ಮೈಸೂರಿನಲ್ಲಿ ಮಾರ್ಚ್ 11ರಿಂದ 10 ದಿನಗಳ ಕಾಲ ಬಹುರೂಪಿ ರಾಷ್ಟ್ರೀಯ ರಂಗೋತ್ಸವ
ಮೈಸೂರಿನ ರಂಗಾಯಣದಲ್ಲಿ ಇದೇ ಮಾರ್ಚ್ 11ರಿಂದ 20ರ ವರೆಗೆ ಅಂದ್ರೆ 10 ದಿನಗಳ ಕಾಲ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ನಡೆಯಲಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
ಮೈಸೂರು: ಮಾರ್ಚ್ 11ರಿಂದ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ನಡೆಯಲಿದೆ. ಮೈಸೂರಿನ ರಂಗಾಯಣದಲ್ಲಿ ಇದೇ ಮಾರ್ಚ್ 11ರಿಂದ 20ರ ವರೆಗೆ ಅಂದ್ರೆ 10 ದಿನಗಳ ಕಾಲ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ನಡೆಯಲಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
ಮಹಾಮಾರಿ ಕೊರೊನಾದಿಂದ ಮುಂದೂಡಲ್ಪಟ್ಟ ಬಹುರೂಪಿ ರಂಗೋತ್ಸವ ಮಾರ್ಚ್ 11ರಿಂದ ನಡೆಯಲಿದೆ. ಮುಖ್ಯ ಅತಿಥಿಗಳ ವಿಚಾರ ವಿವಾದಕ್ಕೆ ಕಾರಣವಾಗಿದ್ದ ರಂಗಾಯಣ ಬಲಪಂಥೀಯ ಹೇರಿಕೆ ಆರೋಪ ಹಿನ್ನೆಲೆ ಪ್ರತಿಭಟನೆಗಳು ನಡೆದಿತ್ತು. ಸದ್ಯ ಇದೀಗ ತಾಯಿ ಶೀರ್ಷಿಕೆ ಅಡಿಯಲ್ಲಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ನಡೆಯಲಿದೆ. ತಾಯಿ ಬಗ್ಗೆ ವಿಸ್ತೃತ ಚರ್ಚೆಯನ್ನೊಳಗೊಂಡ ವಿಚಾರ ಸಂಕಿರಣ ಆಯೋಜನೆ ಮಾಡಲಾಗಿದೆ. ಜಮೀನು, ಜಲ, ಜಾನುವಾರು, ಜಂಗಲ್, ಜನ ಎಂಬ ಪಂಚಸೂತ್ರದಲ್ಲಿ ತಾಯಿ ಮತ್ತು ತಾಯ್ತನ ನೋಡುವ ಪ್ರಯತ್ನ ಮಾಡಲಾಗಿದೆ.
ವಿಧ ರಾಜ್ಯದ ಶ್ರೇಷ್ಠ ನಾಟಕಗಳ ಪ್ರದರ್ಶನಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಜಾನಪದ ಕಲಾಪ್ರದರ್ಶನ, ಚಲನಚಿತ್ರೋತ್ಸವ, ಪುಸ್ತಕ ಪ್ರದರ್ಶನ, ಕರಕುಶಲ ಪ್ರದರ್ಶನ, ಪ್ರಾತ್ಯಕ್ಷಿಕೆ, ಆಹಾರ ಮೇಳ ಸೇರಿ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ವಿವಿಧ ರಾಜ್ಯ ವಿವಿಧ ಭಾಷೆಗಳ ಒಟ್ಟು 35ನಾಟಕಗಳ ಪ್ರದರ್ಶನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಬಾನಾ ಆಜ್ಮಿ, ನಾಸಿರುದ್ದೀನ್ ಶಾ, ಅಮೋಲ್ ಪಾರೇಕರ್ ಶ್ರೀಲಂಕಾದ ಪರಾಕ್ರಮ ನಿರಿಯಲ್ಲ, ಪ್ರಸನ್ನ, ಅನಂತ್ ನಾಗ್ ಸೇರಿ ಇತರ ಹಿರಿಯ ರಂಗ ಕಲಾವಿದರು ಬಹುರೂಪಿಯಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಒಮಿಕ್ರಾನ್ ಆತಂಕ: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಮುಂದೂಡಿಕೆ