ಹಿಜಾಬ್ V/S ಕೇಸರಿ ಶಾಲು; ಉಡುಪಿ ಶಾಸಕ ರಘುಪತಿ ಭಟ್ಗೆ ವಿದೇಶಗಳಿಂದ ಜೀವ ಬೆದರಿಕೆ ಕರೆಗಳು
ದುಷ್ಕರ್ಮಿಗಳು ಕೊಲೆ ಮಾಡುವುದಾಗಿ ಶಾಸಕ ರಘುಪತಿ ಭಟ್ಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಸದ್ಯ ಶಾಸಕರು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.
ಉಡುಪಿ: ಹಿಜಾಬ್ ವಿವಾದ (Hijab Controversy) ಕೇವಲ ರಾಜ್ಯ, ದೇಶ ಮಾತ್ರವಲ್ಲ ಇಡೀ ವಿಶ್ವಕ್ಕೆ ವ್ಯಾಪಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಶಾಸಕ ರಘುಪತಿ ಭಟ್ಗೆ (Raghupathi Bhat) ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂಬ ಮಾಹಿತಿ ತಿಳಿದುಬಂದಿದೆ. ವಿದೇಶಗಳಿಂದ ನಿರಂತರ ಫೋನ್ ಕರೆಗಳು ಬರುತ್ತಿದ್ದು, ಇಂಟರ್ನೆಟ್ ಕರೆ ಮಾಡಿ ಕಿಡಿಗೇಡಿಗಳು ಬೆದರಿಸುತ್ತಿದ್ದಾರೆ. ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ. ಮುಸಲ್ಮಾನರ ವಿರುದ್ಧ ನೀನು ಮೆರೆದಾಡ ಬೇಡ. ನಿನ್ನನ್ನು ಹೇಗೆ ನಿಯಂತ್ರಿಸಬೇಕು ಗೊತ್ತಿದೆ ಅಂತ ಸ್ಥಳೀಯ ಕೆಲ ನಂಬರ್ಗಳಿಂದಲೂ ನಿರಂತರ ಫೋನ್ ಕರೆ ಬರುತ್ತಿವೆ.
ದುಷ್ಕರ್ಮಿಗಳು ಕೊಲೆ ಮಾಡುವುದಾಗಿ ಶಾಸಕ ರಘುಪತಿ ಭಟ್ಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಸದ್ಯ ಶಾಸಕರು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಶಾಸಕ ರಘುಪತಿ ಭಟ್, ಇಂತಹ ಹಲವು ಬೆದರಿಕೆಗಳನ್ನು ನಾವು ತುಂಬಾ ನೋಡಿದ್ದೇವೆ. ಉಡುಪಿ, ಬೆಂಗಳೂರಿನ ಮುಸಲ್ಮಾನರು ನನ್ನ ಬೆಂಬಲಕ್ಕಿದ್ದಾರೆ. ಬಾಲ್ಯದಿಂದಲೇ ಇಂಥ ಹಲವು ಬೆದರಿಕೆಗಳು ನಾನು ನೋಡಿದ್ದೇನೆ. ಉಡುಪಿಯ ಮುಸ್ಲಿಂ ಒಕ್ಕೂಟ ಖಾಜಿಗಳು ನನಗೆ ಬೆಂಬಲ ನೀಡಿದ್ದಾರೆ. ಉಡುಪಿ ಶಾಸಕರ ನಿಲುವು ಸರಿ ಇದೆ ಎಂದು ಸಪೋರ್ಟ್ ಮಾಡಿದರೆ ಅಂತ ತಿಳಿಸಿದರು.
ಮುಂದುವರಿದು ಮಾತನಾಡಿದ ಶಾಸಕರು, ನನಗೆ ದೇವರಿದ್ದಾರೆ ಅವರೇ ನನ್ನ ಭದ್ರತೆ. ಉಡುಪಿ ಎಸ್ಪಿ ವಿಷ್ಣುವರ್ಧನ್ ಫೋನ್ ಮಾಡಿದ್ದಾರೆ. ಉಡುಪಿ ಕ್ಷೇತ್ರದ ಜನರೇ ನನಗೆ ಸೆಕ್ಯುರಿಟಿ ಗಾರ್ಡ್. ಯಾವುದೇ ಒಬ್ಬ ವ್ಯಕ್ತಿ ಒಂದು ಸಂಘಟನೆಯಿಂದ ಬೆದರಿಕೆ ಬಂದಿಲ್ಲ. ಹೈದರಾಬಾದ್ನಿಂದ ಫೋನ್ ಕರೆ ಮಾಡಿ ಒಬ್ಬ ಹುಚ್ಚ ಮಾತನಾಡಿದ್ದಾನೆ. ಅವನಿಗೆ ಇಪ್ಪತ್ತು ನಿಮಿಷಗಳ ಕಾಲ ಉತ್ತರ ಕೊಟ್ಟಿದ್ದೇನೆ. ಮುಸ್ಲಿಂರಿಗೆ ಸಮಸ್ಯೆಯಿಲ್ಲ. ಆರು ಮಕ್ಕಳ ತಲೆ ಹಾಳುಮಾಡಿದ್ದಾರೆ ಅಂತ ಅಭಿಪ್ರಾಯಪಟ್ಟರು.
ಸಾಮಾಜಿಕ ಜಾಲತಾಣಗಳು ಸೇರಿದಂತೆ ಇಂಟರ್ನೆಟ್ ಕಾಲ್ ಮೂಲಕ ಕರೆಗಳು ಬಂದಿದೆ. ಇದಕ್ಕೆ ಹೆದರಿ ಕೂರುವ ವ್ಯಕ್ತಿ ನಾನಲ್ಲ. ನನ್ನ ಜೊತೆ ಕೂಡ ಸಾಕಷ್ಟು ಜನ ಇದ್ದಾರೆ. ನನ್ನ ಹತ್ತಿರ ಯಾವ ಗನ್ ಮ್ಯಾನ್ ಕೂಡ ಇಲ್ಲ. ಮನೆಗೆ ಸೆಕ್ಯುರಿಟಿ ಕೂಡ ಇಲ್ಲ. ಎಲ್ಲ ಬೆದರಿಕೆಗೆ ಹೆದರುವ ಮಾತೇ ಇಲ್ಲ. ಈಗಷ್ಟೇ ಪೊಲೀಸ್ ವರಿಷ್ಠಾಧಿಕಾರಿ ಅವರು ಗನ್ ಮ್ಯಾನ್ ಕಳುಹಿಸಿದ್ದಾರೆ. ಅವರ ಮುಂಜಾಗ್ರಕತೆ ದೃಷ್ಟಿಯಿಂದ ಕಳುಹಿಸಿದ್ದಾರೆ. ಆದರೆ ನನಗೆ ಭದ್ರತೆಯ ಅವಶ್ಯಕತೆ ಇಲ್ಲ. ಭದ್ರತಾ ಸಿಬ್ಬಂದಿಯನ್ನು ನಿರಾಕರಿಸುವುದಿಲ್ಲ ಅಂತ ರಘುಪತಿ ಭಟ್ ಹೇಳಿದರು.
ಹೈದರಾಬಾದ್ನಿಂದ ಉಡುಪಿಗೆ ಜನ ಆಗಮನ: ಹಿಜಾಬ್ ವಿವಾದ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್ನಿಂದ ಉಡುಪಿಗೆ ಜನ ಬಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಿಜಾಬ್ ಹೋರಾಟಕ್ಕೆ ಪರೋಕ್ಷವಾಗಿ ಬೆಂಬಲ ನೀಡಲು ಜನರು ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಟಿವಿ9 ಗೆ ಹೇಳಿಕೆ ನೀಡಿದ ಶಾಸಕ ರಘುಪತಿ ಭಟ್, ಹೈದರಾಬಾದ್ನಿಂದನಾದರೂ ಬರಲಿ. ಬೇರೆ ಎಲ್ಲಿಂದಲಾದರೂ ಬರಲಿ. ಅವರೆಲ್ಲಾ ಇಲ್ಲಿ ಬಂದು ಏನು ಮಾಡೋ ಅವಶ್ಯಕತೆ ಇಲ್ಲ. ಉಡುಪಿಯಲ್ಲಿ ಹಿಂದು ಮುಸ್ಲಿಂ ಒಂದಾಗಿದ್ದೇವೆ. ಮುಂದೆ ಒಂದಾಗಿರೋದು ಹೇಗೆ ಅಂತಾ ಗೊತ್ತಿದೆ ಅಂತ ಹೇಳಿದರು.
ಇದನ್ನೂ ಓದಿ
ಡ್ರೈವರ್ಗಳಿಗಾಗಿ ಹಾಡಿದ ಈ ಗೀತೆಗೆ ಪುನೀತ್ ಹಣ ಪಡೆಯಲಿಲ್ಲ; ಕಾರಣ ತಿಳಿಸಿದ ‘ಯೆಲ್ಲೋ ಬೋರ್ಡ್’ ತಂಡ
ಬಾಗಲಕೋಟೆ ಸರ್ಕಾರಿ ಶಾಲೆಯಲ್ಲಿ ನಮಾಜ್ ಮಾಡಿದ ವಿದ್ಯಾರ್ಥಿಗಳು! ವೈರಲ್ ಆದ ವಿಡಿಯೋ ಇಲ್ಲಿದೆ
Published On - 11:29 am, Sat, 12 February 22