ಹಿಜಾಬ್ ವಿವಾದ: 12 ಮಕ್ಕಳಿಗೆ ಟ್ರೈನಿಂಗ್ ನೀಡಲಾಗಿದೆ, ನನಗೆ ಸಿಕ್ಕ ಮಾಹಿತಿ ನೀಡಿದ್ದೀನಿ ಸರ್ಕಾರ ತನಿಖೆ ನಡೆಸಲಿ -ಶಾಸಕ ರಘುಪತಿ ಭಟ್

ಹಿಜಾಬ್ ವಿವಾದದ ಬಗ್ಗೆ ಶಾಸಕ ರಘುಪತಿ ಭಟ್ ಕೂಡ ಮಾತನಾಡಿದ್ದು, ಐಸಿಸಿ ಉಗ್ರ ಸಂಘಟನೆ ಇದರ ಹಿಂದೆ ಇರುವ ಬಗ್ಗೆ ನಂಗೆ ನಿಖರ ಮಾಹಿತಿ ಇಲ್ಲ, ಇರಬಹುದು. ನನಗೆ ಇರೊ ಮಾಹಿತಿಗಳು ಈ ಹೆಣ್ಣು ಮಕ್ಕಳಿಗೆ ಟ್ರೈನಿಂಗ್ ಕೊಟ್ಟಿದ್ದು, ಅದರ ಹಿಂದೆ ಏನೇನೋ ವ್ಯವಸ್ಥೆ ಆಗಿದೆ. ಅದರ ಬಗ್ಗೆ ಇದ್ದ ಮಾಹಿತಿಯನ್ನು ನಾನು ಸರ್ಕಾರಕ್ಕೆ ನೀಡಿದ್ದೇನೆ ಎಂದರು.

ಹಿಜಾಬ್ ವಿವಾದ: 12 ಮಕ್ಕಳಿಗೆ ಟ್ರೈನಿಂಗ್ ನೀಡಲಾಗಿದೆ, ನನಗೆ ಸಿಕ್ಕ ಮಾಹಿತಿ ನೀಡಿದ್ದೀನಿ ಸರ್ಕಾರ ತನಿಖೆ ನಡೆಸಲಿ -ಶಾಸಕ ರಘುಪತಿ ಭಟ್
ಶಾಸಕ ರಘುಪತಿ ಭಟ್
Follow us
TV9 Web
| Updated By: ಆಯೇಷಾ ಬಾನು

Updated on: Feb 13, 2022 | 8:23 AM

ಕರ್ನಾಟಕದ ಹಿಜಾಬ್(Hijab) ವಿವಾದ ಈಗ ದೇಶದ ಉಳಿದ ರಾಜ್ಯಗಳಿಗೂ ಹರಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಿದೆ. ಈ ನಡುವೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಕೂಡ ಪ್ರತಿಯಿಸಿದ್ದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾವು ಓದುವ ಸಮಯದಲ್ಲಿ ಹಿಜಾಬ್ ವಿವಾದ ಇರಲಿಲ್ಲ. ಈಗ ಏಕೆ ಹೊಸದಾಗಿ ಹಿಜಾಬ್ ವಿವಾದ ಮಾಡುತ್ತಿದ್ದಾರೆ? ಎಂದು ಮೈಸೂರಿನಲ್ಲಿ ‘ಕೈ’ ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಕೇಸರಿ ಶಾಲು ನೀಡಿ ಕುಮ್ಮಕ್ಕು ಕೊಟ್ಟವಱರು? ಇದರ ಹಿಂದೆ ಹಿಂದುತ್ವವಾದಿ ಸಂಘಟನೆ, ಬಿಜೆಪಿ ಕೈವಾಡವಿದೆ. ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರ ಬಳಿ ಹೋಗುವುದಕ್ಕೆ ಈ ಸರ್ಕಾರಗಳಿಗೆ ಭಯವಾಗ್ತಿದೆ. ಹೀಗಾಗಿ ಅವರು ಹಿಂದೂ, ಮುಸ್ಲಿಂ ಗಲಾಟೆ ಮಾಡಿಸುತ್ತಿದ್ದಾರೆ. ಭಾವನಾತ್ಮಕವಾಗಿ ಕೆರಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. BJP ನೀಚ ರಾಜಕಾರಣ ಮಾಡ್ತಿದೆ, ಜನ ತಕ್ಕ ಪಾಠ ಕಲಿಸ್ತಾರೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಶಾಸಕ ಯತೀಂದ್ರ ವಾಗ್ದಾಳಿ ನಡೆಸಿದ್ದಾರೆ.

