬದಲಾವಣೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಸಂಸದ, ಈ ಬಗ್ಗೆ ಸಾಕಷ್ಟು ಜನರು ಮನವಿ ಮಾಡಿದ್ದರು. ಮೈಸೂರು ಒಡೆಯರ್ ಕೊಡುಗೆ ಅಪಾರವಾಗಿದೆ. ಮೈಸೂರಿಗೆ ರೈಲು ತಂದವರು ಮೈಸೂರು ಅರಸರು. ಅವರ ಹೆಸರಿನಲ್ಲಿ ಒಂದು ರೈಲು ಸಹ ಇಲ್ಲ. ಆ ವಂಶ ನಿರ್ವಂಶ ಮಾಡಲು ಹೋದವನ ಹೆಸರು ಏಕೆ? ಟಿಪ್ಪು ಸುಲ್ತಾನ್ ಒಂದು ಹಳಿಯನ್ನೂ ಹಾಕಿಲ್ಲ. ಹೀಗಾಗಿ ರೈಲಿನ ಹೆಸರು ಬದಲಾಯಿಸಿಯೇ ತೀರುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ
ಮೈಸೂರಿನಲ್ಲಿ ಮಾರ್ಚ್ 11ರಿಂದ 10 ದಿನಗಳ ಕಾಲ ಬಹುರೂಪಿ ರಾಷ್ಟ್ರೀಯ ರಂಗೋತ್ಸವ
ಟೀಕಿಸುವ ಭರದಲ್ಲಿ ತಪ್ಪು ಮಾಡಬೇಡಿ; ಶಶಿ ತರೂರ್ ಇಂಗ್ಲಿಷ್ ತಿದ್ದಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ
Published On - 12:05 pm, Sun, 13 February 22