ನಾನು ಎಂಬಿಬಿಎಸ್ ಓದುವಾಗ ನನ್ನ ಜೊತೆ ಇಬ್ಬರು ಮುಸ್ಲಿಂ ವಿದ್ಯಾರ್ಥಿನಿಯರಿದ್ದರು. ಒಬ್ಬರು ಹಿಜಾಬ್ ಹಾಕಿಕೊಂಡು ಬರುತ್ತಿದ್ದರು. ಮತ್ತೊಬ್ಬರು ಹಾಕಿಕೊಂಡು ಬರುತ್ತಿರಲಿಲ್ಲ. ಆಗಲೂ ಯಾರು ತಕರಾರು ತೆಗೆದಿರಲಿಲ್ಲ. ಸಿಖ್ಖರು ಕೂಡಾ ಪೇಟ ಹಾಕಿಕೊಂಡು ಬರುತ್ತಾರೆ. ಹೊಸದಾಗಿ ಈಗ ಏಕೆ ವಿವಾದ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ನಮ್ಮ ತಂದೆ ಅಧಿಕಾರದ ಬೆನ್ನು ಬಿದ್ದು ಹೋದವರಲ್ಲ. ಅವರು ಬಡವರು ಶೋಷಿತರಿಗಾಗಿ ರಾಜಕೀಯ ಮಾಡುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವವರೆಗೂ ಜನರ ಕೆಲಸ ಮಾಡುತ್ತಾರೆ. ಮುಂದೆಯೂ ಅದೇ ರೀತಿ ಕೆಲಸ ಮಾಡುತ್ತಾರೆ ಎಂದು ಸಿದ್ದರಾಮಯ್ಯರ ಪರವಾಗಿ ಮಗ ಯತೀಂದ್ರ ಮಾತನಾಡುದ್ರು.

12 ಮಕ್ಕಳಿಗೆ ಟ್ರೈನಿಂಗ್ ನೀಡಿದ್ದಾರೆ ಇನ್ನು ಹಿಜಾಬ್ ವಿವಾದದ ಬಗ್ಗೆ ಶಾಸಕ ರಘುಪತಿ ಭಟ್ ಕೂಡ ಮಾತನಾಡಿದ್ದು, ಐಸಿಸಿ ಉಗ್ರ ಸಂಘಟನೆ ಇದರ ಹಿಂದೆ ಇರುವ ಬಗ್ಗೆ ನಂಗೆ ನಿಖರ ಮಾಹಿತಿ ಇಲ್ಲ, ಇರಬಹುದು. ನನಗೆ ಇರೊ ಮಾಹಿತಿಗಳು ಈ ಹೆಣ್ಣು ಮಕ್ಕಳಿಗೆ ಟ್ರೈನಿಂಗ್ ಕೊಟ್ಟಿದ್ದು, ಅದರ ಹಿಂದೆ ಏನೇನೋ ವ್ಯವಸ್ಥೆ ಆಗಿದೆ. ಅದರ ಬಗ್ಗೆ ಇದ್ದ ಮಾಹಿತಿಯನ್ನು ನಾನು ಸರ್ಕಾರಕ್ಕೆ ನೀಡಿದ್ದೇನೆ. ಸರ್ಕಾರ ತನಿಖೆಯನ್ನು ಮಾಡಿ ಮಾಹಿತಿ ಕಲೆಹಾಕುವುದನ್ನು‌ ಪ್ರಾರಂಭ ಮಾಡಿದ್ದಾರೆ. ಯಾವ ಸಂಘಟನೆ ಟ್ರೈನಿಂಗ್ ಕೊಟ್ಟಿದೆ ಗೊತ್ತಿಲ್ಲ. 12 ಮಕ್ಕಳಿಗೆ ಟ್ರೈನಿಂಗ್ ನೀಡಿದ್ದು ಖಂಡಿತ ಆ ಬಗ್ಗೆ ಮಾಹಿತಿ ಇದೆ. ಟ್ರೈನಿಂಗ್ ಪಡೆದು ಬಂದ ನಂತ್ರ ಆ 12 ಮಕ್ಕಳಿಗೆ ಹಿಂದೂ ಮಕ್ಕಳನ್ನು ನೋಡುವಾಗ ಅಕ್ರೋಶ ಬರುವ ಮಟ್ಟಿಗೆ ಅವರ ತಲೆಗೆ ತುಂಬಿಸಿದ್ದಾರೆ. ಈಗ ಪ್ರತಿಭಟನೆ ನಡೆಸುತ್ತಿರುವ ಆರು ಮಕ್ಕಳಿಗೆ ಇನ್ನೂ ಅಡ್ವಾನ್ಸ್ ಟ್ರೈನಿಂಗ್ ಕೊಟ್ಟಿದ್ದಾರೆ. ಹಣಕಾಸಿನ ವ್ಯವಹಾರ ನಡೆದಿದೆ ಎನ್ನುವ ಮಾಹಿತಿಗಳು ಎಲ್ಲಾ ಇದೆ. ಇದರ ಬಗ್ಗೆ ತನಿಖೆ ನಡೆಯಬೇಕು. ಇಂಟರ್ ನ್ಯಾಶನಲ್ ಕಾನ್ಪ್ರೆಸಿ ಇದೆ ಅನ್ನೊದನ್ನು ಈ ಮೊದಲೇ ನಾನು ಹೇಳಿದ್ದೆ. ಐಸಿಸಿ ಇದ್ಯಾ ಗೊತ್ತಿಲ್ಲ ತನಿಖೆಯಲ್ಲಿ ಗೊತ್ತಾಗಬೇಕು.

ಎನ್ಐಎ ಮೂಲಕ ತನಿಖೆ ನಡೆಸಬೇಕು ಆಗ ಅದರ ಹಿಂದೆ ಇರೊ ಎಲ್ಲ ರಹಸ್ಯ ಹೊರಗೆ ಬರುತ್ತೆ. ಭವಿಷ್ಯದ ದೃಷ್ಟಿಯಿಂದ ತನಿಖೆ ನಡೆಸುವುದು ಒಳ್ಳೆಯದು. ಹಿಜಾಬ್ ವಿವಾದ ಹಿಂದೂ ಮುಸ್ಲಿಂ ಸಮಸ್ಯೆ ಕೋರ್ಟ್ ಅದೇಶ ಬಂದಾಗ ಪರಿಹಾರ ಅಗಬಹುದು. ಇನ್ನೂ ಯಾವ ರೀತಿಯ ವಿವಾದ ಸೃಷ್ಟಿ ಮಾಡುತ್ತಾರೊ ಇಂತಹ ಸಂಘಟನೆಗಳು ಅನ್ನೊ‌ ಭಯ ಇದೆ. ತನಿಖೆ ಮಾಡಿದ್ರೆ ಸತ್ಯ ಹೊರಬರುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಇದೆಲ್ಲ ಮಾಡಲಾಗುತ್ತಿದೆ. ಇಲ್ಲಿ ಮುಸ್ಲಿಂ ಮಹಿಳೆಯರಿಗೆ ಸ್ವತಂತ್ರ ಇಲ್ಲ, ಹಿಜಾಬ್ ಹಾಕೊಕೆ ಬಿಡಲ್ಲ. ಅನಾಮಧೇಯರು ಬೆದರಿಕೆ ಹಾಕುವಂತದ್ದು‌ ಮಾಡುತ್ತಿದ್ದಾರೆ. ಇದರ ಬಗ್ಗೆ ನಾವು ಜಾಗರೂಕರಾಗಬೇಕಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ರು.

ಎಂದಿನಂತೆ ಶಾಲೆ ತೆರೆಯುವುದಾಗಿ ತಿಳಿಸಿದ ಯಶ್ಪಾಲ್ ಸುವರ್ಣ ಸರ್ಕಾರದ ಸುತ್ತೋಲೆ, ಹೈಕೋರ್ಟ್ ಆದೇಶದಂತೆ ಸೋಮವಾರ ಹೈಸ್ಕೂಲ್ ಆರಂಭಕ್ಕೆ ಸೂಚನೆ ಕೊಟ್ಟಿದ್ದಾರೆ. ಪಿಯು ತರಗತಿ ಫೆ.16ರಿಂದ ಆರಂಭ ಮಾಡುವಂತೆ ಸೂಚನೆ ಬಂದಿದೆ. ಕಾಲೇಜ್ ಸಿಡಿಸಿ ಕಮೀಟಿಯ ಸಭೆ ನಡೆಸಿ ಸರ್ಕಾರದ ಆದೇಶ ಪಾಲಿಸುವ ರೀತಿಯಲ್ಲಿ ತರಗತಿ ಆರಂಭಿಸಲಾಗುವುದು. ಸಮಸ್ಯೆ ಉಂಟಾಗಲ್ಲ ಕಾನೂನು ಮೀರಿ ಯಾರು ಇಲ್ಲ. ಕಾನೂನು ಬಾಹಿರ ನಡೆದ್ರುಕೊಂಡ್ರೆ ಇಲಾಖೆ ಗಮನಕ್ಕೆ ತರಲಾಗುವುದು. ಹಿಜಾಬ್ ವಿವಾದ ನಿಜ ಬಣ್ಣ ಬಯಲಾಗಿದೆ ಎಂದು ಉಡುಪಿ ಬಾಲಕಿಯರ ಕಾಲೇಜ್ ಆಡಳಿತ ಸಮಿತಿ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.

ಇದನ್ನೂ ಓದಿ: Hijab Row Opinion: ಹಿಜಾಬ್​ ಧರಿಸಲೇಬೇಕು ಅಂತೆಲ್ಲೂ ಇಲ್ಲ, ಹಾಗಂತ ಧರಿಸುವ ಸ್ವಾತಂತ್ರ್ಯ ಕಸಿಯುವುದೂ ಸರಿಯಲ್ಲ

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